ಪಟಾಕಿ ನಿಷೇಧಕ್ಕಿಂತ ಅರಿವು ಮೂಡಿಸಬೇಕಿತ್ತು; ಜನರ ಮನವೊಲಿಕೆಯೇ ಲೇಸು


Team Udayavani, Oct 16, 2017, 12:01 PM IST

crackers.jpg

ರಾಷ್ಟ್ರ ರಾಜಧಾನಿಯಲ್ಲಿ ನವಂಬರ್‌ 1ರ ತನಕ ಪಟಾಕಿ ಮಾರುವುದನ್ನು ಸುಪ್ರೀಂಕೋರ್ಟ್‌ ನಿಷೇಧಿಸಿದೆ. ದೀಪಾವಳಿ ವೇಳೆ ಪಟಾಕಿ ಸುಡುವುದರಿಂದ ವಾತಾವರಣದ ಮೇಲಾಗುವ ಅಡ್ಡ ಪರಿಣಾಮವನ್ನು ಅರಿಯುವ ಸಲುವಾಗಿ ಈ ನಿಷೇಧ ಹೇರಲಾಗಿದೆ. ನಿಷೇಧಿಸುವ ಉದ್ದೇಶ ಉತ್ತಮವಾಗಿದ್ದರೂ ಇದು ಹಲವು ಸೂಕ್ಷ್ಮ ಆಯಾಮಗಳನ್ನು ಒಳಗೊಂಡಿರುವ ವಿಚಾರ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ದೀಪಾವಳಿಗೂ ಪಟಾಕಿಗೂ ಅವಿನಾಭಾವ ಸಂಬಂಧವಿದೆ.

ಹಬ್ಬಗಳು ಜನರ ಧಾರ್ಮಿಕ ಭಾವನೆಗಳಿಗೆ ಸಂಬಂಧಪಟ್ಟಿರುವ ವಿಚಾರಗಳಾಗಿರುವುದರಿಂದ ದಿಢೀರ್‌ ಆಗಿ ಆಚರಣೆಯನ್ನು ರದ್ದು ಪಡಿಸಿದರೆ ಆಕ್ರೋಶ ಹುಟ್ಟಿಕೊಳ್ಳುವುದು ಸಹಜ. ನಿಷ್ಪಕ್ಷಪಾತವಾಗಿ ವರ್ತಿಸಬೇಕಾದ ನ್ಯಾಯಾಂಗ ನಿರ್ದಿಷ್ಟ ಧರ್ಮವೊಂದರ ವಿರುದ್ಧ ದಮನಕಾರಿ ಧೋರಣೆ ಅನುಸರಿಸುತ್ತಿದೆ ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಹಾಗೆಂದು ಪಟಾಕಿಗೆ ನಿರ್ಬಂಧ ಹೇರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷದ ದೀಪಾವಳಿ ಬಳಿಕ ದಿಲ್ಲಿಯ ವಾತಾವರಣ ಸಂಪೂರ್ಣ ಹದಗೆಟ್ಟಾಗ ಪಟಾಕಿ ವ್ಯಾಪಾರಿಗಳ ಲೈಸೆನ್ಸ್‌ ಅಮಾನತಿನಲ್ಲಿಡಲು ಆದೇಶಿಸಿತ್ತು. ಅನಂತರ ಕಳೆದ ಸೆ. 12ರಂದು ಪಟಾಕಿ ಮಾರಲು ಕೆಲವು ವಿನಾಯಿತಿಗಳನ್ನು ನೀಡಿ ಆದೇಶ ಹೊರಡಿಸಿತು. ಇದರ ಬೆನ್ನಿಗೆ ಪಟಾಕಿಯಿಂದಾಗುವ ಮಾಲಿನ್ಯವನ್ನು ತಡೆಯುವ ಸಲುವಾಗಿ ಹಲವು ನಿರ್ದೇಶನಗಳನ್ನು ನೀಡಲಾಯಿತು. ಪಟಾಕಿಗಳಿಗೆ ಬಳಸುವ ರಾಸಾಯನಿಗಳ ಗುಣಮಟ್ಟ, ಹಂತಹಂತವಾಗಿ ಪಟಾಕಿ ಮಾರಾಟವನ್ನು ನಿಷೇಧಿಸುವುದು, ವಾಯುಮಾಲಿನ್ಯದ ಕುರಿತು ಅರಿವು ಮೂಡಿಸುವಂತಹ ನಿರ್ದೇಶನಗಳನ್ನು ಕೋರ್ಟ್‌ ನೀಡಿತು.

