ಮಂಕಿಪಾಕ್ಸ್ ಹರಡುವಿಕೆಯ ಬಗ್ಗೆ ಇರಲಿ ಎಚ್ಚರ
Team Udayavani, Jul 26, 2022, 6:00 AM IST
ಜಗತ್ತಿನ ಸುಮಾರು 75 ದೇಶಗಳಲ್ಲಿ 16 ಸಾವಿರ ಮಂಕಿಪಾಕ್ಸ್ ಪ್ರಕರಣ ಗಳು ಪತ್ತೆಯಾಗಿದ್ದು, ಪ್ರಪಂಚದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಇದೊಂದು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ. ಹೀಗಾಗಿ ಎಲ್ಲರಲ್ಲೂ ಈ ಬಗ್ಗೆ ಆತಂಕ ಮೂಡಿರುವುದು ಸಹಜವೇ ಆಗಿದೆ.
ಸದ್ಯ ಭಾರತದಲ್ಲಿ ನಾಲ್ಕೇ ನಾಲ್ಕು ಪ್ರಕರಣಗಳು ವರದಿಯಾಗಿದ್ದರೂ, ಈ ರೋಗದ ಬಗ್ಗೆ ಯಾರೂ ಅಲ್ಲಗಳೆಯುವಂತಿಲ್ಲ. ಈ ನಾಲ್ಕರಲ್ಲಿ ಮೂರು ಕೇರಳದಲ್ಲಿ, ಮತ್ತೂಂದು ದಿಲ್ಲಿಯಲ್ಲಿ ಪತ್ತೆಯಾಗಿದೆ. ತೆಲಂಗಾಣದಲ್ಲಿ ಒಬ್ಬರಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿವೆ. ದಿಲ್ಲಿ ಪ್ರಕರಣದಲ್ಲಿ ವಿದೇಶ ಪ್ರಯಾಣದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಸೋಂಕು ದೃಢಪಟ್ಟಿರುವುದು ವಿಚಿತ್ರವೆನಿಸಿದೆ. ಹೀಗಾಗಿ ಎಲ್ಲರೂ ಎಚ್ಚರದಿಂದ ಇರಲೇಬೇಕಾದದ್ದು ಅತ್ಯಗತ್ಯವಾಗಿದೆ.
ರವಿವಾರವಷ್ಟೇ ಕೆಲವು ಆರೋಗ್ಯ ತಜ್ಞರು ಈ ಬಗ್ಗೆ ಮಾತನಾಡಿದ್ದು, ಮಂಕಿಪಾಕ್ಸ್ ಕುರಿತ ಕೆಲವೊಂದು ಎಚ್ಚರಿಕೆ ಸಂದೇಶಗಳನ್ನು ನೀಡಿದ್ದಾರೆ. ಕೊರೊನಾ ವಿಚಾರದಲ್ಲಿ ನಾವು ಹೇಗೆ ಮುನ್ನೆಚ್ಚರಿಕೆ ವಹಿಸಿದ್ದೇವೆಯೋ ಅದೇ ರೀತಿ ಇದರಲ್ಲೂ ಮುನ್ನೆಚ್ಚರಿಕೆಯ ವಿಧಾನಗಳನ್ನು ಅನುಸರಿಸಬೇಕು ಎಂದು ಹೇಳಿ¨ªಾರೆ. ಅಂದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಪಾಲಿಸಬೇಕು ಎಂದಿದ್ದಾರೆ. ಒಂದು ರೀತಿಯಲ್ಲಿ ಇದೊಂದು ಉತ್ತಮವಾದ ಕ್ರಮವೇ ಆಗಿದೆ. ಅತ್ತ ಕೇಂದ್ರ ಸರಕಾರವೂ ರವಿವಾರ ತುರ್ತು ಸಭೆಗಳನ್ನು ನಡೆಸಿ, ಮಂಕಿಪಾಕ್ಸ್ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ. ಈ ಎಲ್ಲ ವಿದ್ಯಮಾನಗಳು ಮಂಕಿಪಾಕ್ಸ್ ಕುರಿತಂತೆ ನಿರ್ಲಕ್ಷ್ಯ ಸಲ್ಲ ಎಂಬುದನ್ನು ಒತ್ತಿ ಹೇಳಿವೆ.
ಇನ್ನು, ರಾಜ್ಯದಲ್ಲಿಯೂ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ| ಕೆ. ಸುಧಾಕರ್ ಅವರು ಮಂಕಿಪಾಕ್ಸ್ ಕುರಿತಂತೆ ಮಾತನಾಡಿದ್ದು, ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದಿದ್ದಾರೆ. ಅಲ್ಲದೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮಂಕಿಪಾಕ್ಸ್‌ನ ಲಕ್ಷಣಗಳು ಕಂಡು ಬಂದರೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಸದ್ಯ ರಾಜ್ಯ ಸರಕಾರವೂ ಮಂಕಿಪಾಕ್ಸ್ ಬಗ್ಗೆ ಮುನ್ನೆಚ್ಚರಿಕ ಕ್ರಮ ತೆಗೆದುಕೊಂಡಿರುವುದು ಕಂಡುಬರುತ್ತಿದೆ.
ಇದೆಲ್ಲದರ ನಡುವೆ ಈಗ ಸಾರ್ವಜನಿಕರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಕೊರೊನಾ ರೀತಿಯಲ್ಲೇ ಮಂಕಿಪಾಕ್ಸ್‌ನ ಲಕ್ಷಣಗಳೂ ಇವೆ. ಚರ್ಮದ ಮೇಲೆ ತುರಿಕೆ ಕೊರೊನಾ ಹೊರತಾದ ಲಕ್ಷಣ. ಜತೆಗೆ ಜ್ವರ, ಸ್ನಾಯುಸೆಳೆತ, ಅತಿಯಾದ ತಲೆನೋವು, ಗಂಟಲು ನೋವು, ಕೆಮ್ಮು, ಬಲಹೀನತೆ, ಬೆನ್ನು ನೋವು ಕೂಡ ಕಾಣಿಸಿಕೊಳ್ಳುತ್ತದೆ. ಇಂಥ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹಾಗೆಯೇ ಮನೆಯವರಿಂದ ಪ್ರತ್ಯೇಕವಾಗಿ ಇರುವುದು ಒಳ್ಳೆಯದು.
ಸದ್ಯ ದೇಶದಲ್ಲಿ ಕೊರೊನಾವೂ ಇರುವುದರಿಂದ, ಮಂಕಿಪಾಕ್ಸ್ ಮತ್ತು ಕೊರೊನಾ ನಡುವೆ ಕೊಂಚ ಗೊಂದಲವೂ ಉಂಟಾಗಬಹುದು. ಈ ವಿಚಾರದಲ್ಲಿ ಆರೋಗ್ಯ ಇಲಾಖೆ ಗಮನಹರಿಸಬೇಕು. ಜ್ವರ, ಮೈಕೈ ನೋವು ಎಂದು ಆಸ್ಪತ್ರೆಗೆ ಹೋದವರ ಮೇಲೆ ಅನುಮಾನ ಪಡುವ ಸಂಗತಿಯೂ ಆಗಬಾರದು. ಇಂಥ ಸಂದರ್ಭದಲ್ಲಿ ಜನರಲ್ಲಿ ಹೆದರಿಕೆ ಮೂಡಿಸುವುದಕ್ಕಿಂತ ಹೆಚ್ಚಾಗಿ ಅವರಲ್ಲಿ ಧೈರ್ಯ ತುಂಬುವ ಕೆಲಸವೇ ಹೆಚ್ಚಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.