ನೀವು ಎಲ್ಲರ ಪ್ರತಿನಿಧಿ

ಮುಖ್ಯಮಂತ್ರಿಗೆ ತಾಳ್ಮೆ ಮುಖ್ಯ

Team Udayavani, Jun 28, 2019, 5:00 AM IST

33

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ವೈಟಿಪಿಎಸ್‌ ನೌಕರರು ತಮ್ಮ ವಾಹನಕ್ಕೆ ಅಡ್ಡಲಾಗಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಸಿಡಿಮಿಡಿಗೊಂಡು ‘ವೋಟ್ ಮಾತ್ರಾ ಮೋದಿಗೆ ಹಾಕ್ತೀರಿ, ಸಮಸ್ಯೆ ಮಾತ್ರ ನನ್ನತ್ರ ಹೇಳ್ತೀರಿ’ ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ. ವಿವಾದ ಕಾವೇರುತ್ತಿದ್ದಂತೆಯೇ ನಾನು ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡಿದ್ದೇ ತಪ್ಪೇ? ಹಾಗಾದರೆ ಇನ್ಮುಂದೆ ನಾನು ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವುದನ್ನೇ ಬಿಡುತ್ತೇನೆ ಎಂದು ಹೇಳಿರುವ ವಿಚಾರ ಮಾಧ್ಯಮಗಳಲ್ಲಿ ಇಡೀ ದಿನ ಚರ್ಚೆಗೆ ಗ್ರಾಸವಾಗಿತ್ತು.

ಪ್ರಧಾನಿ ಮೋದಿಯ ಬಗ್ಗೆ ಮಾತನಾಡುವುದು ತಪ್ಪು ಎಂದು ಯಾರೂ ಹೇಳುವುದಿಲ್ಲ. ಆದರೆ, ಮೇಲಿನ ಘಟನೆಯಲ್ಲಿ ಮುಖ್ಯಮಂತ್ರಿಗಳು ತಾವು ಪ್ರಧಾನಿ ಮೋದಿಯವರ ಬದಲು, ಮತದಾರರನ್ನು ಟೀಕಿಸುತ್ತಿದ್ದೇವೆ ಎನ್ನುವುದು ಮರೆಯುತ್ತಿದ್ದಾರೆ. ಮುಖ್ಯಮಂತ್ರಿಯಾದವರಿಗೆ ಸಮಾಧಾನ ಹಾಗೂ ತಾಳ್ಮೆ ಅತಿ ಮುಖ್ಯ. ತಾವು ಇಡೀ ರಾಜ್ಯದ ಪ್ರತಿನಿಧಿ ಎನ್ನುವುದನ್ನು ಅವರು ಮರೆಯಬಾರದು. ತಮಗೆ ಮತ ನೀಡಿಲ್ಲ ಎಂದು ಮತದಾರರ ಮೇಲೆ ಕುಮಾರಸ್ವಾಮಿಯವರು ಹರಿ ಹಾಯುವುದು ಇದೇ ಮೊದಲೇನೂ ಅಲ್ಲ. ಈ ರೀತಿ ಅವರು ತಮ್ಮ ಪಕ್ಷದ ಅಸಾಮರ್ಥ್ಯದ ಸಿಟ್ಟನ್ನು ಮತದಾರರ ಮೇಲೆ ಹೊರಹಾಕುತ್ತಿರುವುದು ಸೇಡಿನ ರಾಜಕಾರಣವೇ ಸರಿ. ಮತ ಹಾಕಿಲ್ಲ, ಹಾಗಾಗಿ ಸಹಾಯ ಮಾಡುವುದಿಲ್ಲ ಎನ್ನುವರ್ಥದಲ್ಲಿ ಮಾತನಾಡಿದರೆ ಏನರ್ಥ?

