ಬ್ಯಾಂಕಿಂಗ್‌ ವಲಯದ ಸ್ವಚ್ಛತೆಗೆ ಆದ್ಯತೆ ಸಿಗಲಿ


Team Udayavani, Mar 7, 2020, 6:25 AM IST

ಬ್ಯಾಂಕಿಂಗ್‌ ವಲಯದ ಸ್ವಚ್ಛತೆಗೆ ಆದ್ಯತೆ ಸಿಗಲಿ

ದೇಶದ ಬ್ಯಾಂಕ್‌ಗಳನ್ನು ಈಗ ಸಮಸ್ಯೆಯ ಕೂಪಕ್ಕೆ ನೂಕುತ್ತಿರುವುದು ವಸೂಲಾಗದ ಸಾಲಗಳು. ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಗುರುತಿಸುವ ಈ ಸಾಲ ಈಗ ಅಗಾಧವಾಗಿ ಬೆಳೆದು ಬ್ಯಾಂಕ್‌ಗಳನ್ನೇ ನುಂಗುತ್ತಿರುವುದು ವಿಪರ್ಯಾಸ. ಇದು ಜನಸಾಮಾನ್ಯರಿಗೆ ನೀಡಿದ ಸಾಲ ಅಲ್ಲ, ದೊಡ್ಡ ದೊಡ್ಡ ಕಾರ್ಪೋರೇಟ್‌ ಕಂಪೆನಿಗಳ ಸಾಲ.

