Language, culture; ಕನ್ನಡದ ಕಡತಗಳು ಕರುನಾಡಿಗೆ ಮರಳಲಿ

ಕನ್ನಡತನವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಸರಕಾರ ಇನ್ನಾದರೂ ಮಾಡುವ ಅಗತ್ಯವಿದೆ...

Team Udayavani, Nov 28, 2023, 5:24 AM IST

kannada-and-samskrati

ಯಾವುದೇ ಒಂದು ನಾಡು ಅದರ ಭಾಷೆ, ಸಂಸ್ಕೃತಿ ಮತ್ತು ನೆಲದ ವೈಭವ ಅದರ ಚಾರಿತ್ರಿಕ ಮತ್ತು ಸಾಂಸ್ಕೃತಿಕ ದಾಖಲೆಗಳನ್ನು ಅವಲಂಬಿಸಿದೆ. ಕರ್ನಾಟಕದ ಅಸ್ಮಿತೆಯೂ ಇದಕ್ಕೆ ಹೊರತಾಗಿಲ್ಲ.

ಇಲ್ಲಿನ ಶಿಲಾ ಶಾಸನಗಳಿಂದ ಹಿಡಿದು ಪತ್ರ ವ್ಯವಹಾರದವರೆಗಿನ ಆಯಾ ಕಾಲ ಮಾನದ ಎಲ್ಲ ದಾಖಲಾತಿ ಗಳು ಒಂದಲ್ಲೊಂದು ಮಹತ್ವದ ಐತಿಹಾಸಿಕ ಸಂಪ ನ್ಮೂಲವೇ ಆಗಿವೆ. ಆದರೆ ದುರ ದೃಷ್ಟವಶಾತ್‌ ಕರ್ನಾಟಕದ ಐತಿಹಾಸಿಕ ವಿಷಯ ಗಳ ಮೇಲೆ ಪರಿಪೂರ್ಣ ವಾಗಿ ಬೆಳಕು ಚೆಲ್ಲಬಲ್ಲ ಸಾವಿರಾರು ಇಂತಹ ದಾಖಲೆಗಳು ಅಕ್ಕಪಕ್ಕದ ರಾಜ್ಯಗಳ ಗೋದಾ ಮುಗಳಲ್ಲಿ ಕೊಳೆತು ಹೋಗು ತ್ತಿವೆ. ಕೆಲವಷ್ಟನ್ನು ಉದ್ದೇಶ ಪೂರ್ವಕವಾಗಿಯೇ ಗಂಟು ಕಟ್ಟಿ ಮುಚ್ಚಿಡಲಾಗಿದೆ. ಅಖಂಡ ಕರ್ನಾಟಕದ ವಿಚಾರ ಬಂದಾಗ ಹಳೆ ಮೈಸೂರಿನ ಭಾಗದಲ್ಲಿರುವ ದಾಖಲೆಗಳು ಸುರಕ್ಷಿತವಾಗಿ ಸಂರಕ್ಷಣೆಯಾಗಿವೆ. ಇದಕ್ಕೆ ಕಾರಣ ಮೈಸೂರು ಮಹಾರಾಜರ ಜನಪರ ಕಾಳಜಿಯ ಆಳ್ವಿಕೆ. ಆದರೆ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿನ ಐತಿಹಾಸಿಕ ಮಹತ್ವದ ಘಟನಾವಳಿಗಳು ಮತ್ತು ಚಾರಿತ್ರಿಕ ದಾಖಲೆಗಳು ಅಷ್ಟಾಗಿ ರಾಜ್ಯದಲ್ಲಿಯೇ ಉಳಿಯಲಿಲ್ಲ. ಇದಕ್ಕೆ ಪ್ರಮುಖ ಕಾರಣ ಈ ಭಾಗದ ಆಡಳಿತ ವ್ಯವಹಾರವನ್ನು ಅಂದಿನ ಮುಂಬೈ ಪ್ರಸಿಡೆನ್ಸಿ ನೋಡಿಕೊಳ್ಳುತ್ತಿತ್ತು. ಹೀಗಾಗಿ ಈ ಭಾಗದಲ್ಲಿನ ಎಲ್ಲ ದಾಖಲೆಗಳು ಮುಂಬಯಿ, ಪುಣೆ ಮತ್ತು ಕೊಲ್ಲಾಪುರ ಸೇರಿದವು. ಅದರಲ್ಲೂ ಕಿತ್ತೂರು ಚೆನ್ನಮ್ಮ ಮತ್ತು ಅಂತಹದೇ ಸಂಸ್ಥಾನಗಳ ಬಗ್ಗೆ ಇರುವ ಮಹತ್ವದ ದಾಖಲೆಗಳನ್ನು ಇಂಗ್ಲೆಂಡ್‌ ವಸ್ತು ಸಂಗ್ರಹಾಲಯ ಕ್ಕೆ ಸೇರಿಸಲಾಯಿತು. 150ಕ್ಕೂ ಹೆಚ್ಚು ದೇಸಾಯಿ ಮನೆತನಗಳು, ವಾಡೆ ವ್ಯವಹಾರಗಳು ಸೇರಿದಂತೆ 40 ಸಾವಿರ ದಾಖಲೆಗಳು ಹೊರ ರಾಜ್ಯದಲ್ಲಿವೆ. ಇವುಗಳನ್ನು ಮರಳಿ ತರುವುದಕ್ಕೆ ನಮ್ಮ ಸರಕಾರಗಳು ಕೂಡ ಬರೀ ಆಶ್ವಾಸನೆ ನೀಡಿದ್ದು ಬಿಟ್ಟರೆ ಗಂಭೀರ ಪ್ರಯತ್ನಗಳು ನಡೆದಿಲ್ಲ.

