ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕಾರಿ
Team Udayavani, Feb 18, 2020, 6:20 AM IST
ಪ್ರತಿಸಲ ಚುನಾವಣೆ ಮುಗಿದ ಕೂಡಲೇ ಚುನಾವಣಾ ಆಯೋಗ ಚಲಾವಣೆಯಾದ ಒಟ್ಟು ಮತಗಳ ಪ್ರಮಾಣವನ್ನು ಬಹಿರಂಗಪಡಿಸುತ್ತದೆ. ಒಂದು ವೇಳೆ ಮತದಾನ ಪ್ರಮಾಣ ಶೇ.80 ಆಗಿದ್ದರೆ ಅತ್ಯುತ್ತಮ ಮತದಾನ ಎಂದು ಖುಷಿ ಪಡುತ್ತೇವೆ. ಈ ಸಂದರ್ಭದಲ್ಲಿ ಉಳಿದ ಶೇ. 20 ಮಂದಿ ಮತದಾರರು ಏಕೆ ಮತದಾನ ಮಾಡಿಲ್ಲ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಅದೇ ಮತದಾನ ಪ್ರಮಾಣ ಶೇ.50ಕ್ಕಿಂತೂ ಕಡಿಮೆಯಿದ್ದರೆ ಉಳಿದ ಶೇ. 50 ಮತದಾರರು ಏಕೆ ಬರಲಿಲ್ಲ ಎಂಬ ಚರ್ಚೆ ಪ್ರಾರಂಭವಾಗುತ್ತದೆ.ಎರಡೂ ಸಂದರ್ಭಗಳಲ್ಲಿ ಮತ ಹಾಕದವರು ಆಲಸಿಗಳು, ಜವಾಬ್ದಾರಿ ಮರೆತವರು ಎಂದು ಜರೆಯುವುದು ಸಾಮಾನ್ಯ. ಆದರೆ ಅವರು ಮತದಾನ ಮಾಡದೇ ಇರುವುದಕ್ಕೆ ಬೇರೆ ಕಾರಣಗಳೂ ಇರಬಹುದು ಎಂಬುದನ್ನು ಹೆಚ್ಚಿನವರು ಯೋಚಿಸುವುದಿಲ್ಲ. ಬಹುತೇಕ ಮಂದಿಗೆ ಮತ ಹಾಕುವ ಇಚ್ಚೆ ಇದ್ದರೂ ಮತ ಚಲಾಯಿಸುವ ಸೌಲಭ್ಯ ಇರುವುದಿಲ್ಲ. ಏಕೆಂದರೆ ಅವರು ತಮ್ಮ ನೋಂದಾಯಿತ ಮತ ಕ್ಷೇತ್ರದಲ್ಲಿ ಇರುವುದಿಲ್ಲ.
ಉದ್ಯೋಗ ನಿಮಿತ್ತ ಜನರು ವಲಸೆ ಹೋಗುವುದು ಮಾಮೂಲು ಪ್ರಕ್ರಿಯೆ. ಹೀಗೆ ವಲಸೆ ಹೋದವರ ಮತ ಚಲಾವಣೆಯಾಗಬೇಕಾದರೆ ಅವರು ಮತದಾನದ ದಿನದಂದು ತಮ್ಮ ಮತಕ್ಷೇತ್ರಗಳಲ್ಲಿ ಇರಬೇಕಾಗುತ್ತದೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ತಮಿಳುನಾಡಿನ ಯಾವುದೋ ಒಂದು ನಗರದಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ಬಿಹಾರದ ಒಬ್ಬ ವ್ಯಕ್ತಿಗೆ ಮತದಾನ ಮಾಡಬೇಕಾದರೆ ಹೋಗಲು ಮೂರು ದಿನ, ವಾಪಾಸು ಬರಲು ಮೂರು ದಿನ, ಊರಿನಲ್ಲಿ ಉಳಿಯಲು ಮೂರು ದಿನ ಹೀಗೆ ಕನಿಷ್ಠ 10 ದಿನದ ರಜೆ ಸಿಗಬೇಕು. ಜೊತೆಗೆ ಹೋಗಿ ಬರುವ ಪ್ರಯಾಣದ ಖರ್ಚುವೆಚ್ಚಗಳನ್ನು ಭರಿಸಬೇಕು. ಎಲ್ಲರೂ ಇಷ್ಟು ಅನುಕೂಲವಂತರಾಗಿರುವುದಿಲ್ಲ. ಈ ಕಾರಣಕ್ಕೆ ಯಾವ ಚುನಾವಣೆಯಲ್ಲೂ ಶೇ. 100ರಷ್ಟು ಮತ ಚಲಾವಣೆಯಾಗುವುದಿಲ್ಲ. ಆದರೆ ಈ ವಾಸ್ತವ ಸ್ಥಿತಿಯ ಬಗ್ಗೆ ಹೆಚ್ಚಿನವರು ಗಂಭೀರವಾದ ಚಿಂತನೆ ನಡೆಸಿದಂತೆ ಕಾಣುವುದಿಲ್ಲ.
