Naxals: ಮತ್ತೆ ನಕ್ಸಲರು ಪ್ರತ್ಯಕ್ಷ: ಆತಂಕಕಾರಿ ಬೆಳವಣಿಗೆ
Team Udayavani, Mar 20, 2024, 7:30 AM IST
ದೇಶಾದ್ಯಂತ ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲೂ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಕಾನೂನು ಸುವ್ಯವಸ್ಥೆಗೆ ಹೆಸರಾಗಿ, ಶಾಂತಿಪ್ರಿಯ ರಾಜ್ಯ ಎಂದೇ ಕರೆಯಿಸಿಕೊಂಡಿದ್ದ ಕರ್ನಾಟಕದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲದ ನಕ್ಸಲರು ಚುನಾವಣೆ ಸಂದರ್ಭದಲ್ಲಿ ಕಾಣಿಸಿ ಕೊಂಡಿರುವುದು ಸಹಜವಾಗಿ ಆತಂಕ ಮೂಡಿಸಿದೆ.
ಕೊಡಗು- ದಕ್ಷಿಣ ಕ್ನನಡ ಜಿಲ್ಲೆಯ ಗಡಿಯಲ್ಲಿರುವ ಸುಳ್ಯ ಸಮೀಪದ ಕೂಜಿಮಲೆ ಬಳಿ ನಕ್ಸಲರ ಪತ್ತೆಯಾಗಿದೆ. ಅಲ್ಲಿನ ಅಂಗಡಿಯೊಂದರಲ್ಲಿ ದಿನಸಿ ಪದಾರ್ಥಗಳನ್ನು ಖರೀದಿಸಿದ ನಾಲ್ವರನ್ನು ಅರಣ್ಯ ಇಲಾಖೆ ಸಿಬಂದಿ ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಮರುದಿನ ಅರಣ್ಯ ಇಲಾಖೆಯ ಸಿಬಂದಿ ಅದೇ ಅಂಗಡಿಗೆ ಹೋದಾಗ ವಿಚಾರ ತಿಳಿಯಿತು. ಸ್ಥಳೀಯ ಪೊಲೀಸರು, ನಕ್ಸಲ್ ನಿಗ್ರಹ ದಳದ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸಾಕಷ್ಟು ಕುಕೃತ್ಯ ಎಸಗಿದ್ದ ನಕ್ಸಲರನ್ನು ಬಗ್ಗುಬಡಿಯಲಾಗಿದೆ. ಅನೇಕರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರಿಗೆ ಅಗತ್ಯ ಪ್ಯಾಕೇಜ್ ತಂದು ನಕ್ಸಲ್ ಚಟುವಟಿಕೆಯಿಂದ ವಿಮುಕ್ತಗೊಳಿಸಲಾಗಿದೆ. ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಿಂದ ಇವರ ಹಾವಳಿ ಇಲ್ಲದೆ, ಜನತೆ ಹಾಗೂ ಸರಕಾರಗಳು ನೆಮ್ಮದಿಯಿಂದ ಇದ್ದವು.
ಲೋಕಸಭೆ ಚುನಾವಣೆ ಬೆನ್ನಲ್ಲೇ ಕಾಣಿಸಿಕೊಂಡಿರುವುದು ಆತಂಕ ಮೂಡಿರು ವುದಷ್ಟೆ ಅಲ್ಲದೆ, ಪೊಲೀಸರು, ಚುನಾವಣ ಆಯೋಗಕ್ಕೂ ತಲೆನೋವಾಗಿ ಪರಿಣ ಮಿಸಿದೆ. ಹೀಗಾಗಿ ಹೆಚ್ಚಿನ ಬಂದೋಬಸ್ತ್ ಕೂಡ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೂ ಆಸ್ಪದ ಕೊಡಬಾರದು ಎಂಬ ನಿಟ್ಟಿನಲ್ಲಿ ನಿಗಾ ಇಡಲಾಗಿದೆ.
