ಬಗೆಹರಿಯದ ಗಡಿ ಬಿಕ್ಕಟ್ಟು ; ಭಾರತೀಯ ಸೇನೆಯ ತಯಾರಿ


Team Udayavani, Dec 15, 2020, 5:45 AM IST

ಬಗೆಹರಿಯದ ಗಡಿ ಬಿಕ್ಕಟ್ಟು ; ಭಾರತೀಯ ಸೇನೆಯ ತಯಾರಿ

ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಚೀನ ಹಾಗೂ ಭಾರತದ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ನಿಲ್ಲುವ ಲಕ್ಷಣ ತೋರಿಸುತ್ತಿಲ್ಲ. ಇದಕ್ಕೆ ಪೂರ್ಣವಾಗಿ ಚೀನದ ಉದ್ಧಟತನವೇ ಕಾರಣ ಎನ್ನುವುದು ಸ್ಪಷ್ಟ. ಚೀನದ ದುಬುìದ್ಧಿಯ ಅರಿವಿರುವ ಭಾರತೀಯ ಸೇನೆಯು ಕಳೆದ ಕೆಲವು ತಿಂಗಳಿಂದಲೂ ಗಡಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಯುದ್ಧ ವಿಮಾನಗಳು, ಶಸ್ತ್ರಾಸ್ತ್ರಗಳು ಹಾಗೂ ಸೈನಿಕರನ್ನು ನಿಯೋಜಿಸಿದೆ. ಅಲ್ಲದೇ ಹಿಮ ವರ್ಷದ ಈ ಹೊತ್ತಲ್ಲಿ ಸೈನಿಕರಿಗೆ ಚಳಿಯಿಂದ ಸುರಕ್ಷತೆ ನೀಡುವಲ್ಲೂ ಮುತುವರ್ಜಿ ವಹಿಸಿದೆ.

ಇವೆಲ್ಲದರ ನಡುವೆಯೇ ಈಗ ಭಾರತೀಯ ಸೇನೆಯು 15 ದಿನಗಳ ಯುದ್ಧಕ್ಕೆ ಸಾಲುವಷ್ಟು ಶಸ್ತ್ರಾಸ್ತ್ರ, ಯುದ್ದೋಪಕರಣಗಳ ಸಂಗ್ರಹ ಆರಂಭಿಸಿದೆ. ಯುದೊœàಪಕರಣಗಳ ಬಿಡಿ ಭಾಗಗಳು, ಶಸ್ತ್ರಾಸ್ತ್ರ, ಕ್ಷಿಪಣಿ, ಟ್ಯಾಂಕರ್‌ಗಳಿಗೆ ಅಗತ್ಯವಾದ ಮದ್ದುಗುಂಡು ಹಾಗೂ ಫಿರಂಗಿಗಳ ಖರೀದಿಗೆ ಮುಂದಾಗಿದೆ ಭದ್ರತಾ ಪಡೆ. ಸೇನೆಗೆ ಮೀಸಲಾಗಿರುವ ತುರ್ತು ಆರ್ಥಿಕ ನಿಧಿ ಅಡಿಯಲ್ಲಿ ಹೆಚ್ಚುವರಿ ಶಸ್ತ್ರಾಸ್ತ್ರಗಳ ಖರೀದಿಗೆ 50 ಸಾವಿರ ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ವರದಿಯಾಗಿದೆ.

ಚೀನಕ್ಕೆ ಭಾರತದ ಈ ನಡೆ ನಿಶ್ಚಿತವಾಗಿಯೂ ಕಠಿನ ಸಂದೇಶ ಕಳುಹಿಸಲಿದೆ. ಎಷ್ಟೇ ಮಾತುಕತೆಯಾಡಿದರೂ ಚೀನದ ವರ್ತನೆ ಬದಲಾಗದು ಎನ್ನುವುದು ರಕ್ಷಣ ಇಲಾಖೆಗೆ ಸ್ಪಷ್ಟವಾಗಿದೆ. ಏಕೆಂದರೆ, ಎರಡೂ ದೇಶಗಳ ನಡುವೆ 8 ಬಾರಿ ಮಿಲಿಟರಿ ಉನ್ನತ ಅಧಿಕಾರಿಗಳ ನಡುವೆ ಹಾಗೂ ರಾಜಕೀಯ ಸ್ತರದಲ್ಲಿ ಚರ್ಚೆಗಳು ನಡೆದಿವೆ. ವಾಸ್ತವಿಕ ನಿಯಂತ್ರಣ ರೇಖೆಯಿಂದ ಸೈನ್ಯವನ್ನು ಹಿಂಪಡೆಯು ವಿಚಾರದಲ್ಲಿ ಈ ಹಿಂದಿನ ಮಾತುಕತೆಯಲ್ಲೂ ಚೀನ ಭರವಸೆ ನೀಡಿದೆಯಾದರೂ ಅದರ ಮಾತನ್ನು ನಂಬಲಾಗದು.

