ಲಕ್ಷ್ಮಣರೇಖೆ ಅಗತ್ಯ  ಸರಕಾರ-ನ್ಯಾಯಾಂಗ ತಿಕ್ಕಾಟ 


Team Udayavani, Aug 10, 2018, 6:00 AM IST

supreme-court-800.jpg

ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರಕಾರದ ನಡುವಿನ ಶೀತಲ ಸಮರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಗೋಚರಿಸಿವೆ. ನಿನ್ನೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಸುಪ್ರೀಂ ಕೋರ್ಟ್‌ ಪೀಠದ ಜತೆಗೆ ನಡೆಸಿದ ಮಾತಿನ ಚಕಮಕಿಯೇ ಇದಕ್ಕೆ ಸಾಕ್ಷಿ. 

ಸರ್ವೋಚ್ಚ ನ್ಯಾಯಾಲಯ ಕೆಲವು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀಡುವ ಆದೇಶ ಮತ್ತು ತೀರ್ಪುಗಳು ತನಗೆ ಅನನುಕೂಲಕರವಾಗಿ ಪರಿಣಮಿಸುತ್ತಿದೆ ಎನ್ನುವುದೇ ಕೇಂದ್ರದ ದೂರು. ವೇಣುಗೋಪಾಲ್‌ ಇದನ್ನು ನ್ಯಾ| ಮದನ್‌ ಲೋಕುರ್‌ ನೇತೃತ್ವದ ತ್ರಿಸದಸ್ಯ ಪೀಠದ ಎದುರು ಬಹಿರಂಗವಾಗಿಯೇ ಹೇಳಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನ್ಯಾಯಪೀಠ ಜನರ ಹಕ್ಕುಗಳನ್ನು ಮಾತ್ರ ಅನುಷ್ಠಾನಗೊಳಿಸುತ್ತಿದೇವೆ ಎಂದು ಹೇಳಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಹೀಗೆ ಸರಕಾರ ಮತ್ತು ನ್ಯಾಯಾಲಯ ಪರಸ್ಪರ ಮುಖಾಮುಖೀಯಾಗಿರುವುದು ಇದೇ ಮೊದಲೇನಲ್ಲವಾದರೂ ಇಂಥ ಮುಖಾಮುಖೀಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿವೆ ಎನ್ನುವುದೇ ಚಿಂತೆಗೆ ಕಾರಣವಾಗಿರುವ ವಿಚಾರ.  

ನ್ಯಾಯಾಧೀಶರ ನೇಮಕಾತಿ, ದಲಿತ ಕಾಯಿದೆ ಮೇಲಿನ ತೀರ್ಪು ಸೇರಿದಂತೆ ಹಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರಕಾರ ವಿರುದ್ಧ ಧ್ರುವಗಳಲ್ಲಿ ಇದ್ದವು. ಪ್ರಜಾತಂತ್ರದ ಮೂರು ಸ್ವತಂತ್ರ ಅಂಗಗಳಲ್ಲಿ ಮುಖ್ಯವಾಗಿರುವ ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಮುಸುಕಿನ ಗುದ್ದಾಟ ಹೊಸದಲ್ಲವಾದರೂ ಅದು ಈ ರೀತಿ ಬಹಿರಂಗ ವಾದ -ವಿವಾದಗಳಿಗೆ ಎಡೆಮಾಡಿಕೊಟ್ಟಿರುವ ಸಂದರ್ಭಗಳು ಮಾತ್ರ ಬಹಳ ಅಪರೂಪ. ಅಧಿಕಾರಕ್ಕೆ ಬರುವ ಪ್ರತಿ ಸರಕಾರವೂ ನ್ಯಾಯಾಂಗ ತನಗನುಕೂಲವಾಗಿ ವರ್ತಿಸಬೇಕೆಂದು ಅಪೇಕ್ಷಿಸುತ್ತದೆ. ಯಾವುದಾದರೂ ಪ್ರಕರಣದಲ್ಲಿ ತೀರ್ಪು ಪ್ರತಿಕೂಲವಾದಾಗ ಸರಕಾರಕ್ಕೆ ಮುಜುಗರವಾಗುವುದು ಸಹಜ. ಆದರೆ ಇದನ್ನು ಬಹಿರಂಗವಾಗಿ ಹೇಳಿಕೊಳ್ಳುವುದರಿಂದ ನ್ಯಾಯಾಂಗ ಮತ್ತು ಶಾಸಕಾಂಗ ಎರಡರ ಪಾವಿತ್ರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ. 
 
ಕೆಲ ಸಮಯದ ಹಿಂದೆ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಮತ್ತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ದೀಪಕ್‌ ಮಿಶ್ರಾ ಪ್ರಧಾನಿ ಮೋದಿ ಎದುರಲ್ಲೇ ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ಎತ್ತಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಪ್ರಜಾತಂತ್ರದ ಎಲ್ಲ ಮೂರು ಅಂಗಗಳಿಗೂ ಸಮಾನ ಮಹತ್ವವಿದೆ. ಯಾರೂ ಯಾರ ಮೇಲೂ ಪ್ರಭುತ್ವವನ್ನು ಸಾಧಿಸಲು ಸಂವಿಧಾನ ಅವಕಾಶ ನೀಡಿಲ್ಲ. ಪ್ರತಿ ಅಂಗಗಳಿಗೂ ಅದರದ್ದೇ ಆದ ಕರ್ತವ್ಯ ಮತ್ತು ಹೊಣೆಗಾರಿಕೆಗಳಿವೆ. ಈ ಮೂರೂ ಅಂಗಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಿದಾಗಲೇ ಪ್ರಜಾತಂತ್ರ ಆರೋಗ್ಯಕರವಾಗಿರುತ್ತದೆ ಎಂಬ ಹಿತವಚನವನ್ನು ಆಗಲೇ ಜಸ್ಟಿಸ್‌ ಮಿಶ್ರಾ ಹೇಳಿದ್ದರು.ಆದರೆ ಸರಕಾರ ಇನ್ನೂ ಈ ಮಾತನ್ನು ಅರ್ಥ ಮಾಡಿಕೊಂಡಿರುವಂತೆ ಕಾಣಿಸುತ್ತಿಲ್ಲ. 
 
