Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ
Team Udayavani, Nov 20, 2024, 6:00 AM IST
ರಾಜ್ಯದಲ್ಲಿ ಅದರಲ್ಲೂ ಮಲೆನಾಡು ಭಾಗದಲ್ಲಿ ನಕ್ಸಲ್ ಚಳವಳಿ ಮತ್ತೆ ಸಕ್ರಿಯಗೊಳ್ಳುತ್ತಿದೆ ಎಂಬ ಅನುಮಾನ, ಆತಂಕದ ನಡುವೆಯೇ ಸೋಮವಾರ ರಾತ್ರಿ ನಕ್ಸಲ್ ನಿಗ್ರಹ ಪಡೆಗೆ ನಕ್ಸಲರ ವಿರುದ್ಧದ ಹೋರಾಟದಲ್ಲಿ ಬಲು ದೊಡ್ಡ ಯಶ ಲಭಿಸಿದೆ.
ಕಳೆದೊಂದು ದಶಕದಿಂದೀಚೆಗೆ ರಾಜ್ಯದಲ್ಲಿ ನಕ್ಸಲ್ ಹೋರಾಟ ಮುನ್ನಡೆಸುತ್ತ ಬಂದಿದ್ದ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಎನ್‌ಕೌಂಟರ್ ನಡೆಸಿ ಹತ್ಯೆಗೈದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಚಿಗಿತುಕೊಳ್ಳುವ ಭೀತಿ ಮೂಡಿಸಿದ್ದ ನಕ್ಸಲ್‌ವಾದವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಕ್ಸಲ್ ನಾಯಕ ವಿಕ್ರಂ ಗೌಡನ ಹತ್ಯೆಯಿಂದ ರಾಜ್ಯದಲ್ಲಿ ನಕ್ಸಲ್ ಹೋರಾಟ ಬಹುತೇಕ ಅಂತ್ಯ ಕಂಡಿದೆ.
ಕಳೆದೆರಡು ವಾರಗಳಿಂದ ರಾಜ್ಯದ ಮಲೆನಾಡಿನ ನಿರ್ಜನ ಪ್ರದೇಶದಲ್ಲಿ ನಕ್ಸಲರು ಸುತ್ತಾಡುತ್ತಿದ್ದಾರೆ ಎಂಬ ವರದಿಗಳ ನಡುವೆ ಕೊಪ್ಪದಲ್ಲಿ ಮೂರ್‍ನಾಲ್ಕು ಮಂದಿಯನ್ನೊಳಗೊಂಡ ತಂಡ ಅರಣ್ಯ ತಪ್ಪಲಿನ ಒಂಟಿ ಮನೆಗೆ ಬಂದು ಅಡುಗೆ ಸಿದ್ಧಪಡಿಸಿ, ಊಟ ಮಾಡಿಕೊಂಡು ಹೋಗಿತ್ತು. ಇದಾದ ಬಳಿಕ ಚುರುಕುಗೊಂಡಿದ್ದ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್), 2-3 ದಶಕಗಳ ಹಿಂದೆ ರಾಜ್ಯದ ಮಲೆನಾಡು ಪ್ರದೇಶದಲ್ಲಿ ನಕ್ಸಲ್ ಹಾವಳಿಯಿಂದ ಬಾಧಿತ ವಾಗಿದ್ದ ಅರಣ್ಯದಂಚಿನ ಹಳ್ಳಿಗಳ ಮೇಲೆ ತೀವ್ರ ನಿಗಾ ಇರಿಸಿತ್ತು.
ಸೋಮವಾರ ಸಂಜೆ ವೇಳೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲಿನ ಅರಣ್ಯ ಪ್ರದೇಶದಲ್ಲಿ ವಿಕ್ರಂ ಗೌಡನನ್ನು ಒಳಗೊಂಡ ನಕ್ಸಲ್ ತಂಡ ಸುತ್ತಾಡುತ್ತಿರುವ ಬಗೆಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎನ್‌ಎನ್‌ಎಫ್ ತಂಡ ಕಾರ್ಯಾಚರಣೆಗೆ ಮುಂದಾದಾಗ ಆತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಎಎನ್‌ಎಫ್ ಸಿಬಂದಿ ಪ್ರತಿದಾಳಿ ನಡೆಸಿ ವಿಕ್ರಂ ಗೌಡನನ್ನು ಹತೈಗೈದಿದೆ. ಈ ವೇಳೆ ಆತನ ಜತೆಗಿದ್ದ ಇತರ ಮೂವರು ದಟ್ಟ ಅರಣ್ಯದಲ್ಲಿ ಪರಾರಿಯಾಗಿದ್ದು, ಇವರಿಗಾಗಿ ಎಎನ್‌ಎಫ್ ತಂಡ ಶೋಧ ನಡೆಸುತ್ತಿದೆ.
