ಈಶಾನ್ಯದಲ್ಲಿ ಕೇಸರಿ ಅಲೆ ಮುಂದುವರಿದ ಬಿಜೆಪಿ ಗೆಲುವಿನ ನಾಗಾಲೋಟ 


Team Udayavani, Mar 5, 2018, 6:00 AM IST

PTI3_4_2018_000103B.jpg

ತ್ರಿಪುರ, ನಾಗಾಲ್ಯಾಂಡ್‌ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆ ಫ‌ಲಿತಾಂಶ ಇಡೀ ದೇಶದಲ್ಲಿ ಭಾರೀ ಚರ್ಚೆಗೊಳಗಾಗಿದೆ. ಅದರಲ್ಲೂ ತ್ರಿಪುರದಲ್ಲಿ ಎಡಪಕ್ಷದ 25 ವರ್ಷಗಳ ನಿರಂತರ ಆಳ್ವಿಕೆಯನ್ನು ಕೊನೆಗೊಳಿಸಿದ್ದು ಮಾತ್ರವಲ್ಲದೆ ನಿಚ್ಚಳ ಬಹುಮತ ಸಾಧಿಸಿದ್ದು ಅದ್ಭುತ ಸಾಧನೆ ಎಂದೇ ಹೇಳಲಾಗುತ್ತಿದೆ. 

ಇದೇ ಮೊದಲ ಸಲ ದೇಶದಲ್ಲಿ ಎಡ ಮತ್ತು ಬಲ ಸಿದ್ಧಾಂತಗಳು ನೇರವಾಗಿ ಮುಖಾಮುಖೀಯಾಗಿದ್ದವು. ಈ ಹೋರಾಟದಲ್ಲಿ ಬಲ ಸಿದ್ಧಾಂತಕ್ಕೆ ದಕ್ಕಿದ ಗೆಲುವು ಭವಿಷ್ಯದ ರಾಜಕೀಯದ ದಿಕ್ಸೂಚಿ ಎನ್ನಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷ ಸಿಪಿಎಂನ 30 ವರ್ಷಗಳ ಸತತ ಆಳ್ವಿಕೆಯನ್ನು ಕೊನೆಗೊಳಿಸಿದ ಮಾದರಿಯಲ್ಲೇ ಬಿಜೆಪಿ ತ್ರಿಪುರದಲ್ಲಿ ಮಾಣಿಕ್‌ ಸರ್ಕಾರ್‌ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿದೆ ಎಂಬ ಹೋಲಿಕೆಯನ್ನು ರಾಜಕೀಯ ವಿಶ್ಲೇಷಕರು ಮಾಡುತ್ತಿದ್ದಾರೆ. ಐದು ವರ್ಷದ ಹಿಂದೆ ಸ್ಪರ್ಧಿಸಿದ 50 ಸ್ಥಾನಗಳ ಪೈಕಿ 49ರಲ್ಲಿ ಠೇವಣಿ ಕಳೆದುಕೊಂಡಿದ್ದ ಪಕ್ಷವೊಂದು ಎಲ್ಲ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಅಧಿಕಾರಕ್ಕೇರಿದ್ದು ನಿಜವಾಗಿಯೂ ಪಲ್ಟಿಯೇ ಸರಿ (ಚಲೋ ಪಲ್ಟಾಯಿ ಎನ್ನುವುದು ತ್ರಿಪುರದಲ್ಲಿ ಬಿಜೆಪಿಯ ಘೋಷಾವಾಕ್ಯವಾಗಿತ್ತು). 

