ಕೊನೆಗೂ ದಕ್ಕಿದ ನ್ಯಾಯ

Team Udayavani, Mar 21, 2020, 7:00 AM IST

ಕೊನೆಗೂ ದಕ್ಕಿದ ನ್ಯಾಯ

ನ್ಯಾಯ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ನ್ಯಾಯಾಂಗದ ಜನಜನಿತ ಮಾತು ನಿರ್ಭಯಾ ಪ್ರಕರಣದಲ್ಲಿ ಅರ್ಧ ಸತ್ಯವಾಗಿದೆ. ನ್ಯಾಯ ಸಿಗುವುದು ಸಾಕಷ್ಟು ವಿಳಂಬಗೊಂಡರೂ ಕಡೆಗೂ ನ್ಯಾಯ ಸಿಕ್ಕಿತಲ್ಲ ಎಂದು ದೇಶ ನಿಟ್ಟುಸಿರುಬಿಟ್ಟಿದೆ.

ದೇಶದ ಅಂತಃಕರಣವನ್ನು ಕಲಕಿದ್ದ ದಿಲ್ಲಿಯ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರೊಂದಿಗೆ ಈ ಪ್ರಕರಣ ಇಲ್ಲಿಗೆ ಅಂತ್ಯಗೊಂಡಂತಾಗಿದೆ. ನ್ಯಾಯ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ನ್ಯಾಯಾಂಗದ ಜನಜನಿತ ಮಾತು ನಿರ್ಭಯಾ ಪ್ರಕರಣದಲ್ಲಿ ಅರ್ಧ ಸತ್ಯವಾಗಿದೆ. ನ್ಯಾಯ ಸಿಗುವುದು ಸಾಕಷ್ಟು ವಿಳಂಬಗೊಂಡರೂ ಕಡೆಗೂ ನ್ಯಾಯ ಸಿಕ್ಕಿತಲ್ಲ ಎಂದು ದೇಶ ನಿಟ್ಟುಸಿರು ಬಿಟ್ಟಿದೆ. ಈ ಪ್ರಕರಣದಲ್ಲಿ ನ್ಯಾಯ ಪಡೆದುಕೊಳ್ಳಲು ನಿರ್ಭಯಾ ಎಂಬ ಯುವತಿಯ ಹೆತ್ತವರು ನಿರ್ದಿಷ್ಟವಾಗಿ ಹೇಳಬೇಕಾದರೆ ಆಕೆಯ ತಾಯಿ ನಡೆಸಿದ ಹೋರಾಟವನ್ನು ಮೆಚ್ಚಿಕೊಳ್ಳಲೇ ಬೇಕು. ಇದು ಈ ಮಾದರಿಯ ಪ್ರಕರಣಗಳ ಸಂತ್ರಸ್ತ ಮಹಿಳೆಯರಿಗೆಲ್ಲ ಸ್ಫೂರ್ತಿಯಾಗುವಂಥ ಹೋರಾಟ.

ಇದು ನಮ್ಮ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಅಪರೂಪಗಳಲ್ಲಿ ಅಪರೂಪಗಳ ಸಾಲಿಗೆ ಸೇರುವ ಪ್ರಕರಣ. ಕೆಳಗಿನ ನ್ಯಾಯಾಲಯ ನೀಡಿದ ಗಲ್ಲು ಶಿಕ್ಷೆಯ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದು ರಾಷ್ಟ್ರಪತಿ ಪ್ರಾಣಭಿಕ್ಷೆಯ ಅರ್ಜಿಯನ್ನು ತಿರಸ್ಕರಿಸಿದ ಬಳಿಕವೂ ಅಪರಾಧಿಗಳು ಪ್ರಾಣ ಉಳಿಸಿಕೊಳ್ಳಲಿಕ್ಕಾಗಿ ನಡೆಸಿದ ಪ್ರಯತ್ನಗಳು ಕಾನೂನು ಕಲಿಯುವವರಿಗೆ ಪಠ್ಯವಾಗಲು ಅರ್ಹವಾದ ವಿಷಯ. ಅಪರಾಧಿಗಳ ವಕೀಲ ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡ ರೀತಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಕೆಲವು ಲೋಪದೋಷಗಳಿಗೆ ಕನ್ನಡಿ ಹಿಡಿದಿದೆ.

