ಪಕ್ಷಗಳ ಕೆಟ್ಟ ಚಾಳಿ ನಿಲ್ಲುವ ಬಗೆ ಹೇಗೆ?


Team Udayavani, Feb 16, 2018, 1:53 PM IST

o-INDIA-ELECTIONS-facebook.jpg

ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಪ್ರಗತಿಮುಖವಾದಂಥ ಬದಲಾವಣೆ ತರಲು ಕೇಂದ್ರ ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ಆ ನಿಟ್ಟಿನ ಒಂದು ಚರ್ಚೆ ಈಗ ದೇಶವ್ಯಾಪಿಯಾಗಿ ನಡೆಯುತ್ತಿದ್ದು, ಈಚೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕೂಡ ಇದಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. 

ಸದ್ಯ ಚುನಾವಣಾ ವ್ಯವಸ್ಥೆ ಸುಧಾರಣೆ ಕ್ರಮದಲ್ಲಿ ಪ್ರಮುಖ ವಾಗಿರುವುದು ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು. ಇದರಿಂದ ಸಾಕಷ್ಟು ಆರ್ಥಿಕ ಲಾಭದ ಜತೆಗೆ, ಜನತೆಯ ಸಮಯ ಉಳಿತಾಯ, ಅಭಿವೃದ್ಧಿ ಕಾರ್ಯಗಳಿಗೆ ಆಗುವಂಥ ಅಡಚಣೆ ದೂರವಾಗುವುದು, ಸಿಬಂದಿ ಶ್ರಮ ಉಳಿತಾಯ ಇತ್ಯಾದಿ ಹಲವು ಲಾಭಗಳಿವೆ. ಒಂದೇ ಹೊತ್ತಿನಲ್ಲಿ ಒಂದಕ್ಕಿಂತ ಹೆಚ್ಚು ಮತ ಚಲಾಯಿಸಿ ಈಗಾಗಲೇ ನಮಗೆ ಅನುಭವವೂ ಇದೆ. ಕೆಲವು ಬಾರಿ ಲೋಕಸಭೆ ಮತ್ತು ವಿಧಾನಸಭೆಗೂ ಏಕಕಾಲಕ್ಕೆ ಮತದಾನ ಮಾಡಿದ್ದೇವೆ, ಕೆಲವು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲೂ ಇಂಥ ಅನುಭವ ನಮಗಾಗಿದೆ. ಹಾಗಿರುವಾಗ ದೇಶವ್ಯಾಪಿಯಾಗಿ ಒಂದೇ ಹಂತದ ಚುನಾವಣೆ ನಡೆಸುವುದನ್ನು ಜನರು ವಿರೋಧಿಸುವುದು ಸಾಧ್ಯವಿಲ್ಲ. 

ಆದರೆ ಚುನಾವಣಾ ವ್ಯವಸ್ಥೆ ಸುಧಾರಣೆ ಎಂಬುದು ಇಷ್ಟಕ್ಕೇ ಸೀಮಿತವಾಗಬಾರದು ಎಂಬ ಮಾತನ್ನು ಸದ್ಯ ಜಾರಿಯಲ್ಲಿರುವ ಕೆಲವು ಅನಗತ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಒಗ್ಗದ ಅವಕಾಶಗಳು ಪುಷ್ಟೀಕರಿಸುತ್ತವೆ. ಅನಗತ್ಯ ಖರ್ಚುವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಕೆಲವು ಉದಾರತೆಯ ದುರ್ಲಾಭ ಪಡೆಯುವುದನ್ನು ತಡೆಯಲು ಮತದಾನ ಮತ್ತು ಚುನಾವಣೆ ವ್ಯವಸ್ಥೆಯಲ್ಲಿ ಆಗಲೇಬೇಕಾದ ಕೆಲವು ಪ್ರಮುಖ ಬದಲಾವಣೆಗಳನ್ನು ನಾವು ಗುರುತಿಸಬಹುದು.

