ವಿಧಾನ ಪರಿಷತ್‌ ಗಲಾಟೆ: ಪ್ರಜಾಪ್ರಭುತ್ವದ ಅಣಕ


Team Udayavani, Dec 16, 2020, 5:58 AM IST

ವಿಧಾನ ಪರಿಷತ್‌ ಗಲಾಟೆ: ಪ್ರಜಾಪ್ರಭುತ್ವದ ಅಣಕ

ರಾಜ್ಯ ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ವಿದ್ಯಮಾನ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಪ್ಪುಚುಕ್ಕೆ. ಪರಿಷತ್‌ನ ಇತಿಹಾಸದಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ. ಸಭಾಪತಿ ಪೀಠಕ್ಕೆ ಅಗೌರವ ಅಷ್ಟೇ ಅಲ್ಲದೆ ಆ ಸ್ಥಾನದ ಘನತೆಗೆ ಕುಂದುಂಟು ಮಾಡಿದ್ದಕ್ಕೆ ಒಂದು ರೀತಿಯಲ್ಲಿ ಮೂರೂ ರಾಜಕೀಯ ಪಕ್ಷಗಳು ಕಾರಣವಾಗಿವೆ. ಇಡೀ ಸಂಸದೀಯ ಪ್ರಜಾಸತ್ತೆಗೆ ಮಾದರಿಯಾಗಿದ್ದ ವಿಧಾನಪರಿಷತ್‌ ಈ ಸ್ಥಿತಿಗೆ ಮುಟ್ಟಿರುವುದು ಶೋಚನೀಯ.

ಪಕ್ಷ ರಾಜಕಾರಣ ಹಾಗೂ ಪ್ರತಿಷ್ಠೆಯಿಂದಾಗಿ ಸದನದಲ್ಲಿ ನೂಕಾಟ, ತಳ್ಳಾಟ, ತೋಳ್ಬಲ ಪ್ರದರ್ಶನದ ಅಟ್ಟಹಾಸ ಮೆರೆದು ಸಭಾಪತಿ ಪೀಠದ ಮೇಲೆ ಸದಸ್ಯರು ಹೋಗಿ ಕುಳಿತದ್ದು ನಿಜಕ್ಕೂ ದುರಂತವೇ ಸರಿ. ಸಭಾಪತಿಯವರ ಮೇಲೆ ವಿಶ್ವಾಸ ಇಲ್ಲ ಎಂದು ನೋಟಿಸ್‌ ಕೊಟ್ಟ ಅನಂತರ ಅದು ನಿಯಮಾವಳಿ ಪ್ರಕಾರ ಇದೆಯೋ ಇಲ್ಲವೋ ನೈತಿಕತೆ ಪ್ರಶ್ನೆಯಿಂದಾದರೂ ಸಭಾಪತಿ ರಾಜೀನಾಮೆ ನೀಡಬಹುದಿತ್ತು. ಕಾಂಗ್ರೆಸ್‌ ಈ ಕುರಿತು ಸೂಚನೆ ನೀಡಬಹುದಿತ್ತು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಡಿ.15ರ ವರೆಗೂ ಕಲಾಪ ನಡೆಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಸಮ್ಮುಖದಲ್ಲಿ ಎಲ್ಲ ಪಕ್ಷಗಳು ಒಪ್ಪಿ ತೀರ್ಮಾನವಾಗಿದ್ದರೂ ಅದನ್ನು ಸದನಕ್ಕೂ ತಿಳಿಸದೆ ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದು ಮತ್ತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಪತ್ರ ಬರೆದ ಅನಂತರ ಒಂದು ದಿನದ ಕಲಾಪ ನಿಗದಿ ಮಾಡಿದ್ದು ಯಾಕೆ ಎಂಬ ಜಿಜ್ಞಾಸೆಯೂ ಇದೆ. ಎಲ್ಲ ಪಕ್ಷಗಳಿಂದ ಭಿನ್ನ ಎಂದು ಹೇಳಿಕೊಳ್ಳುವ ಬಿಜೆಪಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಕಾರ್ಯಸೂಚಿಯಲ್ಲಿ ಇಲ್ಲದಿ ದ್ದರೂ ಸಭಾಪತಿಯವರು ಪೀಠ ಅಲಂಕರಿಸಿದ ಅನಂತರ ನಿಮ್ಮ ಮೇಲೆ ವಿಶ್ವಾಸ ಇಲ್ಲ ಉಪ ಸಭಾಪತಿಯವರು ಕಲಾಪ ನಡೆಸಲಿ ಎಂದು ಒತ್ತಾಯಿಸಬಹುದಿತ್ತು. ಸಭಾಪತಿಯವರು ಸದನಕ್ಕೆ ಬರದಂತೆ ತಡೆದು ಸದನ ಆರಂಭವಾಗುವ ಮುನ್ನವೇ ಉಪ ಸಭಾಪತಿಯನ್ನು ಪೀಠದಲ್ಲಿ ಕುಳ್ಳಿರಿಸಿದ್ದು ಯಾರೂ ಒಪ್ಪಲಾಗದು.