ಯಾವುದೇ ಕ್ರಿಮಿನಲ್‌ ಪ್ರಕರಣ ಕೆಳಗಿನ ನ್ಯಾಯಾಲಯದಿಂದ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಎಂದು ಮೇಲಿನ ಹಂತಗಳಿಗೆ ಹೋಗುವುದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾದ ಪ್ರಕರಣವನ್ನು ಮರಳಿ ವಿಚಾರಣಾ ನ್ಯಾಯಾಲಯಕ್ಕೆ ತರಲಾಗಿತ್ತು. ಗಲ್ಲು ಶಿಕ್ಷೆಯನ್ನು ತಪ್ಪಿಸಲು ಅಥವಾ ಸಾಧ್ಯವಾದಷ್ಟು ಮುಂದೂಡಲು ಲಭ್ಯವಿರುವ ಎಲ್ಲ ಕಾನೂನಾತ್ಮಕ ಅಂಶಗಳನ್ನು ಈ ವಕೀಲ ಬಳಸಿಕೊಂಡಿದ್ದಾರೆ. ಅವರು ಮಾಡಿದ್ದು ಸರಿಯೇ ಅಥವಾ ತಪ್ಪೇ ಎನ್ನುವುದು ಬೇರೊಂದು ಚರ್ಚೆಗೆ ಅರ್ಹವಾದ ವಿಚಾರ. ಆದರೆ ನಮ್ಮ ಕಾನೂನನ್ನು ಹೇಗೆಲ್ಲ ಎಳೆದು, ಜಗ್ಗಿ ಕಾಲಹರಣ ಮಾಡಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ವಕೀಲರಾಗಿ ಅವರು ತನ್ನ ವೃತ್ತಿಗೆ ನ್ಯಾಯಸಲ್ಲಿಸಿದರೂ ಇದೇ ವೇಳೆ ಇಡೀ ಕಾನೂನು ವ್ಯವಸ್ಥೆಯನ್ನೇ ಅಣಕಿಸಿದರು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಗುರುತಿಸಿ ಸರಿಪಡಿಸಲು ಮತ್ತು ಗಲ್ಲು ಶಿಕ್ಷೆಯಂಥ ಮಹತ್ವದ ತೀರ್ಪನ್ನು ಜಾರಿಗೊಳಿಸಲು ಕಾಲಮಿತಿಯನ್ನು ಹಾಕಿಕೊಳ್ಳುವ ಕುರಿತು ಚಿಂತನೆ ನಡೆಸಲು ಈ ಪ್ರಕರಣ
ಕಾರಣವಾಗಬೇಕು.

ನ್ಯಾಯದಾನ ಈ ರೀತಿ ವಿಳಂಬವಾಗುತ್ತಿರುವ ಕಾರಣಕ್ಕೆ ಹೈದರಾಬಾದ್‌ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಂದ ಕ್ರಮವೇ ಸರಿ ಎಂದು ಜನರು ಒಪ್ಪಿಕೊಳ್ಳುವಂಥ ವಾತಾವರಣ ಸೃಷ್ಟಿಯಾಗಿದೆ.ಇದು ಬಹಳ ಅಪಾಯಕಾರಿಯಾದ ಪರಿಸ್ಥಿತಿ. ಈ ಬಗ್ಗೆಯೂ ನ್ಯಾಯಾಂಗ ಗಂಭೀರವಾಗಿ ಚಿಂತನೆ ನಡೆಸಲು ಇದು ಸಕಾಲ.

ಅಪರಾಧಿಗಳನ್ನು ಗಲ್ಲಿಗೇರಿಸಿದ ಕೂಡಲೇ ಅಥವಾ ಗುಂಡಿಕ್ಕಿ ಕೊಂದ ಕೂಡಲೇ ಅಪರಾಧಗಳು ಕಡಿಮೆಯಾಗುತ್ತವೆಯೇ ಎಂಬ ಪ್ರಶ್ನೆಯಿದೆ. ಹಾಗೊಂದು ವೇಳೆ ಶಿಕ್ಷೆಯ ಭೀತಿ ಇರುತ್ತಿದ್ದರೆ ನಿರ್ಭಯಾ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಘೋಷಣೆಯಾದ ಬಳಿಕವೂ ಈ ಮಾದರಿಯ ಹಲವು ಕೃತ್ಯಗಳು ಸಂಭವಿಸಿದ್ದು ಹೇಗೆ ಎಂದು ಕೇಳುವವರಿದ್ದಾರೆ. ಈ ಕುರಿತಾದ ಚರ್ಚೆಗಳು ಏನೇ ಇದ್ದರೂ ಅಪರಾಧಿಗಳಿಗೆ ಶಿಕ್ಷೆಯ ಭಯವೇ ಇಲ್ಲ ಎನ್ನುವಂತಾದರೆ ಒಂದು ರೀತಿಯ ಅರಾಜಕ ಪರಿಸ್ಥಿತಿ ಸೃಷ್ಟಿಯಾಗಬಹುದು. ಅತ್ಯಾಚಾರ ಎಸಗಿದರೂ, ಕೊಲೆ ಮಾಡಿದರೂ ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಬಹುದು ಅಥವಾ ಲಘು ಶಿಕ್ಷೆ ಅನುಭವಿಸಿ ಪಾರಾಗಬಹುದು ಎಂಬ ನಂಬಿಕೆಯೊಂದು ಪಾತಕಿಗಳಲ್ಲಿ ಹುಟ್ಟಿಕೊಂಡರೆ ಅದು ಅರಾಜಕತೆಗೆ ಸಮನಾದ ಸ್ಥಿತಿಯೊಂದಕ್ಕೆ ಎಡೆ ಮಾಡಿಕೊಡುತ್ತದೆ. ಎಲ್ಲ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ವಾದಿಸಲು ಸಾಧ್ಯವಿಲ್ಲ. ಆದರೆ ಅಪರಾಧ ಎಸಗಿದರೆ ಸಿಕ್ಕಿ ಬೀಳುತ್ತೇವೆ ಮತ್ತು ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ ಎಂಬ ಭಯ ಇರಬೇಕು. ಇಂಥ ಭಯ ಹುಟ್ಟ ಬೇಕಾದರೆ ನ್ಯಾಯದಾನ ಇನ್ನಷ್ಟು ಪರಿಣಾಮಕಾರಿ ಮತ್ತು ಕ್ಷಿಪ್ರವಾಗಬೇಕು.

ಟಾಪ್ ನ್ಯೂಸ್

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.