ಸಂಪತ್ತು ಕ್ರೋಡೀಕರಣ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ


Team Udayavani, Aug 25, 2021, 6:00 AM IST

ಸಂಪತ್ತು ಕ್ರೋಡೀಕರಣ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ

ಕೊರೊನಾ ಸೋಂಕು ಇಡೀ ಜಗತ್ತಿನ ಆರ್ಥಿಕತೆಯನ್ನು ಬುಡಮೇಲು ಮಾಡಿರುವುದು ಸುಳ್ಳಲ್ಲ. ಆರಂಭದಲ್ಲಿ ಇಡೀ ಜಗತ್ತೇ ಇದರಿಂದ ತತ್ತರಿಸುತ್ತಿದ್ದರೂ ಚೀನದ ಆರ್ಥಿಕತೆ ಮಾತ್ರ ಸುಧಾರಣೆಯತ್ತ ಮುನ್ನುಗ್ಗುತ್ತಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು. ಆದರೆ ಈಗ ಅಲ್ಲಿನ ಆರ್ಥಿಕತೆ ಕುರಿತ ಸತ್ಯಸಂಗತಿಗಳೂ ಹೊರಬರುತ್ತಿವೆ. ಕ್ರಮೇಣವಾಗಿ ಅಲ್ಲಿನ ಆರ್ಥಿಕತೆಗೂ ಪೆಟ್ಟು ಬೀಳಲು ಶುರುವಾಗಿದೆ.

ಒಂದು ದೇಶಕ್ಕೆ ಪೆಟ್ಟು ಬಿದ್ದ ಕೂಡಲೇ ಮಗದೊಂದು ದೇಶಕ್ಕೂ ಅದರ ಪರಿಣಾಮ ತಟ್ಟುವುದು ವಾಡಿಕೆ. ಹಾಗೆಯೇ ಈ ಕೊರೊನಾ ಸುಳಿಯಲ್ಲಿ ಭಾರತದ ಆರ್ಥಿಕತೆಯೂ ಸಿಲುಕಿರುವುದೂ ಸತ್ಯ. ಅದರಲ್ಲೂ ಕೊರೊನಾ ಲಾಕ್‌ಡೌನ್‌ ಘೋಷಿಸಿದಾಗಂತೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಸರಿಯಾಗಿ ತೆರಿಗೆ ಸಂಗ್ರಹವಾಗದೇ ಕೈಗಾರಿಕೆಗಳು, ಇತರ ವ್ಯವಹಾರಗಳು ನಡೆಯದೇ ಸರಕಾರದ ಕೈಗಳನ್ನು ಕಟ್ಟಿಹಾಕಿದಂತಾಗಿದೆ.

ಹೀಗಾಗಿಯೇ ಕೇಂದ್ರ ಸರಕಾರ, ಆರ್ಥಿಕ ಉತ್ತೇಜನಕ್ಕಾಗಿ ಈಗಾಗಲೇ ಹಲವಾರು ಘೋಷಣೆಗಳನ್ನು ಮಾಡಿದೆ. ಈ ಮೂಲಕ ಸಣ್ಣಪುಟ್ಟ ಕೈಗಾರಿಕೆಗಳು ಮತ್ತು ಪುಟ್ಟದಾಗಿ ವ್ಯಾಪಾರ-ವಹಿವಾಟು ಮಾಡುತ್ತಿರುವವರಿಗೆ ಕಡಿಮೆ ಬಡ್ಡಿಯಲ್ಲಿ ಸುಲಭ ಸಾಲದಂಥ ಯೋಜನೆಗಳನ್ನೂ ಜಾರಿಗೆ ತಂದಿದೆ. ಇದರಿಂದಾಗಿ ಜನರ ಕೈಯಲ್ಲಿ ನಗದು ಲಭ್ಯತೆ ಕೇಂದ್ರ ಸರಕಾರದ ಇಚ್ಛೆಯಾಗಿತ್ತು. ಇದರ ಮುಂದುವರಿದ ಭಾಗವಾಗಿ ಈಗ ಸೋಮವಾರವಷ್ಟೇ ರಾಷ್ಟ್ರೀಯ ಸಂಪತ್ತು ಕ್ರೋಡೀಕರಣ ಯೋಜನೆಯನ್ನು ಆರಂಭಿಸಿದೆ. ಇದನ್ನು ಕಳೆದ ಬಜೆಟ್‌ನಲ್ಲಿಯೇ ಘೋಷಿಸಲಾಗಿತ್ತು.