ಈಶಾನ್ಯ ಭಾರತದಲ್ಲಿ ಕೇಸರಿ ಅಲೆ ಎದ್ದಿರುವುದು ಉಳಿದ ಪಕ್ಷಗಳ ನಿದ್ದೆಗೆಡಿಸಿರುವುದು ಸಹಜ. ಅದರಲ್ಲೂ ಎರಡು ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡಿರುವ ಕಾಂಗ್ರೆಸ್‌ನ ಪ್ರತಿಷ್ಠೆಗೆ ಈ ಫ‌ಲಿತಾಂಶದಿಂದ ಭಾರೀ ಹೊಡೆತ ಬಿದ್ದಿದೆ. ಗುಜರಾತ್‌ ವಿಧಾನಸಭೆ ಚುನಾವಣೆ ಹಾಗೂ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಉಪಚುನಾವಣೆಗಳಲ್ಲಿ ದಕ್ಕಿದ ಗೆಲುವಿನಿಂದ ಚೇತರಿಕೆಯ ಹಾದಿಯಲ್ಲಿರುವಂತೆ ಕಂಡಿದ್ದ ಕಾಂಗ್ರೆಸ್‌ ಮತ್ತೆ ಮಕಾಡೆ ಮಲಗಿದೆ. ನರೇಂದ್ರ ಮೋದಿಯ ವರ್ಚಸ್ಸಿನೆದುರು ರಾಹುಲ್‌ ಗಾಂಧಿಯ ವರ್ಚಸ್ಸು ಏನೇನೂ ಅಲ್ಲ ಎನ್ನುವುದು ಈ ಚುನಾವಣೆಯಲ್ಲಿ ಸಾಬೀತಾಗಿರುವ ಒಂದು ಮುಖ್ಯ ಅಂಶ. 

ಈಶಾನ್ಯ ರಾಜ್ಯಗಳ ಫ‌ಲಿತಾಂಶ ಖಂಡಿತವಾಗಿಯೂ ಮುಂಬರುವ ವಿಧಾನಸಭೆ ಮತ್ತು 2019ರ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಉಪಚುನಾವಣೆಗಳ ಸೋಲೇ ಮೋದಿಯ ಜನಪ್ರಿಯತೆ ಕುಸಿಯುತ್ತಿರುವ ಲಕ್ಷಣ ಎನ್ನುತ್ತಿದ್ದ ವಿರೋಧ ಪಕ್ಷಗಳಿಗೆ ಬಿಜೆಪಿ ತಕ್ಕ ಉತ್ತರ ನೀಡಿದೆ. ಸದ್ಯದಲ್ಲೇ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಈಶಾನ್ಯದ ಗೆಲುವು ಹೊಸ ಹುರುಪು ತುಂಬುವುದರಲ್ಲಿ ಸಂಶಯವಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶಗಳಂತಹ ಕೆಲವು ರಾಜ್ಯಗಳಲ್ಲಿ ಕೊರತೆಯಾಗುವ ಸ್ಥಾನಗಳನ್ನು ಈಶಾನ್ಯದ ರಾಜ್ಯಗಳಿಂದ ತುಂಬಿಕೊಳ್ಳುವ ಅವಕಾಶ ಬಿಜೆಪಿಗಿದೆ. 

ಹಾಗೆಂದು ಈ ಗೆಲುವು ಸುಲಭವಾಗಿ ದಕ್ಕಿದೆ ಎನ್ನುವಂತಿಲ್ಲ. ಆಯಾಯ ರಾಜ್ಯಕ್ಕೆ ತಕ್ಕಂತೆ ತಂತ್ರಗಾರಿಕೆಯನ್ನು ರೂಪಿಸಿಕೊಂಡು, ಕಾರ್ಯಕರ್ತರು ಮತ್ತು ನಾಯಕರು ಸದಾ ಸಕ್ರಿಯರಾಗಿರುವಂತೆ ನೋಡಿಕೊಂಡ ಫ‌ಲವಾಗಿ ಬಿಜೆಪಿ ಗೆಲುವಿನ ನಗೆ ಬೀರಿದೆ. ತ್ರಿಪುರದಲ್ಲಿ ಆಡಳಿತರೂಢ ಸಿಪಿಎಂಗಿದ್ದ ಏಕೈಕ ಆಸರೆ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರ ನಿಷ್ಕಳಂಕ ಇಮೇಜ್‌ ಮತ್ತು ಅತಿ ಬಡ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ. ಆದರೆ ಈ ಮುಖ್ಯಮಂತ್ರಿ ತಾನು ಬಡವನಾಗಿ ಉಳಿದದ್ದು ಮಾತ್ರವಲ್ಲದೆ ತನ್ನ ರಾಜ್ಯವನ್ನು ಬಡತನಕ್ಕೆ ನೂಕಿದ್ದರು. 

