ಮ್ಯಾನ್ಮಾರ್ ಬೆಳವಣಿಗೆ, ಎಚ್ಚರಿಕೆಯ ಹೆಜ್ಜೆ ಇಡಲಿ ಭಾರತ
Team Udayavani, Feb 4, 2021, 6:20 AM IST
ನೆರೆ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ನಡೆದಿರುವ ಬೆಳವಣಿಗೆಯನ್ನು ಭಾರತ ಆತಂಕದಿಂದ ಗಮನಿಸುತ್ತಿದೆ. ಕಳೆದ ವರ್ಷ ಮ್ಯಾನ್ಮಾರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಅವರ ಪಕ್ಷ ಅಕ್ರಮ ನಡೆಸಿದೆ ಎಂದು ಆರೋಪಿಸಿ ಅಲ್ಲಿನ ಮಿಲಿಟರಿಯು ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು, ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ವಿದ್ಯಮಾನದಲ್ಲಿ ಚೀನದ ಕೈವಾಡವೂ ಇದೆಯೇ ಎನ್ನುವ ಪ್ರಶ್ನೆಯೂ ಏಳಲಾರಂಭಿಸಿದೆ.
ಭಾರತದ ವಿಚಾರಕ್ಕೆ ಬಂದರೆ, ಮ್ಯಾನ್ಮಾರ್ ಕೇವಲ ಭೂ ಹಾಗೂ ಸಾಮಾಜಿಕ ಸಂಪರ್ಕದ ದೃಷ್ಟಿಯಿಂದಷ್ಟೇ ಅಲ್ಲದೇ, ಆರ್ಥಿಕವಾಗಿ ಹಾಗೂ ವ್ಯೂಹಾತ್ಮಕವಾಗಿಯೂ ಮುಖ್ಯವಾದ ರಾಷ್ಟ್ರ. ಸೂಕಿಯವರು ಅಧಿಕಾರಕ್ಕೆ ಬಂದ ಅನಂತರ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬರಲಾರಂಭಿಸಿದವು.
2020ರ ಚುನಾವಣೆಗೂ ಮುನ್ನ ಭಾರತದ ಸೇನಾ ಮುಖ್ಯಸ್ಥ ಜ| ಎಂ.ಎ.ನರವಣೆ ಹಾಗೂ ವಿದೇಶಾಂಗ ಕಾರ್ಯದರ್ಶಿಗಳು ಮ್ಯಾನ್ಮಾರ್‌ಗೆ ಭೇಟಿ ಕೊಟ್ಟದ್ದು ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಯಲ್ಲಿ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಅಲ್ಲದೇ ಬಹುಸಮಯದಿಂದ ಬಾಕಿ ಉಳಿದಿದ್ದ ಅನೇಕ ಯೋಜನೆಗಳಿಗೂ ಮರುಚಾಲನೆ ನೀಡುವ ಪ್ರಯತ್ನವೂ ಆರಂಭವಾಗಿತ್ತು. ಇನ್ನು ಈಶಾನ್ಯ ರಾಜ್ಯವಾದ ಮಿಜೋರಾಮ್ ಮತ್ತು ಮ್ಯಾನ್ಮಾರ್‌ನ ನಡುವಿನ ಆರ್ಥಿಕ ಸಂಪರ್ಕಕ್ಕೆ ವೇಗ ನೀಡುವುದಕ್ಕಾಗಿ ಬ್ಯುನ್ಯು-ಸಾರ್ಸಿಚೌಕ್ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೂ ಭಾರತ 2 ದಶಲಕ್ಷ ಡಾಲರ್‌ಗಳಷ್ಟು ಹಣ ನೀಡಿದೆ. ಸೂಕಿ ಅವಧಿಯಲ್ಲಿಂದಷ್ಟೇ ಅಲ್ಲ, ಮ್ಯಾನ್ಮಾರ್‌ನಲ್ಲಿ 5 ದಶಕಗಳ ಮಿಲಿಟರಿ ಆಡಳಿತವಿದ್ದಾಗಲೂ ಭಾರತವು ಅಲ್ಲಿನ ಸೇನೆಯೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿತ್ತು.
