ಮೌಡ್ಯರಹಿತ ಹೊಸವರ್ಷಕ್ಕೆ ಸಂಕಲ್ಪ


Team Udayavani, Jan 1, 2017, 3:45 AM IST

31-ANAKAN-3.jpg

ಕೇವಲ ಮೌಡ್ಯಚರಣೆಯನ್ನು ಕಾನೂನುಗಳಿಂದ ತಡೆಯಲು ಸಾಧ್ಯವೆ? ಮೌಡ್ಯಕ್ಕೆ ಧಾರ್ಮಿಕ ವಿಚಾರ ಸೇರ್ಪಡೆಯಾಗುತ್ತಿರುವುದರಿಂದಲೇ ಇದನ್ನು ಪೂರ್ಣವಾಗಿ ನಿಯಂತ್ರಿಸಲು ಆಗುತ್ತಿಲ್ಲ. ಬದಲಾಗಿ ಜನರೇ ಗಟ್ಟಿ ನಿರ್ಧಾರ ಮಾಡಿದರೆ ಕಾನೂನಿನ ಅವಶ್ಯಕತೆಯಿಲ್ಲದೆಯೂ ಇದಕ್ಕೆ ತಿಲಾಂಜಲಿ ಬಿಡಬಹುದು. ಹೊಸ ವರ್ಷದಲ್ಲಿ ಅದು ಈಡೇರಲಿ. 

ಗತ್ತು ವೈಜ್ಞಾನಿಕತೆಯತ್ತ ಚಿತ್ತ ಹರಿಸಿ, ದೇಶವು ಆಧುನೀಕರಣದ ಬೆನ್ನು ಹತ್ತಿರುವಾಗಲೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಮೌಢಾಚರಣೆಗಳು ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಜಾತ್ರಾ ಮಹೋತ್ಸವಗಳಲ್ಲಿ ಸಾಮಾಜಿಕ ಕಂಟಕಗಳಾದ ಪ್ರಾಣಿಬಲಿ, ದೇವರಿಗೆ ಅರೆಬೆತ್ತಲೆ ಸೇವೆ ಸಲ್ಲಿಸುವುದು, ಚಿಕ್ಕ ಮಕ್ಕಳನ್ನು ರಥದ ಮೇಲಿಂದ ಎಸೆಯುವುದು,ದೇವರ ಹೆಸರಿನಲ್ಲಿ ಕೂದಲು ಬೀಡುವುದು ಹೀಗೆ ಹಲವಾರು ವಿಧಗಳ ಮೌಡ್ಯವನ್ನು ಬಿತ್ತುವಂತಹ ಆಚರಣೆಗಳು ಕಾನೂನಿನ ಕಣ್ಣು ತಪ್ಪಿಸಿ ನಡೆಯುತ್ತಲೇ ಇವೆ. 

