ನ್ಯಾ| ಕರ್ಣನ್‌ ಸೃಷ್ಟಿಸಿದ ಕಗ್ಗಂಟು


Team Udayavani, Mar 14, 2017, 6:07 PM IST

karnan.jpg

ನ್ಯಾಯಾಂಗದ ಘನತೆಗೆ ಕುಂದುಂಟಾಗದಿರಲಿ

ನ್ಯಾ| ಕರ್ಣನ್‌ ಅವರ ವರ್ತನೆ ಭಾರತೀಯ ನ್ಯಾಯಾಂಗ ಕಾಪಾಡಿ ಕೊಂಡು ಬಂದಿರುವ ಘನತೆ, ವಿಶ್ವಾಸಾರ್ಹತೆಗಳಿಗೆ ಧಕ್ಕೆ ಉಂಟು ಮಾಡುವಂಥದ್ದು. ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನು ಸೂಕ್ತವಾಗಿ ಸರಿಪಡಿಸಿಕೊಂಡು ಮುಂದುವರಿಯಬೇಕಾಗಿದೆ.

ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸುಪ್ರೀಂ ಕೋರ್ಟ್‌ ಹೈಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರಿಗೆ ಖುದ್ದು ಹಾಜರಾತಿ ವಾರಂಟ್‌ ಜಾರಿಗೊಳಿಸಿದ ವಿದ್ಯಮಾನಕ್ಕೆ ದೇಶ ಸಾಕ್ಷಿಯಾಗಿದೆ. ಕೋಲ್ಕತ್ತ ಹೈಕೋರ್ಟಿನ ನ್ಯಾಯಾಧೀಶ ಸಿ. ಎಸ್‌. ಕರ್ಣನ್‌ ಈ ವಾರಂಟ್‌ಗೆ ಬಾಧ್ಯರಾಗಿರುವ ವ್ಯಕ್ತಿ. ಅವರು ವಾರಂಟನ್ನು ಧಿಕ್ಕರಿಸಿರುವುದಲ್ಲದೆ ಶ್ರೇಷ್ಠ ನ್ಯಾಯಾಧೀಶರ ಸಹಿತ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ವಿರುದ್ಧವೇ ಆರೋಪಗಳನ್ನು ಮಾಡಿದ್ದಾರೆ.

ಸುಪ್ರೀಂ ಕೋರ್ಟಿನ ಮೇಲ್ಜಾತಿಯ ನ್ಯಾಯಾಧೀಶರು ಸೇರಿಕೊಂಡು ದಲಿತನಾಗಿರುವ ತನ್ನ ವಿರುದ್ಧ ಪಿತೂರಿ ಮಾಡಿದ್ದಾರೆ, ಅವರು ತಮ್ಮ ನ್ಯಾಯಾಂಗ ಅಧಿಕಾರವನ್ನು ದಲಿತ ನ್ಯಾಯಾಧೀಶನನ್ನು ದಮನಿಧಿಸಲು ದುರು ಪಯೋಗ ಮಾಡಿಧಿಕೊಂಡಿದ್ದಾರೆ ಎಂಬ ಆರೋಪಧಿವಿರುವ ಪತ್ರವನ್ನು ಕರ್ಣನ್‌ ಬಿಡುಗಡೆಗೊಳಿಸಿ ತನ್ನ ಘನತೆಧಿಯನ್ನು ಇನ್ನೂ ಕುಗ್ಗಿಸಿಕೊಂಡಿದ್ದಾರೆ. ಕರ್ಣನ್‌ ಅವರ ಈ ವರ್ತನೆ ಒಬ್ಬ ಹೈಕೋರ್ಟ್‌ ನ್ಯಾಯಾಧೀಶನಿಗೆ ತಕ್ಕುದಲ್ಲ. ತನ್ನದೇ ಆದ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿರುವ ಭಾರತೀಯ ನ್ಯಾಯಾಂಗ ವ್ಯವಸ್ಥೆ ಕರ್ಣನ್‌ ಅವರಿಂದಾಗಿ ತಲೆತಗ್ಗಿಸುವಂತಾಗಿದೆ. 