ಆದರೆ ಅ.9ರಂದು ಈ ಆದೇಶನ್ನು ಪರಿಷ್ಕರಿಸಿ ನ.1ರ ತನಕ ಪಟಾಕಿ ಮಾರಾಟ ನಿಷೇಧಿಸಿ ಪ್ರಾಣವಾಯುವಿನ ಗುಣಮಟ್ಟವನ್ನು ಅಳೆಯಲು ನಿರ್ಧರಿಸಿದೆ. ಸದ್ಯಕ್ಕೆ ಇದು ಖಾಯಂ ನಿಷೇಧವಲ್ಲ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಿಲ್ಲಿಯ ವಾಯುಮಾಲಿನ್ಯಕ್ಕೆ ಪಟಾಕಿ ಎಷ್ಟು ಕೊಡುಗೆ ನೀಡುತ್ತದೆ ಎಂದು ತಿಳಿದುಕೊಳ್ಳುವ ಒಂದು ವಿಧಾನ ಅಷ್ಟೆ. ಜಗತ್ತಿನಲ್ಲೇ ಅತ್ಯಂತ ಹೆಚ್ಚು ವಾಯುಮಾಲಿನ್ಯವಿರುವ ನಗರ ಎಂಬ ಕುಖ್ಯಾತಿ ದಿಲ್ಲಿಗಿದೆ. ಅದರಲ್ಲೂ ಚಳಿಗಾಲದಲ್ಲಿ ದಿಲ್ಲಿಯ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತದೆ. ಕಳೆದ ವರ್ಷ ದೆಹಲಿ ಸರ್ಕಾರ ಸಮ-ಬೆಸ ವ್ಯವಸ್ಥೆ ಜಾರಿಗೆ ತಂದು ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು.ಶಾಲೆ ಕಾಲೇಜೆಗಳಿಗೆ ರಜೆ ಘೋಷಿಸಲಾಗಿತ್ತು. ವೃದ್ಧರು, ಗರ್ಭಿಣಿಯರು, ಅಸ್ವಸ್ಥರು ಮನೆಯೊಳಗೆ ಉಳಿಯಬೇಕಾಯಿತು.

ಹಾಗೆಂದು ಬರೀ ಪಟಾಕಿಗಳೇ ದಿಲ್ಲಿಯ ವಾಯುಮಾಲಿನ್ಯಕ್ಕೆ ಕಾರಣ ವಲ್ಲ. ಮಿತಿಮೀರಿದ ವಾಹನಗಳು, ಪಕ್ಕದ ರಾಜ್ಯಗಳಾದ ಹರ್ಯಾಣ, ಪಂಜಾಬ್‌, ಉತ್ತರ ಪ್ರದೇಶದ ರೈತರು ಕಟಾವಿನ ಬಳಿಕ ಬೈಹುಲ್ಲನ್ನು ಗದ್ದೆಯಲ್ಲೇ ಸುಡುವುದು ಈ ಮುಂತಾದ ಕಾರಣಗಳಿಂದ ಪ್ರಾಣ
ವಾಯು ಕೆಟ್ಟು ಹೋಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಯೂ ಇದಕ್ಕೆ ಸಾಕಷ್ಟು ಕೊಡುಗೆಯನ್ನು ನೀಡುತ್ತದೆ. ಪಟಾಕಿ ಸುಡುವುದರಿಂದ ಬರೀ ವಾಯುಮಾಲಿನ್ಯ ಮಾತ್ರವಲ್ಲದೆ ಇತರ ಹಲವು ರೀತಿಯ ಅನಾಹುತಗಳು ಸಂಭವಿಸುತ್ತವೆ ಎನ್ನುವುದು
ಗಮನಾರ್ಹ ಅಂಶ. ಜತೆಗೆ ಇದೇ ವೇಳೆ ಪಟಾಕಿ ತಯಾರಿಯೂ ದೇಶದ ಅತಿ ಮುಖ್ಯವಾದ ಉದ್ಯಮ. ಎಷ್ಟೋ ಲಕ್ಷ ಜನರು ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎಷ್ಟೋ ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಪಟಾಕಿ ನಿಷೇಧಿಸುವುದ ರಿಂದ ಅವರ ಬದುಕಿನ ಮೇಲಾಗುವ ಪರಿಣಾಮವನ್ನೂ ನ್ಯಾಯಾಲಯ ಪರಿಗಣಿಸಬೇಕು.

ಪಟಾಕಿಯಿಂದ ವಾಯುಮಾಲಿನ್ಯವಾಗುತ್ತದೆ ಎನ್ನುವುದು ನಿಜ. ಹೀಗಾಗಿ ನ್ಯಾಯಾಲಯದ ಆದೇಶವನ್ನು ಧಾರ್ಮಿಕ ನೆಲೆಯಲ್ಲಿ ನೋಡದೆ ಜನರ ಆರೋಗ್ಯದ ದೃಷ್ಟಿಯಿಂದ ನೋಡಬೇಕು. ಇದೇ ವೇಳೆ ವಾಯುಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಇನ್ನಿತರ ಮಾಲಿನ್ಯ ಗಳಿಗೆ ಕಾರಣವಾಗುವ ಆಚರಣೆ ಪದ್ಧತಿಗಳ ವಿರುದ್ಧವೂ ನ್ಯಾಯಾಲಯ ಇದೇ ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕು. ಬರೀ ಒಂದು ಧರ್ಮದ ಆಚರಣೆಯನ್ನು ನಿಷೇಧಿಸಿದರೆ ತಪ್ಪು ಸಂದೇಶ ಹೋಗಿ ಒಳಿತಿಗಿಂತ ಹೆಚ್ಚು ಕೆಡುಕಾಗಬಹುದು. ನಿಷೇಧಕ್ಕಿಂತ ಜನರ ಮನವೊಲಿಸುವುದು ಪ್ರಶಸ್ತ ಮಾರ್ಗ. 

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.