ಬಿಕ್ಕಟ್ಟಿನಲ್ಲಿ ಅಸರ್ಮಪಕ ನಿರ್ಧಾರ ನಿಯಮಾವಳಿ ರಚನೆಯಾಗಲಿ 


Team Udayavani, May 21, 2018, 4:17 PM IST

niyamavali.jpg

ಕಳೆದೊಂದು ವಾರದಿಂದ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿದ್ದ ಕರ್ನಾಟಕದ ರಾಜಕೀಯ ಅತಂತ್ರತೆ ಸದ್ಯಕ್ಕೆ ಕೊನೆಗೊಂಡಿದೆ. ಬಹುಮತವಿಲ್ಲದೆ ಸರಕಾರ ರಚಿಸಲು ಮಾಡಿದ ಪ್ರಯತ್ನದಲ್ಲಿ ಬಿಜೆಪಿ ಸೋತಿದೆ. ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿರುವ ಕಾಂಗ್ರೆಸ್‌ ಮತ್ತು ಮೂರನೇ ಸ್ಥಾನಿಯಾಗಿರುವ ಜೆಡಿಎಸ್‌ ಸೇರಿಕೊಂಡು ಸರಕಾರ ರಚಿಸುವುದು ಖಚಿತವಾಗಿದೆ. ರಾಜಕೀಯ ಲೆಕ್ಕಾಚಾರದ ಪ್ರಕಾರ ಅಧಿಕಾರದ ಹಗ್ಗಜಗ್ಗಾಟದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೆ ಗೆಲುವಾಗಿರಬಹುದು ಮತ್ತು ಬಿಜೆಪಿಗೆ ಸೋಲಾಗಿರಬಹುದು. ಆದರೆ ಇಲ್ಲಿ ನಿಜವಾಗಿ ಸೋತಿರುವುದು ರಾಜ್ಯಪಾಲರು. ದೇಶದ ರಾಜಕೀಯ ಇತಿಹಾಸದಲ್ಲಿ ಕರ್ನಾಟಕದ ಈ ವಿಪ್ಲವ ಒಂದು ಉಲ್ಲೇಖನೀಯ ವಿಚಾರವಾಗಿ ಉಳಿಯಲಿದೆ. ಅಂತೆಯೇ, ಇದೇ ರೀತಿಯ ಅತಂತ್ರ ಸ್ಥಿತಿ ಇತರ ರಾಜ್ಯಗಳಲ್ಲಿ ಮುಂದೊಂದು ದಿನ ಸೃಷ್ಟಿಯಾದಾಗ ರಾಜ್ಯಪಾಲರು ಹೇಗೆ ನಡೆದುಕೊಳ್ಳಬೇಕೆಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. 

ಬಿಜೆಪಿ 104, ಕಾಂಗ್ರೆಸ್‌ 78, ಜೆಡಿಎಸ್‌ 38 ಮತ್ತು ಇತರರು 2 ಸ್ಥಾನಗಳನ್ನು ಗೆದ್ದ ಸಂದರ್ಭದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಬಿಜೆಪಿ ಅಧಿಕಾರಕ್ಕೆ ಹಕ್ಕು ಮಂಡಿಸುವುದು ಸ್ವಾಭಾವಿಕವಾಗಿತ್ತು. ಆದರೆ ಅತಿ ದೊಡ್ಡ ಪಕ್ಷವನ್ನೇ ಸರಕಾರ ರಚಿಸಲು ಆಹ್ವಾನಿಸಬೇಕೆಂಬುದು ಕಡ್ಡಾಯವಲ್ಲ ಎನ್ನುವುದಕ್ಕೆ ಬಿಜೆಪಿಯೇ ಗೋವಾ, ಬಿಹಾರ, ಮೇಘಾಲಯ, ಮಣಿಪುರ ರಾಜ್ಯಗಳಲ್ಲಿ ಕಳೆದ ವರ್ಷ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಬಿಜೆಪಿಯ ಇದೇ ಆಟವನ್ನು ಈ ಸಲ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆಡಿದಾಗ ರಾಜ್ಯಪಾಲರು ಈ ಆಟವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫ‌ಲರಾದರು. ಅದರಲ್ಲೂ ಬಿಜೆಪಿಗೆ ವಿಶ್ವಾಸಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ ಅವರ ಉದ್ದೇಶ ಶಂಕಾಸ್ಪದವಾಯಿತು. ವಿಶ್ವಾಸಮತ ಯಾಚನೆ ಅವಧಿಯನ್ನು ಸರ್ವೋಚ್ಚ ನ್ಯಾಯಾಲಯ 15ರಿಂದ 2 ದಿನಕ್ಕಿಳಿಸಿದಾಗ ರಾಜ್ಯಪಾಲರ ನಿರ್ಧಾರ ಪ್ರಾಮಾಣಿಕವಾಗಿಲ್ಲ ಎನ್ನುವುದು ಸ್ಪಷ್ಟವಾಯಿತು. 

