ನಾಯಕರ ನಾಲಗೆಗೆ ಕಡಿವಾಣ ತೊಡಿಸಿ; ಕೀಳು ಹೇಳಿಕೆಗಳ ಚಾಳಿ


Team Udayavani, Jan 26, 2017, 11:02 AM IST

ankakaka-3.jpg

ಪಂಚರಾಜ್ಯ ಚುನಾವಣೆ ಕಾವೇರುತ್ತಿದ್ದಂತೆ ರಾಜಕೀಯ ನಾಯಕರ ವೈಯಕ್ತಿಕ ನಿಂದನೆಯ ಭರಾಟೆಯೂ ಜೋರಾಗಿದೆ. ಮೌಲ್ಯಾಧಾರಿತ ಸಂವಾದಕ್ಕೆ ಏನೂ ಸಿಗದೆ ಇಂಥ ದಾರಿ ಹಿಡಿಯುವುದು ನಮ್ಮ ರಾಜಕೀಯ ನಾಯಕರ ಇಂದಿನ ಮನಸ್ಥಿತಿಯ ಪ್ರತೀಕ.

ಪಂಚರಾಜ್ಯಗಳ ಚುನಾವಣಾ ಪ್ರಚಾರ ಕಾವೇರುತ್ತಿದ್ದಂತೆಯೇ ರಾಜಕೀಯ ಮುಖಂಡರ ಹೇಳಿಕೆಗಳ ಭರಾಟೆ ಶುರುವಾಗಿದೆ. ಆರೋಪ -ಪ್ರತ್ಯಾರೋಪ, ಟೀಕೆ, ವಿಡಂಬನೆ, ವಿಮರ್ಶೆ ಇವೆಲ್ಲ ಆರೋಗ್ಯಕರ ರಾಜಕಾರಣಕ್ಕೆ ಅಗತ್ಯ. ಆದರೆ ಎದುರಾಳಿಗಳನ್ನು ಟೀಕಿಸುವ ಭರದಲ್ಲಿ ರಾಜಕಾರಣಿಗಳು ಕೆಲವೊಮ್ಮೆ ನಾಲಗೆ ಮೇಲಿನ ಲಗಾಮು ಕಳೆದು ಕೊಳ್ಳುತ್ತಾರೆ. ಎದುರಾಳಿಗಳ ವೈಯಕ್ತಿಕ ವಿಚಾರಗಳನ್ನು ಉಲ್ಲೇಖೀಸಿ ಟೀಕಿಸುವುದು, ಲೇವಡಿ  ಮಾಡುವುದು, ಹೆಂಡತಿ ಮಕ್ಕಳನ್ನು ರಾಜಕೀಯ ಕೆಸರೆರಚಾಟಕ್ಕೆ ಎಳೆದು ತರುವುದೆಲ್ಲ ಭಾರತದ ರಾಜಕಾರಣದ ಮಟ್ಟಿಗೆ ಹೊಸದಲ್ಲ. ಎದುರಾಳಿಗಳು ಮಹಿಳೆಯರಾಗಿದ್ದರಂತೂ ಟೀಕೆಗಳು ಸಭ್ಯತೆಯ ಎಲ್ಲೆ ಮೀರುತ್ತವೆ. ಇದೀಗ ಬಿಜೆಪಿ ನಾಯಕ ವಿನಯ್‌ ಕಟಿಯಾರ್‌ ಮತ್ತು ಜೆಡಿ (ಯು) ಮುಖಂಡ ಶರದ್‌ ಯಾದವ್‌ ಈ ರೀತಿಯ ಹೇಳಿಕೆಗಳನ್ನು ನೀಡಿ ವಿವಾದಕ್ಕೊಳಗಾಗಿದ್ದಾರೆ. 