ಅದೇ ರೀತಿ ಉಪ ಸಭಾಪತಿಯವರನ್ನು ಕಾಂಗ್ರೆಸ್‌ ಸದಸ್ಯರು ಎಳೆದಾಡಿ ಅಲ್ಲಿಂದ ತೆರವು ಮಾಡಿಸಿದ್ದನ್ನೂ ಸಮರ್ಥಿಸಿಕೊಳ್ಳಲಾಗದು. ಜೆಡಿಎಸ್‌ನ ನಡೆಯೂ ಚರ್ಚೆಗೆ ಗ್ರಾಸವಾಗಿದೆ. ಒಟ್ಟಾರೆ ಪರಿಷತ್‌ನಲ್ಲಿ ನಡೆದ ಘಟನಾವಳಿಗಳು ಪ್ರಜಾಪ್ರಭುತ್ವದ ಅಣಕವೇ ಸರಿ. ಶತಮಾನದ ಇತಿಹಾಸ ಹೊಂದಿರುವ ವಿಧಾನ ಪರಿಷತ್ತಿನ ಸಭಾಪತಿಯವರ ವಿರುದ್ಧ ಅವಿಶ್ವಾಸ ಮಂಡನೆ ನಡೆದಿರುವುದು ಇದು ಎರಡನೇ ಬಾರಿ. ಈ ಹಿಂದೆ 2017ರಲ್ಲಿ ಆಗಿನ ಸಭಾಪತಿ ಆಗಿದ್ದ ಡಿ.ಎಚ್‌. ಶಂಕರ ಮೂರ್ತಿಯವರ ವಿರುದ್ಧ ಆಡಳಿತಾರೂಢ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆದರೆ ಒಂದು ಮತದಿಂದ ಅದಕ್ಕೆ ಸೋಲಾಗಿತ್ತು. ಈಗ ಆಡಳಿತಾ ರೂಢ ಪಕ್ಷವಾಗಿರುವ ಬಿಜೆಪಿ ಈಗಿನ ಸಭಾಪತಿ ವಿರುದ್ಧ ಅವಿಶ್ವಾಸದ ಅಸ್ತ್ರ ಬಳಸಿದೆ.

ನಮ್ಮ ರಾಜ್ಯದ ವಿಧಾನಪರಿಷತ್ತಿಗೆ ವಿಶೇಷ ಸ್ಥಾನಮಾನವಿದೆ. 1907ರಲ್ಲಿ ಮೈಸೂ ರಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ಸ್ಥಾಪಿಸಲ್ಪಟ್ಟಿರುವ ಪರಿಷತ್‌ಗೆ ಶತಮಾನದ ಇತಿಹಾಸವಿದೆ. 1952ರಿಂದ ಈವರೆಗೆ ಒಟ್ಟು 44 ಮಂದಿ ಸಭಾಪತಿ ಸ್ಥಾನ ಆಲಂಕರಿಸಿದ್ದಾರೆ. ಶಿಷ್ಟಾಚಾರದ ಪ್ರಕಾರ ರಾಜ್ಯಪಾಲರ ಅನಂತರದ ಸ್ಥಾನ ವಿಧಾನಪರಿಷತ್ತಿನ ಸಭಾಪತಿಯವರಿದ್ದು, ಅನಂತರದ ಸ್ಥಾನದಲ್ಲಿ ಕ್ರಮವಾಗಿ ವಿಧಾನಸಭೆಯ ಅಧ್ಯಕ್ಷರು, ಮುಖ್ಯಮಂತ್ರಿಯವರು ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಬರುತ್ತಾರೆ. ಇಂತಹ ಘನತೆ ಹೊಂದಿರುವ ಸಭಾಪತಿ ಸ್ಥಾನ ರಾಜಕೀಯ ಮೇಲಾಟಗಳಿಗೆ “ವಿಷಯ ವಸ್ತು’ ಆಗುತ್ತಿರುವುದು ಖಂಡನೀಯ. ರಾಜ್ಯದ ಶಾಸಕಾಂಗ ವ್ಯವಸ್ಥೆಯಲ್ಲಿ ಮೇಲ್ಮನೆ, ಚಿಂತಕರ ಚಾವಡಿ ಎಂದೆಲ್ಲ ಕರೆಸಿಕೊಳ್ಳುವ ವಿಧಾನಪರಿಷತ್ತಿನ ಈಗಿನ ಬೆಳವಣಿಗೆಗಳು ದುರದೃಷ್ಟಕರ.

ಟಾಪ್ ನ್ಯೂಸ್

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

PM-yojana

Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ

supreme-Court

Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ

Canada

Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

10-kodagu

Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್‌ ಮೇಜರ್‌

9–Niveus-Mangalore-Marathon

Niveus Mangalore Marathon 2024: ನ.10: ನೀವಿಯಸ್‌ ಮಂಗಳೂರು ಮ್ಯಾರಥಾನ್‌

Anushka shetty’s upcoming movie Ghaati first look

Ghaati: ಸ್ವೀಟಿ ಅಲ್ಲ ಘಾಟಿ; ಫ‌ಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ

8-brahmavar

Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.