Narendra Modi: ಪ್ರಧಾನಿ ಮೋದಿ ರಷ್ಯಾ ಪ್ರವಾಸ: ರಾಜತಾಂತ್ರಿಕ ನೈಪುಣ್ಯಕ್ಕೆ ಸಾಕ್ಷಿ
Team Udayavani, Jul 11, 2024, 7:45 AM IST
ಪ್ರಧಾನಿ ನರೇಂದ್ರ ಮೋದಿ ಅವರ ಬಲು ನಿರೀಕ್ಷಿತ ರಷ್ಯಾ ಪ್ರವಾಸ ಫಲಪ್ರದ ವಾಗಿ ಅಂತ್ಯಗೊಂಡಿದೆ. ಈ ಭೇಟಿಯ ವೇಳೆ ಪ್ರಧಾನಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಜತೆಜತೆಯಲ್ಲಿ ಜಾಗತಿಕ ಸಮಸ್ಯೆ, ವಿದ್ಯಮಾನಗಳ ಕುರಿತಂತೆ ಮಹತ್ವದ ಚರ್ಚೆ ನಡೆಸಿದರು. ಇದೇ ವೇಳೆ ಕೆಲವು ಪ್ರಮುಖ ಒಪ್ಪಂದಗಳಿಗೆ ಅಂಕಿತ ಹಾಕಲಾಗಿದ್ದು ಇದ ರಿಂದ ಭಾರತ-ರಷ್ಯಾ ನಡುವಣ ಸಹಯೋಗ ಇನ್ನಷ್ಟು ಸದೃಢವಾದಂತಾಗಿದೆ.
ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷರೊಂದಿಗೆ ನಡೆಸಿದ ಮಾತುಕತೆ ವೇಳೆ ಭಾರತಕ್ಕೆ ಸಂಬಂಧಿಸಿದ ಕೆಲವು ಮಹತ್ತರ ವಿಷಯಗಳನ್ನು ನೇರವಾಗಿ ಪ್ರಸ್ತಾವಿಸಿ, ಪುತಿನ್ ಅವರಿಂದ ಸ್ಪಷ್ಟ ಭರವಸೆಯನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ರಷ್ಯಾ ಸೇನೆಗೆ ಭಾರತೀಯರ ಸಹಿತ ವಿದೇಶಿಯರನ್ನು ಅಕ್ರಮವಾಗಿ ಸೇರ್ಪಡೆಗೊಳಿಸಿ, ಅವರನ್ನು ಉಕ್ರೇನ್‌ನ ಯುದ್ಧಪೀಡಿತ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುತ್ತಿರುವ ಕುರಿತಂತೆ ಭಾರತ ಹಲವು ಬಾರಿ ರಷ್ಯಾಕ್ಕೆ ತನ್ನ ಆಕ್ಷೇಪವನ್ನು ಸಲ್ಲಿಸಿತ್ತು. ರಾಜತಾಂತ್ರಿಕ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸಿ ರಷ್ಯಾ ಸೇನೆಗೆ ಸೇರ್ಪಡೆಗೊಳಿಸಿದ್ದರೆನ್ನಲಾಗಿದ್ದ ಭಾರತೀಯರಲ್ಲಿ ಕೆಲವರನ್ನು ಸ್ವದೇಶಕ್ಕೆ ವಾಪಸು ಕರೆತರುವಲ್ಲಿ ಯಶಸ್ವಿಯೂ ಆಗಿತ್ತು. ಆದರೆ ಕಳೆದ ಮೂರ್‍ನಾಲ್ಕು ತಿಂಗಳುಗಳ ಅವಧಿಯಲ್ಲಿ ರಷ್ಯಾ ಸೇನೆಯಲ್ಲಿದ್ದ ನಾಲ್ವರು ಭಾರತೀಯರು ಯುದ್ಧಪೀಡಿತ ಪ್ರದೇಶದಲ್ಲಿ ಉಕ್ರೇನ್ ನಡೆಸಿದ ದಾಳಿಯ ವೇಳೆ ಸಾವನ್ನಪ್ಪಿದ ಬಳಿಕ ಭಾರತ, ರಷ್ಯಾ ಸೇನೆಯಲ್ಲಿನ ತನ್ನೆಲ್ಲ ಪ್ರಜೆಗಳನ್ನು ತತ್‌ಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಒತ್ತಡ ಹೇರುತ್ತಲೇ ಬಂದಿತ್ತು.
