ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ
Team Udayavani, Dec 23, 2024, 6:00 AM IST
ದೇಶದಲ್ಲಿ ಅರಣ್ಯ ವ್ಯಾಪ್ತಿ ಪ್ರದೇಶ ಹೆಚ್ಚಳವಾಗಿದ್ದು, ಇಂಗಾಲದ ಅಂಶವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿರುವುದು ಒಂದು ಆಶಾದಾಯಕ ಬೆಳವಣಿಗೆ ಯಾಗಿದೆ. ಕೇಂದ್ರ ಸರಕಾರವು ಶನಿವಾರ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ಸ್ಥಿತಿಗತಿ ವರದಿ 2023ರಲ್ಲಿ ಈ ಕುರಿತಾದ ಅಂಕಿಅಂಶಗಳಿದ್ದು, 2023 ರಲ್ಲಿ ದೇಶದ ಅರಣ್ಯ ಪ್ರದೇಶ 7,15,343 ಚದರ ಕಿ.ಮೀ.ಗೆ ಹೆಚ್ಚಿದೆ. ಇದು ದೇಶದ ಒಟ್ಟು ಭೂಭಾಗದ ಶೇ. 21.8 ಎಂದು ವರದಿ ತಿಳಿಸಿದೆ. 2005ಕ್ಕೆ ಹೋಲಿ ಸಿದರೆ 2023ರ ವೇಳೆಗೆ 2.3 ಶತಕೋಟಿ ಟನ್‌ಗಳಷ್ಟು ಇಂಗಾಲದ ಅಂಶ ವನ್ನು ತಗ್ಗಿಸಲು ಸಾಧ್ಯವಾಗಿರುವುದು ವರದಿಯ ಅತ್ಯಂತ ಧನಾತ್ಮಕ ಅಂಶ ಎಂಬುದಾಗಿ ಕೇಂದ್ರ ಪರಿಸರ ಸಚಿವ ಭೂಪಿಂದರ್ ಯಾದವ್ ತಿಳಿಸಿದ್ದಾರೆ.
ಪರಿಸರಕ್ಕೆ ಇಂಗಾಲದ ಅಂಶ ಬಿಡುಗಡೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತ ಹಲವು ಅಂತಾರಾಷ್ಟ್ರೀಯ ನಿರ್ಣಯಗಳಿಗೆ ಸಹಿ ಹಾಕಿದೆ. ಇದಕ್ಕೆ ಅನು ಗುಣ ವಾಗಿ ಈ ಸಾಧನೆ ಆಗಿರುವುದು ಉತ್ತಮ ಬೆಳವಣಿಗೆ. ಜಾಗತಿಕವಾಗಿ ಕೈಗಾರಿಕ ಕ್ರಾಂತಿ, ವಾಣಿಜ್ಯ ಕ್ರಾಂತಿಯ ಬಳಿಕ ಪರಿಸರ, ಅರಣ್ಯ ನಾಶ ತೀವ್ರವಾಗಿ ಮಾಲಿನ್ಯ ಹೆಚ್ಚಳವಾಗಿದೆ. ಇದಕ್ಕೆ ಪೂರಕವಾಗಿ ಜನಸಂಖ್ಯೆಯೂ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಇದಕ್ಕೆ ಸಮಾನುಪಾತದಲ್ಲಿ ಅರಣ್ಯ ವಿಸ್ತರಣೆ, ಸಂರಕ್ಷಣೆ ಆಗುತ್ತಿಲ್ಲ ಎಂಬುದು ಹಲವು ದಶಕಗಳಿಂದ ಕೇಳಿ ಬರುತ್ತಿರುವ ಕೂಗು. ಇದರಿಂದೇನು ದುಷ್ಪರಿಣಾಮ ಎಂಬುದನ್ನು ಕೆಲವಾರು ವರ್ಷಗಳಿಂದ ಪ್ರಾಕೃತಿಕ ವಿಕೋಪಗಳು, ಮಾಲಿನ್ಯ, ರೋಗರುಜಿನ ಗಳ ಹೆಚ್ಚಳ ಗಳ ಮೂಲಕ ನಾವು ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ. ಈಗ ದೇಶದಲ್ಲಿ ಅರಣ್ಯ ಪ್ರದೇಶ ಕೊಂಚವಾದರೂ ಹೆಚ್ಚಳವಾಗಿರುವುದು ಈ ನೋವಿಗೆ ಉಪಶ ಮನಕಾರಿ ಎಂಬಂತಿದೆ. ಸರಕಾರದ ಉಪಕ್ರಮಗಳು, ಖಾಸಗಿ ಪ್ರಯತ್ನಗಳ ಮೂಲಕ ಅರಣ್ಯ ಪ್ರದೇಶ ವಿಸ್ತರಣೆ ಮತ್ತು ಸಂರಕ್ಷಣೆಯ ಕಾರ್ಯ ಇನ್ನಷ್ಟು ತೀವ್ರವಾಗಿ ನಡೆಯಬೇಕಾಗಿರುವುದು ನಮಗೂ ನಮ್ಮ ಮುಂದಿನ ಪೀಳಿಗೆಗಳ ಉಳಿವಿಗೂ ಬಹಳ ಮುಖ್ಯ.
