ಬದಲಾದ ಭಾರತ ಕ್ರಿಕೆಟ್‌ ಮನೋಭಾವ

Team Udayavani, Jan 19, 2021, 6:50 AM IST

ಬದಲಾದ ಭಾರತ ಕ್ರಿಕೆಟ್‌ ಮನೋಭಾವ

ಆಸ್ಟ್ರೇಲಿಯ ಪ್ರವಾಸದಲ್ಲಿ ಗಾಯಗೊಂಡ ಭಾರತೀಯರ ಸಂಖ್ಯೆ 11ರಷ್ಟಿದೆ. ಒಂದು ಪ್ರವಾಸದಲ್ಲಿ ಈ ಪ್ರಮಾಣದಲ್ಲಿ ಭಾರತೀಯರು ಹಿಂದೆಂದೂ ಗಾಯಗೊಂಡಿರಲಿಲ್ಲ. ಯಾವುದೇ ಪಂದ್ಯದಲ್ಲೂ ಅದೇ ತಂಡ ಆಡಿದ ನಿದರ್ಶನಗಳೇ ಇಲ್ಲ. ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್‌ ಹೊತ್ತಿಗಂತೂ ಭಾರತದ ಬೌಲಿಂಗ್‌ ಪಡೆ ಸಂಪೂರ್ಣ ಅನನುಭವಿಗಳಿಂದ ಕೂಡಿದೆ. ಬ್ಯಾಟಿಂಗ್‌ನಲ್ಲಿ ಸ್ವತಃ ನಾಯಕ ವಿರಾಟ್‌ ಕೊಹ್ಲಿಯ ನೆರವಿಲ್ಲ. ಹಾಗಂತ ತಂಡ ಹೋರಾಟ ಬಿಟ್ಟುಕೊಟ್ಟಿಲ್ಲ.

ಇಂಥ ದ್ದೊಂದು ಹಠ, ಹೋರಾಟದ ಸ್ವಭಾವ ಭಾರತ ಕ್ರಿಕೆಟ್‌ ತಂಡದಲ್ಲಿ ಆರಂಭವಾಗಿದ್ದು ಗಂಗೂಲಿ ನಾಯಕರಾದ ಬಳಿಕ. ಪದೇಪದೇ ಅವರ ನಾಯಕತ್ವದಲ್ಲಿ ಅಂತಹ ಪಂದ್ಯಗಳು ನಡೆದರೂ, 3 ಪಂದ್ಯಗಳನ್ನು ಮಾತ್ರ ತಪ್ಪದೇ ಉಲ್ಲೇಖೀಸಬೇಕಾಗುತ್ತದೆ. ಈ ಪಂದ್ಯಗಳಲ್ಲಿನ ಜಯಗಳನ್ನು, ಮನೋಭಾವದ ಬದಲಾವಣೆಯ ದೃಷ್ಟಿಯಿಂದ ಹೇಳುವುದಾದರೆ ವಿಶ್ವಕಪ್‌ ಜಯಕ್ಕಿಂತ ಮಹತ್ವದ್ದು ಎನ್ನಬಹುದು. ಮೊದಲನೆಯ ಉದಾಹರಣೆ: 2001, ಮಾ.15ರಂದು ಆಸ್ಟ್ರೇಲಿಯ ವಿರುದ್ಧ ಕೋಲ್ಕತಾ ಟೆಸ್ಟ್‌ ಪಂದ್ಯದಲ್ಲಿ ಗಳಿಸಿದ 171 ರನ್‌ ಜಯ. ಫಾಲೋಆನ್‌ಗೊಳಗಾದ ತಂಡವೊಂದು ಜಯಗಳಿಸಿದ ಕೇವಲ 3ನೇ ಉದಾಹರಣೆ. ಆಗ ಆಸ್ಟ್ರೇಲಿಯ ವಿಶ್ವದ ಅತ್ಯಂತ ಬಲಿಷ್ಠ ತಂಡವೆಂಬ ಹೆಗ್ಗಳಿಕೆ ಹೊಂದಿತ್ತು. ಅದರ ಮನೋಬಲವನ್ನು ಕುಗ್ಗಿಸಿದ್ದು ಭಾರತದ ಈ ಅತ್ಯಮೋಘ ಪ್ರತೀ ಹೋರಾಟ. ಅಲ್ಲಿ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದು ವಿವಿಎಸ್‌ ಲಕ್ಷ್ಮಣ್‌, ರಾಹುಲ್‌ ದ್ರಾವಿಡ್‌, ಹರ್ಭಜನ್‌ ಸಿಂಗ್‌. ಅದಾದ ಅನಂತರ 2003, ಡಿ.16ರಂದು ಮತ್ತೆ ಆಸ್ಟ್ರೇಲಿಯ ವಿರುದ್ಧ ಅಡಿಲೇಡ್‌ ಟೆಸ್ಟ್‌ನಲ್ಲಿ ಭಾರತ 4 ವಿಕೆಟ್‌ಗಳ ಗೆಲುವು ಸಾಧಿಸಿತು. ಇಲ್ಲೂ ಮಿಂಚಿದ್ದು ಲಕ್ಷ್ಮಣ್‌ ಮತ್ತು ದ್ರಾವಿಡ್‌! ಇನ್ನೊಂದು ಜಯ ಏಕದಿನದಲ್ಲಿ ದಾಖಲಾಯಿತು. ಇಂಗ್ಲೆಂಡ್‌ ವಿರುದ್ಧದ ಅಂತಿಮ ಪಂದ್ಯದಲ್ಲಿ 326 ರನ್‌ಗಳ ಗುರಿಯನ್ನು 8 ವಿಕೆಟ್‌ ಕಳೆದುಕೊಂಡು ಭಾರತ ತಲುಪಿತು. ಆಗ ಇದೊಂದು ವಿಶ್ವದಾಖಲೆಯ ರನ್‌ ಬೆನ್ನತ್ತುವಿಕೆ. ಮುಂದೆ ಧೋನಿ ನಾಯಕರಾದರು. ಅವರ ನಾಯಕತ್ವದಲ್ಲಿ ಎರಡು ವಿಶ್ವಕಪ್‌, ಒಂದು ಚಾಂಪಿಯನ್ಸ್‌ ಟ್ರೋಫಿ ಭಾರತಕ್ಕೆ ಒಲಿಯಿತು. ಟ್ರೋಫಿಗಳ ಲೆಕ್ಕಾಚಾರದಲ್ಲಿ ಇವು ಬಹಳ ಅದ್ಭುತಗಳೆನಿಸಿದರೂ, ಗಂಗೂಲಿ ನಾಯಕತ್ವದಲ್ಲಿ ದಾಖಲಾದ ಸ್ಮರಣಾರ್ಹ ಜಯಗಳಿಗೆ ಸಮವೆನಿಸಿಕೊಳ್ಳಲಿಲ್ಲ.

