ಪ್ರತಿಪಕ್ಷಗಳಿಂದ ವಿರೋಧಕ್ಕಾಗಿ ವಿರೋಧ: ನಿತೀಶ್‌ ಹೇಳಿದ ರಾಜನೀತಿ


Team Udayavani, Jul 5, 2017, 7:36 AM IST

Ankana-3.jpg

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮಾಡಿದುದ್ದನ್ನೆಲ್ಲ ವಿರೋಧಿಸಬೇಕೆಂಬ ಮನಃಸ್ಥಿತಿ ಮಾತ್ರ ಕಾಂಗ್ರೆಸ್‌ನ ವಿರೋಧದಲ್ಲಿ ಕಾಣಿಸುತ್ತಿದೆ. 

ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಆಡಳಿತ ಪಕ್ಷದಷ್ಟೇ ಪ್ರಮುಖ ಸ್ಥಾನವಿದೆ. ಯಾವುದೇ ಸರಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಸಶಕ್ತ ವಿರೋಧ ಪಕ್ಷ ಇರುವುದು ಅಗತ್ಯ. ರಚನಾತ್ಮಕ ವಿರೋಧ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸಶಕ್ತವಾಗಿಸುತ್ತದೆ. ಇದು ಪ್ರಜಾಪ್ರಭುತ್ವದ ಮೂಲಪಾಠ. ಈಗಿನ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ನಮ್ಮ ವಿರೋಧ ಪಕ್ಷಗಳಿಗೆ ಈ ಪಾಠವನ್ನು ಶುರುವಿನಿಂದ ಹೇಳಬೇಕಾಗಿ ಬಂದಿರುವುದು ದುರದೃಷ್ಟಕರ. 2014ರ ಚುನಾವಣೆಯಲ್ಲಿ ಪ್ರಚಂಡವಾಗಿ ಬೀಸಿದ ಮೋದಿ ಅಲೆಯಲ್ಲಿ ಎಲ್ಲ ಪಕ್ಷಗಳು ಕೊಚ್ಚಿ ಹೋಗಿದ್ದರೂ ಸಂಸತ್ತು ಸಂಪೂರ್ಣ ವಿರೋಧ ಪಕ್ಷ ರಹಿತವಾಗಿಲ್ಲ. ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಇಲ್ಲದಿರಬಹುದು. ಆದರೆ ಅತ್ಯಧಿಕ ಸ್ಥಾನಬಲವಿದೆ ಎಂಬ ನೆಲೆಯಲ್ಲಿ ಅದು ವಿರೋಧ ಪಕ್ಷದ ಪಾತ್ರವನ್ನು ನಿಭಾಯಿಸುತ್ತಿದೆ. ಹಾಗೆಂದು ಕಾಂಗ್ರೆಸ್‌ ಹಾಗೂ ಅದರ ಜತೆಗಿನ‌ ಉಳಿದ ಪಕ್ಷಗಳನ್ನು ಪರಿಣಾಮಕಾರಿ ವಿರೋಧ ಪಕ್ಷಗಳು ಎಂದು ಕರೆಯಲು ಸಾಧ್ಯವಿಲ್ಲ. ಈಗ ವಿರೋಧ ಪಕ್ಷಗಳು ಮಾಡುತ್ತಿರುವುದು ವಿರೋಧಕ್ಕಾಗಿ ವಿರೋಧವೇ ಹೊರತು ರಚನಾತ್ಮಕ ವಿರೋಧವಲ್ಲ. ಈ ಮಾತನ್ನೇ ಬಿಹಾರದ ಸಿಎಂ ನಿತೀಶ್‌ ಕುಮಾರ್‌ ಹೇಳಿರುವುದು. 

