ರೋಜರ್ ಬಿನ್ನಿ ಕಾಲದಲ್ಲಿ ಇನ್ನಷ್ಟು ಬೆಳಗಲಿ ಬಿಸಿಸಿಐ
Team Udayavani, Oct 19, 2022, 6:00 AM IST
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಹೊಸ ಅಧ್ಯಕ್ಷ ರಾಗಿ ಕರ್ನಾಟಕದ ಹಿರಿಯ ಕ್ರಿಕೆಟ್ ಪ್ರತಿಭೆ ರೋಜರ್ ಬಿನ್ನಿ ಆಯ್ಕೆಯಾಗಿದ್ದಾರೆ. ಭಾರತ ಕ್ರಿಕೆಟ್ ರಂಗದಲ್ಲಿ ಅಸಾಧಾರಣ ಅನುಭವ ಹೊಂದಿರುವ ರೋಜರ್ ಬಿನ್ನಿಯವರು ಸದ್ಯ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದು, ಇನ್ನು ಮುಂದೆ ಬಿಸಿಸಿಐನ ಚುಕ್ಕಾಣಿ ಹಿಡಿಯಲಿದ್ದಾರೆ.
ಈ ಹಿಂದೆ ಬಿಸಿಸಿಐನಲ್ಲಿ ಕೇವಲ ರಾಜಕೀಯ ಹಿನ್ನೆಲೆಯುಳ್ಳವರೇ ಆಯ್ಕೆ ಯಾಗುತ್ತಿದ್ದಾರೆ ಎಂಬ ಕಾರಣದಿಂದಾಗಿ ನ್ಯಾ| ಲೋಧಾ ಸಮಿತಿ ನೀಡಿದ್ದ ಶಿಫಾರಸು ಅನ್ವಯ, ಪ್ರತೀ ಮೂರು ವರ್ಷಗಳಿಗೊಮ್ಮೆ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿಗಳನ್ನು ನೇಮಕ ಮಾಡಲಾಗುತ್ತಿದೆ. ಗಂಗೂಲಿ ಅವರು ಇನ್ನೊಂದು ಬಾರಿಗೆ ಅಧ್ಯಕ್ಷರಾಗುವ ಅವಕಾಶ ಇತ್ತಾದರೂ, ಈ ಸ್ಥಾನವನ್ನು ದಕ್ಷಿಣ ವಲಯದ ರೋಜರ್ ಬಿನ್ನಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಮಂಗಳವಾರ ಬಿಸಿಸಿಐ ಸಾಮಾನ್ಯ ಮಂಡಳಿ ಸಭೆ ನಡೆದಿದ್ದು, ಇದರಲ್ಲಿ ರೋಜರ್ ಬಿನ್ನಿಯವರ ಆಯ್ಕೆ ಮತ್ತು ಉಪಾಧ್ಯಕ್ಷರಾಗಿ ರಾಜೀವ್ ಶುಕ್ಲಾ, ಪ್ರಧಾನ ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿದಿದ್ದಾರೆ.
ಆದರೆ, ಇಲ್ಲೊಂದು ಪ್ರಶ್ನೆಯೂ ಎದ್ದಿದ್ದು, ಗಂಗೂಲಿ ಅವರನ್ನು ಇನ್ನೊಂದು ಅವಧಿಗೆ ಏಕೆ ಮುಂದುವರಿಸಲಿಲ್ಲ ಎಂದು ಜನ ಕುತೂಹಲಕ್ಕೀ ಡಾಗಿದ್ದಾರೆ. ಗಂಗೂಲಿ ಕಾಲದಲ್ಲಿ ಬಿಸಿಸಿಐ ಆಡಳಿತಾತ್ಮಕ ನಿರ್ವಹಣೆ ಅತ್ಯು ತ್ತಮವಾಗಿಯೇ ಇತ್ತು. ಅಲ್ಲದೆ ಮೊದಲು ಹರಿದಾಡುತ್ತಿದ್ದ ಸುದ್ದಿಗಳ ಪ್ರಕಾರ, ಗಂಗೂಲಿ ಐಸಿಸಿ ಮಂಡಳಿಗೆ ಹೋಗಿ ಅಲ್ಲಿ ಅಧ್ಯಕ್ಷರಾಗಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ಇದ್ಯಾವುದೂ ಆಗದೇ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಜಯ್ ಶಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ರಾಜೀವ್ ಶುಕ್ಲಾ ಅವರನ್ನು ಉಪಾ ಧ್ಯಕ್ಷರಾಗಿ ಮುಂದುವರಿಸಿದ ಮೇಲೆ ಗಂಗೂಲಿ ಅವರನ್ನು ಏಕೆ ಮುಂದು ವರಿಸಿಲ್ಲ ಎಂಬ ಬಗ್ಗೆ ಪ್ರಶ್ನೆಗಳೂ ಎದ್ದಿವೆ.
ಆದರೂ ಈ ಎಲ್ಲ ಚಿಕ್ಕಪುಟ್ಟ ವಿವಾದಗಳ ಮಧ್ಯೆ, ರೋಜರ್ ಬಿನ್ನಿ ಅವ ರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. 1983ರ ವಿಶ್ವಕಪ್ ತಂಡದಲ್ಲಿದ್ದ ರೋಜರ್ ಬಿನ್ನಿ ಭಾರತ ವಿಶ್ವಕಪ್ ಗೆಲ್ಲಲು ನೆರವಾಗಿದ್ದರು. ಆಗ 18 ವಿಕೆಟ್ ಪಡೆದಿದ್ದ ಬಿನ್ನಿ ಅವರು, 1983ರ ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದಿದ್ದರು.
ಜತೆಗೆ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲೂ ಅಮೋಘ ಪ್ರದರ್ಶನ ನೀಡಿರುವ ಬಿನ್ನಿ ಅವರು, ತಮ್ಮ ಆಟದ ಅನುಭವವನ್ನು ಬಿಸಿಸಿಐನೊಳಗೂ ತೋರ್ಪಡಿಸಬೇಕಾಗಿದೆ. ಸೌರವ್ ಗಂಗೂಲಿ ಕಾಲದಲ್ಲಿ ಬಿಸಿಸಿಐ ಅನ್ನು ಶ್ರೇಷ್ಠ ಸಂಸ್ಥೆಯಾಗಿ ಮಾರ್ಪಡಿಸಲಾಗಿದೆ. ಅಲ್ಲದೆ, ಹೊಸಬರಿಗೆ ಸಾಕಷ್ಟು ಉತ್ತಮ ಅವಕಾಶಗಳು, ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ನೇಮಕ ಸೇರಿದಂತೆ ವಿವಿಧ ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳಲಾಗಿದೆ. ಬೆಂಗಳೂರಿನ ಎನ್‌ಸಿಎ ಹೊಣೆಯನ್ನು ವಿ.ವಿ.ಎಸ್. ಲಕ್ಷ್ಮಣ್ ಅವರಿಗೆ ಕೊಟ್ಟು, ಅಲ್ಲಿಯೂ ಹೊಸಬರಿಗೆ ತರಬೇತಿ ನೀಡಿ, ಭಾರತ ತಂಡಕ್ಕೆ ಸಾಕಷ್ಟು ಪ್ರತಿಭೆಗಳು ಸಿಗುವಂತೆ ಮಾಡಿದೆ.
ಇನ್ನು ಮುಂದೆ ರೋಜರ್ ಬಿನ್ನಿಯವರಿಗೂ ದೊಡ್ಡ ದೊಡ್ಡ ಸವಾಲು ಗಳಿವೆ. ಸದ್ಯ ಆರಂಭವಾಗಿರುವ ಟಿ20 ವಿಶ್ವಕಪ್ ಪಂದ್ಯಾವಳಿಯೇ ಅವರ ಮೊದಲ ಸವಾಲಾಗಿದೆ. ಇದಾದ ಮೇಲೆ ಐಪಿಎಲ್ ಅನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿಯೂ ರೋಜರ್ ಬಿನ್ನಿ ಅವರ ಮೇಲಿದೆ.
ಈ ಕೆಲಸಗಳ ಜತೆಗೆ ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೂ ಇನ್ನಷ್ಟು ಉತ್ತೇ ಜನ ನೀಡಬೇಕಾದ ಅನಿವಾರ್ಯತೆಯೂ ಇದೆ. ಈ ಎಲ್ಲ ಭರವಸೆಗಳನ್ನು ಅವರು ಈಡೇರಿಸುತ್ತಾರೆ ಎಂಬ ನಂಬಿಕೆ ಸರಕಾರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.