ಚರ್ಚೆ ನಡೆಯಲಿ,ಕದನ ಬೇಡ 


Team Udayavani, Nov 13, 2017, 10:23 AM IST

258.jpg

ಬೆಳಗಾವಿಯಲ್ಲಿ ಸೋಮವಾರದಿಂದ ತೊಡಗಿ ಹತ್ತು ದಿನಗಳ ಪರ್ಯಂತ ನಡೆಯಲಿರುವ ಚಳಿಗಾಲ ಅಧಿವೇಶನ ಯಾವ ರೀತಿ ಇರಬಹುದು ಎನ್ನುವುದರ ಒಂದು ಅಂದಾಜು ಈಗಾಗಲೇ ಸಿಕ್ಕಿದೆ. ಎಲ್ಲ ಅಧಿವೇಶನಗಳಂತೆ ಈ ಅಧಿವೇಶನವೂ ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಕದನಕ್ಕೆ ವೇದಿಕೆಯಾಗುವ ಸಾಧ್ಯತೆಯೇ ಹೆಚ್ಚು. ಇತ್ತೀಚೆಗಿನ ವರ್ಷಗಳಲ್ಲಿ ಅಧಿವೇಶನಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವ ಪರಂಪರೆಯೇ ಕಣ್ಮರೆಯಾಗಿದೆ. ಸರಕಾರವನ್ನು ವಿಪಕ್ಷದವರು ದೂರುವುದು ಮತ್ತು ಸರಕಾರ ಅದಕ್ಕೆ ತಿರುಗೇಟು ನೀಡುವುದು ಇಷ್ಟಕ್ಕೆ ಸೀಮಿತಗೊಂಡಿರುವ ಅಧಿವೇಶನದಲ್ಲಿ ಕೆಲವೊಂದು ಮಸೂದೆಗಳು ಅಂಗೀಕಾರಗೊಂಡರೆ 

ಅದೇ ಸಾಧನೆ ಎಂಬ ಪರಿಸ್ಥಿತಿಯಿದೆ. ಇದು ಬರೀ ಕರ್ನಾಟಕ ಎಂದು ಮಾತ್ರವಲ್ಲ ಯಾವುದೇ ರಾಜ್ಯದ ಮತ್ತು ಸಂಸತ್ತಿನ ಇಂದಿನ ಅಧಿವೇಶನದ ಸ್ವರೂಪ. ವಿದ್ವತ್‌ ಭರಿತವಾದ ಚರ್ಚೆಗಳನ್ನು ಈಗಿನ ಜನಪ್ರತಿನಿಧಿಗಳಿಂದ ನಿರೀಕ್ಷಿಸುವುದು ಮೂರ್ಖತನವಾದೀತು. ಜನಪ್ರತಿನಿಧಿಗಳು ಸದನದ ಹೊರಗೆ ಮಾಡುವ ಆರೋಪಗಳನ್ನೇ ಸದನದ ಒಳಗೂ ಮಾಡುತ್ತಾರೆ. ಯಾರಿಗೂ ಜನರಿಗೆ ಉಪಯೋಗವಾಗುವಂತಹ ವಿಷಯಗಳ ಮೇಲೆ ಚರ್ಚೆ ನಡೆಸಬೇಕೆಂಬ ಕಾಳಜಿ ಇಲ್ಲ. ಒಟ್ಟಾರೆಯಾಗಿ ಪರಸ್ಪರರ ಕಾಲೆಳೆದು ಬೀಳಿಸಿ ಗೆದ್ದೆವು ಎಂದು ಬೀಗುವುದರಲ್ಲೇ ತೃಪ್ತಿ. ಹೀಗಾಗಿ ಅಧಿವೇಶನ ಎಂದರೆ ಮಾತಿನ ಚಕಮಕಿ, ಸಭಾಧ್ಯಧ್ಯಕ್ಷರ ಪೀಠದೆದುರು ಜಮಾಯಿಸಿ ಘೋಷಣೆಗಳನ್ನು ಕೂಗುವುದು ಮತ್ತು ಕಡೆಗೆ ಸಭಾತ್ಯಾಗ ಮಾಡುವುದು ಇಷ್ಟೇ ಆಗಿದೆ.

