ಇನ್ನೆಷ್ಟು ಜೀವಗಳು ಬಲಿಯಾಗಬೇಕು?


Team Udayavani, Nov 16, 2017, 2:24 PM IST

16-15.jpg

ಖಾಸಗಿ ವೈದ್ಯಕೀಯ ನಿಯಂತ್ರಣ ಮಸೂದೆಯನ್ನು ಮಂಡಿಸುವ ವಿಚಾರವಾಗಿ ವೈದ್ಯರು ಮತ್ತು ಸರಕಾರ ತಳೆದಿರುವ ಹಠಮಾರಿ ಧೋರಣೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಮಾರಕಪ್ರಾಯವಾಗಿರುವ ಹಲವು ಅಂಶಗಳನ್ನು ಒಳಗೊಂಡಿರುವ ಈ ಮಸೂದೆ ವಿಧಾನಮಂಡಲದಲ್ಲಿ ಮಂಡನೆಯಾಗಬಾರದು ಎಂದು ಹೇಳುತ್ತಿ ರುವ ವೈದ್ಯರು ಸೋಮವಾರದಿಂದೀಚೆಗೆ ಮುಷ್ಕರ ಹೂಡಿರು ವುದರಿಂದ ಸಮರ್ಪಕ ಚಿಕಿತ್ಸೆ ಸಿಗದೆ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಸೂದೆ ಈಗಿರುವ ರೂಪದಲ್ಲಿ ಜಾರಿಗೆ ಬರ ಬಾರದು ಎನ್ನುವುದು ವೈದ್ಯರ ನಿಲುವು. ಮಸೂದೆಯನ್ನು ಮಂಡಿಸಿಯೇ ತೀರುತ್ತೇವೆ ಎನ್ನುವುದು ಸರಕಾರದ, ನಿರ್ದಿಷ್ಟವಾಗಿ ಹೇಳುವುದಾದರೆ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರ ಹಠ. ಹೀಗೆ ಎರಡೂ ಕಡೆಯವರು ಇದನ್ನು ಪ್ರತಿಷ್ಠೆಯ ವಿಚಾರವಾಗಿ ಪರಿಗಣಿಸಿರುವುದರಿಂದ ಸಮಸ್ಯೆ ಉಲ್ಬಣಿಸಿದೆ. ಕಾನೂನು ರೂಪಿಸುವಾಗ ಅದಕ್ಕಿರುವ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸದಿದ್ದರೆ ಏನಾಗಬೇಕಿತ್ತೋ ಅದು ಈಗ ಖಾಸಗಿ ವೈದ್ಯಕೀಯ ನಿಯಂತ್ರಣ ಮಸೂದೆ ವಿಚಾರದಲ್ಲಿ ಆಗುತ್ತಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಈ ಮಸೂದೆಯನ್ನು ರಚಿಸುವಾಗ ಸರಕಾರ ಯಾವುದೇ ವೈದ್ಯರಾಗಲಿ ಅಥವಾ ಆಸ್ಪತ್ರೆಗಳ ಮಾಲಕರದ್ದಾಗಲಿ ಅಭಿಪ್ರಾಯ ಪಡೆದುಕೊಂಡಿಲ್ಲ. ಮಸೂದೆಯ 