ಇನ್ನೆಷ್ಟು ಜಾಗೃತಿ ಮೂಡಿಸಬೇಕು?
ಸರ್ಕಾರ ಜನರಲ್ಲಿ ತಿಳಿವಳಿಕೆ ಮೂಡಿಸಲು ಬೀದಿನಾಟಕಗಳಂತಹ ಕ್ರಮ ಕೈಗೊಂಡರೂ ಸಹ ಕೆಲ ನಾಗರಿಕರು ಅದನ್ನು ಧಿಕ್ಕರಿಸಿ ಸರಾಗವಾಗಿ ಮೌಢಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮೌಢಾಚರಣೆಯ ವಿರೋಧಿಗಳಿಗೆ ಬೇಸರ ಸಂಗತಿ. ಜಿÇÉೆಯ ಹಲವಾರು ಜಾತ್ರಾ ಮಹೋತ್ಸವಗಳಲ್ಲಿ ಅದರಲ್ಲೂ ದೇವಿ ಉತ್ಸವಗಳಲ್ಲಿ ಈ ಆಚರಣೆಗಳು ಹೆಚ್ಚು. ಪ್ರಸ್ತುತ ಎಳ್ಳಮಾವಾಸ್ಯೆಯಲ್ಲಿ ಅಥಣಿ ತಾಲೂಕಿನ ಕೊಕಟನೂರಿನ ಎಲ್ಲಮ್ಮವಾಡಿಯ ಶ್ರೀ ರೇಣುಕಾ ಯಲ್ಲಮ್ಮದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ತಾಲೂಕು ಆಡಳಿತ ಮೌಡ್ಯ ಆಚರಣೆಗಳ ವಿರುದ್ಧ ಜನರಲ್ಲಿ ಜಾಗೃತಿ ಜಾಥಾ, ಬೀದಿನಾಟಕಗಳು ಹೀಗೆ ಹಲವು ಕ್ರಮ ಕೈಗೊಂಡಿದ್ದರೂ ಕೂಡ ಜಾತ್ರೆಯಲ್ಲಿ ಬೇವಿನಸೊಪ್ಪಿನ ಅರೆಬೆತ್ತಲೆ ಸೇವೆ, ಪ್ರಾಣಿ ಬಲಿಯಂತಹ ಸಾಮಾಜಿಕ ಅಹಿತಕರ ಮೌಢಾಚರಣೆಗಳು ನಿರಂತರವಾಗಿ ನಡೆಯುತ್ತಿವೆ. ಇದು ಆಡಳಿತದ ವೈಫ‌ಲ್ಯವೋ? ಮೌಡ್ಯದ ಪರವಾಗಿರುವವರು ಆಡಳಿತದ ವಿರುದ್ಧ ಸಾರಿದ ಸಮರವೋ? ಅಥವಾ ಮೌಢಾಚರಣೆಯಲ್ಲಿರುವವರ ಅನರಕ್ಷತೆಯೋ ಎಂಬುದು ಬುದ್ಧಿಜೀವಿಗಳ ಯಕ್ಷ ಪ್ರಶ್ನೆಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಜಗತ್ತು ವೈಜ್ಞಾನಿಕ ತಳಹದಿಯಲ್ಲಿ ಮುಂದುವರೆಯುತ್ತಿರುವಾಗ ಸುಶಿಕ್ಷಿತ ಸಮಾಜವು ತಮ್ಮ ಅಕ್ಕ-ಪಕ್ಕದ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಆದರೆ ವಿಚಿತ್ರ ಎಂದರೆ ಕೆಲವು ಸುಶಿಕ್ಷಿತರೇ ಇಂತಹ ಪ್ರಾಣಿಬಲಿಯಂತಹ ಮೌಢಾಚರಣೆಯ ಹೀನಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇದರ ಬಗ್ಗೆ ಯುವಜನತೆ ಎಚ್ಚೆತ್ತುಕೊಳ್ಳಬೇಕು. ರಾಜ್ಯಾದ್ಯಂತ ಹೀಗೆ ಹಲವಾರು ಜಾತ್ರೆಗಳಲ್ಲಿ ಮೌಢಾಚರಣೆಗಳು ಕಾನೂನನ್ನು ಧಿಕ್ಕರಿಸಿ ನಡೆಯುತ್ತಿರುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಕಾನೂನಿನ ವೈಫ‌ಲ್ಯವನ್ನು ಎತ್ತಿ ತೋರಿಸುತ್ತದೆ. ನಾಗರಿಕರ ಪ್ರಾಚೀನ ಆಚರಣೆಗಳ ಪದ್ಧತಿಯಿಂದ ಅವರ ವೈಜ್ಞಾನಿಕ, ಸಾಮಾಜಿಕ ಕಳಕಳಿಯ ಬದ್ಧತೆಯನ್ನು ಈ ಘಟನೆಗಳಿಂದ ಗುರುತಿಸಬಹುದು. ಇದು ಇನ್ನೂ ರಾಜ್ಯದಲ್ಲಿ ಮೌಢಾಚರಣೆಗಳು ಅಸ್ತಿತ್ವದಲ್ಲಿವೆ ಎಂದು ಹೇಳಲು ಇರುವ ಒಂದು ಚಿಕ್ಕ ನಿದರ್ಶನ ಅಷ್ಟೆ. ಇಂತಹ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಮೌಢಾಚಾರಣೆ ರಾಜ್ಯದ ಸುಶಿಕ್ಷಿತ ಜಿಲ್ಲೆಗಳ ಹಲವಾರು ದೇವಾಲಯಗಳಲ್ಲಿ ನಡೆಯುತ್ತಿವೆ.
ಬರೀ ಪೌರುಷದ ಹೇಳಿಕೆ ರಾಜ್ಯದ ರಾಜಧಾನಿ ವಿಶ್ವದಲ್ಲಿಯೇ ವಿಜ್ಞಾನ ಕ್ರೇತ್ರ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ವೈಜ್ಞಾನಿಕತೆಯು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ತನ್ನನ್ನು ತಾನು ವ್ಯಾಪಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ವಿಜ್ಞಾನದ ವೈಜ್ಞಾನಿಕ ಮನೋಭಾವನೆಯ ಕಟ್ಟಾ ವಿರೋಧಿಯಾದ ಮೌಢಾಚರಣೆಯು ರಾಜ್ಯದಾದ್ಯಂತ ಪ್ರಬಲವಾಗಿ ಆಚರಣೆಯಲ್ಲಿರುವುದು ವಿಶ್ವದ ವೈಜ್ಞಾನಿಕ ಮೋಭಾವನೆಯ ಬುದ್ಧಿಜೀವಿಗಳಿಗೆ ಸವಾಲು ಹಾಕಿದಂತಾಗುತ್ತದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಕೆಲವು ಘಟನೆಗಳನ್ನು ಅವಲೋಕಿಸಿದಾಗ ಹಲವು ಜಿಲ್ಲೆಗಳಲ್ಲಿ ಮೌಢಾಚರಣೆಯ ಪ್ರಕರಣಗಳು ಬಹಿರಂಗವಾಗಿಯೇ ಪತ್ತೆಯಾಗುತ್ತಿವೆ. ರಾಜ್ಯ ಸರ್ಕಾರ ಬರೀ ಕಾಯಿದೆ ತರುತ್ತೇನೆ ಎಂದು ಹೇಳುತ್ತಲೇ ಬಂದಿದೆಯೇ ವಿನಃ ಯಾವುದೇ ಗಟ್ಟಿ ನಿರ್ಧಾರವನ್ನು ಇಲ್ಲಿಯವರೆಗೆ ಮಾಡಿಲ್ಲ. ಯಾವುದಾದರೂ ಕಹಿ ಘಟನೆ ನಡೆದಾಗ ಮಾತ್ರ ಸರ್ಕಾರಕ್ಕೆ ಇದು ಗೊತ್ತಾಗುತ್ತದೆ. ಆಗ ಸರ್ಕಾರದ ಕಾನೂನು ಸಚಿವರು ಸೇರಿದಂತೆ ಮುಖ್ಯಮಂತ್ರಿಗಳು ಇದರ ಬಗ್ಗೆ ಸರ್ಕಾರ ಗಂಭೀರ ಕ್ರಮ ಕ್ರಮ ಕೈಗೊಳ್ಳಲಿದೆ ಎಂದು ಪೌರುಷದ ಹೇಳಿಕೆ ಕೊಡುತ್ತಾ ಬಂದಿರುವುದನ್ನು ಜನ ನೋಡಿಕೊಂಡೇ ಬಂದಿದ್ದಾರೆ.