ಸದಸ್ಯರಲ್ಲದವರು ಸಚಿವರಾಗಬಾರದು
ಸದ್ಯ ಹೆಚ್ಚಾಗಿ ಕಂಡು ಬರುವ ಒಂದು ಕೆಟ್ಟ ಬೆಳವಣಿಗೆ ಎಂದರೆ ವಿಧಾನಸಭೆ ಅಥವಾ ವಿಧಾನಪರಿಷತ್‌ ಸದಸ್ಯರಲ್ಲದವರು ಮುಖ್ಯಮಂತ್ರಿಯಾಗುವುದು ಮತ್ತು ಸಂಸತ್ತಿನ ಸದಸ್ಯರಲ್ಲ ದವರ ಹೆಸರುಗಳು ದೇಶದ ಸಚಿವ ಸ್ಥಾನಗಳಿಗೆ ಕೇಳಿ ಬರುವುದು. ಸಾಕಷ್ಟು ಸಂಖ್ಯೆಯ ಶಾಸಕರಿದ್ದರೂ ಪಕ್ಷಗಳ ಯಾವುದೋ ಕೆಲವು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹೊರಗಿನ ವ್ಯಕ್ತಿಯನ್ನು 
ತಂದು ಮುಖ್ಯಮಂತ್ರಿ ಮಾಡುವುದು ಮತ್ತು ಅಂಥ ವ್ಯಕ್ತಿ ಹೊಂದಿರುವ ಹುದ್ದೆಗೆ ರಾಜೀನಾಮೆ ಕೊಡಿಸಿ ಆರು ತಿಂಗಳ ಬಳಿಕ ಮತ್ತೂಂದು ಚುನಾವಣೆ ನಡೆಸಿ ಅದರಲ್ಲಿ ಗೆಲ್ಲಿಸಿ ಶಾಸಕರಾಗಿಸು ವುದು. ಒಂದೊಮ್ಮೆ ಆ ಚುನಾವಣೆಯಲ್ಲಿ ಗೆಲ್ಲಲಾಗದೆ ಹೋದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ ಹಾಗೂ ಕೆಲವು ರಾಜಕೀಯ ಬೆಳವಣಿಗೆಗೆ ಹೇತುವಾಗುತ್ತದೆ. ಸಂಸದರನ್ನು ಮುಖ್ಯಮಂತ್ರಿ ಯಾಗಿಸಿದ ಅನುಭವ ನಮಗೂ ಇದೆ. ಪಕ್ಷಗಳ ಒಂದು ಕೆಟ್ಟ ಚಾಳಿಗೆ ನಮ್ಮ ವ್ಯವಸ್ಥೆ ಜವಾಬ್ದಾರಿ ಹೊತ್ತುಕೊಳ್ಳಬೇಕಾಗುತ್ತದೆ ಮತ್ತು ದೇಶದ ಮೇಲೆ ಅನಗತ್ಯ ಚುನಾವಣೆಯ ಹೊರೆ ಬೀಳುತ್ತದೆ. ಓರ್ವ ಸಂಸದನನ್ನು ಮುಖ್ಯಮಂತ್ರಿ ಮಾಡಿದರೆ, ಆತ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ವಿಧಾನಸಭೆ ಅಥವಾ ಪರಿಷತ್‌ಗೆ ಆಯ್ಕೆಯಾಗಬೇಕು. ಎಲ್ಲ ರಾಜ್ಯಗಳಲ್ಲಿ ವಿಧಾನಪರಿಷತ್‌ಗಳಿಲ್ಲ. ಕೆಲವು ಸಂದರ್ಭಗಳಲ್ಲಿ ಅವಕಾಶವಿದ್ದರೆ ಸುಲಭವಾಗಿ ವಿಧಾನಪರಿಷತ್‌ ಸದಸ್ಯರಾಗಿ ಮಾಡುವುದೂ ಇದೆ. ಅದಿಲ್ಲ ದಿದ್ದರೆ ಯಾರಾದರೂ ಓರ್ವ ಶಾಸಕ ರಾಜೀನಾಮೆ ಕೊಡಬೇಕು, ಆತನಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ಇತ್ತ ಲೋಕಸಭೆಗೂ ಒಂದು ಚುನಾವಣೆ ನಡೆಸಬೇಕು. ಇಷ್ಟೆಲ್ಲ ನಡೆಯುವುದು ಕೆಲವು ಪಕ್ಷಗಳ ಸ್ವಹಿತಾಸಕ್ತಿಗಲ್ಲವೇ? ಮುಖ್ಯಮಂತ್ರಿಯಾಗುವ ಓರ್ವ ಸದಸ್ಯನನ್ನು ಆರಿಸಲಾಗದಂಥ ದುಃಸ್ಥಿತಿ ನಮ್ಮ ಪಕ್ಷಗಳಿಗೆ ಯಾಕೆ ಬರಬೇಕು? ಆದ್ದರಿಂದ ಇಂಥ ಕೆಟ್ಟ ವ್ಯವಸ್ಥೆ ಬದಲಾಗಬೇಕು ಮತ್ತು ಚುನಾವಣೆಯಲ್ಲಿ ಆಯ್ಕೆಯಾದವರೇ ಸಚಿವರಾಗಬೇಕು. ಸಚಿವರಾಗಿ ಇಂತಿಷ್ಟು ಅವಧಿಯ ಒಳಗಾಗಿ ಸಂಬಂಧಿಸಿದ ವಿಧಾನಸಭೆ ಅಥವಾ ಸಂಸತ್ತಿನ ಸದಸ್ಯರಾದರೆ ಸಾಕು ಎಂಬ ಅವಕಾಶವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು.

ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧೆ ಬೇಡ
ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧಿಸುವುದು ಮತ್ತು ಎರಡೂ ಕಡೆ ಗೆದ್ದು ಬಂದರೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡುವುದು ಎಲ್ಲೆಡೆ ಕಂಡು ಬರುವ ಮತ್ತೂಂದು ಪ್ರಮುಖ ಕೆಟ್ಟ ಸಂಪ್ರದಾಯ. ಈಗ ನಾಯಕರಿಗೆ ಕೊರತೆಯೇನಿಲ್ಲ ಮತ್ತು ಯಾರೂ ಯಾವುದಕ್ಕೂ ಅನಿವಾರ್ಯವೂ ಅಲ್ಲ. ಆದರೆ ನಮ್ಮ ಕೆಲವು ಪ್ರಮುಖ ರಾಜಕೀಯ ನಾಯಕರ ಅತಿಯಾದ ಸ್ವಾರ್ಥ ಹೊಸ ನಾಯಕರ ಬೆಳವ ಣಿ ಗೆಗೆ ತೊಡಕಾಗುತ್ತದೆ. ಒಂದು ಕಡೆ ನಿಂತು ಗೆಲ್ಲುವ ಧೈರ್ಯ ಇಲ್ಲದ ಪ್ರಮುಖ ನಾಯಕರು ಹೇಗಾದರೂ ಮಾಡಿ ಆಯ್ಕೆಯಾಗ ಲೇಬೇಕು ಎಂಬ ಅತಿಯಾದ ಸ್ವಾರ್ಥದಿಂದ ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧಿಸುತ್ತಾರೆ. ಅವರು ಭಾವಿಸುವುದು ತಾವು ರಾಜ್ಯಕ್ಕೆ ಅಥವಾ ರಾಷ್ಟ್ರಕ್ಕೆ ಅನಿವಾರ್ಯ ಎಂದು. ಅದು ನಿಜವೇ ಆಗಿದ್ದರೆ ಅವರು ಎಲ್ಲಿ ಸ್ಪರ್ಧಿಸಿದರೂ ಜನರಿಂದ ಆಯ್ಕೆಯಾಗ ಬಹುದು ಅಥವಾ ಒಂದು ಸುರಕ್ಷಿತ ಎಂಬ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಬಹುದು. ಅಷ್ಟು ವಿಶ್ವಾಸ ಇಲ್ಲದವರೇ ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧಿಸುತ್ತಾರೆ. ಹೊಸ ಬದಲಾವಣೆ ಸಂದರ್ಭದಲ್ಲಿ ಇದನ್ನು ರದ್ದುಪಡಿಸುವ ಬಗ್ಗೆಯೂ ಚಿಂತಿಸುವ ಅಗತ್ಯ ಕಂಡುಬರುತ್ತದೆ. ಜತೆಗೆ ಹೊಸ ನಾಯಕರ ಉದಯಕ್ಕೆ ಕೂಡ ಇದು ಪೂರಕವಾಗುತ್ತದೆ.

