ಚುನಾವಣ ಹಬ್ಬವನ್ನು ಸಂಭ್ರಮಿಸೋಣ
Team Udayavani, Mar 11, 2019, 12:30 AM IST
ಪ್ರಜಾಪ್ರಭುತ್ವದ ಹಬ್ಬ ಎಂದು ಪರಿಗಣಿಸಲಾಗಿರುವ ಚುನಾವಣೆಗೆ ಚುನಾವಣಾ ಆಯೋಗ ಮುಹೂರ್ತ ನಿಗದಿಗೊಳಿಸಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಚುನಾವಣೆ ನಡೆಯುವ ರೀತಿಯೇ ಒಂದು ಸೊಗಸು.
ನೂರಾರು ಪಕ್ಷಗಳು, ಸಾವಿರಾರು ಅಭ್ಯರ್ಥಿಗಳು, ಕೋಟಿಗಟ್ಟಲೆ ಮತದಾರರು ಇವರನ್ನೆಲ್ಲ ಸರಿದೂಗಿಸಿಕೊಂಡು ಹೋಗುವ ಚುನಾವಣಾ ವ್ಯವಸ್ಥೆ ಇವೆಲ್ಲ ಒಂದು ಸೋಜಿಗದಂತೆ ಕಾಣಿಸುತ್ತದೆ. ಹೀಗಾಗಿಯೇ ಭಾರತದ ಚುನಾವಣೆ ಎನ್ನುವುದು ವಿದೇಶ ಗಳಿಗೂ ಕುತೂಹಲದ ವಿಷಯ. ಈ ದೇಶದ ಚುನಾವಣೆಯನ್ನು ಅಧ್ಯಯನ ಮಾಡಲೆಂದೇ ವಿದೇಶಗಳಿಂದ ಬರುವವರಿರುತ್ತಾರೆ. ಅಂತೆಯೇ ಚುನಾ ವಣೆಯ ವರದಿಗಾರಿಕೆಗೂ ವಿದೇಶಿ ಪತ್ರಕರ್ತರ ದಂಡೇ ಬರುತ್ತದೆ. ಇಂಥ ಒಂದು ಹಬ್ಬವನ್ನು ನಾವು ಅಪೂರ್ವ ರೀತಿಯಲ್ಲಿ, ನಿಜವಾದ ಅರ್ಥದಲ್ಲಿ ಹಬ್ಬವಾಗುವಂತೆ ಆರೋಗ್ಯಕರವಾಗಿ ನಡೆಸಬಹುದಿತ್ತು. ಆದರೆ ಇತ್ತೀಚೆಗಿನ ದಶಕಗಳಲ್ಲಿ ಚುನಾವಣೆ ರಣಕಣವಾಗಿ ಬದಲಾಗಿದೆ. ಚುನಾವಣೆ ಕಾಲದಲ್ಲಿ ಮಾಡುವ ಟೀಕೆ- ವಿರೋಧಗಳು ಸಭ್ಯತೆಯ ಎಲ್ಲೆ ಮೀರಿವೆ.
ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸಾರ್ವಜನಿಕ ಸೊತ್ತುಗಳನ್ನು ವಿರೂಪಗೊಳಿಸುವುದು, ಮತಗಟ್ಟೆ ವಶೀಕರಣ, ಹಿಂಸಾಚಾರ ಇತ್ಯಾದಿ ಅಪಸವ್ಯಗಳು ನಿಯಂತ್ರಣಕ್ಕೆ ಬಂದಿವೆ ಎನ್ನುವುದೊಂದು ಸಮಾಧಾನ ಕೊಡುವ ಅಂಶ. ಮತಯಂತ್ರಗಳ ಬಳಕೆ ಶುರುವಾದ ಬಳಿಕ ಮತದಾನ ನಡೆಯುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ ಹಾಗೂ ಮತ ಎಣಿಕೆಯೂ ಕ್ಷಿಪ್ರವಾಗಿ ನಡೆಯುತ್ತಿದೆ. ಅದೇ ರೀತಿ ಹಲವು ರೀತಿಯ ಚುನಾವಣಾ ಅಕ್ರಮ , ಅವ್ಯವಹಾರಗಳು ಮತಯಂತ್ರ ಬಂದ ಬಳಿಕ ನಿಂತಿವೆ. ಮತಯಂತ್ರಗಳ ಸಾಚಾತನವನ್ನು ದೃಢೀಕರಿಸುವ ಸಲುವಾಗಿ ವಿವಿಪ್ಯಾಟ್ ಎಂಬ ಇನ್ನೊಂದು ವ್ಯವಸ್ಥೆಯನ್ನೂ ಪ್ರಾರಂಭಿಸಲಾಗಿದೆ. ಇದು ಮತಯಂತ್ರವನ್ನು ತಿರುಚುವ ಅನುಮಾನವನ್ನು ದೂರ ಮಾಡಿದೆ. ಅದಾಗ್ಯೂ ವಿಪಕ್ಷಗಳು ಮತಯಂತ್ರಗಳನ್ನು ಶಂಕಿಸುತ್ತಿರುವುದು ಮಾತ್ರ ದುರದೃಷ್ಟಕರ. ಮತಯಂತ್ರಗಳ ಬದಲಾಗಿ ಹಳೆಯ ಮತಪತ್ರಗಳ ವ್ಯವಸ್ಥೆಯನ್ನೇ ಮರಳಿ ತರಬೇಕೆಂಬ ಪ್ರಯತ್ನವೂ ವಿಪಕ್ಷಗಳಿಂದ ನಡೆದಿತ್ತು.
ಈ ಬಾರಿ ಎ.11ರಿಂದ ತೊಡಗಿ ಮೇ 19ರ ತನಕ 7 ಹಂತಗಳಲ್ಲಿ ಮತದಾನ ನಡೆದು ಮೇ 23ರಂದು ಫಲಿತಾಂಶ ಘೋಷಣೆಯಾಗುತ್ತದೆ. ಅಂದರೆ ಒಟ್ಟು 38 ದಿನಗಳ ಪ್ರಕ್ರಿಯೆ ಇದು. ಚುನಾವಣೆ ಘೋಷಣೆಯಿಂದ ಹಿಡಿದು ಹೊಸ ಸರಕಾರ ಬರುವ ತನಕದ ಕಾಲಾವಧಿಯನ್ನು ಸೇರಿಸಿದರೆ ಹೆಚ್ಚು ಕಡಿಮೆ ಮೂರು ತಿಂಗಳು ಚುನಾವಣೆಗಾಗಿ ಮೀಸಲು. ಇಷ್ಟು ಕಾಲ ಇಡೀ ಆಡಳಿತ ಯಂತ್ರ ಮತ್ತು ಸರಕಾರಿ ವ್ಯವಸ್ಥೆಗಳೆಲ್ಲ ಚುನಾವಣೆ ಕೆಲಸದಲ್ಲಿರುತ್ತವೆ. ಜನರಿಗೂ ಚುನಾವಣೆಯದ್ದೇ ಗುಂಗು. ಇಷ್ಟು ದೀರ್ಘ ಅವಧಿಯಲ್ಲಿ ಚುನಾವಣೆ ನಡೆಯುವುದು ಭಾರತದಲ್ಲಿ ಮಾತ್ರ. ಜಗತ್ತಿನ ಹಲವು ಪ್ರಜಾಪ್ರಭುತ್ವ ದೇಶಗಳಲ್ಲಿ ಚುನಾವಣೆ ಬರೀ ಒಂದು ದಿನದ ಪ್ರಕ್ರಿಯೆ. ಈ ವಿಚಾರದಲ್ಲಿ ಉಳಿದ ದೇಶಗಳಿಂದ ನಾವು ಬಹಳ ಹಿಂದೆ ಇದ್ದೇವೆ. ಅಮೆರಿಕದಲ್ಲಿ ಮತದಾನ ಮುಗಿದ ಕೂಡಲೇ ಮತ ಎಣಿಕೆ ಶುರುವಾಗುತ್ತದೆ. ವೆಸ್ಟ್‌ಕೋಸ್ಟ್ ಸ್ಟೇಟ್ಸ್‌ನ ಮತದಾನ ಮುಕ್ತಾಯವಾಗುವ ಮೊದಲೇ ಈಸ್‌ಕೋಸ್ಟ್ ಸ್ಟೇಟ್ಸ್‌ನಲ್ಲಿ ಮತ ಎಣಿಕೆ ಪ್ರಾರಂಭವಾಗಿರುತ್ತದೆ. ನಾವು ಮಾತ್ರ ಮತದಾನ ಪ್ರಕ್ರಿಯೆಲ್ಲ ಮುಗಿದು ಮತ ಎಣಿಕೆಗಾಗಿ ಮತ್ತೆ ಮೂರ್‍ನಾಲ್ಕು ದಿನ ಕಾಯಬೇಕು.