ಬೆಳಗಾವಿ ಅಧಿವೇಶನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಈ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆಸುತ್ತಿರುವ ಚಳಿಗಾಲದ 

ಕೊನೆಯ ಅಧಿವೇಶನ ಎನ್ನುವ ಕಾರಣಕ್ಕೆ ಮಾತ್ರವಲ್ಲದೆ ಇನ್ನೂ ಹಲವು ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ. ಮೌಡ್ಯ ನಿಷೇಧ ಕಾಯಿದೆ, ಬಡ್ತಿ ಮೀಸಲಿಗೆ ಸಂಬಂಧಪಟ್ಟಿರುವ ಸುಗ್ರೀವಾಜ್ಞೆ ಬದಲಿಗೆ ವಿಧೇಯಕ, ಪ್ರಾಣಿ ಹಿಂಸೆ ತಡೆ ಮಸೂದೆ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಮಂಡನೆಯಾಗ ಲಿವೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿಯಿರು ವುದರಿಂದ ಈ ಪೈಕಿ ಕೆಲವು ಮಸೂದೆಗಳನ್ನಾದರೂ ಅಂಗೀಕರಿಸಿಕೊಂಡು ಶಾಸನ ರೂಪದಲ್ಲಿ ಜಾರಿಗೆ ತರಲು ಸರಕಾರ ಪ್ರಯತ್ನಿಸಲಿದೆ. ಆದರೆ ಈ ಪೈಕಿ ಮೌಡ್ಯ ನಿಷೇಧ ಮತ್ತು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಮಸೂದೆ ಈಗಾಗಲೇ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ಇಂತಹ ಮಹತ್ವದ ಮಸೂದೆಗಳ ಕುರಿತು ಗಹನವಾದ ಚರ್ಚೆಯಾಗುವುದು ಅಗತ್ಯ. ಇನ್ನುಳಿದಂತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ, ಬಿಜೆಪಿ ಸರಕಾರದ ಅವಧಿಯಲ್ಲಾಗಿರುವ ವಿದ್ಯುತ್‌ ಖರೀದಿ ಹಗರಣದ ಮೇಲಿನ ಸದನ ಸಮಿತಿ ವರದಿ, ತೀವ್ರ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಆಚರಣೆ, ಬೇಲೆಕೇರಿ ಕಬ್ಬಿಣ ರಫ್ತು ಹಗರಣದ ಎಸ್‌ಐಟಿ ತನಿಖೆ ಸೇರಿದಂತೆ ಹಲವು ವಿವಾದಾತ್ಮಕ ವಿಷಯಗಳಿವೆ.
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಿದ ಬಳಿಕ ಸಚಿವ ಜಾರ್ಜ್‌ ವಿರುದ್ಧ ಎಫ್ಐಆರ್‌ ದಾಖಲಾಗಿರುವುದು ಈ ಅಧಿವೇಶನದಲ್ಲಿ ಸರಕಾರ ಮತ್ತು ವಿಪಕ್ಷಗಳ ನಡುವೆ ದೊಡ್ಡ ಮಟ್ಟದಲ್ಲಿ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಜಾರ್ಜ್‌ ರಾಜೀನಾಮೆಗೆ ಒತ್ತಾಯಿಸುವುದೇ ತನ್ನ ಪ್ರಮುಖ ಅಜೆಂಡಾ ಎಂದು ಬಿಜೆಪಿ ಈಗಾಗಲೇ ಸ್ಪಷ್ಟಪಡಿಸಿದೆ. ಇದೇ ವೇಳೆ ಯಾವ ಕಾರಣಕ್ಕೂ ಜಾರ್ಜ್‌ ರಾಜೀನಾಮೆ ನೀಡುವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಮೊದಲ ದಿನವೇ ಈ ವಿಷಯ ಸದನದಲ್ಲಿ ಕಿಡಿಯೆಬ್ಬಿಸಿದರೂ ಆಶ್ಚರ್ಯವಿಲ್ಲ. ಸದ್ಯಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಇದು ಪ್ರತಿಷ್ಠೆಯ ವಿಷಯ. ಗದ್ದಲ ಇಡೀ ಅದಿವೇಶನವನ್ನೇ ಆಪೋಶನ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಮೂರೂ ಪಕ್ಷಗಳು ಅಧಿವೇಶನದಲ್ಲಿ ಪರಸ್ಪರರ ಮೇಲೆ ದಾಳಿ ಮಾಡಲು ಹತ್ತಾರು ಶಸ್ತ್ರಗಳನ್ನು ಸಜ್ಜಾಗಿಟ್ಟುಕೊಂಡಿವೆ. ಈ ಪೈಕಿ ಹೆಚ್ಚಿನವುಗಳು ಪರಸ್ಪರರ ಮೇಲಿರುವ ಆರೋಪಗಳು ಮತ್ತು ಹಗರಣಗಳು ಮಾತ್ರ. ರಾಜ್ಯದ ಸಮಸ್ಯೆ ಮತ್ತು ಅಭಿವೃದ್ಧಿಗೆ  ಸಂಬಂಧಿಸಿದ ವಿಚಾರಗಳಿಗೆ ಯಾರೂ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎನ್ನುವುದು ವಿಷಾದನೀಯ.

