ಮಾಲಿನ್ಯ ಮುಕ್ತವಾಗಲಿ ನದಿಗಳು; ಎಲ್ಲರದ್ದೂ ಇದೆ ಜವಾಬ್ದಾರಿ
Team Udayavani, Oct 3, 2020, 6:45 AM IST
ಸಾಂದರ್ಭಿಕ ಚಿತ್ರ
ಭಾರತ ಎದುರಿಸುತ್ತಿರುವ ಮಾಲಿನ್ಯ ಸಮಸ್ಯೆಗಳಲ್ಲಿ ಜಲಮಾಲಿನ್ಯ ಪ್ರಮುಖವಾದದ್ದು. ಕಾಲುವೆಗಳು, ನದಿಗಳು ಹಾಗೂ ಸಾಗರಗಳು ಎಷ್ಟೊಂದು ಕಲುಷಿತವಾಗಿವೆಯೆಂದರೆ, ಭಾರತದಲ್ಲಿ ಮಾಲಿನ್ಯ ಸಂಬಂಧಿ ರೋಗರುಜಿನಗಳಿಂದ ಸಂಭವಿಸುತ್ತಿರುವ ಮರಣ ಪ್ರಮಾಣದಲ್ಲಿ ಜಲಮಾಲಿನ್ಯದ ಪಾತ್ರವೇ ಅಧಿಕವಿದೆ.
ಜಲಮಾಲಿನ್ಯ ಎಂದಾಕ್ಷಣ ನಮ್ಮ ಕಣ್ಣೆದುರು ಬರುವುದು ಗಂಗಾ, ಯಮುನಾ ಇತ್ಯಾದಿ ನದಿಗಳು. ಅದರಲ್ಲೂ ಪವಿತ್ರ ಗಂಗಾ ನದಿಯು ಈ ವಿಚಾರದಲ್ಲಿ ಬಹಳ ಕುಖ್ಯಾತಿ ಪಡೆದುಬಿಟ್ಟಿದೆ. ಗಂಗಾ ನದಿಯನ್ನು ಮಾಲಿನ್ಯದಿಂದ ಮುಕ್ತ ಮಾಡಲು ದಶಕಗಳಿಂದ ಸರಕಾರಗಳು ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಬಂದ ವಾದರೂ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಯಾದರೂ ಫಲಿತಾಂಶ ಗಮನ ಸೆಳೆಯುವಂತೆ ಇರಲಿಲ್ಲ. ಈಗಲೂ ಗಂಗಾ ಸ್ವತ್ಛತೆಯ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲವಾದರೂ, ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ತನ್ನ ಪ್ರಯತ್ನಕ್ಕೆ ವೇಗ ನೀಡಿರುವುದು ಸ್ವಾಗತಾರ್ಹ. ನದಿಗಳ ಸ್ವತ್ಛತೆಗಾಗಿಯೇ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದ ಮೋದಿ ಸರಕಾರ, ನಮಾಮಿ ಗಂಗೆ ಯೋಜನೆಯಡಿಯಲ್ಲಿ ನದಿಯ ನೈರ್ಮಲ್ಯದತ್ತ ಗಮನಹರಿಸಿತು. ಹಿಂದಿನ ಸರಕಾರಗಳ ಪ್ರಯತ್ನಕ್ಕೆ ಹೋಲಿಸಿದರೆ ಕಳೆದ ಆರು ವರ್ಷಗಳಲ್ಲಿ ಗಂಗಾ ನದಿ ಸ್ವತ್ಛತೆಯ ನಿಟ್ಟಿನಲ್ಲಿ ಸ್ವಾಗತಾರ್ಹ ಬದಲಾವಣೆಗಳು ಆಗುತ್ತಿವೆ. 2 ವರ್ಷಗಳ ಹಿಂದೆ ಪ್ರಯಾಗ್‌ರಾಜ್‌ನಲ್ಲಿ ಆಯೋಜಿತವಾಗಿದ್ದ ಕುಂಭದಲ್ಲಿ ನಗರಗಳ ಕಾರ್ಖಾನೆಗಳಿಂದ ರಾಸಾಯನಿಕವನ್ನು ನದಿಗೆ ಹರಿಯ ಬಿಡುವುದನ್ನು ಬಹುವಾಗಿ ತಡೆಯಲಾಯಿತು. ಪ್ರತ್ಯೇಕವಾಗಿ ಹಲವು ಜಲ ಸಂಸ್ಕರಣ ಘಟಕಗಳನ್ನು ತೆರೆಯಲಾಗಿತ್ತು. ಮುಂದಿನ ವರ್ಷ ಹರಿದ್ವಾರದಲ್ಲಿ ಕುಂಭ ಮೇಳವಿದೆ. ಕೋವಿಡ್ ಸಂಕಷ್ಟ ಮುಂದುವರಿದರೆ ಆಯೋಜನೆಗೆ ಹಲವು ನಿರ್ಬಂಧ ಎದುರಾಗ ಬಹುದೇನೋ. ಆದರೂ ಮುಂಜಾಗ್ರತೆಯ ದೃಷ್ಟಿಯಿಂ ದೀಗ ಕೇಂದ್ರವು ಆರು ಚರಂಡಿ ನೀರು ಸಂಸ್ಕರಣ ಘಟಕಗಳನ್ನು ಉತ್ತರಾ ಖಂಡದಲ್ಲಿ ಉದ್ಘಾಟಿಸಿದೆ. ಇದಕ್ಕಾಗಿ 500 ಕೋಟಿ ರೂ. ಖರ್ಚು ಮಾಡಲಾಗಿದೆ.