ಯುವ ಜನತೆಯ ಆಶೋತ್ತರಗಳಿಗೆ ಪ್ರತಿಸ್ಪಂದಿಸುವ ಗುಣಗಳು ಸಿಪಿಎಂ ಮತ್ತು ಕಾಂಗ್ರೆಸ್‌ನಲ್ಲಿ ಇಲ್ಲದಿರುವುದೇ ಆ ಪಕ್ಷಗಳ ಹಿನ್ನಡೆಗೆ ಕಾರಣ. 25 ವರ್ಷ ಎನ್ನುವುದು ಯಾವುದೇ ಪಕ್ಷಕ್ಕಾದರೂ ಸುದೀರ್ಘ‌ ಅವಧಿ. ಪುಟ್ಟದೊಂದು ರಾಜ್ಯವನ್ನು ಈ ಅವಧಿಯಲ್ಲಿ ಮಾದರಿಯಾಗಿ ಕಟ್ಟಿ ನಿಲ್ಲಿಸಬಹುದಿತ್ತು. ಆದರೆ ಮಾಣಿಕ್‌ ಸರ್ಕಾರ್‌ ತನ್ನ ಇಮೇಜ್‌ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಹೊರತು ರಾಜ್ಯವನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಲಿಲ್ಲ ಎಂಬ ಅಸಮಾಧಾನ ಜನರಿಗಿತ್ತು. ಈ ಅಸಮಾಧಾನವನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ಬಿಜೆಪಿ ಸಫ‌ಲವಾಗಿದೆ. 

ಸದ್ಯ ಎರಡು ರಾಜ್ಯಗಳಲ್ಲಿ ಸರಕಾರ ರಚಿಸಲು ಬಿಜೆಪಿಗೇನೂ ಸಮಸ್ಯೆಯಿಲ್ಲ. ಮೇಘಾಲಯದಲ್ಲೂ ಸರಕಾರ ರಚನೆಗೆ ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಮೂಲಕ 22 ರಾಜ್ಯಗಳಲ್ಲಿ ಸರಕಾರ ಹೊಂದಿರುವ ಐತಿಹಾಸಿಕ ದಾಖಲೆ ಮಾಡಲು ತುದಿಗಾಲಲ್ಲಿ ನಿಂತಿದೆ. ಆದರೆ ಇಷ್ಟಕ್ಕೆ ಪಕ್ಷ ತೃಪ್ತಿ ಪಟ್ಟುಕೊಳ್ಳುವಂತಿಲ್ಲ. ವರ್ಷಾಂತ್ಯದಲ್ಲಿ ಮಿಜೋರಾಂ ರಾಜ್ಯದ ಚುನಾವಣೆ ನಡೆಯಲಿದ್ದು, ಗೆಲುವಿನ ನಾಗಾಲೋಟವನ್ನು ಮುಂದುವರಿಸುವ ಅಗತ್ಯ ಬಿಜೆಪಿಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಿರಂತರವಾಗಿ ಗೆಲ್ಲುತ್ತಾ ಹೋಗುವುದೇ ಬಿಜೆಪಿಗೆ ಟೀಕಾಕಾರರ ಬಾಯಿ ಮುಚ್ಚಿಸಲು ಇರುವ ಏಕೈಕ ದಾರಿ. 

ಟಾಪ್ ನ್ಯೂಸ್

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.