ನಿಗಮ ಮಂಡಳಿ ನೇಮಕ ಎಚ್ಚರಿಕೆ ಹೆಜ್ಜೆ
Team Udayavani, Jul 28, 2020, 9:03 AM IST
ರಾಜ್ಯ ಸರಕಾರ ಒಂದು ವರ್ಷ ಪೂರೈಸಿದ ಮರುದಿನವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಪಕ್ಷ ಮತ್ತು ಸಾರ್ವಜನಿಕರಿಗೆ ಎರಡು ರೀತಿಯ ಸಂದೇಶ ರವಾ ನಿಸುವ ಪ್ರಯತ್ನ ಮಾಡಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರವಾಹ, ಉಪ ಚುನಾವಣೆ, ಹಾಗೂ ಕೊರೊನಾದಂತಹ ಸಾಂಕ್ರಾಮಿಕ ರೋಗದ ಎದುರು ಹೋರಾಟ ಮಾಡುವುದರಲ್ಲಿಯೇ ಅಧಿಕಾರದ ಬಹುತೇಕ ಸಮಯ ವ್ಯರ್ಥ ವಾಗಿರುವುದರಿಂದ ಸರಕಾರ ನಿರೀಕ್ಷಿಸಿದ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿಲ್ಲ ಎನ್ನುವ ಭಾವನೆ ಸಾರ್ವಜನಿಕರ ಜತೆಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರಲ್ಲಿಯೂ ಮೂಡಿದೆ ಎನ್ನುವ ಭಾವನೆ ಅವರಲ್ಲಿ ವ್ಯಕ್ತವಾದಂತಿದೆ.
ಈ ಹಿನ್ನೆಲೆಯಲ್ಲಿ ಸರಕಾರ ವರ್ಷ ಕಳೆಯುತ್ತಿದ್ದಂತೆ ಆಡಳಿತ ಯಂತ್ರಕ್ಕೆ ಚುರುಕು ನೀಡುವುದು ಹಾಗೂ ಶಾಸಕರಿಗೆ ನಿಗಮ ಮಂಡಳಿ ಅಧಿಕಾರ ನೀಡಿ ಅವರ ಮನಸ್ಸಿನ ಬೇಸರವನ್ನೂ ಕಳೆಯುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ದಿಢೀರ್ ನಿರ್ಧಾರ ಪಕ್ಷದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರಲು ಕಾರಣವಾಗುವ ಸಾಧ್ಯತೆ ಇದೆ. ವರ್ಷಾಚರಣೆ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸಲು ಮಾಡಿದ ಪ್ರಯತ್ನದಂತೆ ಕಾಣಿಸುತ್ತಿದೆ. ಅಲ್ಲದೇ ಈ ನೇಮಕ ಸಚಿವ ಸಂಪುಟ ವಿಸ್ತರಣೆಯ ಪೂರ್ವ ಸಿದ್ಧತೆಯ ಸೂಚನೆ ಯಂತೆಯೂ ಕಾಣಿಸುತ್ತದೆ. ಅದೇ ಕಾರಣಕ್ಕೆ ಸಚಿವಾಕಾಂಕ್ಷಿಗಳಾಗಿರುವ ಹಿರಿಯ ಶಾಸಕರಿಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಿ ಮುಂದೆ ಎದುರಾಗಬಹು ದಾದ ಅಸಮಾಧಾನ, ಆಕ್ರೋಶ, ಬಂಡಾಯ ಎಲ್ಲವನ್ನೂ ಆರಂಭದಲ್ಲಿಯೇ ತಡೆಯುವ ಪ್ರಯತ್ನದಂತೆ ಕಾಣಿಸುತ್ತದೆ. ಆದರೆ, ಈಗ ಮಾಡಿರುವ ನೇಮಕದಿಂದಲೂ ಕೆಲವು ಶಾಸಕರು ಅಸಮಾಧಾನಗೊಂಡಿದ್ದು, ತಮಗೆ ಯಾವುದೇ ನಿಗಮ- ಮಂಡಳಿ ಅಧ್ಯಕ್ಷ ಹುದ್ದೆ ಬೇಡ ಎಂದು ಬಹಿರಂಗ ವಾಗಿಯೇ ತಿರಸ್ಕರಿಸುತ್ತಿದ್ದಾರೆ. ನಾಲ್ಕು ಶಾಸಕರ ಹೆಸರು ಅಧಿಕೃತ ಆದೇಶಕ್ಕೂ ಮೊದಲೇ ತಡೆ ಹಿಡಿಯಲಾಯಿತು. ಚಿತ್ರದುರ್ಗದ ತಿಪ್ಪಾರೆಡ್ಡಿ, ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ, ಮುದ್ದೇಬಿಹಾಳ್ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಸುರಪುರ ಶಾಸಕ ನರಸಿಂಹ ನಾಯಕ್ (ರಾಜು ಗೌಡ) ಹಾಗೂ ದತ್ತಾತ್ರೆಯ ಪಾಟೀಲ್ ರೇವೂರ್ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ರಾದೇಶಿಕತೆ, ಜಾತಿ, ಜಿಲ್ಲಾ ಪ್ರಾತಿನಿಧ್ಯದ ಆಧಾರದಲ್ಲಿ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
ಈಗ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಅಥವಾ ಪುನಾ ರಚನೆಗೂ ಮೊದಲೇ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಿ ಸಂಪುಟದಿಂದ ದೂರ ಇಡುವ ಮುನ್ಸೂಚನೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಯಡಿ ಯೂರಪ್ಪ ಅವರ ಈ ನಿರ್ಧಾರವನ್ನು ಕೆಲವು ಶಾಸಕರು ಬಹಿರಂಗವಾಗಿ ನಿರಾ ಕರಿಸುವ ಮೂಲಕ ತಾವು ಸಚಿವ ಸ್ಥಾನದ ಆಕಾಂಕ್ಷಿಗಳು ಎನ್ನುವ ಸಂದೇಶ ರವಾ ನಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ವರ್ಷ ತುಂಬಿದ ಸಂಭ್ರಮದ ಸಮಯದಲ್ಲಿಯೇ ಜೇನು ಗೂಡಿಗೆ ಕಲ್ಲು ಹೊಡೆ ಯುವ ಧೈರ್ಯ ಮಾಡಿದ್ದು, ಅದನ್ನು ಮುಂದಿನ ದಿನಗಳಲ್ಲಿ ಹೇಗೆ ಎದುರಿಸಿ ನಿಭಾಯಿಸುತ್ತಾರೆ ಎನ್ನುವುದು ಅತ್ಯಂತ ಮುಖ್ಯವಾಗಿದೆ. ಅಲ್ಲದೇ ಇದೇ ಗೊಂದಲ ಕೊರೊನಾ ಸಾಂಕ್ರಾ ಮಿ ಕದ ಸಂಕಷ್ಟದ ಸಂದರ್ಭದಲ್ಲಿ ಸರಕಾರದ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಯಡಿಯೂರಪ್ಪ ಮೇಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.