ಇಂಥ ಚಟುವಟಿಕೆಗಳ ಬಗ್ಗೆ ಕಠಿನ ನಿಗ್ರಹಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತ. ಪ್ರಸಕ್ತ ರಾಜ್ಯದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮಾತ್ರ ನ್ಸಕಲ್ ನಿಗ್ರಹ ಪಡೆ ಇದ್ದು, ನೆರೆಯ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂಥ ಘಟನೆಗಳು ನಡೆದಾಗ ಎಎನ್‌ಎಫ್ ಸಿಬಂದಿ ತತ್‌ಕ್ಷಣ ಧಾವಿಸುವುದು ಕಷ್ಟವಾಗಬಹುದು. ಈ ನಿಟ್ಟಿನಲ್ಲಿ ಪಡೆಯ ಶಾಖೆಗಳನ್ನು ಅಲ್ಲಲ್ಲಿ ಕ್ರಿಯಾಶೀಲವಾಗಿಸುವತ್ತ ಚಿಂತಿಸುವುದು ಒಳಿತು.
ನಾಗರಿಕ ಸಮಾಜದಲ್ಲಿ ಸಂವಿಧಾನದಡಿ ಹೋರಾಡಲಾಗದೆ ಸಾರ್ವಜನಿಕರನ್ನು ಆತಂಕಕ್ಕೆ ದೂಡುವುದು, ಕೂಲಿ-ಕಾರ್ಮಿಕರು, ಕಾಡಂಚಿನ ಜನರನ್ನು ಒತ್ತೆಯಾಳು ಗಳಾಗಿ ಇಟ್ಟುಕೊಳ್ಳುವುದು, ಸರಕಾರಗಳಿಗೆ ಸವಾಲೊಡ್ಡುವುದು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಲ್ಲದೇ ಹೊರತು, ಮತಾöವ ಪ್ರಯೋಜನವನ್ನೂ ತಂದು ಕೊಡುವುದಿಲ್ಲ. ಜನರಿಗಿಂದು ಎಲ್ಲರಿಂದಲೂ ನೆಮ್ಮದಿಯ ಜೀವನವಷ್ಟೇ ಬೇಕಿರುವುದು. ಸಾಮಾಜಿಕ ವ್ಯವಸ್ಥೆಯನ್ನು ಅಲ್ಲಾಡಿಸುತ್ತೇವೆ ಎಂದುಕೊಳ್ಳುವುದು ಇಂದಿನ ನಾಗರಿಕ ಸಮಾಜದಲ್ಲಿ ಸುಲಭವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೋರಾಟದ ಹೆಸರಿನಲ್ಲಿ ಜನರ ನೆಮ್ಮದಿ ಕೆಡಿಸಿದರೆ, ಜನರೇ ನಕ್ಸಲರ ವಿರುದ್ಧ ತಿರುಗಿ ಬೀಳುವ ಕಾಲವಿದು. ಹೋರಾಟ ಮಾಡುವುದೇ ಆದರೆ ಮುಖ್ಯವಾಹಿನಿಗೆ ಬಂದು ಹಕ್ಕೊತ್ತಾಯಗಳನ್ನು ಮಂಡಿಸಲು ಅವಕಾಶವಿದೆ. ಇದನ್ನು ಬಳಸಿಕೊಂಡು ನ್ಯಾಯ ಪಡೆದ ಅನೇಕರು ನಕ್ಸಲ್ ಚಟುವಟಿಕೆಯಿಂದ ಹೊರಬಂದಿರುವುದೂ ಉಂಟು. ಈ ಬಗ್ಗೆ ಸರಕಾರ ಕೂಡ ಸಾಕಷ್ಟು ಜಾಗೃತಿಗಳನ್ನು ಮೂಡಿಸಿರುವುದೂ ಅಲ್ಲದೆ ಮುಖ್ಯವಾಹಿನಿಗೆ ಬರುವ ಅವಕಾಶಗಳನ್ನೂ ಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.