ಭಾರತ ವಿಶ್ವಕಪ್‌ನಿಂದ ಹೊರಬೀಳಲು ಕಾರಣಗಳು ಒಂದೆರಡಲ್ಲ !


Team Udayavani, Nov 8, 2021, 6:20 AM IST

ಭಾರತ ವಿಶ್ವಕಪ್‌ನಿಂದ ಹೊರಬೀಳಲು ಕಾರಣಗಳು ಒಂದೆರಡಲ್ಲ !

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ಥಾನದ ವಿರುದ್ಧ ಸೋತಾಗಲೇ ಸೆಮಿಫೈನಲ್‌ ತಲುಪುವುದು ಕಷ್ಟ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋತಾಗಲಂತೂ ಬಾಗಿಲು ಬಂದ್‌ ಎನ್ನುವುದು ಸ್ಪಷ್ಟವಾಗಿತ್ತು. ಆದರೆ ರವಿವಾರ ಒಂದು ಸಣ್ಣ ಆಸೆಯಿತ್ತು. ಅದು ಅಫ್ಘಾನಿಸ್ಥಾನದ ವಿರುದ್ಧ ನ್ಯೂಜಿಲ್ಯಾಂಡ್‌ ಸೋಲುವುದು. ಹಾಗಾದರೆ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ತಲಾ 3 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಸರಿಸಮನಾಗು ತ್ತವೆ (ಸೋಮವಾರ ನಮೀಬಿಯ ವಿರುದ್ಧ ಭಾರತ ಗೆದ್ದರೆ). ಈಗ ರನ್‌ರೇಟ್‌ ಉತ್ತಮಗೊಳಿಸಿಕೊಂಡರೆ ಭಾರತ, ನ್ಯೂಜಿಲ್ಯಾಂಡನ್ನು ಕೆಳಕ್ಕೆ ತಳ್ಳಿ ಮೇಲೇರಬಹುದೆನ್ನುವುದು ಒಂದು ಕಷ್ಟದ ಲೆಕ್ಕಾಚಾರ. ಆದರೆ ಅಷ್ಟೆಲ್ಲ ಲೆಕ್ಕಾಚಾರಗಳ ಆವಶ್ಯಕತೆಯೇ ಈಗಿಲ್ಲ. ರವಿವಾರ ನ್ಯೂಜಿಲ್ಯಾಂಡ್‌ ಗೆದ್ದು ಸೆಮಿಫೈನಲ್‌ಗೇರಿದೆ, ಭಾರತ ಹೊರಬಿದ್ದಿದೆ. ಹಾಗಾಗಿ ಸೋಮವಾರ ನಮೀಬಿಯ ವಿರುದ್ಧದ ಪಂದ್ಯ ಭಾರತ ಪಾಲಿಗೆ ಲೆಕ್ಕಭರ್ತಿಗೆ ಮಾತ್ರ.

ಈಗಾಗಲೇ ಕೂಟದಿಂದ ಭಾರತ ಹೊರಬಿದ್ದಿರುವುದರಿಂದ ಟಿವಿ ಆದಾ ಯಕ್ಕೆ ಹೊಡೆತ ಬೀಳುವುದು ಖಚಿತ. ಭಾರತದಲ್ಲೇ ಗರಿಷ್ಠ ವೀಕ್ಷಕರಿರು ವುದರಿಂದ ಭಾರತ ಕಣದಲ್ಲಿದ್ದರೆ ಜಾಹೀರಾತುದಾರರಿಗೆ ಹಾಕಿದ ಹಣ ವಾಪಸ್‌ ಬರುತ್ತದೆನ್ನುವ ನಂಬಿಕೆಯಿರುತ್ತದೆ. ಈಗ ತಲೆಬಿಸಿ ಶುರುವಾಗಿದೆ. ಅವೆಲ್ಲ ಲೆಕ್ಕಾಚಾರಗಳನ್ನು ಬದಿಗಿಟ್ಟು ನೋಡು ವುದಾದರೆ ಭಾರತಕ್ಕೆ ಇಂತಹ ಪರಿಸ್ಥಿತಿ ಬಂದಿದ್ದೇಕೆ? ಅದರಲ್ಲೂ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಐಸಿಸಿ ಕೂಟವೊಂದನ್ನು ಯಾಕೆ ಗೆಲ್ಲಲು ಆಗಿಲ್ಲ? ಇದು ಬಹಳ ಮುಖ್ಯ ಪ್ರಶ್ನೆ.

