ಸಂಕಷ್ಟದ ನಡುವೆಯೇ ಹಬ್ಬ; ವಿಘ್ನ ನಿವಾರಿಸಲಿ ಗಣಪ


Team Udayavani, Aug 22, 2020, 6:40 AM IST

ಸಂಕಷ್ಟದ ನಡುವೆಯೇ ಹಬ್ಬ; ವಿಘ್ನ ನಿವಾರಿಸಲಿ ಗಣಪ

ಕೋವಿಡ್‌ ಸಾಂಕ್ರಾಮಿಕದ ನಡುವೆಯೇ ಗಣೇಶ ಚತುರ್ಥಿ ಎದುರಾಗಿದೆ. ಗಣೇಶೋತ್ಸವ ಆಚರಣೆಯಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದಾಗಿ ದೇಶಾದ್ಯಂತ ರಾಜ್ಯ ಸರಕಾರಗಳು ಹಲವು ಎಚ್ಚರಿಕೆ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಹೊರಡಿಸಿವೆ, ಜತೆಗೆ ಮೊದಲು ಹಾಕಲಾಗಿದ್ದ ಕೆಲವು ನಿರ್ಬಂಧಗಳನ್ನೂ ಸಡಿಲಿಸಿವೆ. ಹಬ್ಬಗಳು, ಆಚರಣೆಗಳು ಭಾರತೀಯರ ಜೀವನಾಡಿಯಿದ್ದಂತೆ. ಅದರಲ್ಲೂ ಗಣೇಶ ಚತುರ್ಥಿ ಎನ್ನುವುದು ಭಾರತೀಯರ ಮಾನಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಹಬ್ಬ. ಕುಗ್ರಾಮಗಳಿಂದ ಹಿಡಿದು, ಮಹಾನಗರಗಳವರೆಗೆ ಗಣೇಶನ ಮೂರ್ತಿಯ ಪೆಂಡಾಲುಗಳು,

ಸಂಭ್ರಮದಿಂದ ಮೋದಕಪ್ರಿಯನಿಗೆ ಮಕ್ಕಳು-ವೃದ್ದರಾದಿಯಾಗಿ ಹಾಕುವ ಜೈಕಾರಗಳು, ಬಗೆಬಗೆಯ ಖಾದ್ಯಗಳು, ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು..ಒಂದೇ ಎರಡೇ.

ದುರದೃಷ್ಟವಶಾತ್‌ ಈ ಬಾರಿ ಗಣೇಶೋತ್ಸವಗಳಲ್ಲಿ ಇಂಥ ಚಿತ್ರಣ ನೋಡಲು ಸಿಗುವುದಿಲ್ಲ. ಕೊರೊನಾ ಜನ ಸಂಪರ್ಕದಿಂದ ಹರಡುವ ರೋಗವಾದ್ದರಿಂದ, ಗಣೇಶೋತ್ಸವದ ವಿಚಾರದಲ್ಲಿ ಸರಕಾರಗಳು ಹಲವು ನಿರ್ಬಂಧಗಳನ್ನು ವಿಧಿಸಿರುವುದು ಸರಿಯಾಗಿಯೇ ಇದೆ. ಇನ್ನು ಜನರೂ ಸಹ ಸಾಂಕ್ರಾಮಿಕದ ಪ್ರಸರಣದ ಅಪಾಯದ ಬಗ್ಗೆ ಅರಿತಿರುವುದರಿಂದ ಸ್ವಯಂಪ್ರೇರಿತವಾಗಿಯೇ ಸರಳ ಆಚರಣೆಗೆ ಮುಂದಾಗಲಿದ್ದಾರೆ. ಇಂದು ಇಡೀ ಪ್ರಪಂಚವು ಹಿಂದೆಂದೂ ಕಾಣದಂಥ ವಿಘ್ನವನ್ನು ಎದುರಿಸುತ್ತಿದೆ. ಕೋಟ್ಯಂತರ ಜನರು ಸೋಂಕಿತರಾಗಿದ್ದರೆ, ಲಕ್ಷಾಂತರ ಜನರು ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ವೈಜ್ಞಾನಿಕ ಲೋಕವು ರೋಗಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿ ಹಗಲುರಾತ್ರಿ ಶ್ರಮಿಸುತ್ತಿದೆ. ಕೊರೊನಾ ವಾರಿಯರ್‌ಗಳು ಜನರ ಸ್ವಾಸ್ಥ್ಯ ರಕ್ಷಣೆಗಾಗಿ ತಮ್ಮ ಆರೋಗ್ಯದ ಪರಿವೆಯಿಲ್ಲದೇ ಹೋರಾಡುತ್ತಿದ್ದಾರೆ. ಒಟ್ಟಿrಲ್ಲಿ ಪ್ರತಿಯೊಬ್ಬರಿಗೂ ಈ ವೈರಾಣು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಒಡ್ಡಿದೆ. ಗಣಪತಿಯು ವಿಘ್ನನಿವಾರಕನಾದ್ದರಿಂದ, ಮಾನವಕುಲಕ್ಕೆ ಎದುರಾಗಿರುವ ಈ ಕಂಟಕವನ್ನು ಬಹುಬೇಗ ನಿವಾರಿಸು ಎಂದು ಎಲ್ಲರೂ ಪ್ರಾರ್ಥಿಸೋಣ.