ಶೇ. 100 ಮತ ಚಲಾವಣೆಯಾಗಬೇಕೆಂದು ಚುನಾವಣಾ ಆಯೋಗ ಕಳೆದ ಕೆಲವು ವರ್ಷಗಳಿಂದ ಗಂಭೀರವಾದ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ವಲಸೆ ಕಾರ್ಮಿಕರ ಮತದಾನದ ಸಮಸ್ಯೆಗಳನ್ನು ಬಗೆಹರಿಸದ ಹೊರತು ಶೇ. 100 ಮತದಾನವನ್ನು ಖಾತರಿಪಡಿಸುವುದು ಎಂದಿಗೂ ಅಸಾಧ್ಯ. ವಲಸೆ ಕಾರ್ಮಿಕರೆಂದರೆ ಬರೀ ಕೂಲಿ ಕೆಲಸ ಮಾಡುವವರು ಎಂದರ್ಥವಲ್ಲ. ಉದ್ಯೋಗ ನಿಮಿತ್ತವಾಗಿ ಬೇರೆ ಊರುಗಳಲ್ಲಿರುವವರೆಲ್ಲ ಈ ವರ್ಗದಲ್ಲಿ ಬರುತ್ತಾರೆ.
ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 20 ಪ್ರಕಾರ ವ್ಯಕ್ತಿ ಯಾವ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರುತ್ತಾನೋ ಆ ಕ್ಷೇತ್ರದ ಮತದಾರನಾಗಿ ನೋಂದಾಯಿಸಿಕೊಳ್ಳಬಹುದು. ಆದರೆ ಸಾಮಾನ್ಯ ನಿವಾಸಿಯಾಗಲು ಆತ ಕೆಲವೊಂದು ದಾಖಲೆಪತ್ರಗಳನ್ನು ಹೊಂದಿರಬೇಕಾಗುತ್ತದೆ. ಮುಖ್ಯವಾಗಿ ಅಲ್ಲಿನ ನಿವಾಸಿ ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವ ದಾಖಲೆಗಳು. ಉದ್ಯೋಗಕ್ಕಾಗಿ ಊರೂರು ಅಲೆಯುವವರು ಪದೇ ಪದೆ ಇಂಥ ದಾಖಲೆಪತ್ರಗಳನ್ನು ಹೊಂದಿಸಿಕೊಳ್ಳುವುದು ಪ್ರಸಕ್ತ ವ್ಯವಸ್ಥೆಯಲ್ಲಿ ಬಹಳ ಕಷ್ಟದ ಕೆಲಸ. ಸರಕಾರಕ್ಕೆ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ಕೊಡಿಸುವ ಉತ್ಸುಕತೆಯಿದೆ. ಇದಕ್ಕೆ ಸಂಬಂಧಿಸಿದ ಮಸೂದೆ ಲೋಕಸಭೆಯಲ್ಲಿ ಮಂಜೂರು ಕೂಡ ಆಗಿದೆ. ಆದರೆ ವಲಸೆ ಕಾರ್ಮಿಕರಿಗೆ ಈ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನಗಳು ಆಗಿಲ್ಲ.
