ನವೋದ್ಯಮ ನೀತಿ ಪರಿಪೂರ್ಣ ಅನುಷ್ಠಾನ ಪ್ರಧಾನ


Team Udayavani, Dec 24, 2022, 6:00 AM IST

ನವೋದ್ಯಮ ನೀತಿ ಪರಿಪೂರ್ಣ ಅನುಷ್ಠಾನ ಪ್ರಧಾನ

ನವೋದ್ಯಮ ಅಥವಾ ಸ್ಟಾರ್ಟ್‌ಅಪ್‌ ಎಂದು ಕರೆಯಿಸಿಕೊಳ್ಳುವ ಕ್ಷೇತ್ರಕ್ಕೆ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರೇ ಪ್ರಧಾನ ಕೇಂದ್ರ. ಕನ್ನಡಿಗರಾಗಿರುವ ನಮಗೆ ಇದು ಹೆಮ್ಮೆಯ ವಿಚಾರವೂ ಹೌದು. ಕೊರೊನಾ ಅನಂತ ರದ ಕಾಲದಲ್ಲಿ ಹಲವು ವಿಚಾರಗಳಲ್ಲಿ ಧನಾತ್ಮಕ ಬದಲಾವಣೆಯಾಗಿದೆ. ಅದಕ್ಕೆ ಅನುಸಾರವಾಗಿ ಕೆಲವೊಂದು ನವೋದ್ಯಮಗಳು ಬೆಂಗಳೂರಿನಲ್ಲಿ ತಲೆ ಎತ್ತಿದವು. ಆದರೆ ಅಷ್ಟೇ ವೇಗದಲ್ಲಿ ಬಾಗಿಲು ಹಾಕಿಕೊಂಡವು ಎನ್ನುವುದು ಹಗಲಿನಷ್ಟೇ ಸತ್ಯವಾದ ಸಂಗತಿ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸಚಿವ ಸಂಪುಟ ಹೊಸ ಸ್ಟಾರ್ಟ್‌ಅಪ್‌ ನೀತಿಗೆ ಅನುಮೋದನೆ ನೀಡಿದೆ. 2022-2027ರ ಅವಧಿಯಲ್ಲಿ 10 ಸಾವಿರ ನವೋದ್ಯಮಗಳು ಅಸ್ತಿತ್ವಕ್ಕೆ ಬರಲಿವೆ ಎನ್ನುವುದು ರಾಜ್ಯ ಸರಕಾರದ ಲೆಕ್ಕಾಚಾರ. ನಮ್ಮ ದೇಶದ ಒಟ್ಟು ಲೆಕ್ಕಾಚಾರ ನೋಡಿದರೆ ಈ ವರ್ಷದ ಸೆಪ್ಟಂಬರ್‌ ವೇಳೆಗೆ ನಮ್ಮ ದೇಶದಲ್ಲಿ ಸರಿ ಸುಮಾರು 75 ಸಾವಿರ ನವೋದ್ಯಮಗಳು ಇದ್ದರೆ ಆ ಪೈಕಿ 13 ಸಾವಿರ ಬೆಂಗಳೂರಿನಲ್ಲಿಯೇ ಇವೆ.

