Winter session: ವರ್ಷದ ಕೊನೆಯ ಸಂಸತ್ ಅಧಿವೇಶನ ಫಲಪ್ರದವಾಗಲಿ
Team Udayavani, Nov 26, 2024, 6:00 AM IST
ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭಗೊಂಡಿದೆ. ಡಿಸೆಂಬರ್ 20ರ ವರೆಗೆ ಅಂದರೆ ಸುಮಾರು ನಾಲ್ಕು ವಾರಗಳ ಕಾಲ ಕಲಾಪಗಳು ನಡೆಯಲಿದ್ದು, ದೇಶದ ದೃಷ್ಟಿ ಸಂಸತ್ ಭವನದತ್ತ ನೆಟ್ಟಿದೆ. ಇದು ಈ ವರ್ಷದ ಕೊನೆಯ ಅಧಿವೇಶನ, ಹಾಗೆಯೇ ಮೋದಿ 3 ಸರಕಾರಕ್ಕೆ ತೃತೀಯ ಅಧಿವೇಶನ.
ಸಂಸತ್ತಿನ ಅಧಿವೇಶನದಲ್ಲಿ ಫಲಪ್ರದವಾದ ಚರ್ಚೆಗಳು ನಡೆದು, ಸರಕಾರ ಮಂಡಿಸುವ ಮಸೂದೆಗಳು ಸರಕಾರ-ವಿಪಕ್ಷಗಳ ಕ್ರಿಯಾಶೀಲ ಸಂವಾದದಿಂದ ಪರಿಷ್ಕೃತ ರೂಪ ಪಡೆದು ಅಂಗೀಕಾರಗೊಂಡು ದೇಶದ ಪ್ರಗತಿ, ಅಭಿವೃದ್ಧಿಗೆ ಚೈತನ್ಯವಾಗಬೇಕು ಎಂಬುದು ಸದಾಶಯ. ಸರಕಾರ-ವಿಪಕ್ಷಗಳ ನಡುವೆ ರಾಜಕೀಯ ಮೇಲಾಟ, ಭಿನ್ನಾಭಿಪ್ರಾಯಗಳು ಸಹಜ, ಇರಬೇಕಾದದ್ದೇ. ಆದರೆ ರಾಷ್ಟ್ರಹಿತದ ದೃಷ್ಟಿಯನ್ನು ಇರಿಸಿಕೊಂಡು ಈ ಬಾರಿಯ ಚಳಿಗಾಲದ ಅಧಿವೇಶನ ಸಾಂಗವಾಗಿ ಮತ್ತು ಫಲಪ್ರದವಾಗಿ ನಡೆಯುವಂತೆ ಆಡಳಿತ ಮತ್ತು ವಿಪಕ್ಷಗಳು ಪ್ರಯತ್ನಿಸಬೇಕು.
ದೇಶದ ಗಮನ ಸೆಳೆದ ಮಹಾರಾಷ್ಟ್ರ ಮತ್ತು ಝಾರ್ಖಂಡ್ ವಿಧಾನಸಭಾ ಚುನಾವಣೆಗಳ ಬಳಿಕ ನಡೆಯುತ್ತಿರುವ ಸಂಸತ್ತಿನ ಈ ಚಳಿಗಾಲದ ಅಧಿವೇಶನ ಹಲವು ಕಾರಣಗಳಿಂದ ಮಹತ್ವ ಹೊಂದಿದೆ.
ಈ ವೇಳೆ ಒಂದು ದೇಶ-ಒಂದು ಚುನಾವಣೆ, ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ, ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾನಿಲಯ ಮಸೂದೆಯಂತಹ ಹಲವು ಪ್ರಮುಖ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳಲು ಸರಕಾರ ಸಿದ್ಧವಾಗಿದೆ. ಇದೇ ಹೊತ್ತಿಗೆ ಕೆಲವೇ ದಿನಗಳ ಹಿಂದೆಯಷ್ಟೇ ಅಮೆರಿಕದ ನ್ಯಾಯಾಲಯವೊಂದು ಭಾರತಿàಯ ಉದ್ಯಮಿ ಗೌತಮ್ ಅದಾನಿಯವರ ಮೇಲೆ ಹೊರಿಸಿರುವ ದೋಷಾರೋಪ, ಮಣಿಪುರದಲ್ಲಿ ಮತ್ತೆ ಗಲಭೆ, ಉದ್ವಿಗ್ನತೆ ಹೆಚ್ಚಳದಂತಹ ವಿಷಯಗಳು ವಿಪಕ್ಷಗಳಿಗೆ ಅಧಿವೇಶನದಲ್ಲಿ ಸರಕಾರವನ್ನು ಕಟ್ಟಿಹಾಕಲು ಸಿಕ್ಕಿರುವ ಅಸ್ತ್ರಗಳಾಗಿವೆ.
