ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಸಮಯೋಚಿತ ನಿರ್ಧಾರ


Team Udayavani, Oct 25, 2017, 10:13 AM IST

25-17.jpg

ಕಡೆಗೂ ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಕೇಂದ್ರ ಮನಗಂಡಿದೆ. ಸುಸ್ಥಿರ ಮಾತುಕತೆಗಾಗಿ ಸಂಧಾನ ಕಾರರೊಬ್ಬರನ್ನು ನೇಮಿಸುವ ಮೂಲಕ ಮೋದಿ ಸರಕಾರ ತಾನು ಬರೀ ಶಸ್ತ್ರವನ್ನು ಮಾತ್ರ ನಂಬಿಕೊಂಡಿಲ್ಲ, ಮಾತುಕತೆಯ ಮೇಲೂ ನಂಬಿಕೆಯಿರಿಸಿದ್ದೇನೆ ಎಂಬ ಸಂದೇಶವನ್ನು ನೀಡಿದೆ. 

ಗುಪ್ತಚರ ಘಟಕದ ಮಾಜಿ ನಿರ್ದೇಶಕ, ಕೇರಳ ಕೇಡರ್‌ನ ಐಪಿಎಸ್‌ ಅಧಿಕಾರಿ ದಿನೇಶ್ವರ್‌ ಶರ್ಮ ಕೇಂದ್ರದ ಪ್ರತಿನಿಧಿಯಾಗಿ ಕಾಶ್ಮೀರದ ಸಮಸ್ಯೆಗಳ ಕುರಿತು ಮಾತನಾಡುವ ಸಂಧಾನಕಾರರಾಗಿ ನೇಮಕಗೊಂಡಿದ್ದಾರೆ. ಆದರೆ ದಿಢೀರ್‌ ಎಂದು ಕೇಂದ್ರ ಸಂಧಾನದ ಮಾರ್ಗ ಆಯ್ದುಕೊಂಡಿರುವುದು ಮಾತ್ರ ಆಶ್ಚರ್ಯಕ್ಕೀಡು ಮಾಡಿದೆ. ಅದರಲ್ಲೂ ಅಮೆರಿಕದ ಗೃಹ ಸಚಿವ ರೆಕ್ಸ್‌ ಟೆಲ್ಲರ್‌ಸನ್‌ ಭಾರತಕ್ಕಾಗಮಿಸುತ್ತಿರುವ ಸಂದರ್ಭದಲ್ಲಿಯೇ ಕಾಶ್ಮೀರ ಸಮಸ್ಯೆಗಳನ್ನು ಬಗೆಹರಿಸಲು ಸಂಧಾನಕಾರರನ್ನು ನೇಮಿಸಿರುವುದು ಏಕೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಅದೇನೇ ಇದ್ದರೂ ಕೇಂದ್ರದ ಈ ನಿರ್ಧಾರ ಅತ್ಯಂತ ಸಕಾಲಿಕವಾದದ್ದು ಎನ್ನಲಡ್ಡಿಯಿಲ್ಲ. ಬರೀ ಭದ್ರತಾ ಪಡೆಗಳ ಕಾರ್ಯಾಚರಣೆಯಿಂದ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎನ್ನುವುದು ನಿಜ. ಆದರೆ ಕಳೆದ ಕೆಲ ಸಮಯದಿಂದ ಕೇಂದ್ರ ಕೈಗೊಂಡ ಕಠಿನ ನಿರ್ಧಾರದ ಪರಿಣಾಮವಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿದ್ದ ಅಬು ದುಜಾನ, ಬಶೀರ್‌ ಲಷ್ಕರಿ ಸೇರಿದಂತೆ ಪ್ರಮುಖ ಉಗ್ರ ಕಮಾಂಡರ್‌ಗಳ ಪೈಕಿ ಅನೇಕ ಮಂದಿ ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ. ಸುಮಾರು 160 ಉಗ್ರರನ್ನು ಭದ್ರತಾ ಪಡೆ ಬೇಟೆಯಾಡಿದೆ. ಇದರ ಜತೆಗೆ ಉಗ್ರರಿಗೆ ಕುಮ್ಮಕ್ಕು ನೀಡುತ್ತಿದ್ದ ಪ್ರತ್ಯೇಕತಾವಾದಿ ನಾಯಕರ ಹಣದ ಮೂಲವನ್ನು ಶೋಧಿಸಿ ಕಾನೂನಿನ ಬಲೆಯಲ್ಲಿ ಸಿಲುಕಿಸಿದ ಪರಿಣಾಮವಾಗಿ ಭಯೋತ್ಪಾದಕರ ಸೊಂಟ ಮುರಿದಿದೆ. ಹೀಗೆ ಒಂದೆಡೆ ಭಯೋತ್ಪಾದಕರ ಬಲಗುಂದುತ್ತಿರು ವಾಗಲೇ ಇನ್ನೊಂದೆಡೆಯಿಂದ ಶಾಂತಿ ಮಾತುಕತೆ ಪ್ರಾರಂಭಿಸಿರುವುದು ಬುದ್ಧಿವಂತಿಕೆಯ ನಡೆ. 

