ವಿದೇಶಗಳಲ್ಲಿ ಖಲಿಸ್ಥಾನ ಪರ ಶಕ್ತಿಗಳು: ಪ್ರಶ್ನಿಸಲೇಬೇಕಿದೆ ಭಾರತ


Team Udayavani, Aug 22, 2018, 6:00 AM IST

12.jpg

ಪ್ರತ್ಯೇಕ ಖಲಿಸ್ಥಾನ. 70-80ರ ದಶಕದಲ್ಲಿ ಅತಿಹೆಚ್ಚು ಚರ್ಚೆಯಲ್ಲಿದ್ದು, 90ರ ದಶಕದಿಂದ ಅಜಮಾಸು ಮಾಯವಾಗಿದ್ದ ಪದವಿದು. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಮತ್ತೆ ನಿಧಾನಕ್ಕೆ ಸದ್ದು ಮಾಡಲಾರಂಭಿಸಿದೆ. ಪಂಜಾಬಿನಲ್ಲಿ ಪ್ರತ್ಯೇಕ ಖಲಿಸ್ಥಾನದ ಪರವಿರುವವರು ಇದ್ದಾರಾದರೂ ಪೊಲೀಸರಿಗೆ, ಆಡಳಿತಕ್ಕೆ ಹೆದರಿ ಅವರು ತೆಪ್ಪಗಿದ್ದಾರೆ. ಪ್ರತ್ಯೇಕ ಖಲಿಸ್ಥಾನದ ಪರ ಇರುವ ಗುಂಪುಗಳನ್ನು ನಿರಂತರವಾಗಿ ಹತ್ತಿಕ್ಕುತ್ತಿದೆ ಪಂಜಾಬ್‌ ಸರ್ಕಾರ. ಆದರೆ ಈಗ ಸದ್ದು ಬರುತ್ತಿರುವುದು ಭಾರತದಿಂದಲ್ಲ ಬದಲಾಗಿ ವಿದೇಶಗಳಿಂದ. ಕೆಲವು ದಿನಗಳ ಹಿಂದೆ ಬ್ರಿಟನ್‌ನ ರಾಜಧಾನಿ ಲಂಡನ್‌ನಲ್ಲಿ ಖಲಿಸ್ಥಾನ ಸಮರ್ಥಕ ಸಂಘಟನೆ “ಸಿಖ್‌ ಫಾರ್‌ ಜಸ್ಟಿಸ್‌’ ದೊಡ್ಡದಾಗಿಯೇ ರ್ಯಾಲಿ ನಡೆಸಿದೆ. ಈ ರ್ಯಾಲಿಯಲ್ಲಿ ತಥಾಕಥಿತ ಖಲಿಸ್ಥಾನ ಬೆಂಬಲಿಗ‌ ನಾಯಕರು “ಪ್ರತ್ಯೇಕ ರಾಷ್ಟ್ರದ’ ಹೋರಾಟ ಇನ್ನೂ ಮುಗಿದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಭಾರತಕ್ಕೆ ಕಳುಹಿಸಿದ್ದಾರೆ. ಇಷ್ಟೇ ಅಲ್ಲ, ಸಿಖ್‌ ಫಾರ್‌ ಜಸ್ಟಿಸ್‌ ಸಂಘಟನೆಯು 2020ರಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಜನಮತ ಸಂಗ್ರಹಿಸುವುದಾಗಿಯೂ ಘೋಷಿಸಿದೆ. ಆದಾಗ್ಯೂ ಇಷ್ಟು ಚಿಕ್ಕ ಪ್ರಮಾಣದ ಜನರಿಂದ ಭಾರತವನ್ನು ಅಸ್ಥಿರಗೊಳಿಸುವುದಕ್ಕೆ ಸಾಧ್ಯವಿಲ್ಲವಾದರೂ, ಭುಗಿಲೇಳುತ್ತಿರುವ ಪ್ರಶ್ನೆಯೆಂದರೆ 90ರ ದಶಕದಿಂದ ತಣ್ಣಗಾಗಿದ್ದ ಖಲಿಸ್ಥಾನದ ಕೂಗ ಅದೇಕೆ ಈಗ ಮತ್ತೆ ಮೇಲೇಳುತ್ತಿದೆ? ಇದರ ಹಿಂದಿರುವವರು ಯಾರು ಎನ್ನುವುದು.   