ಅಧಿವೇಶನ ಆರಂಭಕ್ಕೆ ಮುನ್ನ ನಡೆದಿರುವ ಸರ್ವಪಕ್ಷಗಳ ಸಭೆಯಲ್ಲಿ ವಿಪಕ್ಷಗಳು ಈ ವಿಷಯಗಳ ಬಗ್ಗೆ ಚರ್ಚೆ ನಡೆಯಲೇ ಬೇಕು ಎಂದು ಪಟ್ಟು ಹಿಡಿದಿವೆ. ಇದಕ್ಕೆ ಉತ್ತರವಾಗಿ, ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಸಿದ್ಧ, ಆದರೆ ವಿಷಯಗಳನ್ನು ಎರಡೂ ಸದನಗಳ ಕಲಾಪ ಸಲಹಾ ಸಮಿತಿಯು ನಿರ್ಧರಿಸಲಿದೆ ಎಂದು ಸರಕಾರ ಹೇಳಿದೆ.
ಯಾವುದೇ ಅಧಿವೇಶನ ಆರಂಭಕ್ಕೆ ಮುನ್ನ ಹೀಗೆ ಸರ್ವಪಕ್ಷಗಳ ಸಭೆ ನಡೆಯುವುದು, ಅಲ್ಲಿ ಕಲಾಪ ಸುಗಮವಾಗಿ ನಡೆಯಲು ಸಹಕರಿಸುವಂತೆ ವಿಪಕ್ಷಗಳನ್ನು ಸರಕಾರ ಕೋರಿಕೊಳ್ಳುವುದು, ವಿಪಕ್ಷಗಳು ಅದಕ್ಕೆ ಒಪ್ಪಿಕೊಳ್ಳುವುದು ಒಂದು ರೂಢಿಯಂತೆ ನಡೆಯುತ್ತಿದೆ. ಆದರೆ ವಾಸ್ತವವಾಗಿ ಕಲಾಪದ ವೇಳೆ ನಡೆಯುವುದೇ ಬೇರೆ. ವಿಪಕ್ಷಗಳು ಕಲಾಪ ಭಂಗವನ್ನೇ ಉದ್ದೇಶವಾಗಿಟ್ಟುಕೊಂಡಂತೆ ವರ್ತಿಸುವುದು, ಸರಕಾರ ವಿಪಕ್ಷಗಳ ಕೂಗು ಕೇಳಿಯೇ ಇಲ್ಲವೆಂಬಂತೆ ಮಸೂದೆಗಳನ್ನು ಅಂಗೀಕರಿಸಿಕೊಂಡು ಮುನ್ನಡೆಯುವುದು ಎಲ್ಲ ಅಧಿವೇಶನಗಳಲ್ಲಿಯೂ ಕಂಡುಬರುವ ಸಾಮಾನ್ಯ ವಿದ್ಯಮಾನ. ಇದಕ್ಕೆ ಪೂರಕವಾಗಿ ಅಧಿವೇಶನದ ಮೊದಲ ದಿನವೇ ಮುಂದಿನ ಕಲಾಪಗಳು ಹೇಗೆ ನಡೆಯಬಹುದು ಎಂಬ ಮುನ್ಸೂಚನೆಯೂ ಲಭಿಸಿದೆ.
ಇದು ದೇಶದ, ಪ್ರಜಾಪ್ರಭುತ್ವದ ದೃಷ್ಟಿಯಿಂದ ಆಗಬಾರದು. ಈ ಬಾರಿ ಯಾದರೂ ವಿಪಕ್ಷಗಳು ಮತ್ತು ಸರಕಾರ ಅಮೂಲ್ಯ ಕಲಾಪದ ಸಮಯ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು. ಚಳಿಗಾಲದ ಅಧಿವೇಶನದ ಕಲಾಪವು ಗದ್ದಲದಲ್ಲಿ ಕಳೆದುಹೋಗಲು ಬೇಕಾದ ವಿಷಯಗಳು ಕಣ್ಣಮುಂದೆಯೇ ಇವೆ. ಹಾಗೆಂದು ಅವು ಅಧಿವೇಶನದಲ್ಲಿ ಚರ್ಚೆಯಾಗಬಾರದ ವಿಷಯಗಳು ಎಂದಲ್ಲ. ಆದರೆ ಅವೇ ಕಾರಣವಾಗಿ ಒಟ್ಟೂ ಅಧಿವೇಶನ ಹಾಳಾಗಬಾರದು. ಈ ಎಚ್ಚರವನ್ನು ಇರಿಸಿಕೊಂಡು ಉಭಯತರು ವಿವೇಚನೆ, ವಿವೇಕದಿಂದ ಮುನ್ನಡೆಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.