ಬರೀ ಪುಣೆ ನಗರದಲ್ಲಿನ ಪತ್ರಾಗಾರಗಳಲ್ಲಿಯೇ ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಾವಿರಾರು ದಾಖಲೆಗಳಿವೆ. ಆದರೆ ಅವುಗಳನ್ನು ಮರಳಿ ತರಲಾಗುತ್ತಿಲ್ಲ. ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿಯ ಯುದ್ಧ, ಚೆನ್ನ ಮ್ಮನ ಖಡ್ಗ, ಕಿತ್ತೂರು ಬಂಡಾಯದಿಂದ ಹಿಡಿದು ಈ ಭಾಗದ ಸಾಂಸ್ಕೃತಿಕ ಅಸ್ಮಿತೆಗೆ ಉದಾ ಹರಣೆಯಾಗಿ ನಿಂತ ಸಂಗ್ಯಾ-ಬಾಳಾÂ ನಾಟಕದ ನಿಜ ಘಟನೆ ವಿವರ ಗಳನ್ನು ಕೂಡ ಇಂತಹ ದಾಖಲೆಗಳ ಪರಿಶೀಲನೆಯಿಂದ ಓರೆಗೆ ಹಚ್ಚ ಬ ಹುದು. ಬರೀ ಕಿತ್ತೂರು ಬಂಡಾಯದ ಕುರಿತು ಅಧ್ಯಯನಕ್ಕೆ ಪ್ರಯತ್ನಿಸಿದ ನೂರಾರು ಸಂಶೋಧ ಕರಿಗೆ ಮಾಹಿತಿಯ ಕೊರತೆ ಕಾಡಿದೆ. ಈ ದಾಖಲೆಗಳು ಪುಣೆಯ ಪತ್ರಾ ಗಾರದ ಕರ್ನಾಟಕ ಜಮಾವ್‌ ವಿಭಾಗದಲ್ಲಿ ಟನ್‌ಗಟ್ಟಲೆ ಇವೆ. ಆದರೆ ನಮ್ಮ ರಾಜ್ಯದ ಸಂಶೋಧಕರು ಅಲ್ಲಿಗೆ ಹೋಗಿ ಅವುಗಳನ್ನು ಅಧ್ಯಯನ ಮಾಡಲು ಕಠಿನ ವಾಗುತ್ತಿದೆ. ಇನ್ನು ಸರಕಾರ ಇಲ್ಲಿನ ದಾಖಲೆಗಳನ್ನು ಮರಳಿ ತರಲೇಬೇಕಾಗಿದೆ. ಕಾರಣ ಈ ದಾಖಲೆಗಳು ಕನ್ನಡಿಗರ ಅಸ್ಮಿತೆಯಾಗಿವೆ. ಕನ್ನಡದ ನಾಡು-ನುಡಿ, ಗಡಿ, ನೆಲ, ಜಲ, ಇತಿಹಾಸ, ಚರಿತ್ರೆ ಸೇರಿದಂತೆ ಅನೇಕ ವಿಚಾ   ರಗಳನ್ನು ಪುನರ್‌ ಮನನ ಮಾಡಲು ಅನುಕೂಲವಾಗಲಿವೆ. ಇದು ಸರಕಾರಕ್ಕೆ ಸಾವಿರಾರು ಕೋಟಿ ಹಣದ ಹೊರೆ ಮಾಡುವ ಕೆಲಸವೇನು ಅಲ್ಲ. ಕನ್ನಡತನವನ್ನು ಇನ್ನಷ್ಟು ಗಟ್ಟಿಗೊಳಿಸುವ ಈ ಕೆಲಸವನ್ನು ಸರಕಾರ ಇನ್ನಾದರೂ ಮಾಡುವ ಅಗತ್ಯವಿದೆ.

ಟಾಪ್ ನ್ಯೂಸ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.