ಮಹಾಭಿಯೋಗದ ಮರ್ಮವೇನು?
Team Udayavani, Mar 29, 2018, 4:08 PM IST
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ ನಿಲುವಳಿ ಮಂಡಿಸಲು ವಿಪಕ್ಷಗಳು ತಯಾರಿ ನಡೆಸುತ್ತಿರುವುದಾಗಿ ವರದಿಯಾಗಿದೆ. ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳು ರಾಷ್ಟ್ರಪತಿಯಿಂದ ನೇಮಕ ಹೊಂದಿದವರು. ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಇರುವ ಸಾಂವಿಧಾನಿಕ ವಿಧಾನವೇ ಮಹಾಭಿಯೋಗ ನಿಲುವಳಿ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇಷ್ಟರ ತನಕ ಯಾವ ನ್ಯಾಯಮೂರ್ತಿಗಳನ್ನೂ ಮಹಾಭಿಯೋಗದ ಮೂಲಕ ಮನೆಗೆ ಕಳುಹಿಸಿದ ನಿದರ್ಶನವಿಲ್ಲ. ಆದರೆ ಕೆಲವರ ವಿರುದ್ಧ ಮಹಾಭಿಯೋಗ ನಿಲುವಳಿ ಮಂಡನೆಯಾಗಿತ್ತು. ಈ ನಿಲುವಳಿಗಳು ಬೇರೆ ಬೇರೆ ಕಾರಣಗಳಿಂದಾಗಿ ಬಿದ್ದು ಹೋಗಿದೆ.
ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನಾಯಮೂರ್ತಿಗಳಾದ ಜೆ.ಚಲಮೇಶ್ವರ, ರಂಜನ್ ಗೋಗೋಯ್, ಮದನ್ ಬಿ. ಲೋಕುರ ಮತ್ತು
ಕುರಿಯನ್ ಜೋಸೆಫ್ ಕಳೆದ ಜ.12ರಂದು ಪತ್ರಿಕಾಗೋಷ್ಠಿ ಕರೆದು ಮಿಶ್ರಾ ವಿರುದ್ಧ ಆರೋಪಗಳ ಸುರಿಮಳೆಗೈದ ಅಭೂತಪೂರ್ವ ಘಟನೆಯ ಬಳಿಕ ಮಿಶ್ರಾ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ನ್ಯಾಯಮೂರ್ತಿಗಳು ಎತ್ತಿರುವ ಆಕ್ಷೇಪಗಳಿಗೆ ಸಂಬಂಧಪಟ್ಟಂತೆ ನ್ಯಾ| ಮಿಶ್ರಾ ಸೂಕ್ತ ಪರಿಹಾರ ಒದಗಿಸಲು ವಿಫಲರಾಗಿದ್ದಾರೆ ಎನ್ನುವ ಅಂಶವನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಮಹಾಭಿಯೋಗ ನಿಲುವಳಿ ಮಂಡಿಸುವ ಚಿಂತನೆಯಲ್ಲಿವೆ.
ಜತೆಗೆ ಒಡಿಶಾ ಹೈಕೋರ್ಟಿನ ನ್ಯಾಯಮೂರ್ತಿಗಳಾಗಿದ್ದ ವೇಳೆ ವೈದ್ಯಕೀಯ ಕಾಲೇಜೊಂದಕ್ಕೆ ಅನುಮತಿ ನೀಡುವ ಪ್ರಕರಣದಲ್ಲೂ ಮಿಶ್ರಾ ಹೆಸರು ಕೇಳಿ ಬಂದಿದೆ. ಜ.12ರಂದು ನಾಲ್ವರು ನ್ಯಾಯಮೂರ್ತಿಗಳು ಮಿಶ್ರಾ ವಿರುದ್ಧ ಆರೋಪ ಮಾಡಿದಾಗಲೇ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಮಹಾಭಿಯೋಗ ನಿಲುವಳಿ ಮಂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸತ್ತಿನ ಉಭಯ ಸದನಗಳಲ್ಲಿ ಸಾಕಷ್ಟು ಸದಸ್ಯ ಬಲ ಇಲ್ಲದಿರುವುದರಿಂದ ನಿಲುವಳಿ ಬಿದ್ದು ಹೋಗಬಹುದು ಎಂಬ ಅಂಜಿಕೆಯಲ್ಲಿ ಅದನ್ನು ಬೆಂಬಲಿಸುವ ವಿಚಾರವಾಗಿ ಮೀನಾಮೇಷ ಎಣಿಸಿತ್ತು. ಆದರೆ ಇದೀಗ ಸ್ವತಃ ಕಾಂಗ್ರೆಸ್ ಮಹಾಭಿಯೋಗದ ಪ್ರಕ್ರಿಯೆಯನ್ನು ಪುನರಾರಂಭಿಸಿರುವುದರ ಹಿಂದೆ ನ್ಯಾಯಾಂಗದ ಪಾವಿತ್ರ್ಯವನ್ನು ಉಳಿಸಬೇಕೆಂಬ ನೈಜ ಕಾಳಜಿಗಿಂತಲೂ ರಾಜಕೀಯದ ಲಾಭನಷ್ಟಗಳ ಲೆಕ್ಕಾಚಾರವೇ ಹೆಚ್ಚಾಗಿರುವಂತೆ ಕಾಣಿಸುತ್ತದೆ.