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕುರಿತು ಕಟಿಯಾರ್‌ ನೀಡಿರುವ ಹೇಳಿಕೆ ತೀರಾ ಕೀಳು ಅಭಿರುಚಿಯಿಂದ ಕೂಡಿತ್ತು. ಸುದ್ದಿ ವಾಹಿನಿಯೊಂದರ ಜತೆ ಮಾತನಾಡುವ ವೇಳೆ ಪ್ರಿಯಾಂಕ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕಿಯೇ ಎಂದು ಕೇಳಿದ ಪ್ರಶ್ನೆಗೆ ಕಟಿಯಾರ್‌ ಪ್ರಿಯಾಂಕ ಅಂತಹ ಸುಂದರಿಯೇನಲ್ಲ. ಅವರು ಉತ್ತರ ಪ್ರದೇಶದ ಚುನಾವಣೆಯಲ್ಲಿ ಸ್ಟಾರ್‌ ಪ್ರಚಾರ ಕರು ಎಂದು ಭಾವಿಸುವುದಿಲ್ಲ. ಅವರಿಗಿಂತ ಸುಂದರವಾಗಿರುವ ಅನೇಕ ಪ್ರಚಾರಕರು ನಮ್ಮಲ್ಲಿದ್ದಾರೆ. ಅವರೆಲ್ಲ ಹೀರೊಯಿನ್‌ಗಳು ಎಂದುತ್ತರಿಸಿದ್ದಾರೆ. ಬಹುಶಃ ಸ್ಟಾರ್‌ ಪ್ರಚಾರಕರೆಂದರೆ ಸಿನೆಮಾ ತಾರೆಯರಂತೆ ಸುಂದರವಾಗಿರುವವರು ಎಂದು ಕಟಿಯಾರ್‌ ಭಾವಿಸಿರಬಹುದು. ಕಟಿಯಾರ್‌ ಹೇಳಿಕೆ ಬಿಜೆಪಿಯ ಮನೋಧರ್ಮವನ್ನು ತೋರಿಸುತ್ತದೆ ಎಂದು ಪ್ರಿಯಾಂಕಾ ಇದಕ್ಕೆ  ತಿರುಗೇಟು ನೀಡಿದ್ದಾರೆ. 

 ಶರದ್‌ ಯಾದವ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಗಳ ಮರ್ಯಾದೆಗಿಂತಲೂ ಮತದ ಮರ್ಯಾದೆ ದೊಡ್ಡದು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಮಗಳು ಶೀಲಗೆಟ್ಟರೆ ಆಕೆಯ ಮನೆಯವರು ಮಾತ್ರವಲ್ಲದೆ ನೆರೆಹೊರೆಯವರು ಮತ್ತು ಇಡೀ ಊರೇ ಅವಮಾನದಿಂದ ತಲೆತಗ್ಗಿಸುತ್ತದೆ. ಇದೇ ರೀತಿ ಮತವನ್ನು ಮಾರಿಕೊಂಡರೆ ದೇಶ ತಲೆತಗ್ಗಿಸಬೇಕಾಗುತ್ತದೆ ಎಂದಿದ್ದಾರೆ ಯಾದವ್‌. ಮತವನ್ನು ಹಣಕ್ಕೆ ಮಾರಿಕೊಳ್ಳಬೇಡಿ ಎಂಬ ಒಳ್ಳೆಯ ಉದ್ದೇಶದಿಂದಲೇ ಅವ‌ರು ಈ ಹೇಳಿಕೆಯನ್ನು ನೀಡಿರಬಹುದು. ಆದರೆ ಅವರು ಬಳಸಿದ ಉಪಮೆ ಮಾತ್ರ ಕೀಳು ಅಭಿರುಚಿಯದ್ದಾಗಿತ್ತು. ಶರದ್‌ ಯಾದವ್‌ ಮಹಿಳೆಯರ ಕುರಿತು ತುತ್ಛವಾಗಿ ಮಾತನಾಡಿರುವುದು ಇದೇ ಮೊದಲಲ್ಲ.  ಮಹಿಳೆಯರ ವಿಚಾರಕ್ಕೆ ಬಂದಾಗ ತಮ್ಮ ಚಿಂತನೆಯೂ ಪುಂಡುಪೋಕರಿ ಹುಡುಗರಂತೆಯೇ ಇರುತ್ತದೆ ಎನ್ನುವುದನ್ನು ರಾಜಕೀಯದಲ್ಲಿದ್ದವರು ಆಗಾಗ ಸಾಬೀತುಪಡಿಸುತ್ತಿರುತ್ತಾರೆ. 