ಈ ಯೋಜನೆಯ ಉದ್ದೇಶವೊಂದೇ; ಸರಕಾರದ ಆಸ್ತಿಗಳ ಮೂಲಕ ಹಣವನ್ನು ಕ್ರೋಡೀಕರಣ ಮಾಡುವುದು. ಈ ಹಣವನ್ನು ಬೇರೆ ಬೇರೆ ಯೋಜನೆಗಳಿಗೆ ಬಳಕೆ ಮಾಡುವುದು. ಇದಕ್ಕಾಗಿ ಮುಂದಿನ 4 ವರ್ಷ ಗಳಲ್ಲಿ 6 ಲಕ್ಷ ಕೋಟಿ ರೂ. ಗಳಿಕೆ ಮಾಡುವುದು ಸರಕಾರದ ಚಿಂತನೆ. ಅಷ್ಟೇ ಅಲ್ಲ, ಪ್ರಸಕ್ತ ಆರ್ಥಿಕ ವರ್ಷದಲ್ಲೇ 88 ಸಾವಿರ ಕೋಟಿ ರೂ. ಸಂಗ್ರಹಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಅಂದರೆ ಸರಕಾರದ ಮಾಲಕತ್ವದಲ್ಲಿರುವ ಬಂದರು, ವಿಮಾನ ನಿಲ್ದಾಣ, ಹೆದ್ದಾರಿಗಳ ಮೂಲಕ ಹಣಗಳಿಸಲಾಗುತ್ತದೆ. ಇದಕ್ಕಾಗಿ ರೈಲು, ವಿಮಾನ ನಿಲ್ದಾಣಗಳು ಮತ್ತು ಕಲ್ಲಿದ್ದಲು ಗಣಿ ಎಂಬ ಮೂರು ವಿಭಾಗಗಳನ್ನೂ ಮಾಡಲಾಗಿದೆ. ಆದರೆ ಹಣ ಸಂಗ್ರಹಕ್ಕಾಗಿ ಸರಕಾರದ ಯಾವುದೇ ಆಸ್ತಿಗಳನ್ನು ಮಾರಾಟ ಮಾಡುವುದಿಲ್ಲ ಎಂದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಗುತ್ತಿಗೆ ಅಥವಾ ಲೀಸ್‌ಗೆ ಕೊಡುವ ಬಗ್ಗೆ ಹೇಳಿದ್ದಾರೆ.

ಕೇಂದ್ರ ಸರಕಾರ ಹೇಳಿರುವ ಪ್ರಚಾರ, ಈ ಯೋಜನೆಯ ಪ್ರಮುಖ ಉದ್ದೇಶ, ಉದ್ಯೋಗ ಸೃಷ್ಟಿ, ಗ್ರಾಮೀಣ, ಸಣ್ಣ ಪುಟ್ಟ ನಗರಗಳಲ್ಲಿ ಆರ್ಥಿಕ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕ ಕಲ್ಯಾಣವಾಗಿದೆ. ಇಂತಿಷ್ಟು ವಲಯಗಳಿಂದ ಇಷ್ಟೇ ಹಣ ಸಂಗ್ರಹಿಸಬೇಕು ಎಂದು ಗುರಿ ಹಾಕಿಕೊಂಡಿರುವ ಸರಕಾರ, ಇದಕ್ಕಾಗಿ ಸಮರೋಪಾದಿಯಲ್ಲಿ ಕೆಲಸ ಮಾಡುವ ಭರವಸೆಯನ್ನೂ ನೀಡಿದೆ. ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ವಿಪಕ್ಷಗಳ ಕಡೆಯಿಂದ ವಿರೋಧವೂ ವ್ಯಕ್ತವಾಗಿದೆ. ಹಿಂದಿನಿಂದಲೂ ಗಳಿಸಿಕೊಂಡು ಬಂದಿರುವ ಸರಕಾರದ ಆಸ್ತಿಗಳನ್ನು ಒಂದು ರೀತಿಯಲ್ಲಿ ಮಾರಾಟ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಇದಕ್ಕೆ ಮೊದಲ ಸ್ಪಷ್ಟನೆ ಕೊಟ್ಟಂತೆ ಕಾಣುತ್ತಿದ್ದು, ನಾವು ಕೇವಲ ಲೀಸ್‌ ಕೊಡುತ್ತಿದ್ದೇವೆ ಎಂದೂ ಕೇಂದ್ರ ಸರಕಾರ ಹೇಳಿದೆ.

ಏನೇ ಆಗಲಿ ಈ ಯೋಜನೆಯಂತೂ ಈಗಲೇ ಆರಂಭವಾಗಲಿದೆ. ಸರಕಾರದ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನ ಯಾವುದೇ ಕಾರಣಕ್ಕೂ ಜನರನ್ನು ಕಾಡಬಾರದು. ಹಾಗೆಯೇ ಎಲ್ಲ ಫ‌ಲಾನುಭವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ರಾಜ್ಯಗಳ ಜತೆಗೂ ಚರ್ಚಿಸಿಕೊಂಡು ಇದರ ಜಾರಿಗೆ ಮುಂದಾಗಬೇಕು.

ಟಾಪ್ ನ್ಯೂಸ್

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

PM-yojana

Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ

supreme-Court

Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ

Canada

Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.