ಜನಸಂಖ್ಯೆ ನಿಯಂತ್ರಣದಲ್ಲಿ ಭಾರತದ ಯಶಸ್ಸು
Team Udayavani, Nov 26, 2021, 6:00 AM IST
ಭಾರತದಲ್ಲಿ ಜನಸಂಖ್ಯೆಯ ಪ್ರಮಾಣದಲ್ಲಿ ಇಳಿಕೆ ಶುರುವಾಗಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5ರ ಪ್ರಕಾರ ಭಾರತದ ಜನನ ಪ್ರಮಾಣ, ಪ್ರತೀ ಮಹಿಳೆಗೆ 2019-21ರ ವರೆಗೆ 2 ಇದೆ. ಕಳೆದ 5 ವರ್ಷಕ್ಕೆ ಹೋಲಿಕೆ ಮಾಡಿದರೆ ಅಥವಾ ಹಿಂದಿನ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-4ರ ಪ್ರಕಾರ ಇದು 2.2 ಇತ್ತು. ಅಂದರೆ ಪ್ರತೀ ಮಹಿಳೆಗೆ 2.2 ಮಕ್ಕಳು ಜನಿಸುತ್ತಿದ್ದರು.
ಭಾರತದ ಎಲ್ಲ ದೃಷ್ಟಿಯಿಂದಲೂ ಹೇಳುವುದಾದರೆ ಜನಸಂಖ್ಯೆ ಪ್ರಮಾಣದಲ್ಲಿ ಕುಸಿತ ಶುರುವಾಗಿರುವುದು ಉತ್ತಮ ಸಂಗತಿ. ಈಗಾಗಲೇ ಚೀನ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದಿದೆ. ಆದರೆ ಭಾರತ ಮಾತ್ರ ಅಂಥ ಯಾವುದೇ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳದೇ ಕೇವಲ ಸರಕಾರಿ ಯೋಜನೆಗಳ ಮೂಲಕವೇ ನಿಯಂತ್ರಣ ಸಾಧಿಸಿದೆ.
ಹುಟ್ಟು ಮತ್ತು ಸಾವಿನ ನಡುವಿನ ಅಂತರದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಜನಸಂಖ್ಯೆ ಸಮತೋಲಿತವಾಗಿರಬೇಕು ಎಂದರೆ ದೇಶದಲ್ಲಿ ಪ್ರತೀ ಮಹಿಳೆ 2.1 ಮಗುವಿಗೆ ಜನ್ಮ ನೀಡಬೇಕು. ಈಗ ಭಾರತದಲ್ಲಿ ಪ್ರತೀ ಮಹಿಳೆ 2 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಎಂಬುದು ಉತ್ತಮ ಸಂಗತಿಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅದಲ್ಲದೇ ಈ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5 ಹೇಳುವ ಪ್ರಕಾರ ಭಾರತದಲ್ಲಿ ಈಗ ಜನಸಂಖ್ಯೆಯ ಇಳಿಕೆ ಕಾಣಿಸುತ್ತಿದೆ.
1998-99ರಲ್ಲಿ ಭಾರತದಲ್ಲಿ ಪ್ರತಿ ಮಹಿಳೆಗೆ 3.2 ಮಕ್ಕಳು ಜನಿಸುತ್ತಿದ್ದರು. ಹಾಗೆಯೇ ಐದು ವರ್ಷದ ಹಿಂದಿನ ಸಮೀಕ್ಷೆಗೆ ಹೋಲಿಕೆ ಮಾಡಿದರೆ ಆಗ 2.2 ಇತ್ತು. ಜತೆಗೆ ಕೇಂದ್ರಾಡಳಿತ ಪ್ರದೇಶಗಳನ್ನೂ ಸೇರಿಸಿ ಒಟ್ಟು 37 ರಾಜ್ಯಗಳಲ್ಲಿ ಒಟ್ಟಾರೆ ಜನನ ದರ ಕಡಿಮೆಯೇ
ಇದೆ. ಆದರೆ ಉತ್ತರ ಪ್ರದೇಶ, ಬಿಹಾರ ಮತ್ತು ಝಾರ್ಖಂಡ್‌ನಲ್ಲಿ ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಒಂದಷ್ಟು ಹೆಚ್ಚಾಗಿದೆ ಎಂದು ಇದೇ ಸಮೀಕ್ಷೆ ತಿಳಿಸಿದೆ.
ಇದೇ ಸಮೀಕ್ಷೆ ಮತ್ತೂಂದು ಗಮನಾರ್ಹ ಅಂಶವೊಂದನ್ನು ಬಹಿರಂಗ ಮಾಡಿದೆ. ಭಾರತದಲ್ಲೀಗ ಪ್ರತೀ 1,000 ಪುರುಷರಿಗೆ 1,020 ಮಹಿಳೆಯರಿದ್ದಾರೆ. ಅದೇ 2015-16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರತೀ 1,000 ಪುರುಷರಿಗೆ 991 ಮಹಿಳೆಯರು ಇದ್ದರು. ಅಂದರೆ ಭಾರತದಲ್ಲಿ ಲಿಂಗಾನುಪಾತದಲ್ಲಿ ಬಹಳಷ್ಟು ಸುಧಾರಣೆಯಾಗಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಕರ್ನಾಟಕದಲ್ಲಿ ಕಳೆದ ಸಮೀಕ್ಷೆಯಲ್ಲಿ ಒಟ್ಟಾರೆ ಜನನ ದರ 1.8 ಇತ್ತು. ಈ ಸಮೀಕ್ಷೆಯಲ್ಲಿ ಇದು 1.7ಕ್ಕೆ ಕುಸಿತ ಕಂಡಿದೆ. ಆದರೆ ಲಿಂಗಾನುಪಾತದಲ್ಲಿ ಕರ್ನಾಟಕ ಕೊಂಚ ಹಿಂದೆ ಉಳಿದಿರುವುದನ್ನು ಕಾಣಬಹುದು. ಇಲ್ಲಿ ಪ್ರತೀ 1000 ಪುರುಷರಿಗೆ 979 ಮಹಿಳೆಯರು ಇದ್ದಾರೆ.
ಇಷ್ಟೆಲ್ಲ ಆದರೂ ಭಾರತ 2031ರ ವೇಳೆಗೆ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ದೇಶವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಈ ಮೂಲಕ ಚೀನವನ್ನು ಹಿಂದೆ ಹಾಕಲಿದೆ. ಇಲ್ಲೂ ಒಂದು ಸಮಾಧಾನಕರ ಸಂಗತಿ ಇದೆ. ವಿಶ್ವಸಂಸ್ಥೆಯು ಅಂದಾಜು ಹಾಕಿದ್ದ ಪ್ರಕಾರ, ಭಾರತ 2022ರಲ್ಲೇ ಚೀನವನ್ನು ಹಿಂದೆ ಹಾಕಬೇಕಿತ್ತು. ಆದರೆ ಒಂದು ದಶಕದ ಅನಂತರ ಭಾರತದ ಜನಸಂಖ್ಯೆ ಚೀನ ಮೀರಿಸಲಿದೆ. ಅಲ್ಲದೆ 2040ರಿಂದ 2050ರ ವೇಳೆಗೆ ಭಾರತದ ಜನಸಂಖ್ಯೆ 1.6ರಿಂದ 1.8 ಬಿಲಿಯನ್ ಆಗಲಿದೆ ಎಂದೇ ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.