ಅವಧಿಪೂರ್ವ ರಾಜೀನಾಮೆಗೆ ನಿರ್ಬಂಧ
ಅವಧಿಪೂರ್ವ ರಾಜೀನಾಮೆ ನೀಡಿ ಜನರ ಮೇಲೆ ಅನಗತ್ಯ ಚುನಾವಣೆ ಹೇರುವಂಥ ಕ್ರಮಗಳು ಈಗ ಜಾರಿಯಲ್ಲಿದೆ. ರಾಜೀ ನಾಮೆಯ ಅವಕಾಶವನ್ನು ರದ್ದುಪಡಿಸಲು ಸಾಧ್ಯವಿಲ್ಲವಾದರೂ, ಸ್ವಹಿತಾಸಕ್ತಿಗಾಗಿ ಈ ಅವಕಾಶವನ್ನು ಬಳಸಿಕೊಳ್ಳುವುದನ್ನು ನಿರ್ಬಂಧಿ ಸಲು ಏನಾದರೂ ಕ್ರಮ ಕೈಗೊಳ್ಳುವುದು ಅಗತ್ಯ. ಅವಧಿ ಪೂರ್ವ ರಾಜೀನಾಮೆ ನೀಡುವ ಶಾಸಕ ಅಥವಾ ಸಂಸದ ಮುಂದಿನ ಚುನಾವಣೆಯಲ್ಲಿ (ಕನಿಷ್ಠ ಒಂದು ಅವಧಿಗೆ) ಸ್ಪರ್ಧಿಸ ಬಾರದು ಎಂಬ ನಿಯಮವನ್ನು ಜಾರಿಗೆ ತಂದರೆ ಇಂಥ ರಾಜೀನಾಮೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾದೀತು. ಕುದುರೆ ವ್ಯಾಪಾರಗಳಿಗೂ ಕಡಿವಾಣ ಬಿದ್ದೀತು. ಮುಂದಿನ ಚುನಾವಣೆ ಯಲ್ಲಿ ಬೇರೆ ಪಕ್ಷದಿಂದ ಸ್ಪರ್ಧಿಸಲು ಅಥವಾ ಇತರ ಕೆಲವು ಸ್ವಾರ್ಥ ರಾಜಕೀಯ ಲಾಭದ ಉದ್ದೇಶಕ್ಕಾಗಿಯೇ ರಾಜೀನಾಮೆ ನೀಡುವವರು ಹೆಚ್ಚು. 