ದೇಶದ ಮಟ್ಟಿಗೆ ಈ ಬೆಳವಣಿಗೆ ಭರವಸೆಯ ಹೊಂಗಿರಣದಂತೆ ಕಂಡರೂ ಕರ್ನಾಟಕಕ್ಕೆ ಬಂದಾಗ ಇಲ್ಲಿ ಅರಣ್ಯ ವಿಸ್ತೀರ್ಣದಲ್ಲಿ ಕುಸಿತ ಕಂಡುಬಂದಿ ರುವುದು ನಿರಾಶೆ ಮೂಡಿಸಿದೆ. ಪಶ್ಚಿಮ ಘಟ್ಟದಂತಹ ವೈವಿಧ್ಯಮಯ ಸಸ್ಯ ಸಂಕುಲ, ಜೀವಸಂಕುಲದ ಅರಣ್ಯ ಪ್ರದೇಶ ಇಲ್ಲಿದ್ದರೂ ಇಲ್ಲಿ 459 ಚದರ ಕಿ.ಮೀ.ಗಳಷ್ಟು ಅರಣ್ಯ ಪ್ರದೇಶ ಕುಸಿತ ಆಗಿರುವುದು ಕಳವಳಕಾರಿ. ದೇಶ ದಲ್ಲಿಯೇ ಅರಣ್ಯ ಪ್ರದೇಶ ತಗ್ಗಿರುವ ರಾಜ್ಯಗಳ ಪೈಕಿ ಕರ್ನಾಟಕ ದ್ವಿತೀಯ ಸ್ಥಾನ ದಲ್ಲಿದೆ. ರಾಜ್ಯದಲ್ಲಿ ಬಿದಿರು ಬೆಳೆದಿರುವ ಪ್ರದೇಶದಲ್ಲಿಯೂ ಕುಸಿತ ಕಂಡು ಬಂದಿದೆ. ಆದರೆ ರಾಜ್ಯದ ರಕ್ಷಿತಾರಣ್ಯ ವ್ಯಾಪ್ತಿಯ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಳವಾಗಿದೆ.
ಪಶ್ಚಿಮ ಘಟ್ಟದಲ್ಲಿ ಔದ್ಯಮಿಕ, ವಾಣಿಜ್ಯ ಚಟುವಟಿಕೆಗಳಿಂದಾಗಿ ತೀವ್ರ ಪ್ರಮಾಣದಲ್ಲಿ ಕಾಡು ನಾಶ ಆಗುತ್ತಿದೆ ಎಂಬ ಕೂಗು ಇಂದು- ನಿನ್ನೆಯದ್ದಲ್ಲ. ಇದಕ್ಕೆ ಈ ವರದಿ ಪುಷ್ಟಿ ನೀಡಿದೆ. ಮಾಧವ ಗಾಡ್ಗಿàಳ್ ವರದಿ, ಕಸ್ತೂರಿ ರಂಗನ್ ವರದಿ ಜಾರಿಗೆ ಮೀನಮೇಷ ಎಣಿಸಲಾಗುತ್ತಿದ್ದು, ಕರ್ನಾಟಕದ ಮಟ್ಟಿಗೆ ಭಾರ ತೀಯ ಅರಣ್ಯ ಸ್ಥಿತಿಗತಿ ವರದಿ ನೀಡಿರುವ ಅಂಕಿಅಂಶಗಳು ಇಂತಹ ಕ್ರಮಗಳ ತುರ್ತು ಅಗತ್ಯವನ್ನು ಸಾರಿಹೇಳುತ್ತಿವೆ.
ಹೆಚ್ಚುತ್ತಿರುವ ಜನಸಂಖ್ಯೆಗೆ ವಸತಿ, ಮೂಲಸೌಕರ್ಯ ಇತ್ಯಾದಿಗಳು ಅಗ ತ್ಯವೇ. ಆದರೆ ದೀರ್ಘಕಾಲೀನ ಆರೋಗ್ಯ, ಜೀವನ, ಆಹಾರ ಭದ್ರತೆಯ ದೃಷ್ಟಿ ಯಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಅಗತ್ಯ ಹಗಲು ಬೆಳಕಿನಷ್ಟೇ ಸತ್ಯ. ಈ ಎರಡನ್ನೂ ಸಮತೋಲನದಿಂದ ಸಾಧಿಸಿಕೊಂಡು ಮುನ್ನಡೆಯಬೇಕಾದ ಅಗತ್ಯ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.