ಹುಚ್ಚಾಟಕ್ಕೆ ಇಳಿಯುತ್ತಿರುವ ಯುವಜನರು: ಇನ್ನೊಂದು ಸವಾಲು 

Team Udayavani, Aug 2, 2018, 6:00 AM IST

22.jpg

ಚಲಿಸುತ್ತಿರುವಾಗಲೇ ಕಾರಿನಿಂದ ಜಿಗಿದು ನಡುರಸ್ತೆಯಲ್ಲಿ ಅದರೊಂದಿಗೆ ಕುಣಿಯುತ್ತಾ ಸಾಗುವುದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಗೇಮ್‌. ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆಗಳಿಂದ ನಿತ್ಯ ಇದರ ಸಾವಿರಾರು ವೀಡಿಯೊಗಳು ಅಪ್‌ಲೋಡ್‌ ಆಗುತ್ತಿವೆ. ಇದೇ ವೇಳೆ ಈ ಹುಚ್ಚಾಟಕ್ಕೆ ಇಳಿಯುತ್ತಿರುವ ಕೆಲವು ಯುವಜನರು ಸಾಕಷ್ಟು ಸಮಸ್ಯೆಗಳನ್ನೂ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಈ ಗೇಮ್‌ನಿಂದ ಇಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. ಅಮೆರಿಕದಲ್ಲಿ ಓರ್ವ ತರುಣಿ ತಲೆಯೊಡೆದುಕೊಂಡಿದ್ದಾಳೆ. ಹಲವು ಮಂದಿ ರಸ್ತೆ ಬದಿಯ ಕಂಬಗಳಿಗೆ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ರಸ್ತೆ ಹೊಂಡಗಳಿಗೆ ಬಿದ್ದು ಕೈ ಕಾಲು ಮುರಿದುಕೊಂಡವರು ನೂರಾರು ಮಂದಿ. ಆಟ ಎಷ್ಟು ಗಂಭೀರ ಸಮಸ್ಯೆಯಾಗಿದೆ ಎಂದರೆ ಮುಂಬಯಿ, ದಿಲ್ಲಿ, ಚಂಡೀಗಢ ಸೇರಿದಂತೆ ಹಲವು ನಗರಗಳಲ್ಲಿ ಪೊಲೀಸರು ಈ ಆಟ ಆಡದಂತೆ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಈ ಆಟವಾಡಿ ಅಪ್‌ಲೋಡ್‌ ಮಾಡಿದ ನಟಿಯೊಬ್ಬಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಸ್ವತಃ ಆಟಗಾರರು ಅವಘಡವನ್ನು ಆಹ್ವಾನಿಸಿಕೊಳ್ಳುವುದಲ್ಲದೆ ರಸ್ತೆಯಲ್ಲಿರುವ ಇತರ ವಾಹನಗಳು ಮತ್ತು ಜನರನ್ನೂ ಅಪಾಯಕ್ಕೆ ತಳ್ಳುತ್ತಿದ್ದಾರೆ.

ಕೀಕಿ ಚಾಲೆಂಜ್‌ ಎಂಬ ಇದು ಕೆಲ ಸಮಯದ ಹಿಂದೆ ಕೋಲಾಹಲ ಎಬ್ಬಿಸಿದ್ದ ಬ್ಲೂವೇಲ್‌ ಚಾಲೆಂಜ್‌ನಷ್ಟೇ ಅಪಾಯಕಾರಿಯಾದುದು. ಇದಕ್ಕೂ ಮೊದಲು ಪೋಕಿಮನ್‌ ಗೋ ಎಂಬ ಆಟವೊಂದು ಇಂಥದ್ದೇ ಅಪಾ ಯಕ್ಕೆ ದೂಡಿತ್ತು. ಬ್ಲೂವೇಲ್‌ ಚಾಲೆಂಜ್‌ನ ಗುಂಗಿನಿಂದ ಯುವ ಜನತೆ ಇನ್ನೂ ಹೊರಬಂದಿಲ್ಲ. ಕೆಲ ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಬಾಲಕನೊಬ್ಬ ಗುರುವಾಯೂನಕೆರೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನ ಪ್ಪಿದ್ದಕ್ಕೂ ಇದಕ್ಕೂ ಸಂಬಂಧವಿದೆ ಎಂಬ ಅನುಮಾನವಿತ್ತು. 