ನಕಲಿ ಮತಗಳಿಗೆ ಕಡಿವಾಣ
ನಕಲಿ ಮತಗಳು ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲು ಮತ್ತು ಅದನ್ನು ಈಗಿನ ದಿನಗಳಲ್ಲೂ ತಡೆಯಲಾಗದಿರುವುದು ನಮ್ಮ ವ್ಯವಸ್ಥೆಯ ದೌರ್ಬಲ್ಯವನ್ನು ತೋರಿಸುತ್ತದೆ. ಎಷ್ಟೋ ಬಾರಿ ಗೆದ್ದ ಅಂತರಕ್ಕಿಂತ ಹೆಚ್ಚಿನ ಕಳ್ಳಮತಗಳು ಚಲಾವಣೆಯಾಗಿ ಸೋಲು-ಗೆಲುವನ್ನು ಅಣಕಿಸಿದ ಉದಾಹರಣೆಗಳಿವೆ. ಎಷ್ಟೋ ಕೋಟಿ ಖರ್ಚು ಮಾಡಿ ನಡೆಸುವ ಚುನಾವಣೆಯಿಂದ ನಾವು ಇಂಥ ವಾಮ ಮಾರ್ಗದಲ್ಲಿ ಗೆದ್ದು ಬರುವವರಿಗೆ ಪವಿತ್ರ ಕಾರ್‍ಯಾಂಗ ದಲ್ಲಿ ಅವಕಾಶ ನೀಡಬೇಕೇ? ಮುಕ್ತ ಮತ್ತು ನ್ಯಾಯ ಸಮ್ಮತ ಚುನಾ ವಣೆ ಎಂಬ ಶಬ್ದವನ್ನು ನಾವು ಮಾಧ್ಯಮಗಳಲ್ಲಿ ಓದಿರುತ್ತೇವೆ, ಅಧಿಕಾರಿಗಳಿಂದ ಕೇಳಿಸಿಕೊಂಡಿರುತ್ತೇವೆ. ಆದರೆ ಈಗ ನಡೆಯುತ್ತಿ ರುವುದು ಮುಕ್ತ ಮತ್ತು ನ್ಯಾಯಸಮ್ಮತ ಎಂಬ ಖಚಿತತೆ ನಮ್ಮಲ್ಲಿ ದೆಯೇ? ಎಲ್ಲಿಯವರೆಗೆ ಕಳ್ಳ ಮತಗಳು ಚಲಾವಣೆಯಾಗುತ್ತ ವೆಯೋ ಅಲ್ಲಿಯವರೆಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬುದು ಪರಿಪೂರ್ಣವಾಗಲು ಸಾಧ್ಯವೇ ಇಲ್ಲ. ಇಂಥ ಕಳ್ಳ ಮತಗಳಿಂದಾಗಿ ಎಷ್ಟೋ ಬಾರಿ ಅರ್ಹ ಮತದಾರರು ಮತದಾನ ಮಾಡಲಾಗದೆ ವಾಪಸ್‌ ಬರಬೇಕಾಗುತ್ತದೆ. ಹಾಗಿರುವಾಗ ಇದೊಂದು ಗಂಭೀರ ಲೋಪ ಮತ್ತು ಅದನ್ನು ತಡೆಯಲು ಏನಾದರೂ ಮಾಡಲೇಬೇಕು ಎಂದು ಅನಿಸುತ್ತಿಲ್ಲವೇ?

ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮತ್ತು ಪ್ರಭಾವಕ್ಕೆ ಸಿಲುಕಿಕೊಳ್ಳದೆ ಆತ್ಮಸಾಕ್ಷಿಯಾಗಿ ಮತದಾನ ಮಾಡುವಂಥ ವಾತಾವರಣ ನಿರ್ಮಾಣವಾದಾಗ ಮಾತ್ರ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಎಂಬ ಮಾತು ಅರ್ಥ ಪಡೆದುಕೊಳ್ಳಲು ಸಾಧ್ಯ.

ಮತ ಯಂತ್ರದ ಸಂದೇಹ ನಿವಾರಣೆಯಾಗಲಿ
ಮತಯಂತ್ರದ ಮೇಲೆ ಕೆಲವು ಪಕ್ಷಗಳು ಎತ್ತಿರುವ ಸಂದೇಹ, ಅನುಮಾನಗಳನ್ನು ಪುಷ್ಟೀಕರಿಸಲು ಪೂರಕ ಆಧಾರಗಳು ಸಿಗುತ್ತಿಲ್ಲ ವಾದರೂ, ಕೆಲವು ಸಂದರ್ಭಗಳಲ್ಲಿ ಅವುಗಳನ್ನು ನೇರವಾಗಿ ತಳ್ಳಿ ಹಾಕಲು ಸಾಧ್ಯವಾಗದ ಸ್ಥಿತಿಯೂ ಎದುರಾಗುತ್ತದೆ. ಜನರ ಮುಂದಿರುವ ಕೆಲವು ಸಂಶಯಗಳನ್ನು ಪೂರ್ಣಪ್ರಮಾಣದಲ್ಲಿ ನಿವಾರಿಸಲು ಆಯೋಗಕ್ಕೆ ಇನ್ನೂ ಸಾಧ್ಯವಾಗಿಲ್ಲ. ಮತಯಂತ್ರ ವ್ಯವಸ್ಥೆ ಉತ್ತಮ ಹಾಗೂ ಈಗಿನ ದಿನಮಾನಗಳಲ್ಲಿ ಅದು ಅಗತ್ಯವೂ ಹೌದು. ಆದರೆ ಅವರ ಕುರಿತು ಎದ್ದಿರುವ ಸಂಶಯಗಳನ್ನು ನಿವಾರಿಸುವುದು ಅಗತ್ಯವಾಗಿದೆ.