ಈ ವರ್ಷಾರಂಭದಲ್ಲಿ ಪಂಜಾಬ್‌ನಲ್ಲೂ ಕೆಲವು ಖಲಿಸ್ಥಾನ ಪರ ಗುಂಪುಗಳನ್ನು ಪೊಲೀಸರು ಬಂಧಿಸಿದ್ದರು. ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಪ್ರಕಾರ ಇದೆಲ್ಲದರ ಹಿಂದೆ ಪಾಕಿಸ್ಥಾನದ ಐಎಸ್‌ಐ ಬೆಂಬಲಿತ “ವಿದೇಶಿ ಶಕ್ತಿಗಳಿವೆ’. ಪಾಕಿಸ್ಥಾನ ಈ ಆರೋಪವನ್ನು ಅಲ್ಲಗಳೆಯುತ್ತದಾದರೂ ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ.  ಕೆನಡಾ, ಇಟಲಿ ಮತ್ತು ಯುಕೆಯಲ್ಲಿ ಖಲಿಸ್ಥಾನ ಬೆಂಬಲಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಕೆನಡಾ ಮತ್ತು ಯುಕೆಯಲ್ಲೇ ಇವರು ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. ಕಳೆದ ವರ್ಷ ಕೆನಡಾ ಪ್ರಧಾನಿ ಜಸ್ಟಿನ್‌ ತ್ರುದೌ ಕೂಡ ಭಾರತದಿಂದ ಟೀಕೆಗೊಳಗಾಗಿದ್ದರು. ಜಸ್ಟಿನ್‌ ಈ ಆರೋಪವನ್ನು ನಿರಾಕರಿಸುತ್ತಾರಾದರೂ ಅವರಿಗೆ ಮತ್ತು ಖಲಿಸ್ಥಾನ ಸಮರ್ಥಕ ಜಸ್ಪಾಲ್‌ ಅಟ್ವಾಲ್‌ಗೆ ನಿಕಟ ಸಂಪರ್ಕವಿರುವುದು ಬಹಿರಂಗವಾಗಿದೆ. ಇಂಟರ್‌ನ್ಯಾಷನಲ್‌ ಸಿಖ್‌ ಯೂತ್‌ ಫೆಡರೇಷನ್‌ ಎಂಬ ತೀವ್ರವಾದಿ ಸಂಘಟನೆಯ(ಈಗ ನಿಷೇಧಗೊಂಡಿದೆ) ಪ್ರಮುಖ ಚಹರೆಯಾಗಿದ್ದ ಅಟ್ವಾಲ್‌ 1986ರಲ್ಲಿ ಪಂಜಾಬ್‌ನ ಸಚಿವರೊಬ್ಬರನ್ನು ಹತ್ಯೆಮಾಡಲು ಪ್ರಯತ್ನಿಸಿದ ವ್ಯಕ್ತಿ! ಈತನನ್ನು ಕೆನಡಾ ಬಹಳ ವರ್ಷಗಳಿಂದ ಅಕ್ಕರೆಯಿಂದ ಪೋಷಿಸುತ್ತಾ ಬಂದಿರುವುದೇಕೆ?

