ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಪರಿಹಾರ ಕಾರ್ಯವೇ ಸವಾಲು


Team Udayavani, Oct 21, 2020, 5:54 AM IST

ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಪರಿಹಾರ ಕಾರ್ಯವೇ ಸವಾಲು

ಸಾಂದರ್ಭಿಕ ಚಿತ್ರ

ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿದೆ. ಆಗಸ್ಟ್‌ನಲ್ಲಿ ಕಂಡು ಬಂದ ಪ್ರವಾಹ ಇನ್ನೇನು ತಗ್ಗಿತು ಎನ್ನುವುದರೊಳಗೆ ಮತ್ತೆ ಪ್ರವಾಹ ಹಲವು ಸಮಸ್ಯೆ-ಸಂಕಷ ಸೃಷ್ಟಿಸಿದೆ. ನದಿ,ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಲಕ್ಷಾಂತರ ಹೆಕ್ಟೇರ್‌ನಲ್ಲಿ ಬೆಳೆದು ನಿಂತ ಬೆಳೆ ನೀರಿಗಾಹುತಿಯಾಗಿದೆ. ಜನ-ಜಾನುವಾರು ಮೃತಪಟ್ಟಿದ್ದು, ಅದೆಷ್ಟೋ ಮನೆಗಳು ಭಾಗಶಃ ಅಥವಾ ಪೂರ್ಣ ನೆಲಕ್ಕುರಳಿವೆ. ಸಾವಿರಾರು ಕಿಮೀ ನಗರ- ಗ್ರಾಮಾಂತರ ರಸ್ತೆ ಹಾಗೂ ಸೇತುವೆಗಳು ಆಕಾರ ಕಳೆದುಕೊಂಡಿವೆ. ಪ್ರವಾಹದಿಂದಾದ ಆವಾಂತರದಿಂದ ರಕ್ಷಣೆ ಹಾಗೂ ಬದುಕು ಕಟ್ಟಿಕೊಳ್ಳಲು ಜನರು ಸರ್ಕಾರದತ್ತ ನೋಡುತ್ತಿದ್ದು, ಸಂತ್ರಸ್ತರ ನೋವಿಗೆ ಸೂಕ್ತ ಸ್ಪಂದನೆ, ನೆರವು ದೊರೆಯಬೇಕಾಗಿದೆ.

ಬರದ ನಾಡು ಎಂದೇ ಬಿಂಬಿತವಾಗಿರುವ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳೀಗ ಮಲೆನಾಡು ಸ್ವರೂಪ ಪಡೆದುಕೊಂಡಿವೆಯೇ ಎನ್ನುವಷ್ಟರ ಮಟ್ಟಿಗೆ ಮಳೆ ಬೀಳತೊಡಗಿದೆ. ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬೆಳಗಾವಿ ಜಿಲ್ಲೆಗಳು ಪ್ರವಾಹದಿಂದ ನಲುಗುವಂತಾಗಿದ್ದು, ಮಳೆಯಿಂದಾಗಿ ಈ ಭಾಗದ ಇತರೆ ಜಿಲ್ಲೆಗಳು ಸಹ ಹಾನಿಗೀಡಾಗಿವೆ. ಕೃಷ್ಣಾ, ಭೀಮಾ, ಕಾಗಿಣಾ, ಘಟಪ್ರಭಾ, ಮಲಪ್ರಭಾ, ದೂಧ್‌ಗಂಗಾ, ವೇದಗಂಗಾ, ತುಂಗಭದ್ರಾ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದ ಗ್ರಾಮಗಳು, ಲಕ್ಷಾಂತರ ಹೆಕ್ಟೇರ್‌ ಕೃಷಿ ಭೂಮಿಗೆ ನೀರು ನುಗ್ಗಿದ್ದು, ಜನರ ಬದುಕನ್ನೇ ಅನಾಥವಾಗಿಸಿದೆ.