ಸರಕಾರದ ವಿರುದ್ಧ ವಿಪಕ್ಷಗಳು ಪರ್ಯಾಯ ನಿರೂಪಣೆಗಳನ್ನು ಮಾಡಬೇಕು; ಹೊರತಾಗಿ ಸರಕಾರ ಏನು ಹೇಳುತ್ತದೋ ಅದಕ್ಕೆ ಪ್ರತಿಕ್ರಿಯಾತ್ಮಕ ನಿರೂಪಣೆಗಳನ್ನಲ್ಲ ಎಂದಿದ್ದಾರೆ ನಿತೀಶ್‌. ಅರ್ಥಾತ್‌, ಸರಕಾರದ ಹಾದಿ ಸರಿಯಾಗಿಲ್ಲ ಎಂದಾಗಿದ್ದಾರೆ ಸರಿಯಾದುದು ಯಾವುದು ಎನ್ನುವುದನ್ನು ತೋರಿಸಿ ಕೊಡಬೇಕೇ ವಿನಾ ನೀವು ತಪ್ಪು ಮಾಡಿದ್ದೀರಿ ಎಂದಷ್ಟೇ ಬೆಟ್ಟು ಮಾಡುವುದೇ ವಿರೋಧಿಸುವ ಕ್ರಮವಲ್ಲ ಎನ್ನುವುದು ನಿತೀಶ್‌ ಮಾತಿನ ತಾತ್ಪರ್ಯ. ಕೇಂದ್ರ ಸರಕಾರ ಅಥವಾ ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದ ಸರಕಾರ ಏನೇ ಮಾಡಿದರೂ ಅದನ್ನು ವಿರೋಧಿಸುವುದನ್ನೇ ಕಾಯಕ ಮಾಡಿಕೊಂಡಿವೆ ಪ್ರತಿಪಕ್ಷಗಳು. ಹಾಲಿ ಕಾಂಗ್ರೆಸ್‌ ನಾಯಕರು ಈ ವಿಚಾರದಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಮುಂದಿದ್ದಾರೆ. ನೋಟು ರದ್ದು ಮಾಡಿದ ನಿರ್ಧಾರವಿರಲಿ, ಸರ್ಜಿಕಲ್‌ ಸ್ಟೈಕ್‌ ಇರಲಿ ಅಥವಾ ಜಿಎಸ್‌ಟಿ ಇರಲಿ- ಕಾಂಗ್ರೆಸ್‌ನಿಂದ ಕೊಂಕು ಮಾತು ಕೇಳಿ ಬಂದಿದೆಯೇ ಹೊರತು ಸರಿ ಯಾವುದು ಎನ್ನುವುದನ್ನು ಈ ಪಕ್ಷ ತೋರಿಸಿಕೊಟ್ಟಿಲ್ಲ. ಶತಾಯಗತಾಯ ಮೋದಿ ಮಾಡಿದುದ್ದನ್ನೆಲ್ಲ ವಿರೋಧಿಸಬೇಕೆಂಬ ಮನಃಸ್ಥಿತಿ ಮಾತ್ರ ಕಾಂಗ್ರೆಸ್‌ನ ವಿರೋಧದಲ್ಲಿ ಕಾಣಿಸುತ್ತಿದೆ. ಮನಮೋಹನ್‌ ಸಿಂಗ್‌, ಮಲ್ಲಿಕಾರ್ಜುನ ಖರ್ಗೆಯಂತಹ ಕೆಲವು ಅನುಭವಿ ಹಿರಿಯ ನಾಯಕರನ್ನು ಹೊರತುಪಡಿಸಿದರೆ ಈ ಮೂರು ವರ್ಷದಲ್ಲಿ ಸಂಸತ್ತಿನಲ್ಲಿ ತಲೆದೂಗುವಂತಹ ಭಾಷಣ ಮಾಡಿದ ಬೇರೊಬ್ಬ ವಿರೋಧ ಪಕ್ಷ ನಾಯಕ ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಕೆಲವು ಸಂಸದರ ಸಂಸತ್ತಿನ ನಿರ್ವಹಣೆಯನ್ನು ಹೇಳದಿರುವುದೇ ವಾಸಿ. ಪಾಂಡಿತ್ಯಪೂರ್ಣ ಭಾಷಣದಿಂದ ಸರಕಾರವನ್ನು ಕಂಗೆಡಿಸುತ್ತಿದ್ದ ಎಡಪಕ್ಷಗಳು ನಾಯಕರು ಕೂಡ ಈಗ ಮಂಕಾಗಿದ್ದಾರೆ. ಹೀಗಾಗಿಯೇ ಈಗ ಯಾರೂ ವಿರೋಧ ಪಕ್ಷಗಳ ವಿರೋಧವನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೆ ಹೋಗುವುದಿಲ್ಲ.  ಮಮತಾ, ಕೇಜ್ರಿವಾಲ್‌ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಪಕ್ಷ ಮುಖಂಡರು ತಮ್ಮ ವಿವೇಚನಾರಹಿತ ವರ್ತನೆಗಳಿಂದಾಗಿ ಲಘುವಾಗುತ್ತಿದ್ದಾರೆ. ವಿರೋಧಿ ಪಾಳಯದಲ್ಲಿ ಪ್ರಬುದ್ಧವಾಗಿ ಮಾತನಾಡುತ್ತಿರುವುದು ನಿತೀಶ್‌  ಮಾತ್ರ. ರಾಷ್ಟ್ರಪತಿ ಅಭ್ಯರ್ಥಿ ಚುನಾವಣೆಯಲ್ಲಿ 