ಈ ರೀತಿ ಲಂಗುಲಗಾಮಿಲ್ಲದೆ ಮಾತನಾಡುವ ರಾಜಕಾರಣಿಗಳ ದೊಡ್ಡ ಪಟ್ಟಿಯೇ ಇದೆ. ಬಿಜೆಪಿ ನಾಯಕ ದಯಾಶಂಕರ್‌ ಸಿಂಗ್‌ ಕಳೆದ ವರ್ಷ ಮಾಯಾವತಿಯನ್ನು ವೇಶ್ಯೆ ಎಂದು ಕರೆದದ್ದು, ಇದಕ್ಕೆ ಉತ್ತರವಾಗಿ ದಯಾಶಂಕರ್‌ ಸಿಂಗ್‌ ಪತ್ನಿ ಮತ್ತು ಮಗಳನ್ನು ಮಾಯಾವತಿ ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣ ದೇಶದ ರಾಜಕಾರಣ ಕಂಡ  ನೈತಿಕ ಅಧಃಪತನದ ಪರಮಾವಧಿಯಾಗಿತ್ತು. ಅತ್ಯಾಚಾರ, ಲೈಂಗಿಕ ಕಿರುಕುಳ, ನೈತಿಕ ಪೊಲೀಸ್‌ಗಿರಿಯಂತಹ ಪ್ರಕರಣಗಳು ಸಂಭವಿಸಿದ ಸಂದರ್ಭದಲ್ಲಿ ನಮ್ಮ ರಾಜಕೀಯ ಮುಖಂಡರು ನೀಡುವ ಹೇಳಿಕೆ ಗಳನ್ನು ನೋಡುವಾಗ ಇವರು  ಯಾವ ಅರ್ಹತೆಯಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ ಎಂಬ ಅನುಮಾನ ಬರುತ್ತದೆ. 

ಕೀಳು ಹೇಳಿಕೆಗಳನ್ನು ನೀಡಿದ ತಪ್ಪಿಗೆ ರಾಜಕಾರಣಿಗಳು ಶಿಕ್ಷೆ ಅನುಭವಿಸಿದ ನಿದರ್ಶನಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಹೀಗಾಗಿಯೇ ಮುಖಂಡರು ಮಾತನಾಡುವಾಗ ಅದರ ಪರಿಣಾಮ ವನ್ನು ಚಿಂತಿಸುವ ಗೋಜಿಗೆ ಹೋಗುವುದಿಲ್ಲ. ಚುನಾವಣಾ ರಾಜಕೀಯ ಸ್ವತ್ಛವಾಗಬೇಕಿದ್ದರೆ ಮುಖಂಡರು ಮೊದಲು ತಮ್ಮ ನಾಲಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅವರಿಂದ ಸ್ವ ನಿಯಂತ್ರಣ ಸಾಧ್ಯವಾಗ ದಿದ್ದರೆ ಇದಕ್ಕಾಗಿ ಕಠಿನ ನಿಯಮಾವಳಿಗಳನ್ನು ರಚಿಸುವುದು ಒಳಿತು. ವೈಯಕ್ತಿಕ ನಿಂದನೆ ಮಾಡುವವರನ್ನು, ಮಹಿಳೆಯರ ಕುರಿತು ಕೀಳಾಗಿ ಮಾತನಾಡುವವರನ್ನು ಪ್ರಚಾರದಿಂದ ಅನರ್ಹಗೊಳಿಸುವಂತಹ ನಿಯಮಗಳು ಬಂದರೆ ಈ ಚಾಳಿಯನ್ನು ತಡೆಗಟ್ಟಬಹುದು.

ಟಾಪ್ ನ್ಯೂಸ್

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

15-uv-fusion

Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.