ಲೋಕಸಭೆ ಚುನಾವಣೆ ಫ‌ಲಿ ತಾಂಶದ ಹತಾಶೆ ಅವರಿಂದ ಈ ರೀತಿಯ ಮಾತುಗಳನ್ನಾಡಿಸುತ್ತದೆ ಎನ್ನಲಾಗುತ್ತದೆ. ಆದರೆ, ದಶಕಗಳ ರಾಜಕೀಯ ಅನುಭವವಿರುವವರು ಹೀಗೆ ತಾಳ್ಮೆಗೆಡುವುದು ಸರಿಯಲ್ಲ. ಆಗ ಜನರಿಗೂ ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿಯಿಲ್ಲ ಎನ್ನುವ ಭಾವನೆ ಬಲವಾಗುತ್ತಾ ಸಾಗುತ್ತದೆ. ಮೊದಲಿನಿಂದಲೂ, ಸರ್ಕಾರಗಳು ತಮ್ಮನ್ನು ಕಡೆಗಣಿಸುತ್ತಾ ಬರುತ್ತಿವೆ ಎನ್ನುವ ನೋವು ಉತ್ತರಕರ್ನಾಟಕ ಭಾಗದ ಜನರಿಗಿದೆ, ಇಂಥ ಸಮಯದಲ್ಲಿ ಮುಖ್ಯಮಂತ್ರಿಗಳು ಆ ಭಾಗದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು ಗುಣಾತ್ಮಕ ನಡೆಯಾಗಿತ್ತು. ಆದರೆ ಜನರಲ್ಲಿ ಭರವಸೆ ಮೂಡಿಸುವಂಥ ಇಂಥ ಪ್ರಯತ್ನಗಳನ್ನೆಲ್ಲ ಈ ರೀತಿಯ ಹತಾಶ ನುಡಿಗಳು ಕ್ಷಣಾರ್ಧದಲ್ಲಿ ನಾಶ ಮಾಡಿಬಿಡುತ್ತವೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ಯಾವುದೇ ಪಕ್ಷ, ಜಾತಿ, ಸಮುದಾಯ, ವರ್ಗಕ್ಕೆ ಸೀಮಿತವಾಗಬಾರದು. ಸಮಗ್ರ ರಾಜ್ಯದ ಅಭಿವೃದ್ಧಿ, ಸರ್ವಜನರ ಕಲ್ಯಾಣ ಅವರ ಏಕಮೇವ ಗುರಿಯಾಗಬೇಕು.

ಮತ್ತೂಂದು ವಿಚಾರ ಎಂದರೆ ಪ್ರತಿಪಕ್ಷಗಳು ಸಹ ಎಲ್ಲವನ್ನೂ ವಿರೋಧ, ಎಲ್ಲದಕ್ಕೂ ವಿರೋಧ ಎಂಬ ದೃಷ್ಟಿಕೋನದಿಂದ ಹೊರಬರಬೇಕು. ರಚನಾತ್ಮಕ ಟೀಕೆ, ಸರ್ಕಾರ ತಪ್ಪು ಮಾಡಿದಾಗ ತಿದ್ದುವ ಕೆಲಸ ಆಗಬೇಕು. ಆದರೆ, ಮಾತಿನಲ್ಲಿ ಹಿಡಿತ ಇರಬೇಕು. ಆಡಳಿತ ಮತ್ತು ಪ್ರತಿಪಕ್ಷದ ಉದ್ದೇಶ ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬುದು ಜನರ ನಿರೀಕ್ಷೆಯೂ ಹೌದು. ಇನ್ನು ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ ಸಿಎಂ ಅವರ ಮಾತನ್ನು ಸಮರ್ಥಿಸಿರುವುದೂ ಅಷ್ಟೇ ಖಂಡನೀಯ. ಇವೆಲ್ಲವೂ ಜನರ ಮನಸ್ಸನ್ನು ನೋಯಿಸುವ ಸಂಗತಿಗಳು ಎನ್ನುವುದನ್ನು ಅರ್ಥಮಾಡಿಕೊಳ್ಳಲಾಗದಷ್ಟು ಜಡತೆ ಬರಬಾರದು.

ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸಮ್ಮಿಶ್ರ ಸರ್ಕಾರದ ಹೊಣೆಗಾರಿಕೆ ವಹಿಸಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿಯವರಿಗೆ ಅನುಭವಕ್ಕೇನೂ ಕಡಿಮೆ ಇಲ್ಲ. ಜತೆಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನವೂ ಇದೆ. ಹೀಗಾಗಿ, ಸಹಜವಾಗಿ ಕುಮಾರಸ್ವಾಮಿಯವರಿಂದ ಜನರು ಈ ರೀತಿಯ ಹೇಳಿಕೆ ನಿರೀಕ್ಷಿಸುವುದಿಲ್ಲ. ಪ್ರತಿ ಹಂತದಲ್ಲೂ ತಾಳ್ಮೆ, ಸಮಾಧಾನ ಮುಖ್ಯ. ಮುಂದೆ ಇಂಥ ಪ್ರಮಾದಗಳು ಘಟಿಸದಂತೆ ಅವರು ಎಚ್ಚರಿಕೆ ವಹಿಸಬೇಕು.

ಮುಖ್ಯಮಂತ್ರಿ ಆದವರಿಗೆ ಸಮಾಧಾನ ಹಾಗೂ ತಾಳ್ಮೆ ಅತಿ ಮುಖ್ಯವಾದ ಗುಣ. ತಾವು ಇಡೀ ರಾಜ್ಯದ ಪ್ರತಿನಿಧಿ ಎನ್ನುವುದನ್ನು ಅವರು ಮರೆಯಬಾರದು.

ಟಾಪ್ ನ್ಯೂಸ್

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

1

Editorial: ಕಾಳ್ಗಿಚ್ಚು ಸಂಭವಿಸುವ ಮುನ್ನವೇ ಇರಲಿ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.