ಮತ್ತೂಂದು ಬ್ಯಾಂಕ್‌ ಅವನತಿಯತ್ತ ಸಾಗಿದೆ. ಈ ಸಲ ಮುಳುಗುತ್ತಿರುವುದು ಖಾಸಗಿ ವಲಯದ ಐದನೇ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಯೆಸ್‌ ಬ್ಯಾಂಕ್‌. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಬ್ಯಾಂಕಿನ ನಿಯಂತ್ರಣವನ್ನು ಆರ್‌ಬಿಐ ತನ್ನ ಕೈಗೆ ತೆಗೆದುಕೊಂಡಿದೆ. ಹಣ ಹಿಂಪಡೆತ ಮಿತಿಯನ್ನು ತಿಂಗಳಿಗೆ 50,000 ರೂ.ಮಿತಿಗೊಳಪಡಿಸಿರುವ ಆರ್‌ಬಿಐ ಇದೇ ವೇಳೆ ಬ್ಯಾಂಕನ್ನು ಪುನಶ್ಚೇತನಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಆದರೆ ಒಂದು ಸಲ ಬ್ಯಾಂಕಿನಲ್ಲಿ ಸಮಸ್ಯೆ ಇದೆ ಎಂದು ಗೊತ್ತಾದ ಕೂಡಲೇ ಜನರು ಗಾಬರಿಯಾಗುವುದು ಸಹಜ. ಬ್ಯಾಂಕಿನ ಶಾಖೆಗಳ ಮುಂದೆ ಮತ್ತು ಎಟಿಎಂಗಳ ಮುಂದೆ ಜನರು ಹಣ ಹಿಂಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಪಿಎಂಸಿ ಎಂಬ ಸಹಕಾರಿ ಬ್ಯಾಂಕೊಂದು ಇದೇ ರೀತಿ ದಿವಾಳಿಯೆದ್ದು ರಂಪಾಟವಾಗಿತ್ತು. ಅದರ ಬಿಸಿ ಆರುವ ಮೊದಲೇ ಯೆಸ್‌ ಬ್ಯಾಂಕ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಐದನೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿರುವ ದೇಶದ ಅರ್ಥ ವ್ಯವಸ್ಥೆಯ ಅಡಿಪಾಯವಾಗಿರುವ ಬ್ಯಾಂಕ್‌ಗಳು ಈ ರೀತಿ ಪದೇಪದೆ ಬಿರುಗಾಳಿಗೆ ಸಿಲುಕಿದ ನಾವೆಯಂತಾಗುವುದು ಮಾತ್ರ ದುರದೃಷ್ಟಕರ ಸಂಗತಿ. ಬ್ಯಾಂಕಿಂಗ್‌ ವಲಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಅರ್ಥ ಶಾಸ್ತ್ರಜ್ಞರು ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ವೃತ್ತಿಪರರು ಆಡಳಿತ ವ್ಯವಸ್ಥೆಯಲ್ಲಿದ್ದರೆ ವಿತ್ತೀಯ ಸಮಸ್ಯೆಗಳು ನಿವಾರಣೆಯಾಗಬಹುದು ಎಂಬ ಪ್ರತಿಪಾದನೆಯೂ ಯೆಸ್‌ ಬ್ಯಾಂಕ್‌ ವಿಚಾರದಲ್ಲಿ ಹುಸಿಯಾಗಿದೆ. ಏಕೆಂದರೆ ಈ ಬ್ಯಾಂಕನ್ನು ಸ್ಥಾಪಿಸಿದ್ದು ಹಣಕಾಸು ಕ್ಷೇತ್ರದ ಮೂವರು ದಿಗ್ಗಜರು. ಆದರೆ ಸರಿಯಾಗಿ ಎರಡು ದಶಕ ಪೂರ್ತಿ ಅವರಿಗೆ ಬ್ಯಾಂಕನ್ನು ನಡೆಸಿಕೊಂಡು ಬರಲು ಸಾಧ್ಯವಾಗಿಲ್ಲ. ಹಾಗೆಂದು ಯೆಸ್‌ ಬ್ಯಾಂಕಿನಲ್ಲಿ ಸಮಸ್ಯೆಯಿದೆ ಎನ್ನುವುದು ಗೊತ್ತಾಗಿದ್ದು ಇದೇ ಮೊದಲೇನಲ್ಲ. 2017ರಲ್ಲೇ ಈ ಬಗ್ಗೆ ಸುಳಿವು ಸಿಕ್ಕಿತ್ತು.ಇತ್ತೀಚೆಗೆ ಪಿಎಂಸಿ ಬ್ಯಾಂಕಿನ ಸಮಸ್ಯೆ ಬಹಿರಂಗವಾದ ಸಂದರ್ಭದಲ್ಲೂ ಯೆಸ್‌ ಬ್ಯಾಂಕ್‌ ಶೇರು ಮೌಲ್ಯ ಸುಮಾರು ಶೇ. 40 ಕುಸಿದಿತ್ತು. ಈ ಸಂದರ್ಭದಲ್ಲೇ ಈ ಬ್ಯಾಂಕಿನ ಮೇಲೆ ಕಣ್ಗಾವಲು ಇಡಬೇಕೆಂಬ ಸಲಹೆಯನ್ನು ಆರ್ಥಿಕ ತಜ್ಞರು ನೀಡಿದ್ದರು. ಆದರೆ ಆರ್‌ಬಿಐ ಮತ್ತು ಸರಕಾರ ಅದು ಪೂರ್ತಿ ಕುಸಿಯುವ ತನಕ ಕಾದು ಕುಳಿತುಕೊಂಡದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ.

ದೇಶದ ಬ್ಯಾಂಕ್‌ಗಳನ್ನು ಈಗ ಸಮಸ್ಯೆಯ ಕೂಪಕ್ಕೆ ನೂಕುತ್ತಿರುವುದು ವಸೂಲಾಗದ ಸಾಲಗಳು.ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಗುರುತಿಸುವ ಈ ಸಾಲ ಈಗ ಅಗಾಧವಾಗಿ ಬೆಳೆದು ನಿಂತು ಬ್ಯಾಂಕ್‌ಗಳನ್ನೇ ನುಂಗುತ್ತಿರುವುದು ವಿಪರ್ಯಾಸ. ಹಾಗೆಂದು ಇದು ಜನಸಾಮಾನ್ಯರಿಗೆ ನೀಡಿದ ಸಾಲ ಅಲ್ಲ, ಬದಲಾಗಿ ದೊಡ್ಡ ದೊಡ್ಡ ಕಾರ್ಪೋರೇಟ್‌ ಕಂಪೆನಿಗಳ ಸಾಲ. 2005ರಿಂದೀಚೆಗೆ ಕಾರ್ಪೋರೇಟ್‌ ಕಂಪೆನಿಗಳಿಗೆ ಉದಾರವಾಗಿ ಸಾಲ ನೀಡುವ ನೀತಿಯನ್ನು ಅನುಸರಿಸಿದ ಪರಿಣಾಮವನ್ನು ಈಗ ಬ್ಯಾಂಕ್‌ಗಳು ಅನುಭವಿಸುತ್ತಿವೆ ಎನ್ನುತ್ತಿದೆ ಒಂದು ವರದಿ. ಇದರ ಜೊತೆಗೆ ಸಾಲಮನ್ನಾದಂಥ ಮತಬೇಟೆಯ ತಂತ್ರಗಳು ಕೂಡ ಬ್ಯಾಂಕುಗಳಿಗೆ ಕಂಟಕವಾಗುತ್ತಿರುವುದು ಸುಳ್ಳಲ್ಲ.