ಸಂವಿಧಾನದ 124ನೇ ಪರಿಚ್ಛೇದ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗ ನಿಲುವಳಿ ಮಂಡಿಸಲು ಅವಕಾಶ ನೀಡಿದೆ. ಆದರೆ ಈ ನಿಲುವಳಿ ಮಂಡನೆ ಎನ್ನುವುದು ಸುದೀರ್ಘವಾದ ಪ್ರಕ್ರಿಯೆ. ರಾಜ್ಯಸಭೆಯ ಕನಿಷ್ಠ 50 ಅಥವಾ ಲೋಕಸಭೆಯ ಕನಿಷ್ಠ 100 ಸದಸ್ಯರು ಮಹಾಭಿಯೋಗ ನಿಲುವಳಿಗೆ ಸಹಿ ಹಾಕಬೇಕು. ನಿಲುವಳಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಪರಮಾಧಿಕಾರ ಸಭಾಧ್ಯಕ್ಷರು ಅಥವಾ ಸಭಾಪತಿಯದ್ದು. ಒಂದು ವೇಳೆ ಸ್ವೀಕೃತವಾದರೆ ಆರೋಪಗಳ ತನಿಖೆ ಮಾಡಲು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ತಲಾ ಒಬ್ಬರು ನ್ಯಾಯಮೂರ್ತಿಗಳು ಮತ್ತು ನ್ಯಾಯಶಾಸ್ತ್ರ ತಜ್ಞರನ್ನು ಒಳಗೊಂಡ ಸಮಿತಿ ರಚನೆಯಾಗಬೇಕು.
ಈ ಸಮಿತಿ ತನಿಖೆ ನಡೆಸಿ ಆರೋಪದಲ್ಲಿ ಹುರುಳಿದೆ ಎಂದು ಕಂಡುಕೊಂಡರೆ ದೋಷಾರೋಪಪಟ್ಟಿ ಸಿದ್ಧಗೊಳಿಸುತ್ತದೆ. ಅನಂತರ ನ್ಯಾಯಪೀಠದ ಮಾದರಿಯಲ್ಲಿ ವಾದಿ ಮತ್ತು ಪ್ರತಿವಾದಿಗಳ ಹೇಳಿಕೆ ಪಡೆದುಕೊಂಡು ಅಗತ್ಯವಿದ್ದರೆ ಪಾಟೀಸವಾಲು ಕೂಡಾ ಮಾ ಡುತ್ತದೆ. ಅನಂತರ ನ್ಯಾಯಮೂರ್ತಿಗಳನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡ ಲಾಗುತ್ತದೆ. ಇಷ್ಟೆಲ್ಲ ಆಗಲು ವರ್ಷಗಳೇ ಹಿಡಿಯಬಹುದು. ಆದರೆ ನ್ಯಾ| ಮಿಶ್ರಾ ಮುಂಬರುವ ಅಕ್ಟೋಬರ್ 2ರಂದು ನಿವೃತ್ತರಾಗಲಿದ್ದಾರೆ ಹಾಗೂ ಅವರ ವಿರುದ್ಧ ಆರೋಪ ಮಾಡಿದವರೂ ಒಂದು ವರ್ಷದ ಆಸುಪಾಸಿನೊಳಗೆ ನಿವೃತ್ತರಾಗುವವರೇ.
ಮಹಾಭಿಯೋಗದ ಮೂಲಕ ಹುದ್ದೆಯಿಂದ ಕೆಳಗಿಳಿಸ ಬಹುದೇ ಹೊರತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಮಹಾಭಿಯೋಗ ನಡೆಸುವ ಅಗತ್ಯವೇನಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನ್ಯಾ| ಮಿಶ್ರಾ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಹಲವು ಮಹತ್ವದ
ಪ್ರಕರಣಗಳ ವಿಚಾರಣೆ ನಡೆಸಿದೆ ಹಾಗೂ ಕೆಲವು ತೀರ್ಪುಗಳನ್ನು ನೀಡಿದೆ. ಈ ಪೈಕಿ ತ್ರಿವಳಿ ತಲಾಕ್ ರದ್ದುಪಡಿಸಿರುವುದು ಒಂದು. ಅಂತೆಯೇ
ಅಯೋಧ್ಯೆ ವಿವಾದವನ್ನು ಮುಕ್ತಾಯಗೊಳಿಸಲು ಮಿಶ್ರಾ ಸ್ವತಃ ಆಸಕ್ತಿ ವಹಿಸಿದ್ದಾರೆ. ಹಿಂದೊಮ್ಮೆ ಸಾಧ್ಯವಾದರೆ ಈ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲು ಅವರು ಸಲಹೆ ನೀಡಿದ್ದರು. ಅಂತೆಯೇ ಅಯೋಧ್ಯೆ ತೀರ್ಪನ್ನು 2019ರ ಬಳಿಕ ಪ್ರಕಟಿಸಬೇಕೆಂಬ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಾದವನ್ನು ಅವರು ತಿರಸ್ಕರಿಸಿದ್ದಾರೆ. ಇದೀಗ ಮುಸ್ಲಿಂ ಸಮುದಾಯದಲ್ಲಿರುವ ಬಹುಪತ್ನಿತ್ವ ಮತ್ತು ನಿಖಾ ಹಲಾಲ್ ಎಂಬ ಅನಿಷ್ಟ ಪದ್ಧತಿಗಳ ವಿರುದ್ಧ ದಾಖಲಾಗಿರುವ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ. ಇದರ ಬೆನ್ನಿಗೆ ವಿಪಕ್ಷಗಳು ಮಹಾಭಿಯೋಗ ನಿಲುವಳಿ ಮಂಡಿಸಲು ಮುಂದಾಗಿರುವುದರ ಹಿಂದೆ ಷಡ್ಯಂತ್ರವಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ನಿಜವಾಗಿದ್ದರೆ ವಿಪಕ್ಷಗಳ ನಡೆ ಸರಿಯಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.