ಮುಗ್ಧರ ಪ್ರಕರಣ: ಸರಕಾರಕ್ಕೆ ಮುಖಭಂಗ


Team Udayavani, Jan 29, 2018, 8:32 AM IST

29-4.jpg

ಅಲ್ಪಸಂಖ್ಯಾತ ಸಮುದಾಯದ “ಮುಗ್ಧ’ರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ವಾಪಸು ಪಡೆಯುವ ವಿವಾದವನ್ನು ಸರಕಾರ ಸದ್ಯಕ್ಕೆ ತೇಪೆ ಹಚ್ಚಿ ಶಮನಗೊಳಿಸಲು ಪ್ರಯತ್ನಿಸಿರಬಹುದು. ಆದರೆ ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲಿ ಇಂತಹದ್ದೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವಿತ್ತೇ? ಬಹುಶಃ ಕಾಂಗ್ರೆಸ್‌ಗೆ ಬಡಿಗೆ ಕೊಟ್ಟು ಬಡಿಸಿಕೊಳ್ಳುವುದು ಹೆಚ್ಚು ಇಷ್ಟ ಎಂದು ಕಾಣಿಸುತ್ತದೆ. ಸಿದ್ದರಾಮಯ್ಯ ಸರಕಾರ ಹಿಂದು ವಿರೋಧಿ ಎಂದು ಮನವರಿಕೆ ಮಾಡಿಕೊಡಲು ಬಿಜೆಪಿ ಸಿಗುವ ಚಿಕ್ಕ ಅವಕಾಶವನ್ನು ಬಿಟ್ಟುಕೊಡುತ್ತಿಲ್ಲ. ಇಷ್ಟರ ವರೆಗೆ ಈ ಸರಕಾರ ನಡೆದುಕೊಂಡ ರೀತಿಯೂ ಕೆಲವೇ ಸಮುದಾಯಗಳಿಗೆ ಸೀಮಿತವಾಗಿ ಆಡಳಿತ ನಡೆಸುತ್ತಿರುವಂತೆ ಕಂಡು ಬರುತ್ತಿದೆ. ಪರಿಸ್ಥಿತಿಯ ಇಷ್ಟು ಸೂಕ್ಷ್ಮವಾಗಿರುವಾಗ ಮತ್ತೆ ಮತ್ತೆ ವಿವಾದವನ್ನು ಸೃಷ್ಟಿಸುತ್ತಿರುವುದನ್ನು ನೋಡುವಾಗ ಸರಕಾರದ ಒಳ ಉದ್ದೇಶವೇನೆಂಬುದೇ ಅರ್ಥವಾಗುವುದಿಲ್ಲ. 

ಇನ್ನು ಅಧಿಕಾರಿಗಳ ಕಣ್ತಪ್ಪಿನಿಂದ ಅಲ್ಪ ಸಂಖ್ಯಾಕ ಎಂಬ ಶಬ್ದ ಸೇರ್ಪಡೆಯಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ನೀಡಿರುವ ಸಮಜಾಯಿಷಿಯನ್ನು ನಂಬುವಷ್ಟು “ಮುಗ್ಧ’ರು ಜನರಲ್ಲ. 22 ಜಿಲ್ಲೆಗಳ ಪೊಲೀಸ್‌ ಮುಖ್ಯಸ್ಥರಿಗೆ ಕಳುಹಿಸಿರುವ ಮೂರನೇ ನೆನಪೋಲೆಯಿದು. ಮೂಲ ಸುತ್ತೋಲೆಯನ್ನು ಡಿ .22ರಂದು ಕಳುಹಿಸಲಾಗಿತ್ತು. ಅಂದರೆ ಈ ಹಿಂದೆ ಕಳುಹಿಸಿದ ಸುತ್ತೋಲೆಯಲ್ಲೇ ಅಲ್ಪಸಂಖ್ಯಾಕ ಎಂಬ ಶಬ್ದ ಇತ್ತು ಎಂದಾಯಿತಲ್ಲವೆ? ಇದು ಕಣ್ತಪ್ಪು ಹೇಗಾಗುತ್ತದೆ. ಸರಕಾರದ ನೈಜ ಉದ್ದೇಶ ಅಲ್ಪಸಂಖ್ಯಾಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದೇ ಆಗಿತ್ತು. ಆದರೆ ಅದಕ್ಕೆ ಜನರಿಂದ ವ್ಯಕ್ತವಾದ ಆಕ್ರೋಶ ಮತ್ತು ಚುನಾವಣೆಯಲ್ಲಿ ಆಗಬಹುದಾದ ಹಿನ್ನಡೆಗೆ ಅಂಜಿ ಈಗ ಎಲ್ಲ ಸಮುದಾಯಗಳ ಮುಗ್ಧರು ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಮುಗ್ಧರು ಎಂದರೆ ಯಾರು ? ಮುಗ್ಧರೇ ಆಗಿದ್ದರೆ ಅವರೇಕೆ ಗಲಭೆ ಪ್ರಕರಣಗಳಲ್ಲಿ ಶಾಮೀಲಾಗಬೇಕು? ಮುಗ್ಧರ ಮೇಲೆ ಕೇಸ್‌ ದಾಖಲಿಸಬಾರದು ಎಂಬ ಸಾಮಾನ್ಯ ವಿವೇಚನೆಯೂ ಪೊಲೀಸರಿಗಿಲ್ಲವೆ? ಮುಗ್ಧರು ಹೌದು ಅಲ್ಲವೋ ಎನ್ನುವುದನ್ನು ನಿರ್ಧರಿಸುವ ಮಾನಂದಡ ಯಾವುದು? ಕೇಸ್‌ ನ್ಯಾಯಾಲಯಕ್ಕೆ ಹೋಗುವ ಮುನ್ನ ಸರಕಾರವೇ ಮುಗ್ಧರು ಎಂದು ತೀರ್ಮಾನಿಸುವುದಾದರೆ ನ್ಯಾಯಾಲಯ ಏಕಿರಬೇಕು? ಈ ಪ್ರಶ್ನೆಗಳಿಗೆಲ್ಲ ಉತ್ತರ ನೀಡುವ ಹೊಣೆ ಸರಕಾರದ್ದು. 

