ಲೋಕಾಯುಕ್ತ, ಎಸಿಬಿ ಜನರ ವಿಶ್ವಾಸ ಗಳಿಸಿಕೊಳ್ಳಲಿ
Team Udayavani, Jul 16, 2022, 6:00 AM IST
ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣ ಹಾಗೂ ನಿರ್ಮೂಲನೆ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಹಲ್ಲಿಲ್ಲದ ಹಾವಿನಂತಾಗಿ ಹೆಸರಿಗೆ ದಾಳಿ ನಡೆಸಿ ಅನಂತರ ನಾನಾ ಕಾರಣಗಳಿಂದ ಖುಲಾಸೆ ಗೊಳಿಸುವ ಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಆತಂಕಕಾರಿ.
ದೇಶಕ್ಕೆ ಶಾಪವಾದ ಭ್ರಷ್ಟಾಚಾರದಂತಹ ಪಿಡುಗು ನಿವಾರಣೆಗಾಗಿ ಹುಟ್ಟಿಕೊಂಡಿರುವ ಸಂಸ್ಥೆಗಳು ದುರ್ಬಲವಾದರೆ ಜನಸಾಮಾನ್ಯರ ನಂಬಿಕೆಗೆ ಕುತ್ತು ಹಾಗೂ ಇಡೀ ವ್ಯವಸ್ಥೆ ಬಗ್ಗೆ ಜನರಿಗೆ ವಿಶ್ವಾಸ ಇರುವುದಿಲ್ಲ. ಇದು ಯಾವುದೇ ಸರಕಾರಕ್ಕೂ ಶೋಭೆ ತರುವಂತದ್ದಲ್ಲ.
ಆ ಸರಕಾರ, ಈ ಸರಕಾರ, ಹಿಂದಿನ ಸರಕಾರ ಎಂಬ ಸಬೂಬು ಹೇಳುವುದು ಸಾಮಾನ್ಯವಾಗಿದೆ. ಆದರೆ ಯಾವುದೇ ಸರಕಾರ ಅಧಿಕಾರದಲ್ಲಿ ದ್ದಾಗ ಕಠಿನ ಕ್ರಮ ಕೈಗೊಂಡು ಭ್ರಷ್ಟಾಚಾರ ನಿಗ್ರಹಕ್ಕೆ ಕೆಲಸ ಮಾಡುವ ಸಂಸ್ಥೆಗಳಿಗೆ ಬಲ ತುಂಬಲು ಯಾರೂ ಬೇಡ ಎನ್ನುವುದಿಲ್ಲ. ಅವರು ಮಾಡಿ ಹೋಗಿದ್ದಾರೆ ಎಂದು ಬೆರಳು ತೋರಿಸಿ ಪ್ರಸ್ತುತ ಆಗುತ್ತಿರುವ ವೈಫಲ್ಯಗಳಿಗೆ ತಮಗೆ ಸಂಬಂಧವೇ ಇಲ್ಲದಂತೆ ಇರುವುದೂ ಒಂದು ರೀತಿಯಲ್ಲಿ ಅಪರಾಧವೇ.
ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯಲ್ಲಿ 2,211 ಎಫ್ಐಆರ್ ದಾಖಲಾದರೂ ಶಿಕ್ಷೆಯಾಗಿರುವುದು 22 ಮಂದಿಗೆ ಮಾತ್ರ ಎಂಬುದು ಒಂದು ರೀತಿಯ ಅಣಕವೇ ಸರಿ. ಲೋಕಾಯುಕ್ತಕ್ಕೆ ಇದ್ದ ಅಧಿಕಾರ ಕಡಿತ ಮಾಡಿ ರುವುದಲ್ಲದೆ ವರ್ಷಗಳ ಹಿಂದೆ ದಾಖಲಾದ 25 ಪ್ರಕರಣಗಳ ತನಿಖೆಗೆ ಅನುಮತಿಯೇ ನೀಡದಿರುವುದು ಆಳುವ ಸರಕಾರದ ಮೇಲೆ ಅನುಮಾನ ಮೂಡುವುದರಲ್ಲಿ ಸಂಶಯವಿಲ್ಲ.