ಮುಂಗಾರು ಹಂಗಾಮಿನ ಬೆಳೆ ಇನ್ನೇನು ಕೈ ಸೇರುತ್ತಿದೆ ಎನ್ನುವಾಗಲೇ ನಿರಂತರ ಮಳೆ, ಪ್ರವಾಹದಿಂದಾಗಿ ಕಣ್ಣೆದುರೇ ಬೆಳೆದು ನಿಂತ ಬೆಳೆ ಹಾಳಾಗುತ್ತಿರುವುದು ಕಂಡು ಅನ್ನದಾತರು ನೊಂದಿದ್ದಾರೆ. ಬೆಳೆ ಹಾನಿಗೀಡಾದ ನೋವು ಒಂದು ಕಡೆಯಾದರೆ, ಸೆಪ್ಟೆಂಬರ್‌ನಲ್ಲಿ ಹಿಂಗಾರು ಬಿತ್ತನೆ ಆರಂಭವಾಗಬೇಕಾಗಿತ್ತು. ಸತತ ಮಳೆಯಿಂದಾಗಿ ಅದು ಸಾಧ್ಯವಾಗದೆ, ಹಿಂಗಾರು ಬೆಳೆಯ ಗತಿ ಏನು ಎಂಬ ಸಂಕಷ್ಟ ಎದುರಾಗಿದೆ. 2009ರ ಸೆ.28ರಿಂದ ಅ.4ರವರೆಗೆ ಕಂಡು ಬಂದ ಐದು ದಿನಗಳ ಪ್ರವಾಹದಿಂದ ಉತ್ತರ ಕರ್ನಾಟಕ ಅಕ್ಷರಶಃ ನಲುಗಿತ್ತು. ಸುಮಾರು 60 ವರ್ಷಗಳ ಇತಿಹಾಸದಲ್ಲೇ ಕಂಡರಿಯದ ಪ್ರವಾಹ ಅದಾಗಿತ್ತು. 2019ರ ಜುಲೈನಲ್ಲಿ ಕಂಡು ಬಂದ ಪ್ರವಾಹ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 22 ಜಿಲ್ಲೆಗಳಲ್ಲಿ ಸಾಕಷ್ಟು ಸಾವು-ನೋವು, ನಷ್ಟ ಸೃಷ್ಟಿಸಿತ್ತು. ಸುಮಾರು 9 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿ ಸೇರಿದಂತೆ ಅಂದಾಜು 32 ಸಾವಿರ ಕೋಟಿ ರೂ. ಹಾನಿಯಾಗಿತ್ತು.

ಇದೇ ವರ್ಷದ ಆಗಸ್ಟ್‌ನಲ್ಲಿ ಸುರಿದ ಮಳೆಯ ಪ್ರಮಾಣ 44 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ್ದೆಂದು ಅಂದಾಜಿಸಲಾಗಿದೆ. ಅಕ್ಟೋಬರ್‌ನಲ್ಲಿ ಸುರಿದ ಮಳೆ ಧಾರವಾಡ ಹಾಗೂ ಹಾವೇರಿ ಹೊರತುಪಡಿಸಿದರೆ ಉತ್ತರ ಕರ್ನಾಟಕ ಇತರೆ 11 ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.175ರಿಂದ ಶೇ.712ರಷ್ಟು ಅಧಿಕವಾಗಿದೆ. ಈ ವರ್ಷದ ಮಳೆ, ಪ್ರವಾಹ, ಸಿಡಿಲು, ಮನೆ ಕುಸಿತದಿಂದಾಗಿ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಇದುವರೆಗೆ ಸುಮಾರು 95 ಜನರು ಮೃತಪಟ್ಟಿದ್ದು, ನೂರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಸುಮಾರು 9.54 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದ ಬೆಳೆ ಹಾನಿಗೀಡಾಗಿದೆ. ತಜ್ಞರ ಪ್ರಕಾರ 2021-2050ರ ಯೋಜಿತ ಅವಧಿಯಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಮತ್ತಷ್ಟು ಅಪಾಯ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು, ಬರುವ ದಿನಗಳು ಇನ್ನಷ್ಟು ಕಠಿಣವಾಗಲಿವೆ ಎಂಬ ಸಂದೇಶ ರವಾನೆ ಆಗುತ್ತಿದೆ. ಶಾಶ್ವತ ಪರಿಹಾರ ಕ್ರಮಗಳಿಗೆ ಸರ್ಕಾರ ಮುಂದಾಗಬೇಕಾಗಿದೆ. ಮಳೆ-ಪ್ರವಾಹದ ಹೊಡೆತಕ್ಕೆ ಸಿಲುಕಿ ಎಲ್ಲವನ್ನು ಕಳೆದು ಕೊಂಡ ಸಂತ್ರಸ್ತರ ಪಾಲಿಗೆ ತಾನಿರುವುದಾಗಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಸಂಕಷ್ಟಕ್ಕೆ ಸಿಲುಕಿದ ಜನರಿಗೆ ತುರ್ತು ಅಗತ್ಯತೆಗಳ ಪೂರೈಕೆ, ಕಾಲಮಿತಿಯೊಳಗೆ ಬೆಳೆ-ಆಸ್ತಿ ನಷ್ಟದ ಅಂದಾಜು, ಸೂಕ್ತ ಪರಿಹಾರ ನೀಡಿಕೆ ಕಾರ್ಯಗಳು ಯುದ್ದೋಪಾದಿಯಲ್ಲಿ ಸಾಗಬೇಕಾಗಿದೆ.

ಟಾಪ್ ನ್ಯೂಸ್

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

1

Editorial: ಕಾಳ್ಗಿಚ್ಚು ಸಂಭವಿಸುವ ಮುನ್ನವೇ ಇರಲಿ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.