ಎನ್‌ಡಿಎ ಅಭ್ಯರ್ಥಿ ಕೋವಿಂದ್‌ರನ್ನು ಬೆಂಬಲಿಸುವ ನಿರ್ಧಾರದಿಂದಾಗಿ ನಿತೀಶ್‌ ಮಿತ್ರ ಪಕ್ಷಗಳ ಸಿಟ್ಟಿಗೆ ಗುರಿಯಾಗಿದ್ದಾರೆ. ಮಹಾಘಟಬಂಧನ್‌ನ ಪ್ರಮುಖ ಪಕ್ಷವಾಗಿರುವ ಆರ್‌ಜೆಡಿ ನಿತೀಶ್‌ಗೆ ಆಗಲೇ ದ್ರೋಹಿಯ ಪಟ್ಟ ಕಟ್ಟಿದೆ. ಅಂತೆಯೇ ಕಾಂಗ್ರೆಸ್‌ ಕೂಡ ಅವರನ್ನು ದೂರವಿಡಲು ಪ್ರಯತ್ನಿಸುತ್ತಿದೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ನಿತೀಶ್‌ ತನ್ನ ನಿಲುವಿಗೆ ಅಂಟಿಕೊಂಡಿದ್ದಾರೆ. ಉಳಿದೆಲ್ಲ ಪಕ್ಷಗಳು ಜಿಎಸ್‌ಟಿಯಲ್ಲಿ ಏನಾದರೂ ತಪ್ಪು ಕಂಡುಕೊಂಡಿದ್ದರೆ ನಿತೀಶ್‌ ಮಾತ್ರ ಅದನ್ನು ಪೂರ್ಣ ಬೆಂಬಲಿಸಿದ್ದಾರೆ. ಈ ಮೂಲಕ ತತ್‌ಕ್ಷಣದ ರಾಜಕೀಯ ಲಾಭಕ್ಕಿಂತ ದೇಶದ ಹಿತ ಮುಖ್ಯ ಎನ್ನುವ ಸಂದೇಶ ನೀಡಿದ್ದಾರೆ. ಇದೊಂದು ಪರಿಪಕ್ವ ಪ್ರತಿಪಕ್ಷದ ನಾಯಕ ಕೈಗೊಳ್ಳಬೇಕಾದ ನಿಲುವು. 2019ರ ಚುನಾವಣೆಯಲ್ಲಿ ತಾನು ಪ್ರಧಾನಿಯಾಗುವುದಿಲ್ಲ ಎಂದಿದ್ದಾರೆ ನಿತೀಶ್‌. ಆದರೆ ಕನಿಷ್ಠ ಅವರಿಗೆ ವಿರೋಧ ಪಕ್ಷದ ಸಾಲ‌ಲ್ಲಿ ಕುಳಿತುಕೊಳ್ಳುವ ಅವಕಾಶವಾದರೂ ಸಿಕ್ಕಿದರೆ ವಿರೋಧ ಪಕ್ಷಕ್ಕೆ ಒಂದಿಷ್ಟು ಘನತೆಯಾದರೂ ಬಂದೀತು.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.