ಅಪರಾಧಗಳಲ್ಲಿ ರಾಜ್ಯ ಮೇಲಿನ ಸ್ಥಾನದಲ್ಲಿರುವುದು ಇತ್ತೀಚೆಗೆ ರಾಷ್ಟ್ರೀಯ ಅಪರಾಧ ಬ್ಯೂರೊ ಬಹಿರಂಗಪಡಿಸಿದ ಅಂಕಿಅಂಶಗಳಿಂದ ತಿಳಿದು ಬರುತ್ತಿದೆ. ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಮತ್ತು ವ್ಯವಸ್ಥೆ ಪಾಲನೆ ಹದಗೆಟ್ಟಿರುವುದು ಸುಳ್ಳಲ್ಲ. ಪೊಲೀಸ್‌ ಇಲಾಖೆಯಲ್ಲಿ ಸರಕಾರದ ಹಸ್ತಕ್ಷೇಪ ಅತಿ ಎನ್ನಿಸುಷ್ಟು ಆಗಿದೆ ಮತ್ತು ಆಗುತ್ತಿದೆ. ಕಾರ್ಯಕ್ಷಮತೆಯಲ್ಲಿ ಅತ್ಯಂತ ಕಳಪೆ ನಿರ್ವಹಣೆ ತೋರಿರುವುದು ಗೃಹ ಇಲಾಖೆ. ಪೊಲೀಸರ ಆತ್ಮಹತ್ಯೆ, ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆಯಂತಹ ಆರೋಪಗಳನ್ನು ಸರಕಾರ ಹೊತ್ತುಕೊಂಡಿದೆ. ಹಲವು ಅಧಿಕಾರಿಗಳು ಸಹವಾಸವೇ ಬೇಡವೆಂದು ಡೆಪ್ಯುಟೇಶನ್‌ ಮೇಲೆ ಹೋಗಿದ್ದಾರೆ. ಅನುಪಮಾ ಶೆಣೈಯಂತಹ ಕೆಲವರು ರಾಜಕೀನಾಮೆ ಕೊಟ್ಟು ಹೊರಬಂದಿದ್ದಾರೆ. ಇಂತಹ ಹಿನ್ನೆಲೆ ಇರುವಾಗ ಮತ್ತದೇ ತಪ್ಪುಗಳನ್ನು ಮಾಡುತ್ತಿದೆ. ನಿರ್ದಿಷ್ಟ ಸಮುದಾಯದವರನ್ನು ಖುಷಿಪಡಿಸಲು ಆರೋಪಿಗಳನ್ನು ಬಿಟ್ಟು ಬಿಡುವುದಾದರೆ ಪೊಲೀಸರು ಕಷ್ಟಪಟ್ಟು ತನಿಖೆ ಮಾಡಿ ಅವರನ್ನು ಹಿಡಿಯುವ ಅಗತ್ಯವೇನಿತ್ತು?

2015ರಲ್ಲೂ ಸರಕಾರ ಅಲ್ಪಸಂಖ್ಯಾಕರ ಮೇಲಿನ ಪ್ರಕರಣಗಳನ್ನು ಹಿಂಪಡೆದಿತ್ತು. ಮೂಲಭೂತವಾದಿ ಸಂಘಟನೆ ಎಂಬ ಆರೋಪ ಹೊಂದಿರುವ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಕಾರ್ಯಕರ್ತರೇ ಬಹುತೇಕ ಇದರ ಫ‌ಲಾನುಭವಿಗಳಾಗಿದ್ದರು. ಹಿಂದಿನ ಬಿಜೆಪಿ ಸರಕಾರ ಅವರ ಮೇಲೆ ಕೇಸುಗಳನ್ನು ದಾಖಲಿಸಿತ್ತು ಎಂಬ ಏಕೈಕ ಕಾರಣ ಮಾತ್ರ ಸರಕಾರದ ಮುಂದೆ ಪ್ರಕರಣಗಳನ್ನು ಹಿಂಪಡೆಯಲು ಇದ್ದದ್ದು. ಅಂದರೆ ತನ್ನ ನೀತಿ ಓಲೈಕೆ ಎಂದು ಈ ಮೂಲಕ ಬಹಿರಂಗವಾಗಿಯೇ ಸಾರಿಕೊಂಡಂತಾಯಿತು. ಇನ್ನು ಈ ವಿವಾದಕ್ಕೆ ಸಾಚಾರ್‌ ವರದಿಯನ್ನು ತಳಕು ಹಾಕಿ ಸರಕಾರ ನಗೆಪಾಟಲಿಗೀಡಾಗಿದೆ. ಸಾಚಾರ್‌ ವರದಿಯಲ್ಲಿ ಮುಸ್ಲಿಮರ ಆರ್ಥಿಕ -ಸಾಮಾಜಿಕ ಸಬಲೀಕರಣಕ್ಕೆ ಸಲಹೆ ಗಳನ್ನು ನೀಡಲಾಗಿದೆ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಲ್ಲ. ಮುಖ ಉಳಿಸಿಕೊಳ್ಳಲು ಹೋಗಿ ಮತ್ತಷ್ಟು ಮುಖಭಂಗಕ್ಕೊಳಗಾಗಿದೆ ಸರಕಾರ.

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.