 ನ್ಯಾ| ಕರ್ಣನ್‌ ತಿಕ್ಕಲು ವರ್ತನೆಗಳು ಐದಾರು ವರ್ಷಗಳ ಹಿಂದೆ ಅವರು ಮದ್ರಾಸ್‌ ಹೈಕೋರ್ಟಿನ ನ್ಯಾಯಾಧೀಶರಾಗಿರುವಾಗಲೇ ಪ್ರಾರಂಭಧಿವಾಗಿದ್ದವು. 2011ರಲ್ಲಿ ಅವರು ಸಹ ನ್ಯಾಯಾಧೀಶರ ವಿರುದ್ಧ ಜಾತಿ ತಾರತಮ್ಯ, ಭ್ರಷ್ಟಾಚಾರ, ಅತ್ಯಾಚಾರದಂತಹ ಕೀಳು ಆರೋಪಗಳನ್ನು ಹೊರಿಸಿದ್ದರು. ತನ್ನ ವರ್ಗಾವಣೆಗೆ ಸು.ಕೋರ್ಟ್‌ ಹೊರಡಿಸಿದ್ದ ಆದೇಶಕ್ಕೆ ತಾನೇ ತಡೆಯಾಜ್ಞೆ ವಿಧಿಸಿಕೊಂಡು ನ್ಯಾಯಾಂಗವನ್ನು ಅಣಕಿಸಿದ ವ್ಯಕ್ತಿ ಅವರು. ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂಧಿದನೆ ಪ್ರಕರಣ ದಾಖಲಿಸಿಕೊಳ್ಳುವ ಎಚ್ಚರಿಕೆಯಿತ್ತಾಗ ತನ್ನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ ಎಂದು ಹೇಳಿ ಪಾರಾಗಿ ಕೊನೆಗೆ ವರ್ಗಾವಣೆಯನ್ನು ಒಪ್ಪಿಕೊಂಡರು. 

ಹಿರಿಯ ನ್ಯಾಯವಾದಿ ರಾಮ್‌ ಜೇಠ್ಮಲಾನಿ, ನ್ಯಾ| ಕರ್ಣನ್‌ ವರ್ತನೆಯನ್ನು ಖಾರವಾಗಿ ಖಂಡಿಸಿರುವುದು ಸರಿಯಾಗಿಯೇ ಇದೆ. ನ್ಯಾ| ಕರ್ಣನ್‌ ಹುಚ್ಚಾಟಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರಲ್ಲಿ ಒಬ್ಬ ಕುಟಿಲ ರಾಜಕಾರಣಿಯ ಸ್ವಭಾವವನ್ನು ಕಾಣಬಹುದು. ಸಹ ನ್ಯಾಯಾಧೀಶರ ವಿರುದ್ಧ ಗಂಭೀರವಾದ ಆರೋಪವನ್ನು ಮಾಡುತ್ತಾರೆ. ಆದರೆ ಅದನ್ನು ಪುಷ್ಟೀಕರಿಸುವ ಯಾವುದೇ ದಾಖಲೆ ಅಥವಾ ಪುರಾವೆಗಳನ್ನು ಬಹಿರಂಗಪಡಿಸುವುದಿಲ್ಲ. ಇನ್ನೊಂದು ಹೊಸ ಆರೋಪ ಸೃಷ್ಟಿಯಾಗುವ ತನಕ ಈ ಆರೋಪ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ. 

ನ್ಯಾ| ಕರ್ಣನ್‌ ಹುಚ್ಚಾಟಗಳ ಮೂಲ ಅವರ ನೇಮಕಾತಿಯಲ್ಲೇ ಇದೆ. ನ್ಯಾ| ಕರ್ಣನ್‌ ಅವರನ್ನು ಹೈಕೋರ್ಟ್‌ ನ್ಯಾಯಾಧೀಶರಾಗಿ ನೇಮಿಸಲು ಶಿಫಾರಸು ಮಾಡಿದ್ದು ನ್ಯಾ| ಎ.ಕೆ. ಗಂಗೂಲಿ. ವಕೀಲರಾಗಿ ಮಹತ್ವದ ಯಾವ ಪ್ರಕರಣಗಳಲ್ಲೂ ವಾದಿಸದ, ಹೇಳಿಕೊಳ್ಳುವಂತಹ ಸಾಧನೆಯಾಗಲಿ, ನ್ಯಾಯಾಂಗದ ಪ್ರಾವೀಣ್ಯವಾಗಲಿ ಇಲ್ಲದ ನ್ಯಾ| ಕರ್ಣನ್‌ಗೆ ಭಡ್ತಿ ನೀಡಲು ಗಂಗೂಲಿ ನೀಡಿದ ಸಮರ್ಥನೆ ಮೇಲಿನ ನ್ಯಾಯಾಂಗಗಳಲ್ಲಿ ದಲಿತರಿಗೆ ಪ್ರಾತಿನಿಧ್ಯವಿರಬೇಕು ಎಂಬುದು. 10 ವರ್ಷ ವಕೀಲರಾಗಿ ಕೆಲಸ ಮಾಡಿದವರು ಹೈಕೋರ್ಟ್‌ ನ್ಯಾಯಾಧೀಶರಾಗಬಹುದು ಎಂಬ ನಿಯಮದಂತೆ ನ್ಯಾಯಾಧೀಶರಾದವರು ನ್ಯಾ| ಕರ್ಣನ್‌. ಅಂದರೆ, ಪ್ರಸ್ತುತ ನ್ಯಾಯಾಧೀಶರುಗಳನ್ನು ನೇಮಿಸಲು ಅನುಸರಿಸುತ್ತಿರುವ ವಿಧಾನ ಸಮಗ್ರವಾಗಿಲ್ಲ ಎನ್ನುವ ಅಂಶ ಈ ಪ್ರಕರಣದಿಂದ ಸ್ಪಷ್ಟವಾಗಿದೆ.  