ರಾಜ್ಯಪಾಲ ವಜೂಭಾಯಿ ವಾಲಾ ಅವರ ವಿವಾದಗ್ರಸ್ತ ನಿರ್ಧಾರವೀಗ ಪ್ರಜಾತಂತ್ರದಲ್ಲಿ ರಾಜ್ಯಪಾಲರ ಪಾತ್ರದ ಕುರಿತು ಮತ್ತೂಮ್ಮೆ ಚರ್ಚೆಯನ್ನು ಹುಟ್ಟು ಹಾಕಿದೆ. ಸಂವಿಧಾನ ಕರ್ತರು ಒಕ್ಕೂಟ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವ ಸಲುವಾಗಿ ರಾಜ್ಯಪಾಲ ಹುದ್ದೆಯನ್ನು ಹುಟ್ಟು ಹಾಕಿದ್ದರು. ಸಂವಿಧಾನದಲ್ಲಿ ರಾಜ್ಯಪಾಲರ ಅಧಿಕಾರಕ್ಕೆ ನಿರ್ದಿಷ್ಟ ವ್ಯಾಖ್ಯಾನಗಳು ಇಲ್ಲದಿರುವುದೇ ಈಗ ಈ ಹುದ್ದೆಯ ಘನತೆ ಕಡಿಮೆ ಯಾಗುತ್ತಿರುವುದಕ್ಕೆ ಕಾರಣ. ಸಮಾಜದ ಶ್ರೇಷ್ಠ ವ್ಯಕ್ತಿಗಳು ರಾಜ್ಯಪಾಲರಾಗಿ ಆಯ್ಕೆಯಾಗಬೇಕೆನ್ನುವುದು ಸಂವಿಧಾನದ ಮೂಲ ಆಶಯವಾಗಿದ್ದರೂ ಪ್ರಸ್ತುತ ಚುನಾವಣೆಯಲ್ಲಿ ಸೋತವರು, ರಾಜಕೀಯದಿಂದ ನಿವೃತ್ತಿ ಹೊಂದಿದವರು, ರಾಜಕೀಯ ಹುದ್ದೆ ಸಿಗದೆ ಅತೃಪ್ತರಾದವರು ರಾಜ್ಯಪಾಲರಾಗಿ ಆಯ್ಕೆಯಾಗುತ್ತಿದ್ದಾರೆ. ರಾಜಭವನಗಳು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆದ ಹಿರಿಯ ರಾಜಕಾರಣಿಗಳ ವಿಶ್ರಾಂತಿ ತಾಣವಾಗಿ ಬದಲಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಹಿತ ರಕ್ಷಣೆಯೇ ರಾಜ್ಯಪಾಲರ ಮುಖ್ಯ ಕರ್ತವ್ಯವಾಗಿದೆ. ಹಿತ ರಕ್ಷಣೆ ಕಾಯುವ ಸಂದರ್ಭದಲ್ಲಿ ಕಾನೂನು ಹಾಗೂ ಸಂವಿಧಾನಾತ್ಮಕ ನಡೆಗಳ ಮಧ್ಯದ ಲೋಪವನ್ನು ರಾಜ್ಯಪಾಲರು ಬಳಸಿಕೊಂಡ ಉದಾಹರಣೆಗಳೂ ಇವೆ.