ಪ್ರಸ್ತುತ ವಿರಾಟ್‌ ಕೊಹ್ಲಿ ಕೈಯಲ್ಲಿ ಭಾರತ ತಂಡವಿದೆ. ತಂಡ ಅತ್ಯುತ್ತಮ ಆಟವನ್ನೇ ಮುಂದುವರಿಸಿದ್ದರೂ, ಪ್ರಮುಖ ಕೂಟಗಳಲ್ಲಿ ಗೆಲ್ಲುತ್ತಿಲ್ಲ. ಅದೊಂದು ಬೇಸರ ಎಲ್ಲರಿಗಿದೆ. ಅದೇನೇ ಇರಲಿ ಪ್ರಸ್ತುತ ಆಸ್ಟ್ರೇಲಿಯ ಪ್ರವಾಸದಲ್ಲಿ ಬದಲಾದ ಭಾರತ ತಂಡದ ಮನೋಭಾವ ಸ್ಪಷ್ಟವಾಗಿ ಗೋಚರಿಸಿದೆ. ಭಾರತದ ಮೊದಲ ಇನಿಂಗ್ಸ್‌ ವೇಳೆ ವಾಷಿಂಗ್ಟನ್‌ ಸುಂದರ್‌-ಶಾದೂìಲ್‌ ಠಾಕೂರ್‌ 7ನೇ ವಿಕೆಟ್‌ಗೆ 123 ರನ್‌ ಜತೆಯಾಟವಾಡಿದರು. ಒಬ್ಬರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಆಟಗಾರನಾದರೆ, ಇನ್ನೊಬ್ಬರು ಕೇವಲ 2ನೇ ಟೆಸ್ಟ್‌ ಆಡುತ್ತಿದ್ದಾರೆ. ಅಲ್ಲದೇ ಇಬ್ಬರೂ ಬೌಲರ್‌ಗಳು!  ಆಸ್ಟ್ರೇಲಿಯದ ಎರಡನೇ ಇನಿಂಗ್ಸ್‌ ವೇಳೆ ಮತ್ತೆ ಅನನುಭವಿ ವೇಗಿ ಮೊಹಮ್ಮದ್‌ ಸಿರಾಜ್‌ ಮಿಂಚಿ 5 ವಿಕೆಟ್‌ ಪಡೆದರೆ, ಶಾರ್ದೂಲ್‌ 4 ವಿಕೆಟ್‌ ಪಡೆದಿದ್ದಾರೆ.

ಫ‌ಲಿತಾಂಶ ಏನಾಗುತ್ತದೆ ಎನ್ನುವುದು ಇಂದು ತಿಳಿಯಲಿದೆಯಾದರೂ, ಟೀಂ ಇಂಡಿಯಾದ ಒಟ್ಟೂ ಹೋರಾಟ, ಭಾರತದ ಬದಲಾದ ಮನೋಭಾವ, ಗುಣಮಟ್ಟವನ್ನು ಸೂಚಿಸುತ್ತದೆ.

ಟಾಪ್ ನ್ಯೂಸ್

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

5

Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.