ಘೋಷಣೆಗೆ ಸೀಮಿತವಾಗದಿರಲಿ
Team Udayavani, Mar 5, 2022, 6:00 AM IST
ಕೃಷಿ, ಕೈಗಾರಿಕೆ, ಸೇವಾ ವಲಯದ ಪ್ರಗತಿಯ ಮಂತ್ರದೊಂದಿಗೆ ರಾಜ್ಯದಲ್ಲಿ ಎಲ್ಲರನ್ನೂ ಒಳಗೊಂಡ ಸಮಗ್ರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಜಪ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಹೊಸ ಚಿಂತನೆ, ಹೊಸ ಚೈತನ್ಯ, ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡುವುದು ನಮ್ಮ ಉದ್ದೇಶ ಎಂದಿರುವುದು ರಾಜ್ಯದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ಪಂಚಸೂತ್ರದಡಿ ಆರು ವಲಯಗಳನ್ನು ವಿಂಗಡಿಸಿಕೊಂಡು ಕೃಷಿ, ಆರೋಗ್ಯ, ಶಿಕ್ಷಣ, ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆಯಾದರೂ ಅನುದಾನ ಹಂಚಿಕೆ ಬಜೆಟ್ ಪುಸ್ತಕದಲ್ಲಿ ಹೇಳಿದಷ್ಟು ಸುಲಭವಲ್ಲ. ಆದರೂ ಮೊದಲ ಬಜೆಟ್‌ನಲ್ಲಿ ಎಲ್ಲರನ್ನೂ ಎಲ್ಲವನ್ನೂ ಸರಿದೂಗಿಸುವ ಕಸರತ್ತು ಮಾಡಿದ್ದಾರೆ.
ಕೃಷಿ, ಶಿಕ್ಷಣ, ಆರೋಗ್ಯ, ನೀರಾ ವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದು ಆದ್ಯತಾ ವಲಯಗಳಾಗಿ ಪರಿಗಣಿಸಿ ರುವುದು ಒಳ್ಳೆಯ ಬೆಳವಣಿಗೆ.
ನೀರಾವರಿ ವಿಚಾರದಲ್ಲೂ ಮೇಕೆದಾಟು, ಎತ್ತಿನಹೊಳೆ, ಭದ್ರಾ, ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗಳಿಗೆ ಅನುದಾನ ಒದಗಿಸಿರುವುದು ಆಯಾ ಭಾಗದ ಜನರಲ್ಲಿ ನಿರೀಕ್ಷೆ ಮೂಡಿಸಿದೆ. ಗೋವು ದತ್ತು ಪಡೆಯುವ ಪುಣ್ಯಕೋಟಿ, ಗೋ ಉತ್ಪನ್ನಗಳ ಮಾರುಕಟ್ಟೆಗೆ ಗೋ ಮಾತಾ ಸಹಕಾರ ಸಂಘ, ಹಾಲು ಉತ್ಪಾದಕರಿಗೆ ಸಾಲ ನೀಡಲು ಕ್ಷೀರ ಸಹಕಾರ ಬ್ಯಾಂಕ್, ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಗುಂಪು ರಚನೆ, ಯಂತ್ರೋಪಕರಣ ಬಳಕೆ ಮಾಡುವ ರೈತರಿಗೆ ಸಬ್ಸಿಡಿ ನೀಡುವ ರೈತ ಶಕ್ತಿಯಂತಹ ಹೊಸ ಯೋಜನೆಗಳ ಘೋಷಣೆಯೂ ಸ್ವಾಗತಾರ್ಹ.
ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಘೋಷಣೆಯಡಿ ರಾಜ್ಯದ ಪ್ರಮುಖ ನಗರಗಳಲ್ಲಿ 438 ಕ್ಲಿನಿಕ್‌ಗಳ ಸ್ಥಾಪನೆ, ಸರಕಾರಿ ಶಾಲೆಗಳ ಅಭಿವೃದ್ದಿಗೆ 500 ಕೋಟಿ ರೂ. ಆನುದಾನ ನೀಡಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರಾಮುಖ್ಯ ನೀಡಿರುವುದು ಉತ್ತಮ ಕೆಲಸ.
ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಈ ಹಿಂದೆ ಆರಂಭಿ ಸಿದ್ದ ಯಶಸ್ವಿನಿ ಯೋಜನೆ ಪರಿಷ್ಕೃತ ರೂಪದಲ್ಲಿ ಮರು ಜಾರಿಗೊಳಿಸುವ ತೀರ್ಮಾನ ಒಳ್ಳೆಯದು. ಏಕೆಂದರೆ ಯಶಸ್ವಿನಿ ತುಂಬಾ ಒಳ್ಳೆಯ ಯೋಜನೆಯಾಗಿತ್ತು. ರೈತಾಪಿ ಸಮುದಾಯಕ್ಕೆ ಸಾಕಷ್ಟು ಅನುಕೂಲ ವಾಗಿತ್ತು. ರೈçತರಿಗೆ ಸಹಾಯಧನ ನೀಡುವ “ರೈತ ಶಕ್ತಿ’, ಗೋವು ದತ್ತು ಪಡೆಯುವ “ಪುಣ್ಯಕೋಟಿ’ ಮೀನುಗಾರರಿಗೆ ಅನುಕೂಲವಾಗುವ “ಮತ್ಸ Â ಸಿರಿ’, ವಿದ್ಯಾರ್ಥಿಗಳಿಗೆ ಪೂರಕವಾಗುವ “ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ’ ಗ್ರಾಮೀಣ ಜನರ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಕಲ್ಪಿಸುವ “ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಎಸ್‌ಸಿ-ಎಸ್‌ಟಿ, ಹಿಂದುಳಿದ ಅಲ್ಪಸಂಖ್ಯಾಕ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ “ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾ ರ್ಥಿನಿಲಯ’ ಹಿಂದುಳಿದ ವರ್ಗಗಳ ಯುವಕರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ “ಅಮೃತ ಮುನ್ನಡೆ’ ಎಂಬ ಹೊಸ ಯೋಜನೆಗಳು ರಾಜ್ಯದ ಜನತೆಯಲ್ಲಿ ಭರವಸೆ ಮೂಡಿಸುವಂತಿದೆ. ಹಾಲು ಉತ್ಪಾದಕರಿಗೆ ಸಾಲ ಒದಗಿಸಲು ಕ್ಷೀರ ಸಹಕಾರ ಬ್ಯಾಂಕ್ ಸ್ಥಾಪನೆ ನಿಜಕ್ಕೂ ಅಗತ್ಯವಾಗಿತ್ತು. ಒಟ್ಟಾರೆ, ಸಂಪನ್ಮೂಲ ಕ್ರೋಡೀಕರಣದ ಸವಾ ಲಿನ ನಡುವೆಯೂ ಇರುವ ಅವಕಾಶದಲ್ಲೇ ಉತ್ತಮ ಬಜೆಟ್ ನೀಡಲು ಸಿಎಂ ಪ್ರಯತ್ನಿಸಿದ್ದಾರೆ. ಆದರೆ, ಈ ಬಜೆಟ್ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿರಬಾರದು. ಇದಕ್ಕೆ ಬದಲಾಗಿ ಜಾರಿಗೂ ಅಷ್ಟೇ ಪ್ರಾತಿನಿಧ್ಯ ನೀಡಬೇಕಾದದ್ದು ಸರಕಾರದ ಕರ್ತವ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.