ಹೊಸ ಮರಳು ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರಲಿ
Team Udayavani, Nov 9, 2021, 6:00 AM IST
ಹೊಸ ಮರಳು ನೀತಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಕೊರತೆಯನ್ನು ಸರಿದೂಗಿಸಲು ಮತ್ತು ಬಡ-ಮಧ್ಯಮ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೆಟಕುವ ದರದಲ್ಲಿ ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಹೊಸ ಮರಳು ನೀತಿ ಜಾರಿಗೆ ತಂದಿರುವ ಸರಕಾರದ ಕ್ರಮ ಶ್ಲಾಘನೀಯ ಮತ್ತು ಸ್ವಾಗತಾರ್ಹ. ಇದರ ಜತೆಗೆ ಹೊಸ ನೀತಿಯನ್ನು ಸುಗಮವಾಗಿ ಕಾರ್ಯರೂಪಕ್ಕೆ ತರುವ ಸವಾಲು ಸಹ ಸರ ಕಾರದ ಮುಂದಿದೆ.
ಹೊಸ ಮರಳು ನೀತಿ “ಬಹು ಆಯಾಮ ಸ್ನೇಹಿ’ ಆಗಿದೆ. ಅಕ್ರಮಗಳನ್ನು ತಡೆಯುವ, ಬೇಡಿಕೆಗೆ ತಕ್ಕಂತೆ ಮರಳು ಪೂರೈಸುವ, ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಬಡವರಿಗೆ ಕೈಗೆಟಕುವ ದರಗಳಲ್ಲಿ ಅವರ ಸಮೀಪದ ಸ್ಥಳಗಳಲ್ಲೇ ಮರಳು ಲಭ್ಯವಾಗಬೇಕು ಎಂಬ ವಿಚಾರಗಳು ಈ ಹೊಸ ನೀತಿಯಲ್ಲಿ ಅಡಕವಾಗಿವೆ. ಇದಲ್ಲದೇ ಹೂಡಿಕೆದಾರರ ಸ್ನೇಹಿ ನೀತಿಯಾಗಿದ್ದು, ನಿರ್ಮಾಣ ವಲಯದತ್ತ ಹೂಡಿಕೆದಾರರನ್ನು ಇದು ಆಕರ್ಷಿಸಲಿದೆ. ಮುಖ್ಯವಾಗಿ ಸರ ಕಾರಕ್ಕೆ “ರಾಯಧನ’ ರೂಪದಲ್ಲಿ ಆದಾಯ ತಂದುಕೊಡುವ ಮತ್ತು ಮರಳು ಗಣಿಗಾರಿಕೆಯಿಂದ ಪಂಚಾಯತ್‌ಗಳು ಹಾಗೂ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಹೊಸ ನೀತಿಯಲ್ಲಿ ವಿಪುಲ ಅವಕಾಶವಿದೆ.ದಕ್ಷಿಣ ಕನ್ನಡ,
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ನಡೆಯುವ ನದಿ ಬದಿಯ ಸಾಂಪ್ರದಾಯಿಕ ಮಾನವಾಧಾರಿತ “ಮುಳುಗು ಮರಳು ತೆಗೆಯುವ ಪದ್ದತಿ’ಗೆ ರಿಯಾಯಿತಿ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಮರಳು ತೆಗೆಯಲು ಅಲ್ಲಿನ ಬೇಡಿಕೆಗೆ ಅನುಗುಣವಾಗಿ ರಿಯಾಯಿತಿ ನೀಡಲಾಗಿದೆ. ಆದರೆ ಯಾವುದೇ ಯಂತ್ರೋಪಕರಣ ಬಳಸದೆ ಸಾಂಪ್ರದಾಯಿಕ ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸದ್ಯ ರಾಜ್ಯದಲ್ಲಿ ವಾರ್ಷಿಕ 45 ದಶಲಕ್ಷ ಟನ್ ಮರಳು ಬೇಡಿಕೆ ಇದೆ. ಇದರಲ್ಲಿ 30 ದಶಲಕ್ಷ ಟನ್ ಎಂ- ಸ್ಯಾಂಡ್, 4.5 ದಶಲಕ್ಷ ಟನ್ ನದಿ ಮೂಲಗಳಿಂದ, 2 ದಶಲಕ್ಷ ಟನ್ ಇತರ ರಾಜ್ಯಗಳಿಂದ ಪೂರೈಕೆ ಆಗುತ್ತಿದೆ. ಒಟ್ಟು 9 ದಶಲಕ್ಷ ಟನ್ ಕೊರತೆ ಇದೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ಏರಿಳಿತ ಆಗಬಹುದು. ಆದರೆ ಸದ್ಯ ಇರುವ 9 ದಶಲಕ್ಷ ಟನ್ ಕೊರತೆ ನೀಗಿಸುವುದು ಸುಲಭ ಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ
ಹೊಸ ಮರಳು ನೀತಿ ಪರಿಹಾರ ದೊರಕಿಸಿಕೊಡಬಹುದು. ಮರಳು ಗಣಿಗಾರಿಕೆಗೆ ರಾಜ್ಯದಲ್ಲಿ ಒಂದಿಷ್ಟು ಕರಾಳ ಇತಿಹಾಸವಿದೆ.
ಇದನ್ನೂ ಓದಿ:ಮರೀನಾ ಬೀಚ್‌ನಲ್ಲಿ ಕರುಣಾ ಸ್ಮಾರಕ
ಮರಳು ಗಣಿಗಾರಿಕೆ ಹಾಗೂ ಅಕ್ರಮಗಳು ಜತೆ ಜತೆಯಾಗಿ ಸಾಗಿವೆ. ಕಾಲ ಕಾಲಕ್ಕೆ ರಾಜಕೀಯ ಪಕ್ಷಗಳು, ಘಟಾನುಘಟಿ ರಾಜಕಾರಣಿಗಳಿಗೆ ಅಕ್ರಮ ಮರಳು ಗಣಿಗಾರಿಕೆಯ “ಧೂಳು’ ಮೆತ್ತಿಕೊಂಡಿದೆ. ರದ ಈ ಸದಾಶಯ ಸಾಕಾರಗೊಳ್ಳಬೇಕಾದರೆ ಆಡಳಿತ ಯಂತ್ರವನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಬೇಕಾಗಿದೆ. ನೀತಿಯ ಅನುಷ್ಠಾನಕ್ಕೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಗ್ರಾ.ಪಂ.ಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಈ ಆಡಳಿತಾತ್ಮಕ ಹಂತಗಳು ಸರಳೀಕರಣದ ಬದಲಿಗೆ ಬಿಕ್ಕಟ್ಟು ಮತ್ತು ತೊಡಕುಗಳನ್ನು ತರುವಂತಾಗಬಾರದು. ಪರಿಸರ ಪರವಾನಿಗೆ ಮತ್ತಿತರರ ಕಾನೂನು ವಿಚಾರಗಳಿಗೆ ಸರಕಾರ ಸೂಕ್ಷ್ಮಮತಿಯಾಗಬೇಕು. ಪ್ರತಿ ಸರಕಾರ ಬಂದಾಗ ಅಥವಾ ಸಚಿವರುಬದಲಾದಾಗ ಹೊಸ ಮರಳು ನೀತಿ ಪ್ರಚಲಿತಕ್ಕೆ ಬರುತ್ತದೆ. ಮಲೇಶಿಯಾದಿಂದ ಮರಳು ಆಮದು ಮಾಡಿಕೊಳ್ಳುವ,ತೆಲಂಗಾಣ ಮಾದರಿ ಮರಳು ನೀತಿ ಮುಂತಾದ ಮಾತುಗಳು ಹಿಂದೆ ಕೇಳಿ ಬಂದಿವೆ. ಹಾಗಾಗಿ, ಹೊಸ ನೀತಿಯಲ್ಲಿ ಪ್ರಯೋಗಗಳ ಬದಲಿಗೆ ಸ್ಥಿರತೆ ಇರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ
Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.