ಪರಿಷತ್‌ನ ಘನತೆ ಎತ್ತಿಹಿಡಿಯುವ ಕೆಲಸವಾಗಲಿ

Team Udayavani, Dec 16, 2021, 6:00 AM IST

ಪರಿಷತ್‌ನ ಘನತೆ ಎತ್ತಿಹಿಡಿಯುವ ಕೆಲಸವಾಗಲಿ

ಪ್ರಜಾಪ್ರಭುತ್ವದಲ್ಲಿ ಲೋಕಸಭೆ, ರಾಜ್ಯಸಭೆ, ರಾಜ್ಯಗಳ ವಿಧಾನಸಭೆ, ವಿಧಾನಪರಿಷತ್‌ಗೆ ತನ್ನದೇ ಆದ ಘನತೆ ಇದೆ. ಇವೆಲ್ಲವೂ ದೇಶದ ಹಿತ ಮತ್ತು ಅಭಿವೃದ್ಧಿಗೆ ಬೇಕಾದ ಶಾಸನ ರೂಪಿಸುವಂಥವು. ಇಲ್ಲಿಗೆ ಆರಿಸಿ ಬರುವವರ ಮೇಲೆಯೂ ಅಂಥದ್ದೇ ಒಂದು ದೊಡ್ಡ ಗೌರವವೂ ಇರುತ್ತದೆ.

ಇತ್ತೀಚಿನ ದಿನಗಳಲ್ಲಿ ಸಂಸತ್‌ ಸೇರಿದಂತೆ ವಿಧಾನಸಭೆ ಅಧಿವೇಶನಗಳಲ್ಲಿ ಚರ್ಚೆಗಿಂತ ಹೆಚ್ಚಾಗಿ ಗದ್ದಲ, ಗಲಾಟೆ ಯೇ ಕಾಣಿಸುತ್ತಿದೆ. ಅದರಲ್ಲೂ ವಿಚಾರವೊಂದನ್ನು ಹಿಡಿದುಕೊಂಡು ಆಡಳಿತ ಮತ್ತು ವಿಪಕ್ಷಗಳು ಸ್ವಪ್ರತಿಷ್ಠೆ ಯಿಂದ ವರ್ತಿಸುತ್ತಿರುವುದೂ ಸಾಮಾನ್ಯ ಸಂಗತಿಯಾಗಿದೆ. ಈಗ ರಾಜ್ಯಸಭೆಯಲ್ಲಿ 12 ಸದಸ್ಯರನ್ನು ಮುಂಗಾರು ಅಧಿವೇಶನದ ಕಡೇ ದಿನ ನಡೆಸಿದ ದಾಂಧಲೆಯ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ. ಇವರ ಅಮಾನತು ರದ್ದತಿಗಾಗಿ ವಿಪಕ್ಷಗಳು ಸಂಸತ್‌ ಅಧಿವೇಶನದ ಮೊದಲ ದಿನದಿಂದಲೂ ಸದನದ ಹೊರಗೆ ಮತ್ತು ಒಳಗೆ ಪ್ರತಿಭಟನೆ ನಡೆಸಿಕೊಂಡೇ ಬಂದಿವೆ. ಈಗಲೂ ಇದಕ್ಕೆ ಒಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ.

ರಾಷ್ಟ್ರಮಟ್ಟದಲ್ಲಿ ಈ ರೀತಿಯಾದರೆ, ರಾಜ್ಯದ ವಿಧಾನಸಭೆ ಮತ್ತು ಪರಿಷತ್‌ ಗದ್ದಲದ ತಾಣಗಳಾಗಿ ಮಾರ್ಪಾಡಾಗಿರುವುದು ಕಂಡು ಬರುತ್ತಿದೆ. ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಭಾಪತಿ ಯವರ ಆದೇಶ ಉಲ್ಲಂ ಸಿದ ಕಾರಣಕ್ಕಾಗಿ 14 ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಸ್ವತಃ ಸಭಾಪತಿ ಬಸವರಾಜ ಹೊರಟ್ಟಿಯವರೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:ಎನ್‌ಕೌಂಟರ್‌: ಎ+ ಕೆಟಗರಿಯ ಹಿಜ್ಬುಲ್‌ ಉಗ್ರನ ಹತ್ಯೆ