ಡಿಜಿಟಲ್ ಯುಗದಲ್ಲೂ ಚುನಾವಣಾ ಪ್ರಕ್ರಿಯೆಗೆ ಇಷ್ಟು ದೀರ್ಘ ಕಾಲ ತೆಗೆದುಕೊಳ್ಳುವ ಅಗತ್ಯವಿದೆಯೇ ಎನ್ನುವುದು ಚರ್ಚಾರ್ಹ ವಿಚಾರ. ನಮ್ಮಲ್ಲಿ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನೂ ಹಂತ ಹಂತವಾಗಿ ನಡೆಸುವಂಥ ಪರಿಸ್ಥಿತಿಯಿದೆ. ಉತ್ತರ ಪ್ರದೇಶ, ಬಿಹಾರದಂಥ ದೊಡ್ಡ ರಾಜ್ಯಗಳಲ್ಲಿ 6-7 ಹಂತಗಳಲ್ಲಿ ಚುನಾವಣೆ ನಡೆದ ನಿದರ್ಶನಗಳು ಇವೆ. ಮತ ಪೆಟ್ಟಿಗೆಗಳ ರವಾನೆ, ಭದ್ರತಾ ಸಿಬಂದಿಗಳ ಪ್ರಯಾಣ, ಚುನಾವಣಾ ಅಧಿಕಾರಿಗಳು ಮತ್ತು ಸಿಬಂದಿಗಳ ಪ್ರಯಾಣ ಎಂದೆಲ್ಲ ಇಲ್ಲಿ ಬಹಳ ಕಾಲ ವ್ಯಯವಾಗುತ್ತದೆ.ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿನ ಮುಂಚೂಣಿ ರಾಷ್ಟ್ರವಾಗಿದ್ದರೂ ಡಿಜಿಟಲ್ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವದ ಪ್ರಕ್ರಿಯೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ನಾವಿನ್ನೂ ಬಹಳ ಹಿಂದೆ ಇದ್ದೇವೆ.
ಚುನಾವಣಾ ಪ್ರಕ್ರಿಯೆ ದೀರ್ಘವಾದೂr ಅಕ್ರಮಗಳು ಹೆಚ್ಚಾಗುತ್ತವೆ. ಎಷ್ಟೇ ಕಟ್ಟುನಿಟ್ಟಿನ ನಿಯಮಗಳಿದ್ದರೂ ರಂಗೋಲಿ ಕೆಳಗೆ ತೂರುವ ಕಲೆಯನ್ನು ರಾಜಕೀಯ ನಾಯಕರು ಕರಗತ ಮಾಡಿಕೊಂಡಿರುತ್ತಾರೆ. ಇದರ ಹೊರತಾಗಿಯೂ ಈ ಸಲ ಚುನಾವಣಾ ಆಯೋಗ ಅಕ್ರಮಗಳನ್ನು ತಡೆಯುವ ಸಲುವಾಗಿ ಆ್ಯಪ್ ಮೂಲಕ ದೂರು ಸಲ್ಲಿಸುವಂಥ ಹೊಸ ಉಪಕ್ರಮಗಳನ್ನು ಮಾಡಿದೆ. ನಿಷ್ಪಕ್ಷ ಚುನಾವಣೆ ನಡೆದರೆ ಮಾತ್ರ ಪ್ರಜಾಪ್ರಭುತ್ವದ ಸತ್ವಯುತವೂ ಬಲಿಷ್ಠವೂ ಆಗಿರುತ್ತದೆ. ಹಾಗಾಗಲು ಎಲ್ಲ ರಾಜಕೀಯ ಪಕ್ಷಗಳ ಜತೆಗೆ ಜನರ ಸಹಕಾರವೂ ಅಗತ್ಯ. ಎಲ್ಲರೂ ಸೇರಿ ಈ ಹಬ್ಬವನ್ನು ಸಂಭ್ರಮಿಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.