ಎಲ್ಲದಕ್ಕೂ ಕಾನೂನು ಬೇಕಾ? 
ನಿಜ, ಸರ್ಕಾರವೇ ಎಲ್ಲದಕ್ಕೂ ಕಾನೂನು ಮಾಡಬೇಕೆ ಎಂಬ ಪ್ರಶ್ನೆಯೂ ಇಲ್ಲಿ ಬಹಳ ಮುಖ್ಯ. ಎಲ್ಲವನ್ನೂ ಕಾನೂನಿಂದ ಮಾಡಲು ಸಾಧ್ಯವೇ? ಜನರೇ ಒಟ್ಟಾಗಿ ಸೇರಿಕೊಂಡು ಇಂತಹ ಸಾಮಾಜಿಕ ಪಿಡುಗುಗಳನ್ನು ತೊಲಗಿಸಲು ಗಟ್ಟಿತನ ತೋರಬೇಕಲ್ಲವೇ? ಈ ನಿಟ್ಟಿನಲ್ಲಿ ಸರ್ಕಾರ ಕಾನೂನು ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಈಗಾಗಲೇ ಸರ್ಕಾರದ ಕೆಲವು ಹಿರಿಯ ಅಧಿಕಾರಿಗಳು ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿನ ಸರ್ಕಾರಗಳು ಮೌಡ್ಯವನ್ನು ತಡೆಯಲು ಯಾವ ಕ್ರಮ ಕೈಗೊಂಡಿದೆ ಮತ್ತು ಯಾವ ರೀತಿ ಜಾರಿಗೆ ತಂದಿವೆ ಎಂದು ಅಧ್ಯಯನ ಮಾಡಿದ್ದಾರೆ ಎಂಬುದನ್ನು ಕಾನೂನು ಸಚಿವರು ಬಹಿರಂಗ ಮಾಡಿದ್ದಾರೆ. ಒಂದೆರಡು ಬಾರಿ ಸಚಿವ ಸಂಪುಟ ಸಭೆಯಲ್ಲೂ ಇದರ ಬಗ್ಗೆ ಅನೌಪಚಾರಿಕವಾಗಿ ಚರ್ಚೆಯಾಗಿದೆ. ಈಗ ನಿಜವಾಗಿ ಆಗಬೇಕಿರುವುದು ಏನು ಎಂದರೆ ಕೇವಲ ಸರ್ಕಾರ ಕಾನೂನು ಮಾಡಿದರೆ ಎಲ್ಲವೂ ನಾಳೆ ಬೆಳಿಗ್ಗೆ ಸರಿಹೋಗಿಬಿಡುವುದಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು. ಜನರೇ ಯಾವುದನ್ನು ಹೇಗೆ ಮಾಡಬೇಕು ಎಂದು ಯೋಚಿಸಿದರೆ ಪರಿಹಾರ ಸುಲಭವಾಗಲಿದೆ. ಇಲ್ಲಿ ಗಮನಿಸಬೇಕಿರುವುದು ಮೌಡ್ಯದ ಜೊತೆಗೆ ಧಾರ್ಮಿಕ ವಿಚಾರ. ಅನಗತ್ಯವಾಗಿ ದೇವರ ವಿಚಾರವನ್ನು ಜನರ ತಲೆಯಲ್ಲಿ ಸೇರಿಸಿ ಅವರು ಹಿಂದಕ್ಕೂ ಮುಂದಕ್ಕೂ ಹೋಗದಂತೆ ಕಟ್ಟಿ ಹಾಕುವವರು ಬಹಳ ಜನರಿದ್ದಾರೆ. ಅವರ ಮಾತು ಕೇಳದೆ ಇದ್ದರೆ ಮುಂದೆ ಏನೋ ನಡೆಯಬಾರದ ಗಂಡಾಂತರ ಕಾದಿದೆ ಎಂದು ಜನರನ್ನು ಹೆದರಿಸಲಾಗುತ್ತದೆ. ಆಗ ಜನರು ಕಾನೂನು ಮುರಿದರೂ ಚಿಂತೆ ಇಲ್ಲ, ಹಿರಿಯರು ಹೇಳಿದ ಹಾಗೆ ಕೇಳ್ಳೋಣ ಎಂದು ಮುಂದಾಗುತ್ತಾರೆ. ಇಲ್ಲಿ ಸರ್ಕಾರ, ಪೊಲೀಸರು, ಅಧಿಕಾರಿಗಳು ಚಾಟಿ ಹಿಡಿದು ನಿಂತು ಜನರನ್ನು ತಡೆಯುವುದಕ್ಕಿಂತ ಜನರೇ ಹೀಗೆ ಮಾಡುವುದು ಸರಿಯೇ ಎಂದು ಯೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ. ತಮ್ಮನ್ನು ಪ್ರಚೋದನೆ ಮಾಡುವ ಜನರಿಗೆ ಜನರೇ ಬುದ್ಧಿವಾದ ಹೇಳುವ ಮನೋಭಾವನೆಯನ್ನು ಬೆಳೆಸಿಕೊಂಡರೆ ಯಾವುದೇ ಕಾನೂನು ಬೀರದೆ ಇರುವಷ್ಟು ಪರಿಣಾಮವನ್ನು ಅದು ಬೀರುತ್ತದೆ. ಜೊತೆಗೆ ಕಾನೂನಿನ ಅವಶ್ಯಕತೆಯಿಲ್ಲದೆಯೂ ಸಮಾಜದಲ್ಲಿ ಬಹಳ ಕಾಲದಿಂದ ಬೇರು ಬಿಟ್ಟು ತಾಂಡವವಾಡುತ್ತಿರುವ ಮೌಡ್ಯಗಳನ್ನು ಜನರೇ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. 

ಬೀರಪ್ಪ ಡಿ. ಡಂಬಳಿ, ಅಥಣಿ
 

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.