ಲಸಿಕೆಯ ಸುತ್ತಮುತ್ತ ಪ್ರಯತ್ನ ಫ‌ಲಿಸಲಿ


Team Udayavani, Jul 17, 2020, 8:10 AM IST

ಲಸಿಕೆಯ ಸುತ್ತಮುತ್ತ ಪ್ರಯತ್ನ ಫ‌ಲಿಸಲಿ

ಕೋವಿಡ್ ಹಾವಳಿ ನಿಲ್ಲುವ ಸೂಚನೆಯಂತೂ ಸಿಗುತ್ತಿಲ್ಲ. ಭಾರತದಲ್ಲಂತೂ ನಿತ್ಯ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿರುವುದು, ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ. ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿರುವ ಭಾರ ತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3.35 ಲಕ್ಷದಷ್ಟಿದೆ. ಇನ್ನೊಂದೆಡೆ ಅಮೆರಿಕ ದಲ್ಲಂತೂ ತಿಂಗಳುಗಳು ಕಳೆದರೂ ಸೋಂಕಿನ ವೇಗ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಈಗಾಗಲೇ ಆ ದೇಶದಲ್ಲಿ 1 ಲಕ್ಷ 40 ಸಾವಿರಕ್ಕೂ ಅಧಿಕ ಜನ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಎರಡನೇ ಹಾಟ್‌ಸ್ಪಾಟ್‌ ಬ್ರೆಜಿಲ್‌ನಲ್ಲೂ ಪರಿಸ್ಥಿತಿ ವಿಷಮಿಸು ತ್ತಲೇ ಇದೆ. ಇನ್ನು ಈ ಹಿಂದೆ ಕೋವಿಡ್ ಮುಕ್ತವೆಂದು ಕರೆದುಕೊಂಡಿದ್ದ ರಾಷ್ಟ್ರಗಳಲ್ಲೂ ವೈರಸ್‌ ಮತ್ತೆ ಹರಡಲು ಆರಂಭಿಸಿದೆ.

ಈ ಕಾರಣಕ್ಕಾಗಿಯೇ, ಈ ರೋಗವನ್ನು ಬೇರುಮಟ್ಟದಲ್ಲಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಅನೇಕ ರಾಷ್ಟ್ರಗಳು ಮುನ್ನಡೆಯುತ್ತಿವೆ. ಕೋವಿಡ್‌ ವಿರುದ್ಧದ ಲಸಿಕೆ ಅಭಿವೃದ್ಧಿಗಾಗಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಗಲುರಾತ್ರಿ ಪ್ರಯೋಗಗಳು ನಡೆದಿವೆ. ಗಮನಾರ್ಹ ಸಂಗತಿ ಎಂದರೆ, ಭಾರತದಲ್ಲೂ ದೇಶೀಯ ವಾಗಿ ಅಭಿವೃದ್ಧಿಪಡಿಸಲಾದ ಲಸಿಕೆಯ ಮಾನವ ಕ್ಲಿನಿಕಲ್‌ ಪ್ರಯೋಗ ನಡೆದಿದೆ ಎನ್ನುವುದು. ಇದು ಯಶಸ್ವಿಯಾಗಲಿ ಎಂಬ ನಿರೀಕ್ಷೆ ದೇಶವಾಸಿಗಳದ್ದಾಗಿದೆ.

ಇಲ್ಲಿ ಹೇಳಲೇಬೇಕಾದ ಸಂಗತಿಯೆಂದರೆ ಭಾರತ ಕೋವಿಡ್‌ ವಿರುದ್ಧದ ಲಸಿಕೆಯ ಸಂಶೋಧನೆಯಲ್ಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲೂ ಮಹತ್ತರ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿ ರುವುದು. ಇಂದು ಜಗತ್ತಿನ 70 ಪ್ರತಿಶತ ಲಸಿಕೆಗಳು (ವಿವಿಧ ರೋಗಗಳಿಗಾಗಿ) ಭಾರತದಿಂದಲೇ ರಫ್ತಾಗಿರುವುವು. ಈ ಕಾರಣಕ್ಕಾಗಿಯೇ ಭಾರತವೆಂದಷ್ಟೇ ಅಲ್ಲ, ಕೊರೊನಾ ವಿರುದ್ಧ ಲಸಿಕೆ ಕಂಡುಹಿಡಿಯುವಲ್ಲಿ ಅನ್ಯ ದೇಶಗಳು ಸಫ‌ಲವಾ ದರೂ ತ್ವರಿತ ಹಾಗೂ ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಜಗತ್ತು ಭಾರತವನ್ನು ಅವಲಂಬಿಸಬಹುದು. ಈಗಾಗಲೇ ಕೋವಿಡ್‌ ವಿರುದ್ಧ ಲಸಿಕೆ ಸಂಶೋಧಿಸುತ್ತಿರುವ ವಿದೇಶಗಳ ಸಂಶೋಧನ ಸಂಸ್ಥೆಗಳು ಸಹ ಉತ್ಪಾದನೆಯ ವಿಚಾರದಲ್ಲಿ ಭಾರತದ ಕಂಪೆನಿಗಳೊಂದಿಗೆ ಒಪ್ಪಂದಗಳನ್ನೂ ಮಾಡಿಕೊಂಡಿವೆ.

ಈ ವಿಚಾರವಾಗಿ ಕೆಲವು ತಿಂಗಳುಗಳ ಹಿಂದೆ ಇಂಟರ್‌ ನ್ಯಾಶನಲ್‌ ವ್ಯಾಕ್ಸಿನ್‌ ಇನ್‌ಸ್ಟಿ ಟ್ಯೂಟ್‌ನ ನಿರ್ದೇಶಕ, ಪ್ರಖ್ಯಾತ ವಿಜ್ಞಾನಿ ಡಾ| ಜಿರೋಮ್‌ ಕಿಮ್‌ ಭಾರತವು ಕೋವಿಡ್‌ ವಿರುದ್ಧದ ವ್ಯಾಕ್ಸಿನ್‌ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಹೇಳಿದ್ದರು. ಈಗ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್‌ ಗೇಟ್ಸ್‌ ಸಹ ಇದೇ ಧಾಟಿಯಲ್ಲೇ ಮಾತನಾಡಿದ್ದಾರೆ.

ಭಾರತದ ಫಾರ್ಮಾ ಕಂಪೆನಿಗಳು ಈಗಾಗಲೇ ಇಡೀ ಜಗತ್ತಿಗೆ ಔಷಧಗಳನ್ನು ಪೂರೈಸುತ್ತಿವೆ. ಮುಂದಿನ ದಿನಗಳಲ್ಲಿ ಭಾರತದ ಫಾರ್ಮಾ ಉದ್ಯಮಗಳು ಜಗತ್ತಿಗೆ ಲಸಿಕೆಗಳನ್ನು ಪೂರೈಸುವ (ಕೋವಿಡ್‌ ವಿರುದ್ಧದ) ಆಶಾಭಾವನೆ ಇದೆ ಎಂದಿದ್ದಾರೆ ಗೇಟ್ಸ್‌. ಒಟ್ಟಿನಲ್ಲಿ ದೇಶ ಮತ್ತು ಜಗತ್ತು ಈ ಕೊರೊನಾ ವೈರಸ್‌ನಿಂದ ಆದಷ್ಟು ಬೇಗ ಮುಕ್ತವಾಗಲಿ, ಸಂಶೋಧನ ಕ್ಷೇತ್ರದ ಪ್ರಯತ್ನಗಳು ಸಫ‌ಲವಾಗಲಿ ಎಂದು ಆಶಿಸೋಣ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.