ಹಬ್ಬಗಳ ವಿಶೇಷತೆಯೆಂದರೆ, ಅವುಗಳ ಆಚರಣೆಯು ಹಲವು ಆಯಾಮಗಳಲ್ಲಿ ನಮ್ಮಲ್ಲಿ ಗುಣಾತ್ಮಕತೆಯನ್ನು ವೃದ್ಧಿಸುತ್ತವೆ. ಅದರಲ್ಲೂ ಗಣೇಶ ಚತುರ್ಥಿಯಂತೂ ಭಾರತೀಯರ ನಡುವಿನ ಭಾವೈಕ್ಯದ ಕೊಂಡಿಯಾಗಿದೆ. ಜಾತಿ-ಮತ-ಪಂಥಗಳ ಭೇದಭಾವವನ್ನೆಲ್ಲ ತೊಡೆದು, ಜನರೆಲ್ಲರೂ ಸರ್ವವಂದ್ಯ ಗಣಪನನ್ನು ಭಕ್ತಿಭಾವದಿಂದ ಭಜಿಸುವ ಗಣೇಶೋತ್ಸವವು ವಿಶಿಷ್ಟವಾದದ್ದು.

ಮೋದಕ ಪ್ರಿಯ ಗಣಪತಿಯನ್ನು ಸ್ಮರಿಸುವ ಮೂಲಕವೇ ಮುನ್ನಡೆ ಇಡುವ ಪರಿಪಾಠ ಜನರಲ್ಲಿ ಇದೆ. ಗಣಪತಿಗೆ ನಮಿಸಿ ಮುನ್ನಡೆದರೆ ಕೈಗೊಂಡ ಕಾರ್ಯಗಳು ಸಫ‌ಲವಾಗುತ್ತವೆ, ಸಂಕಷ್ಟಗಳು ದೂರವಾಗುತ್ತವೆ ಎನ್ನುವ ಬಲವಾದ ನಂಬಿಕೆ ನಮಗೆಲ್ಲರಿಗೂ ಇದೆ. ಇದು ಒಂದರ್ಥದಲ್ಲಿ ಇಡೀ ದೇಶಕ್ಕೆ ಬದಲಾವಣೆಯ ಹೊತ್ತು. ಕೋವಿಡ್‌ನ‌ ಈ ಸಮಯದಲ್ಲಿ ಅನೇಕರು ತಮ್ಮ ಜೀವನದಲ್ಲಿ ಬೃಹತ್‌ ಬದಲಾವಣೆಯನ್ನು ನೋಡುತ್ತಿದ್ದಾರೆ ಅಥವಾ ಹೊಸ ಯೋಜನೆಗಳು, ಸಾಧ್ಯತೆಗಳತ್ತ ಮುಖ ಮಾಡುತ್ತಿದ್ದಾರೆ. ಅವರೆಲ್ಲರ ಪ್ರಯತ್ನಗಳೂ ಯಶಸ್ವಿಯಾಗಲಿ ಎಂದು ಹಾರೈಸೋಣ. ಇನ್ನು ಗಣೇಶೋತ್ಸವಗಳ ಮೂಲ ಉದ್ದೇಶವಾದ ಏಕತೆಯ ಭಾವನೆಯು ನಮ್ಮಲ್ಲಿ ಅಂತರ್ಗತವಾಗುವಂಥ ದಿಕ್ಕಿನಲ್ಲಿ ಚಿಂತಿಸೋಣ. ಮನೆಯಲ್ಲಿದ್ದೇ ಸಂಭ್ರಮದಿಂದ ಎಲ್ಲರೂ ವಿಘ್ನನಿವಾರಕ ಗಣಪತಿಯನ್ನು ಭಜಿಸೋಣ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಷಯಗಳು. ಸುರಕ್ಷಿತವಾಗಿರಿ.

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.