ಹಾಗೆಂದು ಕಾಶ್ಮೀರಕ್ಕೆ ಸಂಧಾನಕಾರರು ನೇಮಕವಾಗುತ್ತಿರುವುದು ಇದು ಮೊದಲೇನಲ್ಲ. 2010ರಲ್ಲಿ ಯುಪಿಎ ಸರಕಾರ ಪತ್ರಕರ್ತ ದಿಲೀಪ್‌ ಪಡ್ಗಾಂವಕರ್‌, ಪ್ರಾಧ್ಯಾಪಕ ಎಂ. ಎಂ. ಅನ್ಸಾರಿ ಮತ್ತು ಮಾಹಿತಿ ಆಯುಕ್ತೆ ರಾಧಾ ಕುಮಾರ್‌ ಅವರನ್ನೊಳಗೊಂಡ ತಂಡವನ್ನು ಸಂಧಾನಕಾರರನ್ನಾಗಿ ನೇಮಿಸಿತ್ತು. ಇದಕ್ಕೂ ಮಾಜಿ ಸಚಿವ ಕೆ. ಸಿ. ಪಂತ್‌, ಎಂ.ಎನ್‌. ವೋಹ್ರಾ ಅವರು ಸಂಧಾನಕಾರರಾಗಿ ಕಾರ್ಯನಿರ್ವಹಿಸಿದ್ದರು. ಅವರು ಸಲ್ಲಿಸಿರುವ ಮೂಟೆಗಟ್ಟಲೆ ವರದಿಗಳು ಈಗಲೂ ಧೂಳು ತಿನ್ನುತ್ತಾ ಬಿದ್ದುಕೊಂಡಿವೆ. ಆದರೆ ಕಾಶ್ಮೀರದ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಶರ್ಮ ಸಂಧಾನದಿಂದ ಕಾಶ್ಮೀರ ಸಮಸ್ಯೆ ಸಂಪೂರ್ಣ ಬಗೆಹರಿಯುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಹಾಗೆ ನೋಡಿದರೆ ಕಾಶ್ಮೀರದ ಸಮಸ್ಯೆ ಬರೀ ಭಯೋತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಅತ್ಯಂತ ಸೂಕ್ಷ್ಮವೂ, ಜಟಿಲವೂ ಆಗಿರುವ ಕಣಿವೆ ರಾಜ್ಯದ ಸಮಸ್ಯೆಗೆ ಮಿಲಿಟರಿ ಮತ್ತು ರಾಜಕೀಯ ಎರಡೂ ಪರಿಹಾರಗಳು ಜತೆಜತೆಗೆ ಸಾಗಬೇಕು. ಕಾಶ್ಮೀರದ ಪೊಲೀಸ್‌ ಮುಖ್ಯಸ್ಥ ಶೇಷ್‌ ಪೌಲ್‌ ವೈದ್‌ ಕೆಲ ದಿನಗಳ ಹಿಂದೆಯಷ್ಟೇ ಕಾಶ್ಮೀರದ ಸಮಸ್ಯೆಯನ್ನು ರಾಜಕೀಯವಾಗಿ ಬಗೆಹರಿಸುವ ಅಗತ್ಯವಿದೆ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಹಿನ್ನೆಲೆಯಲ್ಲಿ ಬಗೆಹರಿಸಲು ಸರಕಾರ ರಾಜಕಾರಣಿಯಲ್ಲದ ಓರ್ವ ವ್ಯಕ್ತಿಯನ್ನು ನೇಮಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆಯಿದೆ. 