ಇದೀಗ ನ್ಯಾ| ಕರ್ಣನ್‌ ಪ್ರಕರಣ ನ್ಯಾಯಾಂಗ ನೇಮಕಾತಿ ವ್ಯವಸ್ಥೆಯಲ್ಲಿ ಆಮೂಲಾಗ್ರವಾದ ಬದಲಾವಣೆಗಳಾಗಬೇಕೆಂಬ ಚರ್ಚೆಯನ್ನು ಮತ್ತೂಮ್ಮೆ ಮುನ್ನೆಲೆಗೆ ತಂದಿದೆ. ಸುಪ್ರೀಂ ಕೋರ್ಟಿಗೆ ಸಡ್ಡು ಹೊಡೆದಿರುವ ಕರ್ಣನ್‌ಗೆ ಸಂಸತ್ತಿನಲ್ಲಿ ವಾಗ್ಧಂಡನೆ ಹಾಕುವ ಮತ್ತು ರಾಷ್ಟ್ರಪತಿಯಿಂದ ಛೀಮಾರಿ ಹಾಕಿಸುವ ಸಾಂವಿಧಾನಿಕ ಕ್ರಮಗಳು ಇವೆ ಎನ್ನುವುದು ನಿಜ. ಆದರೆ ತನ್ನ ಹುಚ್ಚಾಟಗಳಿಂದ ಕರ್ಣನ್‌ ನ್ಯಾಯಾಂಗದ ಪಾವಿತ್ರ್ಯಕ್ಕೆ ಅಳಿಸಲಾಗದ ಕಳಂಕ ಮೆತ್ತಿದ್ದಾರೆ.

ನ್ಯಾಯಾಧೀಶರಿಂದ ಭ್ರಷ್ಟಾಚಾರದಂತಹ ಪ್ರಕರಣಗಳು ಅಪರೂಪಕ್ಕೆ ಕಂಡುಬಂದಿದ್ದರೂ ಭಾರತೀಯ ನ್ಯಾಯಾಂಗ ತನ್ನ ಪಾವಿತ್ರ್ಯ ಮತ್ತು ಘನತೆಯನ್ನು ಕಾಪಾಡಿಕೊಂಡು ಬಂದಿದೆ. ಕಾರ್ಯಾಂಗ ಮತ್ತು ಶಾಸಕಾಂಗ ವಿಫ‌ಲವಾದಾಗ ನ್ಯಾಯಾಂಗ ಸಕ್ರಿಯ ಪಾತ್ರವನ್ನು ನಿರ್ವಹಿಸಿದ ಅದೆಷ್ಟೋ ಉದಾಹರಣೆಗಳಿವೆ. ಜನತೆ ನ್ಯಾಯಾಂಗದ ಮೇಲೆ ಅಪಾರ ವಿಶ್ವಾಸ ಇರಿಸಿದ್ದಾರೆ. ನ್ಯಾ| ಕರ್ಣನ್‌ ಅವರಂತಹ ನ್ಯಾಯಾಧೀಶರಿಂದ ಈ ಘನತೆ, ವಿಶ್ವಾಸಾರ್ಹತೆಗಳಿಗೆ ಕುಂದು ಉಂಟಾಗಬಾರದು. ಹಾಗಾಗಿ ಒಂದೋ ಕರ್ಣನ್‌ ತನ್ನ ವರ್ತನೆಗಳನ್ನು ಸರಿಪಡಿಸಿಕೊಂಡು ಮುಂದುವರಿಯಲಿ ಅಥವಾ ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿಧೇಯವಾಗಿ ವರ್ತಿಸಲಿ.

ಟಾಪ್ ನ್ಯೂಸ್

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

11-sagara

Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ

5

Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

10-hosanagara

Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.