ಬಡತನ ವಿರುದ್ಧದ ಹೋರಾಟ ಆರ್ಥಿಕ ಚಕ್ರ ವೇಗವಾಗಲಿ
Team Udayavani, Jul 21, 2020, 7:36 AM IST
ಬಡತನದ ವಿರುದ್ಧದ ಹೋರಾಟದಲ್ಲಿ ಭಾರತ ಗಮನಾರ್ಹ ಹೆಜ್ಜೆಗಳನ್ನಿಡುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳುತ್ತಿದೆ. 2005ರಿಂದ 2016ರ ನಡುವೆ 27.3 ಕೋಟಿ ಭಾರತೀಯರು ವಿವಿಧ ಆಯಾಮದ ಬಡತನದಿಂದ ಮುಕ್ತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹಾಗೂ ಆಕ್ಸ್‌ಫರ್ಡ್ ಪಾವರ್ಟಿ ಆ್ಯಂಡ್ ಹ್ಯೂಮನ್ ಡೆವಲಪ್‌ಮೆಂಟ್ ಇನಿಷಿಯೇಟಿವ್ ವರದಿ ಹೇಳುತ್ತಿದೆ.
ಶಿಕ್ಷಣದ ಕೊರತೆ, ಆರೋಗ್ಯದ ಸಮಸ್ಯೆಗಳು, ಉತ್ತಮ ನೌಕರಿಯ ಅಲಭ್ಯತೆ, ಅಪಾಯಕಾರಿ ಪ್ರದೇಶಗಳಲ್ಲಿ ಜೀವನ ಸೇರಿದಂತೆ, ವಿವಿಧ ರೀತಿಯ ಅಭಾವಗಳನ್ನು ಎದುರಿಸುವುದು ಬಹುಆಯಾಮದ ಬಡತನದ ವ್ಯಾಪ್ತಿಯಲ್ಲಿ ಬರುತ್ತದೆ.
ಇದನ್ನು ಗಮನಿಸಿದಾಗ ಭಾರತವನ್ನು ಬಡತನ ಮುಕ್ತವಾಗಿಸಲು ಇಲ್ಲಿಯವರೆಗೂ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೈಗೊಳ್ಳುತ್ತಾ ಬರುತ್ತಿರುವ ಯೋಜನೆಗಳಿಂದ ಸಾಕಷ್ಟು ಮಟ್ಟಿಗೆ ಸಹಾಯವಾಗುತ್ತಿದೆ ಎನ್ನುವುದು ಅರಿವಾಗುತ್ತದೆ.
ಇದುವರೆಗೆ ಹಸಿವು, ಅಪೌಷ್ಟಿಕತೆ, ಸ್ವಾಸ್ಥ್ಯ, ಶಿಕ್ಷಣ ಮತ್ತು ಭ್ರಷ್ಟಾಚಾರದ ಕುರಿತು ಕಾಲಕಾಲಕ್ಕೆ ಬರುವ ಜಾಗತಿಕ ಸಂಸ್ಥೆಗಳ ವರದಿಗಳು ನಿರಾಶಾದಾಯಕ ಚಿತ್ರಣವನ್ನೇ ಎದು ರಿಡುವುದು ಸಾಮಾನ್ಯ ವಾಗಿತ್ತು. ಹೀಗಿರುವಾಗ, ಹನ್ನೊಂದು ವರ್ಷದ ಅವಧಿಯಲ್ಲಿ ಭಾರತದ 27.3 ಕೋಟಿ ಜನರ ಬದುಕು ಸುಧಾರಿಸಿದೆ ಎನ್ನುವುದು ನಿಜಕ್ಕೂ ಸಮಾಧಾನದ ಹಾಗೂ ಸಂತಸದ ವಿಚಾರವೇ ಸರಿ.
ಆದರೆ ಕ್ರಮಿಸಬೇಕಾದ ದಾರಿ ಇನ್ನೂ ಬಹಳ ಇದೆ. ಭಾರತದಲ್ಲಿ ಈಗಲೂ 38 ಕೋಟಿ ಜನರು ಬಹು ಆಯಾಮದ ಬಡತನದಲ್ಲಿ ವಾಸಿಸುತ್ತಿದ್ದಾರೆ ಎಂದೂ ಈ ವರದಿ ಹೇಳಿದೆ. ಇದೇ ವೇಳೆಯಲ್ಲೇ ಕೊರೊನಾ ಹಾವಳಿಯು ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ತತ್ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಜಾಗತಿಕವಾಗಿ 100 ಕೋಟಿಗೂ ಅಧಿಕ ಜನರು ಕಡುಬಡತನಕ್ಕೆ ಸಿಲುಕುವ ಅಪಾಯವಿದೆ ಎಂದೂ ಈ ವರದಿ ಆತಂಕ ವ್ಯಕ್ತಪಡಿಸುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ವರದಿಯು ಭಾರತದ 2016ರ ವರೆಗಿನ ಅಂಕಿಸಂಖ್ಯೆಗಳನ್ನಷ್ಟೇ ಎದುರಿಟ್ಟಿದೆ ಎನ್ನುವುದು.
ತದನಂತರದ ವರ್ಷಗಳಿಂದ ದೇಶದ ಆರ್ಥಿಕತೆಯು ಪ್ರಗತಿಯತ್ತ ಸಾಗುತ್ತಿದೆ. ಆದರೆ ಈಗ ಕೊರೊನಾದಿಂದಾಗಿ ಸವಾಲುಗಳನ್ನು ಎದುರಿಸುವಂತಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ದೇಶದ ಬಹುದೊಡ್ಡ ವರ್ಗವೊಂದು ಆರೋಗ್ಯ, ಪೌಷ್ಟಿಕ ಆಹಾರ, ಶಿಕ್ಷಣ, ವಸತಿ, ಶುದ್ಧ ಕುಡಿಯುವ ನೀರಿನಂಥ ಮೂಲ ಆವಶ್ಯಕತೆಗಳಿಂದ ವಂಚಿತವಾಗಿದೆ. ಆದರೆ, ಈ ಸ್ಥಿತಿ ಎಲ್ಲ ರಾಜ್ಯಗಳಲ್ಲೂ ಒಂದೇ ತೆರನಾಗಿಲ್ಲ. ಕೆಲವು ರಾಜ್ಯಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಹೆಜ್ಜೆಯಿಟ್ಟರೆ, ಇನ್ನೂ ಕೆಲವು ರಾಜ್ಯಗಳು ಕುಂಟುತ್ತಲೇ ಸಾಗಿವೆ.
ಕೋವಿಡ್ ಅನಂತರದಿಂದ ಭಾರತ ಸೇರಿದಂತೆ ಜಾಗತಿಕ ಆರ್ಥಿಕ ಚಕ್ರಕ್ಕೆ ಅಡಿಗಡಿಗೂ ಅಡ್ಡಿಗಳು ಎದುರಾಗುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಿರುದ್ಯೋಗ ಹಾಗೂ ಬಡತನದ ಸಮಸ್ಯೆ ಸವಾಲಾಗಿ ಪರಿಣಮಿಸಲಿದೆ. ಈ ಕಾರಣಕ್ಕಾಗಿಯೇ ಆರ್ಥಿಕತೆಯನ್ನು ಮತ್ತೆ ಹಳಿ ಏರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಳ್ಳುತ್ತಿರುವ ಪ್ರಯತ್ನಗಳು, ರೂಪಿಸುತ್ತಿರುವ ಯೋಜನೆಗಳು ಫಲಿಸಲಿ ಎಂದು ಆಶಿಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.