ಆದರೆ ಎಷ್ಟು ದಿನಗಳ ವರೆಗೆ ಪ್ರತಿಯೊಂದು ವ್ಯವಸ್ಥೆ-ವ್ಯವಹಾರ ರಾಜ್ಯದ ರಾಜಧಾನಿಯನ್ನೇ ಕೇಂದ್ರೀಕರಿಸಿ ಇರಬೇಕು ಎನ್ನುವುದು ಪ್ರಧಾನ ಪ್ರಶ್ನೆಯಾಗಿದೆ. ಪ್ರತಿಯೊಂದು ವಿಚಾರಕ್ಕೂ ರಾಜ್ಯದ ರಾಜಧಾನಿಯೇ ಕೇಂದ್ರವಾಗಿ ವ್ಯವಹಾರ ನಡೆಸಬೇಕು ಎಂದಾದರೆ ಈ ಪ್ರದೇಶದ ಮೇಲೆ ಹಲವು ರೀತಿಯಲ್ಲಿ ಒತ್ತಡಗಳು ಉಂಟಾಗುತ್ತವೆ. ಅದನ್ನು ಗಮನದಲ್ಲಿ ಇರಿಸಿಕೊಂಡು, ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ಧಾರವಾಡ ಸಹಿತ ಮಧ್ಯಮ, ಸಣ್ಣ ಪೇಟೆ- ಪಟ್ಟಣಗಳನ್ನು ಕೇಂದ್ರೀಕರಿಸಿ ಹೊಸ ಸ್ಟಾರ್ಟ್‌  ಅಪ್‌ ನೀತಿ ರೂಪಿಸಲಾಗಿದೆ ನಿಜ.ಆದರೆ ಬೆಂಗಳೂರಿನಿಂದ ಹೊರಗೆ ನವೋದ್ಯಮ ಬೆಳೆಯಬೇಕು ಎಂದಾದರೆ ಜಿಲ್ಲೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳಿಗೆ ಅದರ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ ಸ್ಥಾಪಿಸಬೇಕು ಎಂಬುದರ ಬಗ್ಗೆ ಉತ್ಸಾಹ ಹೊಂದಿರುವವರಿಗೆ ಮಾಹಿತಿ ನೀಡುವುದು, ಅದಕ್ಕೆ ತರಬೇತಿ ನೀಡಬೇಕಾಗಿದ್ದರೆ ಅದಕ್ಕೆ ಬೇಕಾದ ಮಾಹಿತಿ ಮತ್ತು ವ್ಯವಸ್ಥೆಗಳನ್ನು ಅವರೂ ಹೊಂದಿರಬೇಕಾಗುತ್ತದೆ. ಇದರಿಂದಾಗಿ ಹೂಡಿಕೆ ಮಾಡುವವರಿಗೆ ಕ್ಷಿಪ್ರವಾಗಿ ಉದ್ದೇಶಿತ ಸಾಧನೆ ಮಾಡಲೂ ನೆರವಾಗುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಚನೆ ಮಾಡಿರುವ ನವೋದ್ಯಮ ಕೋಶ ಹೆಚ್ಚು ಕಾರ್ಯಪ್ರವೃತ್ತವಾಗಬೇಕಾಗುತ್ತದೆ. ನಮ್ಮ ದೇಶ ಮತ್ತು ರಾಜ್ಯದ ಮೂಲ ಆದಾಯ ವ್ಯವಸ್ಥೆಗೆ ಕೃಷಿಯೇ ಮೂಲ ಆಧಾರವಾಗಿ ಇರುವು  ದರಿಂದ ಅದಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಬಂಧಿಸಿದ ಉದ್ಯಮಗಳನ್ನು ಸ್ಥಾಪಿಸಿ, ಯಶಸ್ವಿಯಾಗಿ ನಡೆಸಲು ಕೋಶ ನೆರವಾಗ ಬೇಕು. ಹೊಸ ನೀತಿ ಪ್ರಕಟಗೊಂಡ ಬಳಿಕ ರಾಜ್ಯ ಸರಕಾರದ ಕೋಶಕ್ಕೆ ಮುಂದಿನ ದಿನಗಳಲ್ಲಿ ಹೊಣೆ ಹೆಚ್ಚಲಿದೆ. ಸದ್ಯ ಬೆಂಗಳೂರು ಹೊರತುಪಡಿ ಸಿದ ನಗರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಉತ್ಸಾಹಿಗಳಿಗೆ ನೆರವಾಗ ಬೇಕು. ಇನ್ನು ನಮ್ಮ ದೇಶಕ್ಕೆ ಸಂಬಂಧಿಸಿದಂತೆ ನವೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2021ರಲ್ಲಿ 21,198 ಕೋಟಿ ರೂ. ಹೂಡಿಕೆ ಮಾಡಲಾಗಿ ದ್ದರೆ ಪ್ರಸಕ್ತ ವರ್ಷದ 11 ತಿಂಗಳಲ್ಲಿ ಅದು ದ್ವಿಗುಣಗೊಂಡಿದ್ದು 37, 924 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ನೀತಿ ರೂಪಿ ಸಿದ್ದು ಹೆಗ್ಗಳಿಕೆಯಾಗದೆ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸು ವುದೂ ಅಷ್ಟೇ ಪ್ರಧಾನವಾಗಿ ಇರಬೇಕಾಗಿದೆ.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.