ಈ ಬಾರಿ ಬೌಲಿಂಗ್‌ಗೆ ಗರಿಷ್ಠ ಬೆಂಬಲ ನೀಡುವ ದುಬಾೖಯಲ್ಲೇ ಭಾರತ ನಾಲ್ಕು ಪಂದ್ಯಗಳನ್ನಾಡಬೇಕಾಗಿ ಬಂದಿದೆ. ಹಾಗೆಯೇ ಎಲ್ಲ ಪಂದ್ಯಗಳೂ ರಾತ್ರಿ 7.30ಕ್ಕೇ ಆರಂಭವಾಗುವುದು. ಇವನ್ನೆಲ್ಲ ಮಾಡಿದ್ದು ಕೇವಲ ಆರ್ಥಿಕ ಲಾಭದ ಹಿನ್ನೆಲೆಯಲ್ಲಿ! ಮೊದಲೇ ಬೌಲಿಂಗ್‌ ಸ್ನೇಹಿ ಪಿಚ್‌ಗಳು, ಇನ್ನೊಂದು ಕಡೆ ರಾತ್ರಿ ಹೊತ್ತೇ ಪಂದ್ಯಗಳು. ರಾತ್ರಿ ಇಬ್ಬನಿಯ ಪರಿಣಾಮ ವಿಪರೀತ. ಭಾರತದ ಬೌಲಿಂಗ್‌ ಎಷ್ಟೇ ಸಮರ್ಥವಾಗಿರಲಿ, ಬ್ಯಾಟಿಂಗ್‌ ಈ ತಂಡದ ನೈಜಶಕ್ತಿ. ಬೌಲಿಂಗ್‌ ಸ್ನೇಹಿ ಪಿಚ್‌ನಲ್ಲಿ ಪಾಕ್‌, ನ್ಯೂಜಿಲ್ಯಾಂಡ್‌ ವಿರುದ್ಧ ಭಾರತದ ಬ್ಯಾಟಿಂಗ್‌ ವಿಫ‌ಲವಾಯಿತು.

ಇದನ್ನೂ ಓದಿ:ಟಿ20 ವಿಶ್ವಕಪ್ 2021: ಪಾಕಿಸ್ಥಾನ ಅಜೇಯ ಓಟ

ಇನ್ನೊಂದು ತೀವ್ರ ಸಮಸ್ಯೆಯೆಂದರೆ ಸತತ ಒಂದೂವರೆ ವರ್ಷ ದಿಂದ ಜೈವಿಕ ಸುರಕ್ಷ ವಲಯದಲ್ಲಿ ಕೂಡಿ ಹಾಕಲ್ಪಟ್ಟಿರುವ ಭಾರತೀಯ ಕ್ರಿಕೆಟಿಗರು! ಅದನ್ನು ವೇಗಿ ಬುಮ್ರಾ ನೇರವಾಗಿಯೇ ಹೇಳಿಬಿಟ್ಟಿದ್ದಾರೆ. ಹಣ ಎಷ್ಟೇ ಬರಲಿ, ಸೌಲಭ್ಯ ಎಷ್ಟೇ ಇರಲಿ, ಇದ್ದಲ್ಲೇ ಇರಬೇಕು. ಅದೇ ಯಾಂತ್ರಿಕ ಪರಿಸ್ಥಿತಿ ಎಂದಾಗ ಆಟಗಾರರಲ್ಲಿ ಜೀವಂತಿಕೆ ಕುಸಿಯುತ್ತದೆ. ಇಷ್ಟರ ಮಧ್ಯೆ ನಿರಂತರ ಕ್ರಿಕೆಟ್‌. ಐಪಿಎಲ್‌ನಂತಹ ಹಣದ ಕೊಪ್ಪರಿಗೆಯಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ. ಐಪಿಎಲ್‌ ಅ.15ಕ್ಕೆ ಮುಗಿಯಿತು. ಕೇವಲ ಎರಡು ದಿನಗಳ ಅಂತರದಲ್ಲಿ ವಿಶ್ವಕಪ್‌ ಶುರು. ಜತೆಗೆ ಕ್ವಾರಂಟೈನ್‌ನಂತಹ ಸಮಸ್ಯೆಗಳು. ಈಗ ಆಟಗಾರರಿಂದ ಹೆಚ್ಚಿನದೇನನ್ನು ನಿರೀಕ್ಷಿಸಬಹುದು?

ಎಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ ಕೊಹ್ಲಿಯ ನಾಯಕತ್ವದಲ್ಲಿನ ದೋಷಗಳು. ಅಶ್ವಿ‌ನ್‌ರನ್ನು ಅವರು ನಿರಂತರವಾಗಿ ಕಡೆಗಣಿಸುತ್ತಲೇ ಬಂದಿ ದ್ದಾರೆ. ಅದೇಕೆ ಎನ್ನುವುದು ಅರ್ಥವಾಗಿಲ್ಲ. ದ್ವಿಪಕ್ಷೀಯ ಸರಣಿ ಗಳಲ್ಲಿ ಯಶಸ್ವಿಯಾಗುವ ಕೊಹ್ಲಿ, ಬಹುರಾಷ್ಟ್ರೀಯ ಕೂಟಗಳಲ್ಲಿ ಎಡವು ತ್ತಾರೆ! ಪ್ರತೀ ಬಾರಿ ಎದುರಾಳಿ ತಂಡ ಬದಲಾಗುವ ಸನ್ನಿವೇಶದಲ್ಲಿ ಕೊಹ್ಲಿಗೆ ರಣತಂತ್ರ ರೂಪಿಸಲು ಆಗುವುದಿಲ್ಲ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. ಈಗಂತೂ ಕೊಹ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಕ್ಕಿಳಿದಿದ್ದಾರೆ, ಏಕದಿನ ನಾಯಕತ್ವವೂ ಅವರ ಕೈತಪ್ಪಬಹುದು. ಮುಂದಿನ ದಿನಗಳಲ್ಲಿ ಭಾರತ ಏನು ಸಾಧಿಸಲಿದೆ ಎನ್ನುವುದೇ ಈಗಿನ ಕುತೂಹಲ.

ಟಾಪ್ ನ್ಯೂಸ್

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

2025; May the mantra of peace and coexistence resonate throughout the world

Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

JAmmu

Jammu-Kashmir: ಉಗ್ರರನ್ನು ಮಟ್ಟ ಹಾಕಿದ‌ ಭದ್ರತಾ ಪಡೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.