ಅಧಿವೇಶನಕ್ಕೆ ಹಾಜರಾಗಲು ಜನಪ್ರತಿನಿಧಿಗಳಿಗೆ ವಿಶೇಷವಾದ ಆಸಕ್ತಿ ಇಲ್ಲ ಎನ್ನುವುದು ಕಳೆದ ನಾಲ್ಕು  ವರ್ಷಗಳ ಅಂಕಿಅಂಶಗಳಿಂದ ತಿಳಿಯು ತ್ತದೆ. 2013ರಿಂದೀಚೆಗೆ ಬರೀ ಮೂವರು ಶಾಸಕರು ಮಾತ್ರ ಅಧಿವೇಶನದಲ್ಲಿ ಶೇ. 100 ಹಾಜರಾತಿ ಹೊಂದಿದ್ದಾರೆ. ಅಧಿವೇಶನಗಳಿಗೆ ಶಾಸಕರ ಹಾಜರಾತಿ ಯನ್ನು ಹೆಚ್ಚಿಸಲು ಉಭಯ ಸದನಗಳ ಸಭಾಪತಿಗಳು ಹಲವು ಕ್ರಮಗಳು ಕೈಗೊಂಡಿದ್ದರೂ ಫ‌ಲಿತಾಂಶ ಮಾತ್ರ ಆಶಾದಾಯಕವಾಗಿಲ್ಲ. ಬೆಳಗ್ಗೆ ಮತ್ತು ಸಂಜೆ ಹಾಜರಿ ಪುಸ್ತಕಕ್ಕೆ ಸಹಿ ಹಾಕುವುದನ್ನು ಕಡ್ಡಾಯಗೊಳಿಸಿದರೂ ಹಜರಾತಿ ಸುಧಾರಣೆಯಾಗಿಲ್ಲ. ಕಡ್ಡಾಯ ಹಾಜರಾತಿಗೆ ಕಾನೂನು ರಚಿಸಲು ಅವಕಾಶವಿಲ್ಲ. ಆದರೆ ಎಲ್ಲ ಪಕ್ಷಗಳು ತಮ್ಮ ಶಾಸಕರು ಅಧಿವೇಶನದಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಬಹುದು. ಸದನದಲ್ಲಿ ಕದನ ಬೇಡ ಚರ್ಚೆಯಾಗಲಿ ಎನ್ನುವುದು ಜನತೆಯ ಬಯಕೆ. ಜನಪ್ರತಿನಿಧಿಗಳಿಗೆ ಇದು ಅರ್ಥವಾದೀತೆ?

ಟಾಪ್ ನ್ಯೂಸ್

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.