ಮೇಕೆದಾಟು: ರಾಜ್ಯದ ಹಿತ ಕಾಯುವ ನಿರ್ಧಾರ ಬರಲಿ


Team Udayavani, Mar 12, 2022, 6:00 AM IST

ಮೇಕೆದಾಟು: ರಾಜ್ಯದ ಹಿತ ಕಾಯುವ ನಿರ್ಧಾರ ಬರಲಿ

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸರಕಾರದ ಅಡ್ಡಿ ಮತ್ತು ಕೇಂದ್ರ ಸರಕಾರದಿಂದ ಸಿಗದ ಪರಿಸರ ಅನುಮತಿ ಕುರಿತಂತೆ ಮುಂದಿನ ವಾರ ಸರ್ವಪಕ್ಷಗಳ ಸಭೆ ಕರೆಯಲು ರಾಜ್ಯ ಸರಕಾರ ಮುಂದಾಗಿರುವ ಕ್ರಮ ಸ್ವಾಗತಾರ್ಹವಾಗಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಹಿಂದಿನ ಸರಕಾರಗಳೇ ಡಿಪಿಆರ್‌ ಸಿದ್ಧಪಡಿಸಿದ್ದು, ಕೇಂದ್ರ ಸರಕಾರದ ಒಪ್ಪಿಗೆ ಬೇಕಿದೆ. ಅಲ್ಲದೆ ಕೇಂದ್ರ ಪರಿಸರ ಇಲಾಖೆಯೂ ಇದಕ್ಕೆ ಒಪ್ಪಿಗೆ ನೀಡಬೇಕು.

ಮೊದಲಿನಿಂದಲೂ ಕಾವೇರಿ ಎಂದರೆ, ತಮಿಳುನಾಡು ಸರಕಾರಗಳಿಗೆ ಜಮೀನು ಮತ್ತು ಕುಡಿಯುವ ನೀರು ಒದಗಿಸುವ ಇರುವ ಜೀವ ಜಲ ಎಂಬುದಕ್ಕಿಂತ ಹೆಚ್ಚಾಗಿ ಹಕ್ಕು ಸಾಧಿಸುವುದು ಮತ್ತು ವಿವಾದ ಮಾಡುವುದೇ ಕಾಯಕವಾಗಿದೆ. ಕರ್ನಾಟಕದ ಕಡೆಯಿಂದ ಕಾವೇರಿ ಕುರಿತಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೊರಟರೂ, ತಮಿಳುನಾಡು ರಾಜಕಾರಣಿಗಳು ನಿದ್ದೆಯಲ್ಲಿ ಕೆಟ್ಟ ಕನಸು ಬಿದ್ದವರಂತೆ ಗಾಬರಿಗೊಂಡವರಂತೆ ಆಡುತ್ತಾರೆ. ಇದು ತೀರಾ ಉತ್ಪ್ರೇಕ್ಷೆಯೇನಲ್ಲ. ಇತಿಹಾಸವನ್ನು ಒಮ್ಮೆ ತಿರುಗಿಸಿ ನೋಡಿದರೆ ಇದು ತಿಳಿಯುತ್ತದೆ.

ಈಗಂತೂ ಕರ್ನಾಟಕದ ಸರಕಾರಗಳು ಮೇಕೆದಾಟು ಯೋಜನೆಯನ್ನು ರೂಪಿಸಿರುವುದೇ ಬೆಂಗಳೂರು ಜನತೆಗೆ ಕುಡಿಯುವ ನೀರು ಒದಗಿಸುವ ಸಲುವಾಗಿ. ಇದನ್ನು ಹಿಂದಿನಿಂದಲೂ ತಮಿಳುನಾಡು ಮುಂದೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿಕೊಂಡೇ ಬಂದಿವೆ. ಆದರೆ ಇದುವರೆಗೂ ತಮಿಳುನಾಡಿಗೆ ಇದು ಅರ್ಥವಾಗಿಲ್ಲ. ಅಲ್ಲದೆ ಅಲ್ಲಿನ ರಾಜಕಾರಣಿಗಳಂತೂ, ಕಾವೇರಿ ವಿಚಾರದಲ್ಲಿ ಒಂದಾದಷ್ಟು ಬೇರೆ ಯಾವುದೇ ವಿಚಾರದಲ್ಲಿ ಒಂದಾಗುವುದಿಲ್ಲ.