ಎರಡೂ ಸಂಸ್ಥೆಗಳಿಗೆ ಸರಕಾರ ವಾರ್ಷಿಕವಾಗಿ 126 ಕೋಟಿ ರೂ. ಮೊತ್ತ ವೆಚ್ಚ ಮಾಡುತ್ತದೆ. ಅಲ್ಲಿನ ಸಿಬಂದಿ ವೇತನ, ಕಚೇರಿ ನಿರ್ವಹಣೆ ಮತ್ತಿತರ ವೆಚ್ಚಗಳಿಗೆ ಹಣ ವಿನಿಯೋಗಿಸುತ್ತದೆ. ಇದು ತಪ್ಪಲ್ಲ ಆದರೆ ಅದರಿಂದ ಅಂತಿಮವಾದ ಫಲಶ್ರುತಿ ಏನು ಎಂಬ ಪ್ರಶ್ನೆಗೆ ಉತ್ತರವಿಲ್ಲ ದಿದ್ದರೆ ಸರಕಾರವೇ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಾಗುತ್ತದೆ.
ರಾಜ್ಯದಲ್ಲಿ ಒಂದೆಡೆ ಬಹುತೇಕ ಇಲಾಖೆಗಳಲ್ಲಿ ಅನಗತ್ಯ ಸಿಬಂದಿಯೇ ದೊಡ್ಡ ಹೊರೆಯಾಗಿದೆ. ಇದರ ನಡುವೆ ಭ್ರಷ್ಟಾಚಾರ ನಿಗ್ರಹದಂತಹ ಎಸಿಬಿ, ಲೋಕಾಯುಕ್ತದಲ್ಲಿರುವ ಸಿಬಂದಿಗೆ ಕೆಲಸವೇ ಇಲ್ಲದಂತಾಗಿ ರುವುದು ವ್ಯವಸ್ಥೆಯ ದೌರ್ಬಲ್ಯ. ಇದಕ್ಕೆ ಯಾರು ಹೊಣೆ, ಇದನ್ನು ಗಮನಿಸಬೇಕಾದವರು ಯಾರು ಎಂಬ ಪ್ರಶ್ನೆ ಮೂಡುತ್ತದೆ.
ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತಕೆೆR ಪರ್ಯಾಯವೆಂದು ಅಸ್ತಿತ್ವಕ್ಕೆ ಬಂದಿರುವ ಭ್ರಷ್ಟಾಚಾರ ನಿಗ್ರಹ ದಳ ದಾಳಿಗಷ್ಟೇ ಸೀಮಿತವಾಗಿದ್ದು, ಸಣ್ಣ-ಪುಟ್ಟ ಟ್ರ್ಯಾಪ್ ಕೇಸ್‌ಗಳಲ್ಲಿ ಮಾತ್ರ ಚಾರ್ಜ್‌ಶೀಟ್ ಸಲ್ಲಿಸಿ, ಕೋಟ್ಯಂತರ ರೂ. ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸದಿರುವುದು ಅಂಕಿ-ಅಂಶಗಳಿಂದ ಸಾಬೀತಾಗಿದೆ.
ಎಸಿಬಿಯಲ್ಲಿ 2,211 ಪ್ರಕರಣಗಳ ಪೈಕಿ 99 ಪ್ರಕರಣಗಳಲ್ಲಿ ಸಾಕ್ಷ್ಯಗಳಿಲ್ಲದೆ ಕೋರ್ಟ್‌ಗೆ “ಬಿ’ ವರದಿ ಸಲ್ಲಿಸಲಾಗಿದ್ದು 70 ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿದ್ದು ಶೇ.3ರಷ್ಟು ಪ್ರಮಾಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಇದರಲ್ಲೂ 9 ಮಂದಿ ಆರೋಪಗಳಿಂದ ಮುಕ್ತಿ ಹೊಂದಿದ್ದಾರೆ. ಸೂಕ್ತ ತನಿಖೆ ನಡೆಸದೇ 39 ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ ಎಂಬ ಅಂಶ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕ್ರಮ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.