ಎಲೆಮರೆಕಾಯಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವಾಗತಾರ್ಹ ನಿರ್ಧಾರ
Team Udayavani, Oct 31, 2022, 6:00 AM IST
ಕರ್ನಾಟಕವು ನ.1ರಂದು ರಾಜ್ಯೋತ್ಸವ ಆಚರಣೆ ಮಾಡಿಕೊಳ್ಳಲಿದ್ದು, ಇದರ ಬೆನ್ನಲ್ಲೇ ರವಿವಾರ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದೆ. ಪದ್ಮ ಪ್ರಶಸ್ತಿಯಂತೆಯೇ ಈ ಬಾರಿ ಎಲೆಮರೆಯ ಕಾಯಿಗಳನ್ನು ಗುರುತಿಸಬೇಕು ಎಂದು ರಾಜ್ಯ ಸರಕಾರ ಜನರ ಕಡೆಯಿಂದಲೇ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಸಾವಿರಾರು ಅರ್ಜಿಗಳು ಬಂದಿದ್ದು, ಕಡೆಗೆ 67 ಮಂದಿಯನ್ನು ಪುರಸ್ಕಾರಕ್ಕೆ ಅಂತಿಮಗೊಳಿಸಿ ಬಿಡುಗಡೆ ಮಾಡಿದೆ.
ಈ ಬಾರಿಯ ಪ್ರಶಸ್ತಿಯ ಪಟ್ಟಿಯನ್ನು ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ರಾಜಕೀಯ ಬೆರೆಸದೇ ರೂಪಿಸಲಾಗಿದೆ ಎಂಬುದು ಗೋಚರಿಸುತ್ತದೆ. ಅಲ್ಲದೆ, ಕೆಲವೇ ಕೆಲವು ಮಂದಿ ಬಿಟ್ಟರೆ, ಬಹುತೇಕರು ಇದುವರೆಗೆ ಅಷ್ಟಾಗಿ ಎಲ್ಲಿಯೂ ಪ್ರಸಿದ್ಧಿಗೆ ಬಾರದಂಥವರೇ ಆಗಿದ್ದಾರೆ. ಅಷ್ಟೇ ಅಲ್ಲ, ನಿಜವಾದ ಸಾಧಕರನ್ನು ಹುಡುಕಿ ಶೋಧಿಸಲಾಗಿದೆ.
ಸಂಕೀರ್ಣ ಕ್ಷೇತ್ರದಲ್ಲಿ ಮೂವರು, ರಕ್ಷಣ ಕ್ಷೇತ್ರದಲ್ಲಿ ಒಬ್ಬರು, ಪತ್ರಿಕೋದ್ಯಮದಲ್ಲಿ ಇಬ್ಬರು, ವಿಜ್ಞಾನ ತಂತ್ರಜ್ಞಾನದಲ್ಲಿ ಇಬ್ಬರು, ಕೃಷಿಯಲ್ಲಿ ಇಬ್ಬರು, ಪರಿಸರ ಕ್ಷೇತ್ರದಲ್ಲಿ ಒಬ್ಬರು, ಒಬ್ಬ ಪೌರಕಾರ್ಮಿಕರು, ಆಡಳಿತ ವಿಭಾಗದಲ್ಲಿ ಇಬ್ಬರು, ಹೊರನಾಡು ವಿಭಾಗದಲ್ಲಿ ಮೂವರು, ಹೊರದೇಶದ ಒಬ್ಬರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಇಬ್ಬರು, ಸಮಾಜಸೇವೆಯಲ್ಲಿ ಐವರು, ವಾಣಿಜ್ಯೋದ್ಯಮದಲ್ಲಿ ಮೂವರು, ರಂಗಭೂಮಿಯಲ್ಲಿ ಮೂವರು, ರಂಗಭೂಮಿಯಲ್ಲಿ ಐವರು, ಸಂಗೀತ ಕ್ಷೇತ್ರದಲ್ಲಿ ನಾಲ್ವರು, ಜಾನಪದದಲ್ಲಿ ಆರು ಮಂದಿ, ಶಿಲ್ಪಕಲೆಯಲ್ಲಿ ಇಬ್ಬರು, ಒಬ್ಬರು ಚಿತ್ರಕಲೆಯಲ್ಲಿ, ಚಲನಚಿತ್ರದಲ್ಲಿ ಇಬ್ಬರು, ಕಿರುತೆರೆಯಲ್ಲಿ ಒಬ್ಬರು, ಯಕ್ಷಗಾನದಲ್ಲಿ ಮೂವರು, ಬಯಲಾಟದಲ್ಲಿ ಮೂವರು, ಸಾಹಿತ್ಯ ಕ್ಷೇತ್ರದಲ್ಲಿ ಐವರು, ಶಿಕ್ಷಣದಲ್ಲಿ ಇಬ್ಬರು, ಕ್ರೀಡೆಯಲ್ಲಿ ಇಬ್ಬರು, ನ್ಯಾಯಾಂಗದಲ್ಲಿ ಇಬ್ಬರು ಮತ್ತು ನೃತ್ಯ ವಿಭಾಗದಲ್ಲಿ ಒಬ್ಬರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಬೆಂಗಳೂರಿನ ಒಟ್ಟು 12 ಮಂದಿ ಪ್ರಶಸ್ತಿ ಪಡೆದಿದ್ದಾರೆ. ಉಳಿದಂತೆ ಬಹುತೇಕ ಜಿಲ್ಲೆಗಳ ಸಾಧಕರಿಗೆ ಪ್ರಶಸ್ತಿ ಸಿಕ್ಕಿದೆ. ವಿಜ್ಞಾನ ತಂತ್ರಜ್ಞಾನದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್ ಅವರಿಗೆ ಪ್ರಶಸ್ತಿ ನೀಡಿರುವುದು ಉತ್ತಮ ನಿರ್ಧಾರ. ಈ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಯಾರೂ ತಳ್ಳಿಹಾಕುವಂತಿಲ್ಲ. ಪ್ರಶಸ್ತಿ ಘೋಷಣೆಯಾದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ಕುಮಾರ್ ಅವರು, ಪುರಸ್ಕೃತರ ಬಗ್ಗೆ ಮಾತನಾಡಿದ್ದು, ಅರ್ಹರನ್ನು ಹುಡುಕಿ ಪ್ರಶಸ್ತಿ ನೀಡಲಾಗಿದೆ ಎಂದಿದ್ದಾರೆ. ವಿಶೇಷವೆಂದರೆ, ಪ್ರಶಸ್ತಿ ಘೋಷಣೆ ಮಾಡುವ ಮುನ್ನ, ಕೆಲವು ಪುರಸ್ಕೃತರ ಬಳಿ ಭಾವಚಿತ್ರ ಕೇಳಿದ್ದು, ಇದುವರೆಗೆ ಒಂದು ಫೋಟೋವನ್ನೂ ತೆಗೆಸಿಲ್ಲ ಎಂದೂ ಕೆಲವರು ಹೇಳಿದ್ದಾರೆ. ಅಂದರೆ, ಇಂಥ ಮುಗ್ಧರನ್ನು ಶೋಧಿಸಲಾಗಿದೆ ಎಂದಿದ್ದಾರೆ.
ಯಾವುದೇ ಸಂದರ್ಭದಲ್ಲಿಯೇ ಆಗಲಿ, ಅರ್ಹರಿಗೆ ಪ್ರಶಸ್ತಿ ಸಿಕ್ಕಾಗಲೇ ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗುತ್ತದೆ. ಯಾವುದೇ ಪ್ರಭಾವಕ್ಕೋ ಅಥವಾ ಇನ್ನಾವುದೋ ಆಮಿಷಗಳಿಗೆ ಬಿದ್ದು ಪ್ರಶಸ್ತಿ ನೀಡಿದರೆ ಅಥವಾ ಪ್ರಶಸ್ತಿ ಪಡೆದರೆ ಅವುಗಳ ಮರ್ಯಾದೆ ಮುಕ್ಕಾಗುವ ಸಾಧ್ಯತೆಯೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ನಾವು ಪದ್ಮ ಪ್ರಶಸ್ತಿ ವಿಚಾರದಲ್ಲಿ ಈ ಬೆಳವಣಿಗೆಯನ್ನು ಗಮನಿಸಬಹುದು. ಅಲ್ಲಿ ನಿಜವಾಗಿಯೂ ಅರ್ಹರನ್ನೇ ಆರಿಸಿ, ಎಲೆಮರೆ ಕಾಯಿಯಂಥವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿಯ ಬೆಳವಣಿಗೆ ಇಲ್ಲಿಯೂ ಕಂಡು ಬಂದಿದ್ದು, ಪ್ರಶಸ್ತಿಯ ಮೌಲ್ಯ ಹೆಚ್ಚಿದಂತೆ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.