ಮತ್ತೆ ನೆನಪಾಗುತ್ತಾರೆ ಶೇಷನ್‌
ಚುನಾವಣಾ ಆಯೋಗವನ್ನು ದೇಶದ ಎಲ್ಲರಿಗೂ ಪರಿಚಯಿ ಸಿದ ಮಾಜಿ ಆಯುಕ್ತ ಟಿ.ಎನ್‌. ಶೇಷನ್‌ ಅವರು ಈಗ ಸದ್ದಿಲ್ಲದ ಜೀವನ ನಡೆಸುತ್ತಿದ್ದಾರೆ ಮತ್ತು ಯಾವುದೋ ಒಂದು ಆಶ್ರಮದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಯಾವುದಕ್ಕೂ ಸಲ್ಲದ ಹಾಗೂ ಏನೂ ಅಧಿಕಾರವಿಲ್ಲದ ಸಂಸ್ಥೆ ಎಂದು ಗುರುತಿಸಿಕೊಂಡಿದ್ದ ಚುನಾವಣಾ ಆಯೋಗಕ್ಕೂ ಚೂಪು ಹಲ್ಲುಗಳಿವೆ, ಪ್ರಭಾವಿ ಅಸ್ತ್ರವಿದೆ ಎಂಬುದನ್ನು ತೋರಿಸಿಕೊಟ್ಟಿದ್ದ ಇವರಂಥ ಮತ್ತೂಬ್ಬ ವ್ಯಕ್ತಿ ಆ ಸ್ಥಾನಕ್ಕೆ ಬಂದಿದ್ದರೆ ಈಗ ನಾವು ಕಾಣುವುದಕ್ಕಿಂತ ಹೆಚ್ಚಿನ ಸುಧಾರಣೆ ಆಗಬಹುದಿತ್ತು. ಆದ್ದರಿಂದ ಈ ಹೊತ್ತಿನಲ್ಲಿ ಅವರು ನೆನಪಾಗದೆ ಇರಲು ಹೇಗೆ ಸಾಧ್ಯ? ಮೇಲೆ ಉಲ್ಲೇಖೀಸಿದಂಥ ಕೆಲವು ವಿಷಯಗಳ ಬದಲಾವಣೆಯನ್ನು ಮಾಡಲು ಯಾರಾದರೂ ಮುಂದಾದರೆ ಅವರು ಮತ್ತೋರ್ವ ಶೇಷನ್‌ ಆಗಲಿದ್ದಾರೆ ಎಂಬುದು ಖಚಿತ.

ಚುನಾವಣೆ ಸುಧಾರಣೆ ಆಗಲೇಬೇಕಾದ ಕೆಲಸ. ಸದ್ಯ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಚರ್ಚೆಯಾಗುತ್ತಿದೆ. ಇದೇ ವೇಳೆ ಹಾಲಿ ಚುನಾವಣಾ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳನ್ನು ಸರಿಪಡಿಸುವ ಕುರಿತು ಚಿಂತನ-ಮಂಥನ ನಡೆಯುವುದು ಅಗತ್ಯ. ಸರಕಾರ, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗ ಈ ನಿಟ್ಟಿನಲ್ಲೂ ಮುಂದಡಿ ಇಡಬೇಕೆಂಬ ಆಶಯ.

ಪುತ್ತಿಗೆ ಪದ್ಮನಾಭ ರೈ 

ಟಾಪ್ ನ್ಯೂಸ್

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

1-huli

Pilikula: 2 ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.