ಕೆನಡದ ರ್ಯಾಪ್‌ ಸಂಗೀತಗಾರ ಡ್ರೇಕ್‌ನ ಹೊಸ ಆಲ್ಬಂನಲ್ಲಿರುವ ಇನ್‌ ಮೈ ಫೀಲಿಂಗ್ಸ್‌ ಎಂಬ ಹಾಡಿನಿಂದ ಸ್ಫೂರ್ತಿ ಪಡೆದು ಹುಟ್ಟಿಕೊಂಡ ದ್ದು ಕೀಕಿ ಚಾಲೆಂಜ್‌. ಇಂಟರ್‌ನೆಟ್‌ ಹಾಸ್ಯ ಕಲಾವಿದ ಶಿಗ್ಗಿ ಇನ್‌ ಮೈ ಫೀಲಿಂಗ್‌ ಹಾಡಿನ ಧಾಟಿಗೆ ತಕ್ಕಂತೆ ಕುಣಿಯುವ ಹಾಡನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ ಬಳಿಕ ಈ ಚಾಲೆಂಜ್‌ ವೈರಲ್‌ ಆಗಿದೆ. ವಿಲ್‌ ಸ್ಮಿತ್‌, ಸಿಯಾರ ಮತ್ತಿತರ ಸೆಲೆಬ್ರಿಟಿಗಳು ಈ ಸವಾಲಿನಲ್ಲಿ ಸಹಭಾಗಿಗಳಾದ ಬಳಿಕ ಆಟ ವಿಪರೀತ ವೈರಲ್‌ ಆಗಿದೆ. ಸೆಲೆಬ್ರಿಟಿಗಳು, ಸಿನೆಮಾ ತಾರೆಯರಂಥ ಕೆಲವು ಜನಪ್ರಿಯ ವ್ಯಕ್ತಿಗಳು ಈ ಮಾದರಿಯ ಪ್ರಾಣಕ್ಕೆ ಸಂಚಕಾರ ತರುವ ಆಟಗಳ ರಾಯಭಾರಿಗಳೆನಿಸುವಂತೆ ಪ್ರೋತ್ಸಾಹಿಸುತ್ತಿರುವುದು ದುರದೃಷ್ಟಕರ. 

ಜನಪ್ರಿಯ ಹಾಡು, ನೃತ್ಯ ಅಥವಾ ಆಟಗಳು ಜನರನ್ನು ಸಮೂಹ ಸನ್ನಿಗೊಳಪಡಿಸುವ ಸಾಮರ್ಥ್ಯ ಹೊಂದಿವೆ. ಕೆಲವು ವಿಚಿತ್ರ ಖಯಾಲಿಗಳ ವ್ಯಕ್ತಿಗಳು ಪರಿಣಾಮವನ್ನು ಲೆಕ್ಕಿಸದೆ ಇವುಗಳನ್ನು ಯಾವುದೋ ಸಾಹಸ ಕೃತ್ಯಕ್ಕೆ ಬಳಸುವುದು ಆನ್‌ಲೈನ್‌ ಯುಗದಲ್ಲಿ ಬಹುದೊಡ್ಡ ಸಮಸ್ಯೆ ಎನ್ನುತ್ತಾರೆ ಮನಶಾಸ್ತ್ರಜ್ಞರು. ನಿಜವಾಗಿ ನೋಡಿದರೆ ಕೀಕಿ ಚಾಲೆಂಜ್‌ನಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ಥ್ರಿಲ್‌ ಬಯಸುವ ಯುವ ಜನತೆಯ “ಈಗೊ’ ಸಂತೃಪ್ತವಾಗಬಹುದೇನೋ. ಈ ರೀತಿಯ ಅಪಾಯ ಕಾರಿ ಆಟಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಮೆಚ್ಚುಗೆಗಳು ಅವರೊಳಗೆ ತಾವೇನೋ ದೊಡ್ಡ ಸಾಹಸ ಮಾಡಿ ಕೃತಾರ್ಥರಾಗಿದ್ದೇವೆ ಎಂಬ ಭಾವನೆ ಮೂಡಿಸುತ್ತದೆ. ಇದು ನಿಜದ ಯಶಸ್ಸಲ್ಲ. 

ಕೀಕಿ ಚಾಲೆಂಜ್‌ ಆಡುವವರು ಸದ್ಯಕ್ಕೆ ಕಾರನ್ನು ಬಳಸುತ್ತಿರುವವರು. ಆದರೆ ಇದುವೇ ಮುಂದೆ ಚಲಿಸುತ್ತಿರುವ ಬೈಕಿನಿಂದಲೋ, ಬಸ್ಸಿನಿಂದಲೋ ಜಿಗಿದು ಕುಣಿದು ಮತ್ತೆ ಹತ್ತುವಂಥ ವಿಚಿತ್ರ ಆಟಗಳಾಗಿ ಬದಲಾದರೆ ನಿರ್ವಹಿಸಲಾಗದು. ಇದಕ್ಕೂ ಮಿಗಿಲಾಗಿ ಇವು ತಂದೊಡ್ಡುತ್ತಿರುವ ಹಲವು ಸಮಸ್ಯೆಗಳನ್ನು ನಿರ್ವಹಿಸಲು ಸರಕಾರ ಆರಂಭದಲ್ಲೇ ತಡೆಯುವುದು ಸೂಕ್ತ.

ಟಾಪ್ ನ್ಯೂಸ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.