ಕಳೆದ ವರ್ಷವಷ್ಟೇ ಭಾರತವು ಮ್ಯಾನ್ಮಾರ್ ನೌಕಾಪಡೆಗೆ ಐಎನ್‌ಎಸ್ ಸಿಂಧುವೀರ್ ಅನ್ನು ಹಸ್ತಾಂತರಿಸಿತ್ತು. ಈ ಹಿಂದೆ ಮ್ಯಾನ್ಮಾರ್ ಮಿಲಿಟರಿಯೂ ತನ್ನ ಪ್ರದೇಶದಲ್ಲಿದ್ದ ಭಾರತ ವಿರೋಧಿ ಶಕ್ತಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಲು ಭಾರತೀಯ ಸೇನೆಗೆ ಸಹಕರಿಸಿತ್ತು. ಆದರೆ ಮುಂದೆಯೂ ಮ್ಯಾನ್ಮಾರ್ ಸೇನೆ ಭಾರತದ ಪರ ಇರಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಏಕೆಂದರೆ ಅತ್ತ ತನ್ನ ಸ್ಟ್ರಿಂಗ್ ಆಫ್ ಪರ್ಲ್ಸ್ ತಂತ್ರದ ಮೂಲಕ ಭಾರತದ ಸುತ್ತಲಿನ ದೇಶಗಳಲ್ಲಿ ಮಿಲಿಟರಿ ಬೇಸ್‌ಗಳನ್ನು ಸ್ಥಾಪಿಸಬೇಕು ಎಂಬ ಗುರಿ ಹೊಂದಿರುವ ಚೀನ ಮ್ಯಾನ್ಮಾರ್ ಅನ್ನು ತನ್ನ ಮತ್ತೂಂದು ನೆಲೆ ಆಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ಬಳಸಿಕೊಳ್ಳುತ್ತಿರುವುದು ಸಾಲದ ತಂತ್ರವನ್ನು. ಅಂದರೆ, ಚೀನ ಮ್ಯಾನ್ಮಾರ್‌ಗೆ ವಿಪರೀತ ಎನ್ನುವಷ್ಟು ಸಾಲ ನೀಡಿ, ಅದನ್ನು ಕಟ್ಟಿಹಾಕುತ್ತಿದೆ.
ಕಳೆದೆರಡು ದಶಕಗಳಲ್ಲಿ ಮ್ಯಾನ್ಮಾರ್‌ನಲ್ಲಿ ಆದ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಚೀನದ ಪಾಲೇ 25 ಪ್ರತಿಶತದಷ್ಟಿದೆ! ಅಲ್ಲದೇ ಈಗ ಮ್ಯಾನ್ಮಾರ್ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಸೇನಾ ಮುಖ್ಯಸ್ಥ ಮಿನ್ ಆಂಗ್ ಹ್ಲ್ಯಾಂಗ್ ಕೆಲವು ವರ್ಷಗಳಿಂದ ಚೀನಕ್ಕೆ ಬಹಳ ಹತ್ತಿರವಾಗುತ್ತಾ ಬಂದಿದ್ದರು(ಕಳೆದ ತಿಂಗಳಷ್ಟೇ ಚೀನದ ವಿದೇಶಾಂಗ ಸಚಿವರೊಂದಿಗೆ ಮಾತನಾಡಿ ಬಂದಿದ್ದರು). ಈ ವಿಷಯದಲ್ಲಿ ಎಚ್ಚೆತ್ತಿದ್ದ ಸೂಕಿ ಭಾರತದೊಂದಿಗೆ ಒಡನಾಟ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಈಗ ಅಲ್ಲಿನ ರಾಜಕೀಯ ಪರಿದೃಶ್ಯ ಬದಲಾಗಿದೆ. ಭಾರತ ಈ ವಿಷಯವನ್ನು ಅತ್ಯಂತ ಜಾಗರೂಕವಾಗಿ ನಿರ್ವಹಿಸಬೇಕಾದ ಅಗತ್ಯವಂತೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.