ಗಂಗೆಯೆಂದಷ್ಟೇ ಅಲ್ಲ, ಭಾರತದ ಬಹುತೇಕ ನದಿಗಳು ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿವೆ. ಮೇಲ್ಮೆ„ ಮತ್ತು ಅಂತರ್ಜಲ ಮಾಲಿನ್ಯಕ್ಕೆ ಒಳ ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದಿರುವುದೇ ಪ್ರಮುಖ ಕಾರಣ ಎಂದು ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ದೇಶದಲ್ಲಿ ನಿರುಪಯುಕ್ತ ನೀರಿನ ಉತ್ಪಾದನೆ-ನಿರ್ವಹಣೆಯ ನಡುವೆ ಬಹುದೊಡ್ಡ ಅಂತರವಿರುವುದು ವೇದ್ಯ. ಜಲಮಾಲಿನ್ಯದ ಅಪಾಯದ ಅರಿವಿದ್ದರೂ, ಕಾರ್ಖಾನೆಗಳು ನಿಯಮ- ಕಾಯ್ದೆ ಗಳನ್ನು ಉಲ್ಲಂ ಸುತ್ತಲೇ ಬಂದಿವೆ. ಕೈಗಾರಿಕಾ ಕ್ಷೇತ್ರಗಳು ಹಾಗೂ ನಗರಗಳಲ್ಲಿ ಜಲ ಸಂಸ್ಕರಣ ಘಟಕಗಳು ಇರುತ್ತವಾದರೂ ಅನೇಕ ಸ್ಥಳಗಳಲ್ಲಿ ಅವುಗಳಿಂದ ನಿರೀಕ್ಷಿತ ಯಶಸ್ಸು ಸಿಗುತ್ತಲೇ ಇಲ್ಲ. ಅನೇಕ ಕಾರ್ಖಾನೆಗಳು ತಮ್ಮ ಖರ್ಚು ಉಳಿಸುವ ದುರಾಸೆಯಿಂದ ಇದರ ಪಾಲನೆ ಮಾಡುತ್ತಿಲ್ಲ. ಅದರಲ್ಲೂ ರಾಸಾಯನಿಕ ತಯಾರಿಕ ಕಂಪೆನಿಗಳು, ಸ್ಟೀಲ್ ಉತ್ಪಾದನೆ ಹಾಗೂ ಬಟ್ಟೆಗೆ ಬಣ್ಣ ಹಚ್ಚುವ ಘಟಕಗಳಿಂದ ಹರಿಯುವ ನೀರು ಬಹಳ ವಿಷಪೂರಿತವಾಗಿರುತ್ತದೆ. ಇವೇ ಪ್ರಮುಖ ಮಾಲಿನ್ಯಕಾರಕಗಳಾಗಿವೆ.
ಸರಕಾರಗಳ ವತಿಯಿಂದ ಜಲಸಂಸ್ಕರಣ ಘಟಕಗಳನ್ನು ಸ್ಥಾಪಿಸುವುದರಿಂದಾಗಿ ನಿಸ್ಸಂಶಯವಾಗಿಯೂ ಪ್ರಯೋಜನವಾಗುತ್ತದೆ, ಆದರೆ ಔದ್ಯೋಗಿಕ ವಲಯವೂ ಈ ವಿಚಾರದಲ್ಲಿ ಉತ್ತರದಾಯಿಯಾಗುವುದು ಅತ್ಯಗತ್ಯ. ಇನ್ನು ಜಲಸಂಸ್ಕರಣ ಘಟಕಗಳ ನಿರಂತರ ದೇಖರೇಖೀಯೂ ಅತ್ಯಗತ್ಯವಾದದ್ದು. ಕಾರ್ಖಾನೆಗಳಷ್ಟೇ ಅಲ್ಲದೇ ಜನರೂ ಸಹ ಜಲಮಾಲಿನ್ಯಕ್ಕೆ ಬಹುದೊಡ್ಡ ಕಾರಣರಾಗಿದ್ದು, ನದಿಗಳ ಸ್ವತ್ಛತೆಯ ಪಾಲನೆಯಲ್ಲಿ ಅವರೂ ಮಹತ್ತರ ಪಾತ್ರ ವಹಿಸಲೇಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.