ಈಗೆಂದಷ್ಟೇ ಅಲ್ಲ, ಗಡಿ ಭಾಗದಲ್ಲಿ ಶಾಂತಿ ಸ್ಥಾಪನೆಗಾಗಿ ಎರಡೂ ರಾಷ್ಟ್ರಗಳ ನಡುವೆ ಇಲ್ಲಿಯವರೆಗೂ ಆಗಿರುವ ಒಪ್ಪಂದಗಳನ್ನು ಚೀನ ಉಲ್ಲಂಘಿ ಸುತ್ತಲೇ ಬಂದಿದೆ. 2013ರಲ್ಲಿ ನಡೆದ ಗಡಿ ರಕ್ಷಣೆ ಸಹಯೋಗ ಒಪ್ಪಂದದಲ್ಲಿ, ಒಂದು ವೇಳೆ ಎರಡೂ ಕಡೆಗಳ ಸೈನಿಕರು ಎದುರುಬದುರಾದರೆ ಅವರು ಬಲಪ್ರಯೋಗ, ಗುಂಡಿನ ದಾಳಿ ಅಥವಾ ಸಶಸ್ತ್ರ ಸಂಘರ್ಷ ನಡೆಸಬಾರದು ಎಂಬ ಅಂಶವಿದೆ. ಆದರೆ ಗಾಲ್ವಾನ್‌ ಕಣಿವೆಯ ಘಟನೆಯಲ್ಲಿ ಚೀನದ ಪೈಶಾಚಿಕ ನಡೆಯನ್ನು ನಾವು ನೋಡಿದ್ದೇವೆ. ಅದಕ್ಕೆ ತಕ್ಕ ಎದಿರೇಟನ್ನೂ ನೀಡಿದ್ದೇವೆ. ಇನ್ನು ಇದೇ ಸೆ‌ಪ್ಟಂಬರ್‌ ತಿಂಗಳಲ್ಲಿ ಮಾಸ್ಕೋದಲ್ಲಿ ಎರಡೂ ದೇಶಗಳ ರಕ್ಷಣ ಸಚಿವರು ಮತ್ತು ವಿದೇಶಾಂಗ ಸಚಿವರ ಚರ್ಚೆಯಲ್ಲಿ ಬಿಕ್ಕಟ್ಟು ಶಮನಕ್ಕಾಗಿ ಪಂಚ ಸೂತ್ರಗಳ ಒಪ್ಪಂದ ನಡೆದಿತ್ತು. ಆದರೆ ಈ ವಿಚಾರವನ್ನೂ ಚೀನ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಕಳೆದ ಶನಿವಾರವಷ್ಟೇ ವಿದೇಶಾಂಗ ಸಚಿವ ಎಸ್‌. ಜಯಶಂಕರ್‌ ಅವರು ಪ್ರಸಕ್ತ ಬಿಕ್ಕಟ್ಟು ಎಷ್ಟು ದಿನ ಮುಂದುವರಿಯಲಿದೆ ಎನ್ನುವ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದಿರುವುದೂ
ಚೀನದೊಂದಿಗೆ ಕೇವಲ ಮಾತುಕತೆಗಳಿಂದ ಮಾತ್ರ ಫ‌ಲಪ್ರದ ಸಾಧ್ಯವಿಲ್ಲ ಎನ್ನುವುದನ್ನು ಸಾರುತ್ತದೆ.

ಈ ಕಾರಣಕ್ಕಾಗಿಯೇ, ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಭಾರತವಂತೂ ಸಿದ್ಧವಾಗುತ್ತಿದೆ. ಚೀನಕ್ಕೆ ಅದರದ್ದೇ ಆದ ಭಾಷೆಯಲ್ಲಿ ಉತ್ತರಿಸಲು ಭಾರತವೀಗ ಸರ್ವಸನ್ನದ್ಧವಾಗಿದೆ. ಹೀಗಿರುವಾಗ ಚೀನ ಬಿಕ್ಕಟ್ಟನ್ನು ಮತ್ತಷ್ಟು ದಿನ ಮುಂದುವರಿಸಿತೆಂದರೆ, ಅದರ ಪರಿಣಾಮವನ್ನು ಅದು ಎದುರಿಸಲಿದೆ.

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.