ಉದ್ದೇಶ ಒಳ್ಳೆಯದಿದ್ದರೂ ಅದರ ಇನ್ನೊಂದು ಮಗ್ಗುಲನ್ನು ಕೂಡ ಪರಿಶೀಲಿಸುವ ಅಗತ್ಯವಿತ್ತು. ಹೀಗೆ ಮಾಡದೆ ತಾನು ಮಾಡಿದ್ದೇ ಸರಿ ಎಂದು ಹೇಳಿಕೊಂಡು ಹಠ ಹಿಡಿದಿರುವುದು ಸರ್ವಥಾ ಸರಿಯಲ್ಲ. 2007ರಲ್ಲಿ ಜಾರಿಗೆ ಬಂದಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆಗೆ ಹಲವು ಹೊಸ ಅಂಶಗಳನ್ನು ಸೇರಿಸಿಕೊಂಡು ರಚಿಸಿದ ಹೊಸ ಮಸೂದೆಯಿದು. ಈ ಕಾಯಿದೆಯನ್ನು ಪರಾಮರ್ಶಿಸಲು ನೇಮಿಸಿದ ನ್ಯಾ| ವಿಕ್ರಮ್‌ಜಿತ್‌ ಸೇನ್‌ ಅವರ ವರದಿಗೂ ವೈದ್ಯರು ಆಕ್ಷೇಪ ಎತ್ತಿಲ್ಲ. ಆದರೆ ಅನಂತರ ಸರಕಾರ ರಚಿಸಿದ ಸಮಿತಿಯೊಂದು ಇನ್ನೂ ಕೆಲವು ಕಠಿಣ ಅಂಶಗಳನ್ನು ಸೇರಿಸಿಕೊಂಡು ವೈದ್ಯರಿಗೆ ಕಿರುಕುಳ ನೀಡುವುದೇ ಪ್ರಧಾನ ಉದ್ದೇಶ ಎಂಬಂತೆ ಬದಲಾವಣೆ ಮಾಡಿರುವುದು ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇರುವಂತೆ ವೈದ್ಯಕೀಯ ಕ್ಷೇತ್ರದಲ್ಲೂ ಇದ್ದಾರೆ. ಆದರೆ ಸರಕಾರ ಎಲ್ಲ ವೈದ್ಯರೂ ಕೆಟ್ಟವರು ಎಂದು ಭಾವಿಸಿ ಮಸೂದೆ ರಚಿಸಿದಂತಿದೆ. ಎಲ್ಲ ಆಸ್ಪತ್ರೆಗಳು ದುಬಾರಿ ಶುಲ್ಕ ವಸೂಲು ಮಾಡುತ್ತವೆ, ಎಲ್ಲ ವೈದ್ಯರು ರೋಗಿಗಳ ಜತೆಗೆ ಅನುಚಿತವಾಗಿ ವರ್ತಿಸುತ್ತಾರೆ, ಎಲ್ಲ ಆಸ್ಪತ್ರೆಗಳು ಹಣ ಸುಲಿಯುವ ಕೇಂದ್ರಗಳು, ಎಲ್ಲ ಆಸ್ಪತ್ರೆಗಳ ಉದ್ದೇಶ ಜನರಿಗೆ ಕಿರುಕುಳ ನೀಡುವುದು ಎಂಬರ್ಥದಲ್ಲಿ ಸಾರ್ವತ್ರೀಕರಿಸಿದಂತಿರುವುದು ಸಮಸ್ಯೆಯ ಮೂಲ. ಹಾಗೆಂದು ಜನರ ದೃಷ್ಟಿಯಿಂದ ನೋಡುವುದಾದರೆ ಮಸೂದೆಯಲ್ಲಿ ಹಲವು ಅನುಕೂಲಕರ ಅಂಶಗಳು ಇರುವುದೂ ನಿಜ. 

ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆಗಳಿಗೆ ಶುಲ್ಕ ನಿಗದಿ ಮಾಡುವುದು, ವೈದ್ಯರು ರೋಗಿಗಳ ಜತೆಗೆ ಹೀಗೆಯೇ ಮಾತನಾಡಬೇಕೆಂದು ಕಟ್ಟಳೆಗಳನ್ನು ರಚಿಸುವುದೆಲ್ಲ ಅವಾಸ್ತವಿಕ ಅಂಶಗಳು. ವೈದ್ಯ ಮತ್ತು ರೋಗಿಯ ನಡುವಿನ ನಂಬಿಕೆ ಎಲ್ಲಕ್ಕಿಂತ ಬಹಳ ದೊಡ್ಡದು. ಆದರೆ ಮಸೂದೆಯಲ್ಲಿ ಈ ನಂಬಿಕೆಗೆ ಕೊಡಲಿಯೇಟು ನೀಡುವಂತಹ ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ. ಚಿಕಿತ್ಸೆಯಲ್ಲಿ ತಪ್ಪಾದರೆ ವೈದ್ಯರನ್ನು ಹಿಡಿದು ಜೈಲಿಗೆ ಹಾಕುವುದು ಮತ್ತು ದಂಡ ವಿಧಿಸುವುದು, ವೈದ್ಯರ ವಿರುದ್ಧ ದೂರು ನೀಡಲು ಸ್ಥಳೀಯ ಮಟ್ಟದಲ್ಲೇ ಪ್ರಾಧಿಕಾರಗಳನ್ನು ರಚಿಸಿದರೆ ಪರಿಣಾಮ ಏನಾಗಬಹುದು ಎಂಬುದರ ಕುರಿತು ಕೂಡ ಸಾಕಷ್ಟು ಚಿಂತನಮಂಥನ ನಡೆಯಬೇಕಿತ್ತು. ಯಾವ ವೈದ್ಯನೂ ಉದ್ದೇಶಪೂರ್ವಕವಾಗಿ ತಪ್ಪೆಸಗುವುದಿಲ್ಲ. ಹಾಗೊಮ್ಮೆ ಎಸಗಿದರೂ ಅದು ಅವನು ವೃತ್ತಿ ಧರ್ಮಕ್ಕೆ ಮಾಡುವ ದ್ರೋಹವಾಗುತ್ತದೆ. ಪ್ರಮಾದವಶಾತ್‌ ಆದ ತಪ್ಪಿಗೆ ವೈದ್ಯನನ್ನು ವರ್ಷಗಟ್ಟಲೆ ಜೈಲಿಗೆ ಹಾಕಿದರೆ ಅಥವಾ ಲಕ್ಷಗಟ್ಟಲೆ ದಂಡ ವಸೂಲು ಮಾಡಿದರೆ ಯಾರೂ ರಾಜ್ಯದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ಮುಂದಾಗಲಿಕ್ಕಿಲ್ಲ.   ಖಾಸಗಿ ಆಸ್ಪತ್ರೆಗಳಿಲ್ಲದ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಬರೀ ಹೊರರೋಗಿಗಳ ವಿಭಾಗವನ್ನು ಮುಚ್ಚಿದ್ದರಿಂದಲೇ ಮೂರು ದಿನಗಳಲ್ಲಿ ಇಷ್ಟು ಹಾಹಾಕಾರ ಎದ್ದಿರುವಾಗ ಇನ್ನು ಖಾಸಗಿ ಆಸ್ಪತ್ರೆಗಳೇ ಇಲ್ಲದಿದ್ದರೆ ಉಂಟಾಗುವ ಪರಿಸ್ಥಿತಿ ಊಹಿಸಬಹುದು. ಹಾಗೆಂದು ಖಾಸಗಿ ಆಸ್ಪತ್ರೆಗಳಿಗೆ ಲಗಾಮು ಹಾಕುವ ಅಗತ್ಯವಿಲ್ಲ ಎಂದಲ್ಲ. ಆದರೆ ಹೀಗೆ ನಿಯಮ ರಚಿಸುವಾಗ ರೋಗಿಗಳು ಮತ್ತು ವೈದ್ಯರು ಹೀಗೆ ಇಬ್ಬರ ಹಿತರಕ್ಷಣೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಕೋಟಿಗಟ್ಟಲೆ ಹೂಡಿಕೆ ಮಾಡಿ ಸ್ಥಾಪಿಸಿದ ಆಸ್ಪತ್ರೆಯನ್ನು ನಷ್ಟದಲ್ಲಿ ನಡೆಸಿಕೊಂಡು ಹೋಗಲು ಯಾರೂ ತಯಾರಿರುವುದಿಲ್ಲ. ಹಾಗೆಂದು ರೋಗಿಗಳನ್ನು ಸಂಪೂರ್ಣವಾಗಿ ಸುಲಿಯುವುದು ಕೂಡ ಸರಿಯಲ್ಲ. ಇದೊಂದು ಸಂಕೀರ್ಣ ಸಮಸ್ಯೆಯಾಗಿರುವುದರಿಂದ ಹೆಚ್ಚು ವಿವೇಚನೆಯಿಂದ ಬಗೆಹರಿಸುವ ಅಗತ್ಯವಿದೆ. ಇದು ಸಾಧ್ಯವಾಗಬೇಕಾದರೆ ಸರಕಾರ ಮತ್ತು ವೈದ್ಯರು ತಮ್ಮ ನಿಲುವುಗಳನ್ನು ಸಡಿಲಿಸಿಕೊಳ್ಳಬೇಕು.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.