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಾಶ್ಮೀರ ಸಮಸ್ಯೆ ಯನ್ನು ಬಗೆಹರಿಸಲು ನಡೆಸಿದ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಗತ್ಯ. ಒಂದು ವೇಳೆ ವಾಜಪೇಯಿ ಪ್ರಾರಂಭಿಸಿದ ಶಾಂತಿ ಪ್ರಕ್ರಿಯೆಯನ್ನು ಅನಂತರ ಅಧಿಕಾರಕ್ಕೆ ಬಂದ ಯುಪಿಎ ಸರಕಾರ ಮುಂದುವರಿಸಿದ್ದರೆ ಸಮಸ್ಯೆ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ಯುಪಿಎ ಸರಕಾರ ತನ್ನದೇ ಆದ ಪ್ರತ್ಯೇಕ ಹಾದಿಯನ್ನು ಅನುಸರಿಸಿದ ಕಾರಣ ಕಾಶ್ಮೀರದಲ್ಲಿ ಮತ್ತೂಮ್ಮೆ ಭಯೋತ್ಪಾದನೆಯ ಹುಲುಸು ಬೆಳೆ ಬೆಳೆಯಿತು. ಬುರ್ಹಾನ್‌ ವಾನಿಯಂತಹ ಹೊಸ ಯುವಕರು ಉಗ್ರ ಸಂಘಟನೆಗಳ ಜತೆಗೆ ಸೇರಿಕೊಂಡು ಭಯೋತ್ಪಾದನೆಗೆ ಹೊಸ ನಿರೂಪಣೆ ನೀಡಿದರು. ಈಗ ಮುಖ್ಯವಾಗಿ ಆಗಬೇಕಿರುವುದು ಹಾದಿ ತಪ್ಪಿರುವ ಕಾಶ್ಮೀರದ ಯುವಕರ ಮನವೊಲಿಸುವ ಕೆಲಸ. ಇದಕ್ಕಾಗಿ ಕಾಶ್ಮೀರದ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಯುವ ಜನತೆಯ ಆಶೋತ್ತರಗಳನ್ನು ಈಡೇರಿಸುವಂತಹ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಬೇಕು.

ಕಾಂಗ್ರೆಸ್‌, ನ್ಯಾಶನಲ್‌ ಕಾನ್ಫರೆನ್ಸ್‌ನಂತಹ ರಾಜಕೀಯ ಪಕ್ಷಗಳು  ಕೇಂದ್ರದ ಈ ನಡೆಯಲ್ಲಿ ಹುಳುಕು ಹುಡುಕುವ ಬದಲಾಗಿ ಸಮಸ್ಯೆ ಬಗೆಹರಿಸಲು ನಡೆಸುವ ಪ್ರಯತ್ನಗಳಿಗೆ ಸಕಾರಾತ್ಮಕವಾಗಿ ಪ್ರತಿಸ್ಪಂದಿಸುವ ಅಗತ್ಯವಿದೆ. ವಿಶ್ವಾಸವರ್ಧನೆಯ ಉಪಕ್ರಮಗಳನ್ನು ಕ್ಷಿಪ್ರವಾಗಿ ಕೈಗೊಂಡರೆ ಕಾಶ್ಮೀರ ವಿವಾದದ ಬೆಂಕಿಯಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಪಾಕಿಸ್ಥಾನದ ಕುಟಿಲವನ್ನು ವಿಫ‌ಲಗೊಳಿಸಲು ಸಾಧ್ಯ.

ಟಾಪ್ ನ್ಯೂಸ್

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.