ನ್ಯಾಯಾಲಯ ನೀಡುವ ಕೆಲವು ತೀರ್ಪುಗಳನ್ನು ಅನುಷ್ಠಾನಿಸಲು ಸಂಪನ್ಮೂಲದ ಕೊರತೆ ಎದುರಾಗುತ್ತದೆ ಎನ್ನುವುದು ಸರಕಾರದ ಅಳಲು. ಆದರೆ ಸರಕಾರವಿರುವುದೇ ಇಂಥ ಸಮಸ್ಯೆಗಳನ್ನು ಬಗೆಹರಿಸಲು. ಸಂಪನ್ಮೂಲ ಕ್ರೊಢೀಕರಿಸಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇದೆ ಎಂದೇ ಜನರು ಮತ ಕೊಟ್ಟು ಅಧಿಕಾರಕ್ಕೆ ತಂದಿರುತ್ತಾರೆ. ಹೀಗಿರುವಾಗ ಸಂಪನ್ಮೂಲ ಕ್ರೊಢೀಕರಣ ಸಮರ್ಥ ಮತ್ತು ಸಮರ್ಪಕ ನಿರ್ವಹಣೆ ಅಸಾಧ್ಯ ಎಂದು ವಾದಿಸುವುದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದಂತೆ.  ಇದೇ ವೇಳೆ ಶಾಸಕಾಂಗದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಸಂವಿಧಾನದ ನೀತಿಗೆ ನ್ಯಾಯಾಂಗವೂ ಬದ್ಧವಾಗಿರುವುದು ಅಗತ್ಯ. ಎರಡೂ ಅಂಗಗಳಿಗೆ ಪ್ರತ್ಯೇಕವಾದ ಜವಾಬ್ದಾರಿಗಳಿದ್ದು, ಅವುಗಳನ್ನು ಸಮರ್ಪಕವಾಗಿ ನಿಭಾಯಿಸುವುದರಿಂದ ಈ ರೀತಿಯ ಬಹಿರಂಗ ಸಂಘರ್ಷಗಳನ್ನು ತಪ್ಪಿಸಬಹುದು. ಕಾರ್ಯಾಂಗ ಮತ್ತು ಶಾಸಕಾಂಗದ ನಡುವಿನ ವೈಮನಸು ಬೇರೆಯದ್ದೇ ಆದ ಸಂದೇಶ ವನ್ನು ರವಾನಿಸುವ ಅಪಾಯವಿದೆ. ಒಟ್ಟಾರೆಯಾಗಿ ಪ್ರಜಾತಂತ್ರದ ಮೇಲೆ ಜನರಿಟ್ಟಿರುವ ನಂಬಿಕೆಗೆ ಹಾನಿಯಾಗಲೂಬಹುದು. ಕನಿಷ್ಠ ಈ ದೃಷ್ಟಿ ಯಿಂದಲಾದರೂ ಉಭಯರು ಸಂಯಮವನ್ನು ಪಾಲಿಸುವುದು ಅಗತ್ಯ.
  
ಸಂವಿಧಾನದಲ್ಲಿ ನ್ಯಾಯಾಂಗಕ್ಕೂ ನಿರ್ದಿಷ್ಟ ಹೊಣೆಗಾರಿಕೆಯಿದೆ ಮತ್ತು ಶಾಸಕಾಂಗವನ್ನು ಪ್ರಶ್ನಿಸುವ ಹಕ್ಕು ಅದರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ಹಾಗೂ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡುವುದು ತನ್ನ ದಾಯಿತ್ವ ಎನ್ನುವುದನ್ನು ಸರಕಾರ ತಿಳಿದುಕೊಂಡಿರಬೇಕು. ಅಂತೆಯೇ ಸರಕಾರದ ಪ್ರತಿಯೊಂದು ನಡೆಯನ್ನು ಪ್ರಶ್ನಿಸುವುದು ತನ್ನ ಕೆಲಸವಲ್ಲ. ಜನರ ಹಿತಾಸಕ್ತಿಗೆ ವಿರುದ್ಧವಾದ ನಡೆ ಇದ್ದರೆ ಮಾತ್ರ ಸೂಕ್ತ ಕಾಲದಲ್ಲಿ ಮಧ್ಯ ಪ್ರವೇಶ ಮಾಡಬೇಕೆಂಬ ವಿವೇಚನೆಯಿಂದಲೇ ನ್ಯಾಯಾಂಗವೂ ಕಾರ್ಯನಿರ್ವಹಿಸಬೇಕು. ಎರಡೂ ಅಂಗಗಳು ತಮ್ಮ ಅಧಿಕಾರ ವ್ಯಾಪ್ತಿಗೊಂದು ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳುವುದು ಪ್ರಜಾತಂತ್ರದ ಅಗತ್ಯ.   

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.