ಇದರ ಹೊರತಾಗಿಯೂ ರಷ್ಯಾದಿಂದ ಖಚಿತ ಭರವಸೆ ಲಭಿಸದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಈ ವಿಷಯವನ್ನು ರಷ್ಯಾ ಅಧ್ಯಕ್ಷರ ಮುಂದೆ ಪ್ರಸ್ತಾವಿಸಿದ್ದರು. ಇದರ ಫಲವಾಗಿ ತನ್ನ ಸೇನೆಯಲ್ಲಿರುವ ಎಲ್ಲ ಭಾರತೀಯರನ್ನು ಕರ್ತವ್ಯದಿಂದ ಮುಕ್ತಗೊಳಿಸುವುದಷ್ಟೇ ಅಲ್ಲದೆ ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ವಾಪಸು ಕಳುಹಿಸಿ ಕೊಡಲು ರಷ್ಯಾ ಸಮ್ಮತಿಸಿದೆ. ಇದರಿಂದ ರಷ್ಯಾ ಸೇನೆಗೆ ಬಲವಂತವಾಗಿ ಸೇರ್ಪಡೆಗೊಂಡಿರುವರೆನ್ನಲಾದ ಭಾರತೀಯರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರಷ್ಯಾದ ರೋಸ್ಟಾಮ್‌ನೊಂದಿಗೆ ಮಹತ್ವದ ಒಪ್ಪಂದಕ್ಕೆ ಅಂಕಿತ ಹಾಕಲಾಗಿದ್ದು,
ಬಿಎಚ್‌ಇಎಲ್ ಮತ್ತು ಪವರ್‌ವೆುಕ್ ಸಂಸ್ಥೆಗಳು ಜಂಟಿಯಾಗಿ ಭಾರತದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಆರು ಅಣು ಶಕ್ತಿ ಸ್ಥಾವರಗಳನ್ನು ಸ್ಥಾಪಿಸಲು ಸಮ್ಮತಿಸಿವೆ. ಇದರಿಂದ ಭಾರತದಲ್ಲಿನ ವಿದ್ಯುತ್ ಕೊರತೆಯ ಸಮಸ್ಯೆಗೆ ಬಲುದೊಡ್ಡ ಪರಿಹಾರ ಸಿಗಲಿದೆ.
ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾದಾಗಿನಿಂದಲೂ ಉಭಯ ರಾಷ್ಟ್ರಗಳಿಗೂ ಸಂಧಾನ ಮಾತುಕತೆಯಷ್ಟೇ ಯಾವುದೇ ಸಮಸ್ಯೆಗಳಿಗೆ ಪರಿಹಾರವೇ ಹೊರತು ಯುದ್ಧ ಎಂದಿಗೂ ಪರಿಹಾರವಾಗಲಾರದು ಎಂದು ಕಿವಿಮಾತು ಹೇಳುತ್ತಲೇ ಬಂದಿರುವ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷರೊಂದಿಗಿನ ಮುಖಾಮುಖೀ ಭೇಟಿಯ ಸಂದರ್ಭದಲ್ಲೂ ಇದನ್ನು ಪುನರುಚ್ಚರಿಸಿದ್ದೇ ಅಲ್ಲದೆ ಸಂಘರ್ಷ ತಡೆಯುವಲ್ಲಿ ಯಾವುದೇ ತೆರನಾದ ಪಾತ್ರ ವಹಿಸಲು ಭಾರತ ಸನ್ನದ್ಧವಾಗಿದೆ ಎನ್ನುವ ಮೂಲಕ ಯುದ್ಧ, ಸಂಘರ್ಷದ ವಿಷಯಗಳಲ್ಲಿ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಾಗತಿಕ ಸಮುದಾಯಕ್ಕೆ ಸಾರಿ ಹೇಳಿದರು.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಈ ರಷ್ಯಾ ಪ್ರವಾಸ ಅಭೂತಪೂರ್ವ ಯಶಸ್ಸು ಕಂಡಿದೆ. ರಾಜತಾಂತ್ರಿಕ, ವಾಣಿಜ್ಯ-ವ್ಯವಹಾರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಜತೆಜತೆಯಲ್ಲಿ ಯುದ್ಧದ ಕುರಿತಾಗಿನ ತನ್ನ ಕಠಿನ ನಿಲುವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲವಾಗಿ ಪ್ರತಿಪಾದಿಸುವಲ್ಲಿ ಮೋದಿ ಯಶ ಕಂಡಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಅವರು ವಿದೇಶಿ ರಾಜತಾಂತ್ರಿಕತೆಯಲ್ಲಿ ತಮ್ಮ ನೈಪುಣ್ಯವನ್ನು ಮತ್ತೂಮ್ಮೆ ಜಗಜ್ಜಾಹೀರುಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.