ಆದರೆ ಇದರಿಂದ ಸಾಲ ಪಡೆದಿರುವ ಕಾರ್ಪೋರೇಟ್‌ ಕಂಪೆನಿಗಳಿಗೆ ಸಮಸ್ಯೆಯಾಗುವುದಿಲ್ಲ. ಹಣ ಕಳೆದುಕೊಳ್ಳುವುದು ಚಿಕ್ಕಪುಟ್ಟ ಮೊತ್ತವನ್ನು ಠೇವಣಿಯಾಗಿಟ್ಟಿರುವ ಬಡ ಮತ್ತು ಮಧ್ಯಮ ವರ್ಗದ ಜನರು. ಯೆಸ್‌ ಬ್ಯಾಂಕಿನಲ್ಲೂ ಜನಸಾಮಾನ್ಯರ 2 ಲಕ್ಷ ಕೋಟಿ ರೂ.ಗೂ ಮಿಕ್ಕಿದ ಠೇವಣಿಯಿದೆ. ಈ ಠೇವಣಿಗೆ ಯಾವುದೇ ಅಪಾಯವಾಗುವುದಿಲ್ಲ ಎಂದು ಸರಕಾರ ಹೇಳುತ್ತಿದ್ದರೂ ಜನರಲ್ಲಿ ಭರವಸೆ ಹುಟ್ಟುತ್ತಿಲ್ಲ.ಠೇವಣಿ ಮೇಲಿನ ವಿಮಾ ಸುರಕ್ಷೆಯನ್ನು 5 ಲ.ರೂ.ಗೇರಿಸಿರುವುದರಿಂದ ಕನಿಷ್ಠ ಇಷ್ಟು ಮೊತ್ತವಾದರೂ ಸಿಗುವ ಭರವಸೆ ಇಟ್ಟುಕೊಳ್ಳಬಹುದು.

ಖಾಸಗಿ, ಸರಕಾರಿ ಮತ್ತು ಸಹಕಾರಿ ಬ್ಯಾಂಕ್‌ಗಳೆಲ್ಲ ದೇಶದ ಆರ್ಥಿಕತೆಯ ಬಂಡಿಯ ಗಾಲಿಗಳಿದ್ದಂತೆ. ಆರ್ಥಿಕತೆ ಮುಂದೆ ಸಾಗಬೇಕಾದರೆ ಈ ಎಲ್ಲ ಗಾಲಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಇದು ಸಾಧ್ಯವಾಗಬೇಕಾದರೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸವನ್ನು ಆದ್ಯತೆಯಲ್ಲಿ ಮಾಡಬೇಕು.ಬ್ಯಾಂಕಿಂಗ್‌ ವಲಯ ಸ್ವಚ್ಚವಾಗುವುದು ಅತಿ ಅಗತ್ಯ. ಆಗಾಗ ಬ್ಯಾಂಕ್‌ಗಳು ದಿವಾಳಿಯಾಗುತ್ತಿರುವ ಸುದ್ದಿಗಳು ಬರುತ್ತಿದ್ದರೆ ಜನಸಾಮಾನ್ಯರಿಗೆ ಈ ವ್ಯವಸ್ಥೆಯ ಮೇಲಿನ ನಂಬಿಕೆ ಹೊರಟು ಹೋಗುವ ಅಪಾಯವಿದೆ.

ಟಾಪ್ ನ್ಯೂಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

PM-yojana

Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ

supreme-Court

Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ

Canada

Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

24-tma-pai

Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

11

Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.