ಮೊದಲಿನಿಂದಲೂ ರಾಜ್ಯಸಭೆ ಮತ್ತು ವಿಧಾನಪರಿಷತ್‌ ಮೇಲ್ಮನೆ ಎಂದೇ ಹೆಗ್ಗಳಿಕೆ ಪಡೆದಿರುವ ಸದನಗಳು. ಇಲ್ಲಿಗೆ ಆಯ್ಕೆಯಾಗಿ ಬರುವವರು ಹಿರಿಯರು, ಬುದ್ಧಿಜೀವಿಗಳು, ಸಾಕಷ್ಟು ಅರಿತುಕೊಂಡವರು ಎಂಬುದು. ಆದರೆ ಇತ್ತೀಚಿನ ದಿನದಲ್ಲಿ ರಾಜ್ಯಸಭೆ ಮತ್ತು ವಿಧಾನಪರಿಷತ್‌ಗಳಿಗೆ ಈ ವರ್ಗಗಳಿಗಿಂತ ಹೆಚ್ಚಾಗಿ ರಾಜಕೀಯವಾಗಿ ಲೋಕಸಭೆ ಮತ್ತು ವಿಧಾನಸಭೆಗೆ ಪ್ರವೇಸಿಸಲು ಆಗದೇ ಇರುವಂಥವರೇ ಬರುತ್ತಿದ್ದಾರೆ. ಅಷ್ಟೇ ಅಲ್ಲ, ಮಂಗಳವಾರ ವಷ್ಟೇ ಕರ್ನಾಟಕದಲ್ಲಿ ಪರಿಷತ್‌ ಚುನಾವಣೆಯ ಫ‌ಲಿತಾಂಶ ಹೊರಬಿದ್ದಿದ್ದು, ಇದರಲ್ಲಿ 11 ಮಂದಿ ವಿಧಾನಸಭೆ ಯಲ್ಲಿ ಈಗ ಮತ್ತು ಈ ಹಿಂದೆ ಇದ್ದವರ ಕುಟುಂಬಸ್ಥರೇ ಆಗಿದ್ದಾರೆ.

ಈ ಕಾರಣದಿಂದಾಗಿಯೇ ಈಗ ಪರಿಷತ್‌ಗೆ ತಜ್ಞರು, ವಿಚಾರವಾದಿಗಳು, ಹಿರಿಯರು ಬರುತ್ತಿಲ್ಲ. ಇದರ ಬದಲಾಗಿ ಹಿಂಬಾಗಿಲ ಮೂಲಕ ರಾಜಕೀಯದಲ್ಲಿರುವವರೇ ಪ್ರವೇಶಿಸುತ್ತಿದ್ದಾರೆ. ಕೆಳಮನೆಯಲ್ಲಿ ಕಾಣಿಸುವಂಥ ಜಗಳ, ಗದ್ದಲ, ಗಲಾಟೆಗಳು ಮೇಲ್ಮನೆಯಲ್ಲೂ ಹೆಚ್ಚಾಗುತ್ತಿವೆ. ಇದರಿಂದ ಪರಿಷತ್‌ ಘನತೆಗೆ ಕುಂದು ಉಂಟಾಗುತ್ತದೆಯೋ ಹೊರತು, ಬೇರೇನೂ ಅಲ್ಲ.

ಪರಿಷತ್‌ ಅನ್ನು ಮೇಲ್ಮನೆ ಅಥವಾ ಹಿರಿಯರ ಸದನ ಎಂದು ಕರೆದಿರುವ ಕಾರಣಕ್ಕಾದರೂ ಇದರ ಸದಸ್ಯರು ಜವಾಬ್ದಾರಿಯಿಂದ ವರ್ತಿಸಬೇಕು. ಸರಕಾರಗಳು ಕೆಳಮನೆಯಲ್ಲಿ ಅನುಮೋದನೆ ನೀಡುವ ಮಸೂದೆಗಳಿಗೆ, ಇಲ್ಲಿ ಒಂದು ಚರ್ಚೆ ಮಾಡಿ, ಅದರ ಸಾಧಕ

ಬಾಧಕಗಳ ಕುರಿತಂತೆ ಅವಲೋಕಿಸಿ, ಸಾಧ್ಯವಾದಷ್ಟು ಸಲಹೆ ಸೂಚನೆಗಳನ್ನು ನೀಡುವಂತಿರಬೇಕು. ಇದಕ್ಕೆ ಬದಲಾಗಿ ಗದ್ದಲವೇ ಕಲಾಪ ಕೇಂದ್ರಿತವಾಗಬಾರದು.

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

Forest

Forest: ಅರಣ್ಯದಲ್ಲಿ ನಿರಂತರ ಗಣಿಗಾರಿಕೆ: ಸರಕಾರ ಚರ್ಚಿಸಿ ನಿರ್ಧರಿಸಲಿ

School-Chikki

PM Poshan: ಶಾಲಾ ಮಕ್ಕಳ ಮೊಟ್ಟೆಗೂ ಕನ್ನ ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.