ಅಫ್ಘಾನಿಸ್ಥಾನದಲ್ಲಿ ಆದಷ್ಟು ಬೇಗನೇ ಶಾಂತಿ ನೆಲೆಸಲಿ
Team Udayavani, Aug 18, 2021, 6:00 AM IST
ಎಲ್ಲವೂ ನಾಟಕೀಯವೆಂಬಂತೆ ಕಳೆದ 10 ದಿನಗಳಲ್ಲೇ ಇಡೀ ಅಫ್ಘಾನಿಸ್ಥಾನ ದೇಶ ತಾಲಿಬಾನಿಗರ ಕಪಿಮುಷ್ಠಿಗೆ ಸಿಲುಕಿದೆ. ಅತ್ತ ಅಮೆರಿಕ ಸೇನೆ ಅಫ್ಘಾನಿಸ್ಥಾನದಿಂದ ಹೊರಹೋಗುವ ನಿರ್ಧಾರ ಮಾಡುತ್ತಿದ್ದಂತೆ, ತಮ್ಮ ಬಾಹುಗಳನ್ನು ಇನ್ನಷ್ಟು ವಿಸ್ತಾರ ಮಾಡಿಕೊಂಡ ತಾಲಿಬಾನ್ ಉಗ್ರರು, 10 ದಿನಗಳಲ್ಲಿ ಅಫ್ಘಾನಿಸ್ಥಾನದ ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಸಾಗಿ ಕಡೆಗೆ ಕಾಬೂಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈಗಷ್ಟೇ ಅಫ್ಘಾನಿಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗರು, ಕೊಂಚ ಬದಲಾಗಿದ್ದೇವೆ ಎಂದು ತೋರಿಸಲು ಯತ್ನಿಸುತ್ತಿ ದ್ದಾರೆ. ಹಿಂದೆ ಇದ್ದಂತೆ ಈಗ ನಾವಿಲ್ಲ. ಬದಲಾಗಿದ್ದೇವೆ, ಮಹಿಳೆಯರನ್ನು ಸಂತ್ರಸ್ತರ ರೀತಿ ನೋಡುವುದಿಲ್ಲ. ಅವರಿಗೂ ನಮ್ಮ ಸರಕಾರದಲ್ಲಿ ಸ್ಥಾನ ಕೊಡುತ್ತೇವೆ ಎಂಬ ರೀತಿಯ ಮಾತುಗಳನ್ನಾಡಿದ್ದಾರೆ. ಆದರೆ ತಮ್ಮ ಮಾತಿಗೆ ಎಷ್ಟು ಬದ್ಧರಾಗುತ್ತಾರೆ ಎನ್ನುವುದರ ಮೇಲೆ ಮುಂದಿನ ಎಲ್ಲ ಬೆಳವಣಿಗೆಗಳು ನಿಂತಿವೆ. ತಾಲಿಬಾನ್ನರ ಹುಟ್ಟು ಮತ್ತು ಅವರ ಈವರೆಗಿನ ನಡವಳಿಕೆಯನ್ನು ನೋಡಿದರೆ ಸಹಜವಾಗಿಯೇ ಇಂಥದ್ದೊಂದು ಆತಂಕ, ಭೀತಿ ವ್ಯಕ್ತವಾಗುತ್ತದೆ.
ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ತಾಲಿಬಾನ್ ಸರಕಾರದ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಚೀನ, ಪಾಕಿಸ್ಥಾನ, ರಷ್ಯಾ, ಟರ್ಕಿ ದೇಶಗಳು ತಾಲಿಬಾನ್ ನೇತೃತ್ವದ ಸರಕಾರದ ಜತೆ ಕೆಲಸ ಮಾಡುವ ಇರಾದೆಯನ್ನೂ ವ್ಯಕ್ತಪಡಿಸಿವೆ. ಹಿಂದಿನ ಘನಿ ಸರಕಾರಕ್ಕಿಂತ ತಾಲಿಬಾನ್ ಆಡಳಿತವೇ ಉತ್ತಮ ಎಂಬರ್ಥದ ಹೇಳಿಕೆ ನೀಡುವ ಮೂಲಕ ರಷ್ಯಾ ದೇಶ, ಅಮೆರಿಕದ ವಿರುದ್ಧದ ನಿಲುವನ್ನು ಖಚಿತಪಡಿಸಿದೆ. ಮುಂದಿನ ದಿನಗಳಲ್ಲಿ ಅಮೆರಿಕ ಸಾಮ್ರಾಜ್ಯಶಾಹಿ ವಿರುದ್ಧ ಈ ದೇಶಗಳು ಒಂದಾಗುವ ಲಕ್ಷಣವನ್ನು ಅಫ್ಘಾನಿಸ್ಥಾನದ ಬೆಳವಣಿಗೆಗಳು ಸ್ಪಷ್ಟಪಡಿಸುತ್ತಿವೆ. ಹಾಗೆಯೇ ಉಳಿದ ದೇಶಗಳೂ ಈ ರೀತಿಯೇ ಅಫ್ಘಾನಿಸ್ಥಾನದ ತಾಲಿಬಾನ್ ಸರಕಾರದ ಜತೆ ಕೆಲಸ ಮಾಡಬೇಕಾದ ಪ್ರಮೇಯ ಬಂದರೂ ಬರಬಹುದು.
ಇದರ ನಡುವೆಯೇ, ಈ ಹಿಂದೆ ಅಫ್ಘಾನಿಸ್ಥಾನದ ಜತೆಗೆ ಮಧುರ ಬಾಂಧವ್ಯ ಇಟ್ಟುಕೊಂಡಿದ್ದ ಭಾರತ ಈಗ ಅತ್ಯಂತ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. ಪಾಕಿಸ್ಥಾನ ಮತ್ತು ಚೀನ ಜತೆಗೂಡಿ ತಾಲಿಬಾನಿಗೆ ಬೆಂಬಲ ನೀಡಿರುವ ಈ ಸಂದರ್ಭದಲ್ಲಿ ಭಾರತ ತನ್ನ ಭೌಗೋಳಿಕ ರಣತಾಂತ್ರಿಕ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಫ್ಘಾನ್ನರಿಗೆ ಇ-ವೀಸಾ ಪ್ರಕಟಿಸುವ ಮೂಲಕ ಭಾರತ ಮೊದಲ ರಾಜತಾಂತ್ರಿಕ ಹೆಜ್ಜೆಯನ್ನು ಇಟ್ಟಿದೆ.
ಇಡೀ ಜಗತ್ತಿನ ಆಶಯವೊಂದೇ. ಯಾವುದೇ ಕಾರಣಕ್ಕೂ ಅಫ್ಘಾನಿಸ್ಥಾನದಲ್ಲಿ ಮತ್ತೆ ರಕ್ತ ಹರಿಯಬಾರದು. ತಾಲಿಬಾನ್ ಉಗ್ರರು ತಮ್ಮ ಹಿಂಸಾತ್ಮಕ ಮಾರ್ಗ ಬಿಡಬೇಕು. ಈ ರೀತಿ ಬಾಳುತ್ತಾರೆಯೇ ಎಂಬುದನ್ನು ಕಾದು ನೋಡುವುದಷ್ಟೇ ಜಗತ್ತಿನ ಕೆಲಸವಾಗಿದೆ. ಅಫ್ಘಾನಿಸ್ಥಾನ ಮತಾಂಧ ಶಕ್ತಿಗಳ ಕಪಿಮುಷ್ಟಿಯಿಂದ ಹೊರಬಂದು ಇತರೆ ಪ್ರಜಾಸತ್ತಾತ್ಮಕ ರಾಷ್ಟ್ರಗಳ ದಾರಿ ಹಿಡಿದರೆ ಮಾತ್ರ ಅದನ್ನು ನಂಬಬಹುದು.
ಆದರೆ ಇದು ತಾಲಿಬಾನ್ ಜೈಶ್ ಎ ಮೊಹಮ್ಮದ್, ಅಲ್ ಕಾಯಿದಾ, ಐಸಿಸ್ ಸೇರಿದಂತೆ ಇತರ ಉಗ್ರ ಸಂಘಟನೆಗಳ ಜತೆ ಹೇಗೆ ವ್ಯವಹರಿಸಲಿದೆ ಎಂಬುದರ ಮೇಲೆ ನಿಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.