ರಾಜ್ಯಪಾಲ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಯಾವ ಪಕ್ಷವೂ ಹಿಂದುಳಿದಿಲ್ಲ. ಸುದೀರ್ಘ‌ ಕಾಲ ದೇಶವಾಳಿರುವ ಕಾಂಗ್ರೆಸ್‌ ಪಕ್ಷವೇ ರಾಜಭವನವನ್ನು ತನ್ನ ಇಚ್ಚೆಗೆ ತಕ್ಕಂತೆ ಕುಣಿಸುವ ಪರಂಪರೆಗೆ ನಾಂದಿ ಹಾಕಿಕೊಟ್ಟಿರುವುದು. 1951ರಿಂದ 2016ರ ನಡುವೆ ವಿವಿಧ ರಾಜ್ಯಪಾಲರನ್ನು ಉಪಯೋಗಿಸಿ ಏನಾದರೊಂದು ನೆಪ ಹೇಳಿ 115 ಸಲ ಚುನಾಯಿತ ಸರಕಾರಗಳನ್ನು ವಜಾಗೊಳಿಸಲಾಗಿದೆ. 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದ ಬಳಿಕ 12 ರಾಜ್ಯ ಸರಕಾರಗಳನ್ನು 356ನೇ ಪರಿಚ್ಛೇದ ಉಪಯೋಗಿಸಿ ವಜಾಗೊಳಿಸಲಾಗಿದೆ. 1980ರಲ್ಲಿ ಕಾಂಗ್ರೆಸ್‌ ಗೆದ್ದಾಗ 9 ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು ಎಂಬ ಅಂಕಿಅಂಶವೇ ರಾಜ್ಯಪಾಲ ಹುದ್ದೆ ಯಾವ ರೀತಿ ದುರುಪಯೋಗವಾಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ. 

ರಾಜಕೀಯ ಹಿತಾಸಕ್ತಿ ಹೊಂದಿರುವ ರಾಜ್ಯಪಾಲರಿಂದ ಒಕ್ಕೂಟ ವ್ಯವಸ್ಥೆಗೆ ಮತ್ತು ಪ್ರಜಾತಂತ್ರಕ್ಕೆ ಅಪಾಯವಿರುವುದರಿಂದ ಯಾರು ರಾಜ್ಯಪಾಲರಾಗಬಹುದು ಎನ್ನುವುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡಲು ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಅಗತ್ಯವಿದೆ. ನಿವೃತ್ತ, ಅತೃಪ್ತ ರಾಜಕಾರಣಿಗಳನ್ನು ರಾಜ್ಯಪಾಲರಾಗಿ ನೇಮಿಸುವ ಪರಂಪರೆ ಕೊನೆಯಾಗಬೇಕು. ಅಂತೆಯೇ ಈಗಾಗಲೇ ವಿವಿಧ ರಾಜ್ಯಗಳಲ್ಲಿ ಎದುರಾಗಿರುವ ಅತಂತ್ರ ಪರಿಸ್ಥಿತಿಯಂತಹ ಬಿಕ್ಕಟ್ಟಿನ ಸಂದರ್ಭ ಮುಂದಿನ ದಿನಗಳಲ್ಲಿ ಎದುರಾದಾಗ ರಾಜ್ಯಪಾಲರು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದಕ್ಕೆ ಸ್ಪಷ್ಟವಾದ ನಿಯಮಾವಳಿ ರಚಿಸಲು ಕರ್ನಾಟಕದ ರಾಜಕೀಯ ಬೆಳವಣಿಗೆ ಕಾರಣವಾಗಲಿ.

ಟಾಪ್ ನ್ಯೂಸ್

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

HDK

Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

HDK

Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.