ಇದೀಗ ಚುನಾವಣಾ ಆಯೋಗ ಮತದಾರ ಇರುವ ಪ್ರದೇಶದಲ್ಲೇ ಮತ ಚಲಾಯಿಸಲು ಅವಕಾಶ ಕೊಡುವ ಸೌಲಭ್ಯವನ್ನು ಒದಗಿಸುವ ಪ್ರಯತ್ನ ಪ್ರಾರಂಭಿಸಿರುವುದು ಈ ಹಿನ್ನೆಲೆಯಲ್ಲಿ ಒಂದು ಉತ್ತಮ ನಡೆ ಎನ್ನಬಹುದು. ಶೇ. 100 ಮತದಾನದ ಗುರಿಯನ್ನು ಈಡೇರಿಸಿಕೊಳ್ಳಲು ಈ ನಡೆ ಸಹಕಾರಿಯಾಗಬಹುದು. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ದೂರದ ಊರುಗಳಲ್ಲಿ ಇರುವ ಮತದಾರರನ್ನು ರಾಜಕೀಯ ಪಕ್ಷಗಳು ಅವರವರ ಮತಕ್ಷೇತ್ರಗಳಿಗೆ ತಮ್ಮ ಖರ್ಚಿನಲ್ಲಿ ಸಾಗಿಸಿ ಪರೋಕ್ಷವಾಗಿ ಅವರ ಮತ ಖರೀದಿಸುವಂಥ ಅಕ್ರಮಗಳಿಗೂ ಕಡಿವಾಣ ಬೀಳಬಹುದು. ಕೇರಳದಲ್ಲಿ ಪ್ರತಿಸಲ ಚುನಾವಣೆ ನಡೆದಾಗಲೂ ಗಲ್ಫ್ ದೇಶಗಳಲ್ಲಿರುವ ಮತದಾರರಿಗೆ ವಿಮಾನ ಟಿಕೆಟನ್ನು ರಾಜಕೀಯ ಪಕ್ಷಗಳು ಪ್ರಾಯೋಜಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಂತೆಯೇ ಮುಂಬಯಿಯಂಥ ನಗರಗಳಲ್ಲಿ ದುಡಿಯುವ ಕರಾವಳಿಯ ಜನರನ್ನು ಬಸ್, ರೈಲಿನ ಟಿಕೆಟ್ ಕೊಟ್ಟು ಚುನಾವಣೆ ದಿನಕ್ಕಾಗುವಾಗ ಕರೆಸಿಕೊಳ್ಳಲಾಗುತ್ತದೆ.ಕರಾವಳಿ ಭಾಗಗಳಲ್ಲಿ ದುಡಿಯುವ ಬಿಜಾಪುರ ಮತ್ತಿತರ ಕಡೆಗಳ ಜನರನ್ನು ಮತದಾನದ ದಿನಕ್ಕಾಗುವಾಗ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಿ ಸಾಗಿಸುವ ಪದ್ಧತಿಯೂ ಇದೆ. ಇದೆಲ್ಲ ಮತದಾರರನ್ನು ಹಂಗಿನಲ್ಲಿ ಕೆಡವಿ ಮತಗಳಿಸುವ ತಂತ್ರಗಳು.ಇದು ಕೂಡ ಚುನಾವಣಾ ಅಕ್ರಮವೇ ಆಗುತ್ತದೆ. ಇಂಥ ಅಕ್ರಮಗಳನ್ನು ತಡೆಯಲು ವಲಸೆ ಕಾರ್ಮಿಕರು ಇದ್ದಲ್ಲೇ ಮತದಾನಕ್ಕೆ ಅವಕಾಶ ಕೊಡುವ ಸೌಲಭ್ಯ ಸಹಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.