ಈಗ ರಾಜ್ಯ ಸರಕಾರ ಮುಂದಿನ ವಾರ ಮೇಕೆದಾಟು ವಿಚಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯಲು ಹೊರಟಿರುವುದು ಸಕಾಲಿಕ ಮತ್ತು ತೀರಾ ಅಗತ್ಯವಿರುವ ಸಂಗತಿ. ಇಲ್ಲಿ ಆಡಳಿತ ಪಕ್ಷವೊಂದೇ ಏನನ್ನೂ ಮಾಡಲು ಸಾಧ್ಯವಿಲ್ಲ. ಅಲ್ಲದೆ ಕಾವೇರಿ ವಿಷಯದಲ್ಲಿ ಎಲ್ಲ ಪಕ್ಷಗಳ ಸಹಕಾರವೂ ಅತ್ಯಗತ್ಯವಾಗಿರುತ್ತದೆ. ಇದಕ್ಕೆ ಬಲವಾದ ಕಾರಣವೂ ಇದೆ. ಹಿಂದಿನಿಂದಲೂ ಅಧಿಕಾರ ಮಾಡಿಕೊಂಡು ಬಂದಿರುವ ಮತ್ತು ಈಗ ವಿಪಕ್ಷದಲ್ಲಿ ಕುಳಿತಿರುವ ಪಕ್ಷಗಳಿಗೂ ಕಾವೇರಿ ಕುರಿತ ನೋವಿನ ಬಗ್ಗೆ ಅರಿವಿದೆ. ಹಾಗೆಯೇ ಎಲ್ಲರೂ ಒಂದಿಲ್ಲೊಂದು ವಿಚಾರದಲ್ಲಿ ಕೋರ್ಟ್‌ ಮುಂದೆಯೂ ಎಲ್ಲ ಸರಕಾರಗಳು ಕಾವೇರಿ ಕುರಿತಾಗಿ ವಾದ ಮಂಡಿಸಿವೆ.

ಈಗಲೂ ಅಷ್ಟೇ ರಾಜ್ಯ ಸರಕಾರ, ಮೇಕೆದಾಟು ಯೋಜನೆ ಜಾರಿ ಸಂಬಂಧ ವಿಪಕ್ಷಗಳಿಂದ ಅಗತ್ಯ ಸಲಹೆ ಸೂಚನೆ ಪಡೆಯಬೇಕು. ಇದುವರೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡದಿರುವುದು ಮತ್ತು ಇತ್ತೀಚೆಗಷ್ಟೇ ಕೇಂದ್ರದ ಜಲಶಕ್ತಿ ಸಚಿವರು ಮೇಕೆದಾಟು ವಿವಾದ ಸಂಬಂಧ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳ ಮಧ್ಯೆ ಮಾತುಕತೆಗೆ ವೇದಿಕೆ ಸೃಷ್ಟಿಸುತ್ತೇನೆ ಎಂದಿರುವುದು ಬೇರೆಯದ್ದೇ ರಾಜಕೀಯ ವಾಸನೆ ತೋರಿಸಿದಂತಿದೆ. ಅಂದರೆ ಈಗಾಗಲೇ ಕೇಂದ್ರದ ಮುಂದೆ ತಮಿಳುನಾಡು ಕರ್ನಾಟಕದ ಬಗ್ಗೆ ದೂರು ಹೇಳಿರುವ ಸಾಧ್ಯತೆಗಳಿವೆ. ಇದನ್ನು ಮನಗಂಡೇ ಒಂದು ಸರ್ವಸಮ್ಮತ ನಿರ್ಧಾರ ತೆಗೆದುಕೊಂಡು, ಒಟ್ಟಾಗಿಯೇ ದಿಲ್ಲಿಗೆ ಹೋಗಿ ಕೇಂದ್ರ ಸರಕಾರದ ಮನವೊಲಿಕೆ ಮಾಡಬೇಕಾಗಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.