ಈಗ ಬ್ರಿಟನ್‌ನ ವಿಷಯಕ್ಕೆ ಬರುವುದಾದರೆ ಪ್ರತ್ಯೇಕ ಖಲಿಸ್ಥಾನಕ್ಕಾಗಿ ರಸ್ತೆಗಿಳಿದವರು ಪೂರ್ತಿ ತಯಾರಿಯೊಂದಿಗೇ ಬಂದಿದ್ದರು ಎನ್ನುವುದು ಅಚ್ಚರಿಹುಟ್ಟಿಸುತ್ತಿರುವ ಸಂಗತಿ. ತಮ್ಮದು ಮಾನವಹಕ್ಕು ಸಂಘಟನೆ ಎಂದು ಹೇಳಿಕೊಳ್ಳುವ ಸಿಖ್‌ ಫಾರ್‌ ಜಸ್ಟಿಸ್‌ ತಂಡಕ್ಕೆ ಬ್ರಿಟನ್‌ನ ಎಡಪಂಥೀಯ “ಗ್ರೀನ್‌ ಪಾರ್ಟಿ’ ಭಾರೀ ಬೆಂಬಲ ಕೊಡುತ್ತಿದೆ. ಗ್ರೀನ್‌ ಪಾರ್ಟಿಯ ನಾಯಕಿ ಕ್ಯಾರೊಲಿನ್‌ ಲೂಕಾಸ್‌ ಈ ವಿಷಯವನ್ನು “ಹೌಸ್‌ ಆಫ್ ಕಾಮನ್ಸ್‌’ನಲ್ಲೇ ಸಾರಿದ್ದರು. ತಾನು ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತದ ಪರ ಇರುವುದಾಗಿ ಹೇಳುತ್ತಿರುವ ಬ್ರಿಟನ್‌ ಈಗ ಭಾರತ ವಿರೋಧಿ ಶಕ್ತಿಗಳಿಗೆ ನೀರೆರೆಯುತ್ತಿರುವುದು ದುರಂತ. ಈ ವಿಷಯದಲ್ಲಿ ಭಾರತ ಸರ್ಕಾರ ಬ್ರಿಟನ್‌ ಅನ್ನು ಪ್ರಶ್ನಿಸಲೇಬೇಕಿದೆ. 

ಭಾರತ ಸುಮಾರು 20 ವರ್ಷಗಳವರೆಗೆ ಖಲಿಸ್ಥಾನ ಪರ ಉಗ್ರರಿಂದಾಗಿ  ಭಾರೀ ಬೆಲೆ ತೆತ್ತಿದೆ. ಸಾವಿರಾರು ಅಮಾಯಕ ಜನರು ಉಗ್ರರಿಂದ ಹಿಂಸೆ ಅನುಭವಿಸಿದ್ದಾರೆ, ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲ ತಿಳಿದಿದ್ದರೂ ಬ್ರಿಟನ್‌, ಕೆನಡಾ, ಇಟಲಿ ಮತ್ತು ಕೆಲವು ಐರೋಪ್ಯ ರಾಷ್ಟ್ರಗಳು ಅದೇಕೆ ಇಂಥ ಖಲಿಸ್ಥಾನ ಪರ ಸಂಘಟನೆಗಳಿಗೆ ಬೆಳೆಯಲು ಅವಕಾಶ ಕೊಡುತ್ತಿವೆ/ಬೆಳೆಸುತ್ತಿವೆ? ಭಾರತದ ಸಾರ್ವಭೌಮತೆಗೆ ಅಪಾಯ ಒಡ್ಡುವ ಇಂಥ ಸಂಘಟನೆಗಳನ್ನು ಹತ್ತಿಕ್ಕಲೇಬೇಕಿದೆ. ಕೂಡಲೇ ಕೇಂದ್ರ ಸರ್ಕಾರ ಈ ಎಲ್ಲಾ ರಾಷ್ಟ್ರಗಳಿಗೂ ಎಚ್ಚರಿಕೆಯ ಸಂದೇಶ ಕಳುಹಿಸಬೇಕು, ಅವುಗಳ ಉದ್ದೇಶವನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಶ್ನಿಸಲೇಬೇಕು.

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.