2000ನೇ ಇಸವಿಯ ಆರಂಭದಲ್ಲಿ ರಾಜ್ಯದ ಮಲೆನಾಡು ಪ್ರದೇಶದಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿತ್ತು. ದಶಕದ ಕಾಲ ನಕ್ಸಲ್ ಚಟುವಟಿಕೆಗಳು ಸಕ್ರಿಯ ವಾಗಿತ್ತಾದರೂ ಆ ಬಳಿಕ ಎಎನ್‌ಎಫ್ನ ಬಿಗಿ ಕಾರ್ಯಾಚರಣೆಯಿಂದ ಪ್ರಮುಖ ನಕ್ಸಲ್ ನಾಯಕರು ಸಾವನ್ನಪ್ಪಿದುದು, ನಕ್ಸಲರೊಂದಿಗೆ ಸರಕಾರದ ಸಂಧಾನ ಪ್ರಕ್ರಿಯೆ ಮತ್ತಿತರ ಕಾರಣಗಳಿಂದಾಗಿ ರಾಜ್ಯದಲ್ಲಿ ನಕ್ಸಲ್ ಚಟು ವಟಿಕೆ ಕ್ಷೀಣವಾಗಿತ್ತು. ಇದರ ಹೊರತಾಗಿಯೂ ಬೆರಳೆಣಿಕೆ ಸಂಖ್ಯೆಯಲ್ಲಿ ನಕ್ಸಲರು ರಾಜ್ಯದ ಅರಣ್ಯ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರಲ್ಲಿ ಆತಂಕ ಸೃಷ್ಟಿಸುತ್ತಲೇ ಬಂದಿದ್ದರು. ಈಗ ರಾಜ್ಯದಲ್ಲಿ ನಕ್ಸಲ್ ಹೋರಾಟವನ್ನು ಮುನ್ನಡೆಸುತ್ತಿದ್ದ ನಾಯಕ ವಿಕ್ರಂ ಗೌಡನನ್ನೇ ಎಎನ್‌ಎಫ್ ಎನ್‌ಕೌಂಟರ್ ನಡೆಸಿ ಹತ್ಯೆ ನಡೆಸಿರುವುದು ರಾಜ್ಯದಲ್ಲಿ ಮತ್ತೆ ಚಿಗುರೊಡೆಯುವ ಕನಸು ಕಾಣುತ್ತಿದ್ದ ನಕ್ಸಲವಾದಿಗಳಿಗೆ ತೀವ್ರ ಹಿನ್ನಡೆಯುಂಟು ಮಾಡಿದೆ. ಆದರೆ ಇಲ್ಲಿಗೆ ಎಎನ್‌ಎಫ್ ಮತ್ತು ಪೊಲೀಸರು ನಿಶ್ಚಿಂತರಾಗದೆ ರಾಜ್ಯದಲ್ಲಿ ನಕ್ಸಲೀಯರನ್ನು ಮೂಲೋತ್ಪಾಟನೆ ಮಾಡುವವರೆಗೆ ವಿರಮಿಸದೆ ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಬೇಕು.
ಇದೇ ವೇಳೆ ರಾಜ್ಯ ಸರಕಾರ ಕಾಡಂಚಿನ ಹಳ್ಳಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಣೆಯ ಜತೆಗೆ ಈ ಪ್ರದೇಶಗಳ ನಿವಾಸಿಗಳ ಸಮಸ್ಯೆ, ಅಹವಾಲುಗಳಿಗೆ ತುರ್ತಾಗಿ ಸ್ಪಂದಿಸಬೇಕು. ಕಸ್ತೂರಿ ರಂಗನ್ ವರದಿ ವಿಷಯದಲ್ಲಿ ಈಗ ರಾಜ್ಯದ ಮಲೆನಾಡು ಪ್ರದೇಶದಲ್ಲಿ ಎದ್ದಿರುವ ವಿವಾದವನ್ನು ಜನಹಿತದ ಜತೆಯಲ್ಲಿ ಮನುಕುಲದ ಭವಿಷ್ಯದತ್ತಲೂ ಚಿಂತನೆ ನಡೆಸಿ ಸಂತುಲಿತ ನಿರ್ಧಾರ ಕೈಗೊಳ್ಳಬೇಕು. ಈ ವಿಷಯದಲ್ಲಿ ಪಕ್ಷಗಳು ರಾಜಕೀಯವನ್ನು ಬದಿಗಿರಿಸಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲು ಸರಕಾರದೊಂದಿಗೆ ಕೈಜೋಡಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.